ಮಲಾಣಾ
ಮಲಾಣಾ | |
---|---|
ಹಳ್ಳಿ | |
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/India Himachal Pradesh" does not exist. | |
Coordinates: 32°03′45″N 77°15′37″E / 32.0626008°N 77.2603548°E | |
ದೇಶ | ಭಾರತ |
ರಾಜ್ಯ | ಹಿಮಾಚಲ ಪ್ರದೇಶ |
ಭಾಷೆಗಳು | |
• ಅಧಿಕೃತ | ಹಿಂದಿ |
Time zone | UTC+5:30 (IST) |
ಮಲಾಣಾ ಭಾರತ ದೇಶದ ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಒಂದು ಪ್ರಾಚೀನ ಹಳ್ಳಿ. ಕುಲ್ಲು ಕಣಿವೆಯ ಈಶಾನ್ಯಕ್ಕಿರುವ ಪಾರ್ವತಿ ಕಣಿವೆಯ ಪಕ್ಕದಲ್ಲಿರುವ ಮಲಾಣಾ ನಾಲಾದಲ್ಲಿರುವ ಈ ಏಕಾಂಗಿ ಹಳ್ಳಿಯು, ಬಾಹ್ಯ ಜಗತ್ತಿನಿಂದ ಪ್ರತ್ಯೇಕಿಸಲ್ಪಟ್ಟಿದೆ. ಚಂದ್ರಕಣಿ ಮತ್ತು ಡಿಯೋಟಿಬ್ಬ ಶಿಖರಗಳ ನೆರಳು ಈ ಹಳ್ಳಿಯನ್ನು ಆವರಿಸಿಕೋಂಡಿದೆ. ಧಾರಾಕಾರವಾಗಿ ಹರಿಯುವ ಮಲಾಣಾ ನದಿಯ ದೂರಸ್ಥ ಪ್ರಸ್ಥಭೂಮಿಯಲ್ಲಿ ನೆಲೆಸಿರುವ ಈ ಹಳ್ಳಿಯು ಸಮುದ್ರ ಮಟ್ಟದಿಂದ 2,652 metres (8,701 ft) ಎತ್ತರದಲ್ಲಿದೆ. ತನ್ನದೆಯಾದ ಜೀವನಶೈಲಿ ಮತ್ತು ಸಾಮಾಜಿಕ ರಚನೆ ಹೊಂದಿರುವ ಮಲಾಣಾದ ಜನರು ತಮ್ಮ ಸಂಪ್ರಾದಾಯವನ್ನು ಕಠಿಣವಾಗಿ ಪಾಲಿಸುತ್ತಾರೆ. ಮಲಾಣಾ ಹಳ್ಳಿಯು Malana: Globalization of a Himalayan Village,[೧] ಮತ್ತು Malana, A Lost Identity.[೨] ಮುಂತಾದ ಹಲವಾರು ಸಾಕ್ಷ್ಯಚಿತ್ರಗಳ ಭಾಗವಾಗಿದೆ. ೧೯೬೧ರ ಜನಗಣತಿಯ ಪ್ರಕಾರ ಮಲಾಣಾ ಹಳ್ಳಿಯ ಸಂಪ್ರದಾಯಕ ಭಾಷೆ ಕನಶಿಯನ್ನು ಮಾತನಾಡುವವರ ಸಂಖ್ಯೆ ೫೬೩, ಆದರೆ ಇತ್ತಿಚಿನ ದಿನಗಳಲ್ಲಿ ಮಲಾಣಾದ ಒಟ್ಟು ಜನಸಂಖ್ಯೆ ೪೦ ವರ್ಷದಲ್ಲಿ ೩ ಪಟ್ಟು ಹೆಚ್ಚಿದೆ.
ದೇವಾಲಯಗಳು
[ಬದಲಾಯಿಸಿ]ಈ ಹಳ್ಳಿಯಲ್ಲಿ ಹಲವಾರು ಪ್ರಾಚೀನ ದೇವಾಲಯಗಳು ಇವೆ. (೧) ಜಮ್ಲು ದೇವಾಲಯ,ಕಥ್ಕುನಿ ಶೈಲಿಯಲ್ಲಿ ನಿರ್ಮಾಣಾವಾಗಿದೆ (೨) ರುಕ್ಮಿನಿ ದೇವಾಲಯ.
ಮಲಾಣಾ ಕ್ರೀಮ್
[ಬದಲಾಯಿಸಿ]ಇದು ಬಹುತೇಕ ತೆರೆದ ರಹಸ್ಯವಾಗಿದ್ದು ಮಲಾಣಾ ಹಳ್ಳಿಯು ಈ ರಹಸ್ಯಕ್ಕೆ ಪ್ರಸಿದ್ದಿಯಾಗಿದೆ. ಮಲಾಣಾ ಹಳ್ಳಿಯು ಮಲಾಣಾ ಕ್ರೀಮ್ಗೆ ಪ್ರಸಿದ್ದಿಯಾಗಿದೆ. ಜಗತ್ತಿನೆಲ್ಲೆಡಿ ದೊರಕುವ ಹ್ಯಾಶ್ ಗಳಲ್ಲಿ ಮಲಾಣಾ ಕ್ರೀಮ್ ಅತ್ಯುತ್ತಮವಾದದ್ದು.
ಉಲ್ಲೇಖನಗಳು
[ಬದಲಾಯಿಸಿ]- ↑ "Malana: Globalization of a Himalayan Village, 2010". Archived from the original on 2010-06-28. Retrieved 2017-05-16.
- ↑ Malana, A Lost Identity
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- MALANA A Lost Utopia In The Himalayas Archived 2017-04-30 ವೇಬ್ಯಾಕ್ ಮೆಷಿನ್ ನಲ್ಲಿ.
- Malana : Shangrila in the Himalayas Archived 2017-05-31 ವೇಬ್ಯಾಕ್ ಮೆಷಿನ್ ನಲ್ಲಿ.
- Himalayan Culture and Mountaineering Museum Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ.
- http://m.imdb.com/title/tt1951087/