ನೀನಾ ನಾಯಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೀನಾ ನಾಯಕ್
ನೀನಾ ನಾಯಕ್ (ಮಾರ್ಚ್ ೨೦೧೪)

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು
ಹಾಲಿ
ಅಧಿಕಾರ ಸ್ವೀಕಾರ 
೨೦೦೯

ಮಕ್ಕಳ ಕಲ್ಯಾಣ ಸಮಿತಿ ಬೆಂಗಳೂರು, ಇದರ ಅಧ್ಯಕ್ಷರು
ಅಧಿಕಾರ ಅವಧಿ
೨೦೦೩ – ೨೦೦೭

ಭಾರತೀಯ ಮಕ್ಕಳ ಕಲ್ಯಾಣ ಮಂಡಳಿಯ ಉಪಾಧ್ಯಕ್ಷರು
ಅಧಿಕಾರ ಅವಧಿ
೨೦೦೬ – ೨೦೦೯

ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿಯ ಅಧ್ಯಕ್ಷರು
ಅಧಿಕಾರ ಅವಧಿ
೧೯೯೯ – ೨೦೦೮

ಸಮುದಾಯ ಆರೋಗ್ಯ ಮತ್ತು ಶಿಕ್ಷಣ ಸಮಾಜದ ಸಲಹೆಗಾರ
ಅಧಿಕಾರ ಅವಧಿ
೨೦೦೪ – ೨೦೦೬

ಚೈಲ್ಡ್ ರೈಟ್ಸ್ ಆಂಡ್ ಯು ಸಂಸ್ಥೆಯ ರಾಷ್ಟ್ರೀಯ ಸಲಹೆಗಾರ
ಅಧಿಕಾರ ಅವಧಿ
೨೦೦೨ – ೨೦೦೫
ವೈಯಕ್ತಿಕ ಮಾಹಿತಿ
ಜನನ ೨೪ ನವೆಂಬರ್ ೧೯೫೩
ರಾಜಕೀಯ ಪಕ್ಷ ಆಮ್ ಆದ್ಮಿ ಪಕ್ಷ
ಮಕ್ಕಳು ೨ ದತ್ತು ಮಕ್ಕಳು
ವಾಸಸ್ಥಾನ ಬೆಂಗಳೂರು
ಅಭ್ಯಸಿಸಿದ ವಿದ್ಯಾಪೀಠ ಮದ್ರಾಸ್‌ ವಿಶ್ವವಿದ್ಯಾನಿಲಯ
(ಮಾಸ್ಟರ್ ಆಫ್ ಆರ್ಟ್ಸ್)

ನೀನಾ ಪಿ. ನಾಯಕ್ (ಜನನ ೨೪ ನವೆಂಬರ್ ೧೯೫೩) ದಕ್ಷಿಣ ಕನ್ನಡದ ಸಾಮಾಜಿಕ ಕಾರ್ಯಕರ್ತೆ ಮತ್ತು ಮಕ್ಕಳ ಹಕ್ಕುಗಳ ಕಾರ್ಯಕರ್ತೆ. ಮಕ್ಕಳ ಹಕ್ಕುಗಳ ಪ್ರಚಾರ ಮತ್ತು ರಕ್ಷಣೆಗಾಗಿ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. [೧] [೨] [೩]

ಅವರು ೬ ಏಪ್ರಿಲ್ ೨೦೧೨ ರಂದು ಬೆಂಗಳೂರಿನಲ್ಲಿ ನಡೆದ ಟೆಡ್ಎಕ್ಸ್ ಕಾರ್ಯಕ್ರಮದಲ್ಲಿ ಆಡಳಿತದಲ್ಲಿ ಮಕ್ಕಳ ಪಾತ್ರದ ಕುರಿತು ಪ್ರಸ್ತುತಿಯನ್ನು ನೀಡಿದರು. [೪] [೫] ಅವರು ಹಲವಾರು ಲೇಖನಗಳು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ನಾಯಕ್ ಅವರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷರಾಗಿದ್ದರು. [೬] ಈ ಹಿಂದೆ, ಅವರು ಭಾರತೀಯ ಮಕ್ಕಳ ಕಲ್ಯಾಣ ಮಂಡಳಿಯ ಉಪಾಧ್ಯಕ್ಷರಾಗಿದ್ದರು ಮತ್ತು ಭಾರತದ ರಾಷ್ಟ್ರೀಯ ಯೋಜನಾ ಆಯೋಗದ ಮಕ್ಕಳ ವಿಭಾಗದ ಉಪ ಸಮಿತಿಯ ಸದಸ್ಯರಾಗಿದ್ದರು. [೭] [೮] [೯]

