ವಿಷಯಕ್ಕೆ ಹೋಗು

ನೀಲಿ (ಮರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೀಲಿ
Scientific classification
ಸಾಮ್ರಾಜ್ಯ:
plantae
Division:
ವರ್ಗ:
ಗಣ:
ಕುಟುಂಬ:
ಪಂಗಡ:
Bischofieae
ಕುಲ:
ಬಿಸ್ಚೊಫಿಯ (Bischofia)

ಪ್ರಜಾತಿ:
B. javanica
Binomial name
ಬಿಸ್ಚೊಫಿಯ ಜವನಿಕ

ನೀಲಿ (ನೀರುಳ್ಳಿ,ಗೊಬ್ರ ನೇರಳೆ)ಇದು ದೊಡ್ಡ ಪ್ರಮಾಣದ ಪರ್ಣಪಾತಿ ಮರ.ಪಶ್ಚಿಮ ಘಟ್ಟ ಕಾಡುಗಳಲ್ಲಿ ಕಂಡುಬರುತ್ತದೆ. ಇದು ಮುಖ್ಯವಾಗಿ ದಕ್ಷಿಣ ಎಷಿಯಾ,ಆಸ್ಟ್ರೇಲಿಯ,ಚೀನಾ ದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ.

ಸಸ್ಯಶಾಸ್ತ್ರೀಯ ವರ್ಗೀಕರಣ

[ಬದಲಾಯಿಸಿ]

ಇದು ಪೈಲಾಂಥೇಸಿ (Phyllanthaceae) ಕುಟುಂಬಕ್ಕೆ ಸೇರಿದ್ದು,ಬಿಸ್ಚೊಫಿಯ ಜವನಿಕ (Bischofia javanica) ಎಂದು ಸಸ್ಯಶಾಸ್ತ್ರೀಯ ಹೆಸರು.

ಸಸ್ಯದ ಗುಣಲಕ್ಷಣಗಳು

[ಬದಲಾಯಿಸಿ]

ದೊಡ್ಡ ಹಂದರದ ಹಚ್ಚ ಹಸಿರಿನ ತ್ರಿಪತ್ರಿ (Trifoliate)ಎಲೆಗಳು.ತೊಗಟೆ ಕರಿ ಕಂದು,ನಯವಾಗಿರುತ್ತದೆ.ಎಲೆಗಳು ಉದುರುವ ಮುನ್ನ ಕೆಂಪು ಛಾಯೆಗೆ ತಿರುಗುವುದು.ಸಣ್ಣ ಹೂಗಳು.ದಾರಿವಿ ಕೆಂಪು ಛಾಯೆಯಿಂದ ಕೂಡಿದೆ.

ಉಪಯೋಗಗಳು

[ಬದಲಾಯಿಸಿ]

ದಾರುವು ಬಾಳಿಕೆಯುತವಾಗಿದೆ.ಗೃಹ ನಿರ್ಮಾಣ,ಆಸರೆ ಕಂಬ ಇತ್ಯಾದಿಗಳಿಗೆ ಉಪಯುಕ್ತ.ನೀರಿನಲ್ಲಿ ಹೆಚ್ಚು ಬಾಳಿಕೆ ಇದೆ.ಎಲೆಗಳು ಗೊಬ್ಬರಕ್ಕೆ ಉಪಯುಕ್ತವಾಗಿದೆ.ಬೇರುಗಳು ಔಷಧ ತಯಾರಿಕೆಯಲ್ಲಿ ಬಳಕೆಯಾಗುತ್ತದೆ.ಹಣ್ಣಿನಿಂದ ವೈನ್ ತಯಾರಿಸುತ್ತಾರೆ.

ಆಧಾರ ಗ್ರಂಥಗಳು

[ಬದಲಾಯಿಸಿ]

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

"https://kn.wikipedia.org/w/index.php?title=ನೀಲಿ_(ಮರ)&oldid=684513" ಇಂದ ಪಡೆಯಲ್ಪಟ್ಟಿದೆ