ಬಿ.ಹನುಮಂತಾಚಾರ್
ಬಿ.ಹನುಮಂತಾಚಾರ್ ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಸ್ಯನಟರು.ಇವರು ತಮ್ಮ ವಿಶಿಷ್ಟವಾದ ಮಾತಿನ ಧಾಟಿ ಹಾಗೂ ಉತ್ತರ ಕರ್ನಾಟಕದ ಭಾಷಾಶೈಲಿಯಿಂದ ಜನಪ್ರಿಯರಾಗಿದ್ದಾರೆ.(ಜನನ : ಮಾರ್ಚ್ ೨೨,೧೯೨೨ - ನಿಧನ : ೧೯೮೭)
ಬಳ್ಳಾರಿಯಲ್ಲಿ ಜನಿಸಿ,ಬಾಲ್ಯದಲ್ಲೇ ರಂಗಭೂಮಿಯ ನಂಟು ಅಂಟಿಸಿಕೊಂಡ ಹನುಮಂತಾಚಾರ್, ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿಯಲ್ಲಿ ಹಾಸ್ಯನಟರಾಗಿ ಹೆಸರು ಮಾಡಿದರು.ಇವರು ಅಭಿನಯಿಸಿದ ಮೊದಲ ಕನ್ನಡ ಚಿತ್ರ ದೇವ ಕನ್ನಿಕಾ.
[ಬದಲಾಯಿಸಿ] ಇವರ ಅಭಿನಯದ ಕೆಲವು ಕನ್ನಡ ಚಿತ್ರಗಳು
- ಗುಣಸಾಗರಿ
- ಭಕ್ತ ವಿಜಯ
- ವಿಜಯನಗರದ ವೀರಪುತ್ರ
- ಕಿತ್ತೂರು ಚೆನ್ನಮ್ಮ
- ಮಕ್ಕಳ ರಾಜ್ಯ
- ಸ್ವಪ್ನ
- ಮನಸ್ಸಿನಂತೆ ಮಾಂಗಲ್ಯ
- ಮಹಾ ಪ್ರಚಂಡರು
- ಪ್ರೇಮ ಮತ್ಸರ - ಕೊನೆಯ ಚಿತ್ರ.
[ಬದಲಾಯಿಸಿ] "ಯೂನಿವಾಕ್ಸ್" ಎಂಬ ವಾದ್ಯ
ಯೂನಿವಾಕ್ಸ್ - ಒಂದು ವಿಶಿಷ್ಟ ವಾದ್ಯ.ಒಂದೇ ವಾದ್ಯದಲ್ಲಿ ೮-೧೦ ಬಗೆಯ ವಾದ್ಯಗಳ ಧ್ವನಿಯನ್ನು ಹೊರಹೊಮ್ಮಿಸುವುದು ಇದರ ವೈಶಿಷ್ಟ್ಯ.ಇದು ೬೦ರ ದಶಕದ ಹಿಂದಿ ಚಲನಚಿತ್ರ್ಗಗಳಲ್ಲಿ ಜನಪ್ರಿಯವಾಗಿತ್ತು.ಈ ವಾದ್ಯ ಕನ್ನಡಕ್ಕೂ ಬರಬೇಕು ಎಂದು ಹಂಬಲಿಸಿದವರು ಹನುಮಂತಾಚಾರ್.ಮುಂಬಯಿಗೆ ತೆರಳಿ,ಆಸಕ್ತಿ ವಹಿಸಿ ,ಕಲಿತು,ಸುಮಾರು ೭೦ಕ್ಕೂ ಹೆಚ್ಚು ಕನ್ನಡ ಚಲನಚಿತ್ರ್ಗಗಳಲ್ಲಿ ಈ ವಾದ್ಯ ಬಳಕೆ ಮಾಡಿದರು.
[ಬದಲಾಯಿಸಿ] ಸಂಗೀತ ಆಚಾರ್ಯನಾಗಿ
ಹನುಮಂತಾಚಾರ್ ಹಾಸ್ಯನಟನಾಗಿ ಮಾತ್ರವಲ್ಲ,ಯೂನಿವಾಕ್ಸ್ ಎಂಬ ವಾದ್ಯವನ್ನು ಚಿತ್ರಸಂಗೀತದಲ್ಲಿ ಬಳಸಿ,ಜನಪ್ರಿಯರಾಗಿದ್ದಾರೆ.ಭಕ್ತ ಕನಕದಾಸ - ಈ ವಾದ್ಯವನ್ನು ಬಳಸಿದ ಕನ್ನಡದ ಮೊದಲನೆಯ ಚಿತ್ರ.ಈ ಚಿತ್ರದ 'ಈತನೀಗ ವಾಸುದೇವನು..' - ಎಂಬ ಹಾಡು ಈ ವಾದ್ಯದ ನೆರವಿನಿಂದ ಹೆಚ್ಚು ಸುಶ್ರಾವ್ಯವಾಗಿ ಮೂಡಿ ಬಂದಿದೆ.ಈ ವಾದ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು,ಚಿತ್ರರಂಗ ಹಾಗೂ ನಾಟಕಗಳಲ್ಲಿ ಪರಿಣಾಮಕಾರಿಯಾಗಿ ಬಳಸಿ,ರಾಜ್ಯಾದ್ಯಂತ ಕಛೇರಿಗಳನ್ನು ನಡೆಸಿದ ಇವರಿಗೆ ಸರಕಾರದಿಂದಾಗಲೀ,ಚಿತ್ರರಂಗದಿಂದಾಗಲೀ ಸಾಕಷ್ಟು ಪ್ರೋತ್ಸಾಹ ಸಿಗಲಿಲ್ಲ.ಮುಂದೆ ೭೦ರ ದಶಕದಲ್ಲಿ ಎಲೆಕ್ಟ್ರಿಕ್ ಗಿಟಾರ್ ಬಳಕೆಗೆ ಬಂದ ಮೇಲೆ ಈ ವಾದ್ಯ ಮೂಲೆಗುಂಪಾಯಿತು.