ಮಹಾ ಬಿರುಕು ಕಣಿವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಹಾ ಬಿರುಕು ಕಣಿವೆಯ ಉತ್ತರ ಭಾಗ. ಸಿನಾಯ್ ದ್ವೀಪಕಲ್ಪ ಮಧ್ಯದಲ್ಲಿದೆ ಹಾಗು ಮೃತ ಸಾಗರ ಮತ್ತು ಜಾರ್ಡನ್ ನದಿ ಮೇಲಿದೆ

ಮಹಾ ಬಿರುಕು ಕಣಿವೆ ಸುಮಾರು ೬,೦೦೦ ಕಿ.ಮಿ.ಗಳಷ್ಟು ಉದ್ದವಾಗಿರುವ ಒಂದು ಭೌಗೋಳಿಕ ಲಕ್ಷಣ. ಇದು ಪಶ್ಚಿಮ ಏಷ್ಯಾದಲ್ಲಿರುವ ಸಿರಿಯಾದ ಉತ್ತರ ಭಾಗದಿಂದ ಪೂರ್ವ ಆಫ್ರಿಕಾಮೊಜಾಂಬಿಕ್ವರೆಗೆ ಹಬ್ಬಿದೆ. ಬಿರುಕು ಕಣಿವೆಗಳು ಹಲವಾರು ಟೆಕ್ಟಾನಿಕ್ ತಟ್ಟೆಗಳು ಸೇರುವ ಜಾಗವಾಗಿದ್ದು, ಈ ಕಣಿವೆ ೩೦ರಿಂದ ೧೦೦ ಕಿ.ಮಿ.ಗಳಷ್ಟು ಅಗಲ ಹೊಂದಿದ್ದು, ಸಹಸ್ರಾರು ಮೀಟರ್ಗಳಷ್ಟರವರೆಗೆ ಆಳವಾಗಿದೆ.