ಶಿಕ್ಷಣ[ಬದಲಾಯಿಸಿ]

ನೀನಾ ನಾಯಕ್ ಅವರು ಸಾಮಾಜಿಕ ಕಾರ್ಯ ವಿಭಾಗದ ಸ್ನಾತಕೋತ್ತರ ಪದವಿಯನ್ನು ಕುಟುಂಬ ಮತ್ತು ಮಕ್ಕಳ ಕಲ್ಯಾಣ ವಿಷಯದಲ್ಲಿ ಹೊಂದಿದ್ದಾರೆ. ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಗೃಹ ವಿಜ್ಞಾನದಲ್ಲಿ ಪದವಿಯನ್ನು ಮಕ್ಕಳ ಅಭಿವೃದ್ಧಿ, ಆಹಾರ ಮತ್ತು ಪೋಷಣೆಯ ಪ್ರಮುಖ ವಿಷಯಗಳೊಂದಿಗೆ ಹೊಂದಿದ್ದಾರೆ. [೧೦] ಅವರು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ (ಐಜಿಎನ್ಒಯು) ಮಾನವ ಹಕ್ಕುಗಳ ಪ್ರಮಾಣಪತ್ರವನ್ನು ಹೊಂದಿದ್ದಾರೆ. [೧೧]

ವೃತ್ತಿ[ಬದಲಾಯಿಸಿ]

ಕಳೆದ 30 ವರ್ಷಗಳಿಂದ ಮಕ್ಕಳ ಹಕ್ಕುಗಳ ಕಾರ್ಯಕರ್ತೆಯಾಗಿ ಅವರು ಹಲವಾರು ಜವಾಬ್ದಾರಿಯುತ ಸ್ಥಾನಗಳನ್ನು ಹೊಂದಿದ್ದಾರೆ [೧೨] [೧೩]

  • ಮಕ್ಕಳ ಕಲ್ಯಾಣ ಸಮಿತಿ ಬೆಂಗಳೂರು, ಇದರ ಅಧ್ಯಕ್ಷರು.
  • ಮೂರು ಸಲ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು. [೧೪]
  • ಭಾರತೀಯ ಮಕ್ಕಳ ಕಲ್ಯಾಣ ಮಂಡಳಿಯ ಉಪಾಧ್ಯಕ್ಷರು. [೪]
  • ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗದ ಸದಸ್ಯರು (ಭಾರತ ಸರ್ಕಾರದ ಕಾರ್ಯದರ್ಶಿಗೆ ಸಮಾನ).
  • ಭಾರತದ ರಾಷ್ಟ್ರೀಯ ಯೋಜನಾ ಆಯೋಗದ ೧೧ ನೇ ಪಂಚವಾರ್ಷಿಕ ಯೋಜನೆಯ ಮಕ್ಕಳ ಉಪಸಮಿತಿಯ ಸದಸ್ಯರು.
  • ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ಅಫ್ರೋಜ್ ಅಪ್ರಾಪ್ತ ವಯಸ್ಕನೆಂಬ ಕಾರಣಕ್ಕಾಗಿ ಅವರನ್ನು ಯಶಸ್ವಿಯಾಗಿ ಸಮರ್ಥಿಸಿಕೊಂಡರು.

