ನೀಲಿ (ಮರ)
ವಿಕಿಪೀಡಿಯ ಇಂದ
| ನೀಲಿ | |||||||||||||||||
|---|---|---|---|---|---|---|---|---|---|---|---|---|---|---|---|---|---|
| ವೈಜ್ಞಾನಿಕ ವಿಂಗಡಣೆ | |||||||||||||||||
|
|||||||||||||||||
|
|
|||||||||||||||||
| ಬಿಸ್ಚೊಫಿಯ ಜವನಿಕ Blume |
|||||||||||||||||
|
|
ನೀಲಿ (ನೀರುಳ್ಳಿ,ಗೊಬ್ರ ನೇರಳೆ)ಇದು ದೊಡ್ಡ ಪ್ರಮಾಣದ ಪರ್ಣಪಾತಿ ಮರ.ಪಶ್ಚಿಮ ಘಟ್ಟ ಕಾಡುಗಳಲ್ಲಿ ಕಂಡುಬರುತ್ತದೆ. ಇದು ಮುಖ್ಯವಾಗಿ ದಕ್ಷಿಣ ಎಷಿಯಾ,ಆಸ್ಟ್ರೇಲಿಯ,ಚೀನಾ ದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ.
ಪರಿವಿಡಿ |
[ಬದಲಾಯಿಸಿ] ಸಸ್ಯಶಾಸ್ತ್ರೀಯ ವರ್ಗೀಕರಣ
ಇದು ಪೈಲಾಂಥೇಸಿ (Phyllanthaceae) ಕುಟುಂಬಕ್ಕೆ ಸೇರಿದ್ದು,ಬಿಸ್ಚೊಫಿಯ ಜವನಿಕ (Bischofia javanica) ಎಂದು ಸಸ್ಯಶಾಸ್ತ್ರೀಯ ಹೆಸರು.
[ಬದಲಾಯಿಸಿ] ಸಸ್ಯದ ಗುಣಲಕ್ಷಣಗಳು
ದೊಡ್ಡ ಹಂದರದ ಹಚ್ಚ ಹಸಿರಿನ ತ್ರಿಪತ್ರಿ (Trifoliate)ಎಲೆಗಳು.ತೊಗಟೆ ಕರಿ ಕಂದು,ನಯವಾಗಿರುತ್ತದೆ.ಎಲೆಗಳು ಉದುರುವ ಮುನ್ನ ಕೆಂಪು ಛಾಯೆಗೆ ತಿರುಗುವುದು.ಸಣ್ಣ ಹೂಗಳು.ದಾರಿವಿ ಕೆಂಪು ಛಾಯೆಯಿಂದ ಕೂಡಿದೆ.
[ಬದಲಾಯಿಸಿ] ಉಪಯೋಗಗಳು
ದಾರುವು ಬಾಳಿಕೆಯುತವಾಗಿದೆ.ಗೃಹ ನಿರ್ಮಾಣ,ಆಸರೆ ಕಂಬ ಇತ್ಯಾದಿಗಳಿಗೆ ಉಪಯುಕ್ತ.ನೀರಿನಲ್ಲಿ ಹೆಚ್ಚು ಬಾಳಿಕೆ ಇದೆ.ಎಲೆಗಳು ಗೊಬ್ಬರಕ್ಕೆ ಉಪಯುಕ್ತವಾಗಿದೆ.ಬೇರುಗಳು ಔಷಧ ತಯಾರಿಕೆಯಲ್ಲಿ ಬಳಕೆಯಾಗುತ್ತದೆ.ಹಣ್ಣಿನಿಂದ ವೈನ್ ತಯಾರಿಸುತ್ತಾರೆ.
[ಬದಲಾಯಿಸಿ] ಆಧಾರ ಗ್ರಂಥಗಳು
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