ರಾಜಕೀಯ[ಬದಲಾಯಿಸಿ]

೧೦ ಮಾರ್ಚ್ ೨೦೧೪ ರಂದು ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದರು. ಮತ್ತು ೨೧೪೦೩ ಮತಗಳನ್ನು ಪಡೆದು (ಒಟ್ಟು ಮತಗಳಲ್ಲಿ ೧.೯%) ಬಿಜೆಪಿಯ ಅನಂತ್ ಕುಮಾರ್ ವಿರುದ್ಧ ಸೋತರು. [೧೫]

ವೈಯಕ್ತಿಕ ಜೀವನ[ಬದಲಾಯಿಸಿ]

ನೀನಾ ನಾಯಕ್ ೨ ದತ್ತು ಮಕ್ಕಳನ್ನು ಬೆಳೆಸಿದ್ದಾರೆ. [೧೬]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Nina Nayak: Child rights activist". The Hindu. 3 ಜುಲೈ 2009. Archived from the original on 7 ಜುಲೈ 2009.
  2. "AAP fields child rights activist against Nandan". The Times of India. 11 ಮಾರ್ಚ್ 2014. Retrieved 13 ಏಪ್ರಿಲ್ 2014.
  3. "Nina Nayak is our candidate". Archived from the original on 13 ಏಪ್ರಿಲ್ 2014. Retrieved 12 ಏಪ್ರಿಲ್ 2014.
  4. ೪.೦ ೪.೧ "Theme: The Big Picture". Domlur Change. TEDx. Retrieved 13 ಏಪ್ರಿಲ್ 2014.
  5. "A Mantra For Change: Nina Nayak". TEDxDomlurChange. TEDx. Retrieved 13 ಏಪ್ರಿಲ್ 2014.
  6. "Nina Nayak : KSCPCR".
  7. "Ex-Infosys CFO, Delhi scribe on AAP fourth list". Hindustan Times. 11 ಮಾರ್ಚ್ 2014. Archived from the original on 11 ಮಾರ್ಚ್ 2014. Retrieved 11 ಮಾರ್ಚ್ 2014.
  8. "Selection of Members in the National Commission for Protection of Child Rights (NCPCR)" (PDF). Ministry of Women & Child Development Government of India. Retrieved 13 ಏಪ್ರಿಲ್ 2014.
  9. "Guardians of Foster Love". Parenting. Outlook. Retrieved 13 ಏಪ್ರಿಲ್ 2014.
  10. "Selection of Members in the National Commission for Protection of Child Rights (NCPCR)" (PDF). Ministry of Women & Child Development Government of India. Retrieved 13 ಏಪ್ರಿಲ್ 2014."Selection of Members in the National Commission for Protection of Child Rights (NCPCR)" (PDF). Ministry of Women & Child Development Government of India. Retrieved 13 April 2014.
  11. ಉಲ್ಲೇಖ ದೋಷ: Invalid <ref> tag; no text was provided for refs named NCPCR_nic
  12. "Nina Nayak is our candidate". Archived from the original on 13 ಏಪ್ರಿಲ್ 2014. Retrieved 12 ಏಪ್ರಿಲ್ 2014."Nina Nayak is our candidate" Archived 13 April 2014[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.. Retrieved 12 April 2014.
  13. "Ex-Infosys CFO, Delhi scribe on AAP fourth list". Hindustan Times. 11 ಮಾರ್ಚ್ 2014. Archived from the original on 11 ಮಾರ್ಚ್ 2014. Retrieved 11 ಮಾರ್ಚ್ 2014."Ex-Infosys CFO, Delhi scribe on AAP fourth list". Hindustan Times. 11 March 2014. Archived from the original on 11 March 2014. Retrieved 11 March 2014.
  14. "Theme: The Big Picture". Domlur Change. TEDx. Retrieved 13 ಏಪ್ರಿಲ್ 2014."Theme: The Big Picture". Domlur Change. TEDx. Retrieved 13 April 2014.
  15. "AAP fields child rights activist against Nandan". The Times of India. Retrieved 11 ಮಾರ್ಚ್ 2014.
  16. "Guardians of Foster Love". Parenting. Outlook. Retrieved 13 ಏಪ್ರಿಲ್ 2014."Guardians of Foster Love". Parenting. Outlook. Retrieved 13 April 2014.