ನಾ. ಡಿಸೋಜ
Wikipedia ಇಂದ
ನಾರ್ಬರ್ಟ ಡಿ’ ಸೋಜಾ ರವರು ೧೯೩೭ ಜೂನ್ ೬ ರಂದು ಸಾಗರದಲ್ಲಿ ಜನಿಸಿದರು. ತಂದೆ ಎಫ್.ಪಿ.ಡಿ’ ಸೋಜಾ ಸಾಗರದ ಚಾಮರಾಜಪೇಟೆ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರಾಗಿದ್ದರು; ತಾಯಿ ರೂಪಿನಾ ಡಿ’ ಸೋಜಾ. ಸಾಗರದಲ್ಲಿ ಶಿಕ್ಷಣ ಪ್ರಾರಂಭಿಸಿದ ಡಿ’ ಸೋಜಾ ಶಿವಮೊಗ್ಗಾದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ ಮೀಡಿಯೆಟ್ ಮುಗಿಸಿದರು. ನಾ.ಡಿ' ಸೋಜಾರವರು ಈವರೆಗೆ ೩೭ ಕಾದಂಬರಿಗಳನ್ನು, ನಾಲ್ಕು ನಾಟಕಗಳನ್ನು, ಇಪ್ಪತ್ತೆಂಟು ಮಕ್ಕಳ ಕೃತಿಗಳನ್ನು, ನೂರಾರು ಕತೆಗಳನ್ನು ಬರೆದಿದ್ದಾರೆ.
ಇವರ ಕಾದಂಬರಿ “ ಕಾಡಿನ ಬೆಂಕಿ” ಹಾಗು “ದ್ವೀಪ” ಚಲನಚಿತ್ರಗಳಾಗಿ ರಜತಕಮಲ ಹಾಗು ಸ್ವರ್ಣಕಮಲ ಪ್ರಶಸ್ತಿಗಳನ್ನು ಪಡೆದಿವೆ. “ಬಳುವಳಿ” ಕಾದಂಬರಿ ಕೊಂಕಣಿಯಲ್ಲಿ ಚಲನಚಿತ್ರವಾಗಿದೆ. “ ಮುಳುಗಡೆ” ಕಾದಂಬರಿ ೧೯೯೭-೯೮ ರಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಹಾಗು “ ಕೊಳಗ” ಕಾದಂಬರಿ ೨೦೦೩-೨೦೦೫ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕಗಳಾಗಿವೆ. ೧೯೯೨ ರಲ್ಲಿ ‘ ಸಾರ್ಕ’ ದೇಶಗಳ ಸಾಹಿತಿಗಳ ಸಮ್ಮೇಳನದಲ್ಲಿ ಸ್ವಂತ ಕಥಾವಾಚನ ಮಾಡಿದ್ದರು.
[ಬದಲಾಯಿಸಿ] ಪ್ರಶಸ್ತಿ ಹಾಗು ಪುರಸ್ಕಾರಗಳು:
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೮, ೧೯೯೩)
- ಗುಲ್ವಾಡಿ ವೆಂಕಟರಾವ ಪ್ರಶಸ್ತಿ ( ೧೯೮೮)
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೮)
- ಮಂಗಳೂರು ಸಂದೇಶ ಪ್ರಶಸ್ತಿ (೧೯೯೮)
- ನವದೆಹಲಿ ಕಳಾ ಪ್ರಶಸ್ತಿ (೧೯೯೮)
- ಪುತ್ತೂರು ನಿರಂಜನ ಸಾಹಿತ್ಯ ಪ್ರಶಸ್ತಿ (೨೦೦೩)
[ಬದಲಾಯಿಸಿ] ಸದಸ್ಯತ್ವಗಳು:
- ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಸಿನೇಟ ಸದಸ್ಯ (೧೯೯೩-೯೫ ; ೧೯೯೬-೯೮)
- ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ (೧೯೯೫)
- ಪುಸ್ತಕ ಪ್ರಾಧಿಕಾರ ಸದಸ್ಯ (೧೯೯೫)
- ಕುವೆಂಪು ವಿಶ್ವವಿದ್ಯಾಲಯ ಸಿನೇಟ್ ಸದಸ್ಯ (೧೯೯೬-೯೮)
- ಶಿವಮೊಗ್ಗಾ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆಡಳಿತ ಪರಿಷತ್ ಸದಸ್ಯ (೧೯೯೬-೯೯)
[ಬದಲಾಯಿಸಿ] ನಾ ಡಿಸೋಜ ರಚಿಸಿರುವ ಕೃತಿಗಳು
ಕಾದಂಬರಿ ೧. ಅಜ್ಞಾತ ೨. ಆಸರೆ ೩. ಇಂಜಿನಿಯರ್ ಆತ್ಮಕಥೆಯ ಮೊದಲ ಪುಟಗಳು ೪. ಇಗರ್ಜಿಯ ಸುತ್ತಲಿನ ಮನೆಗಳು ೫. ಈ ನೆಲ ಈ ಜಲ ೬. ಒಂದು ಜಲಪಾತದ ಸುತ್ತ ೭. ಒಡ್ಡು ೮. ಕಾಡಿನ ಬೆಂಕಿ ೯. ಕುಂಜಾಲು ಕಣಿವೆಯ ಕೆಂಪು ಹೂವು ೧೦. ಕೆಂಪು ತ್ರಿಕೋನ ೧೧. ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ ೧೨. ಕ್ರಯ ವಿಕ್ರಯ ೧೩. ಗಾಂಧಿ ಬಂದರು ೧೪. ಜೀವ ಕಳೆಯ ಮಹಾಸತಿ ೧೫. ಜೀವಕಳೆ ೧೬. ದುರ್ಗವೆಂಬ ವ್ಯೂಹ ೧೭. ದ್ವೀಪ ೧೮. ನಡುವೆ ನಿಂತ ಜನ ೧೯. ನೀರಮ್ಮ ವ್ಯಾಧಿ ಪುರಾಣ ೨೦. ನೆಲೆ ೨೧. ಪ್ರಜ್ಞಾಬಲಿ ೨೨. ಪ್ರೀತಿಯೆಂಬ ಚುಂಬಕ ೨೩. ಪ್ರೀತಿಯೊಂದೇ ಸಾಲದೇ? ೨೪. ಬಂಜೆ ಬೆಂಕಿ ೨೫. ಮಂಜಿನ ಕಾನು ೨೬. ಮಾನವ ೨೭. ಮುಳುಗಡೆ ೨೮. ವಿಷವರ್ತುಲ ೨೯. ವಿಷಾನಿಲ ೩೦. ವೀರಭದ್ರ ನಾಯಕ ೩೧. ಶಿವನ ಡಂಗುರ ೩೨. ಸುವಾಸಿನಿ
ಐತಿಹಾಸಿಕ ಕಾದಂಬರಿ ೧. ಇಕ್ಕೇರಿಯಲ್ಲಿ ಕ್ರಾಂತಿ ೨. ಚೆನ್ನಿ ಚೆನ್ನಮ್ಮ ಚೆನ್ನಮ್ಮಾಜಿ ೩. ರಾಗ ವಿರಾಗ ೪. ಶೃಂಗೇರಿಯಲ್ಲಿ ಶಾಂತಿ
ಕಥಾಸಂಕಲನ ೧. ಇಪ್ಪತ್ತೈದು ಕಥೆಗಳು ೧೯೮೯ ೨. ಗಿಳಿಯೇ ಓ ಗಿಳಿಯೇ ೩. ನಿನ್ನುದ್ಧಾರವೆಷ್ಟಾಯ್ತು ೪. ಪ್ರಜ್ಞಾ ಎಂಬ ನದಿ ೫. ಸಣ್ಣಕಥೆ ೧೯೮೭ ೬. ಸ್ವರ್ಗದ ಬಾಗಿಲಲ್ಲೂ ನರಕ
ಜಾನಪದ ೧. ಚಿತ್ತಾರ ೨. ಹೂವ ಚೆಲ್ಲುತ ಬಾ
ನಾಟಕ ೧. ತಬ್ಬಲಿ ೨. ದೇವರಿಗೇ ದಿಕ್ಕು ೩. ದ್ವೀಪ ೪. ಬೆತ್ತಲೆ ಸೇವೆ ೫. ಭೂತದ ಎದುರು ಬೇತಾಳ
ಮಕ್ಕಳ ಪುಸ್ತಕಗಳು ೧. ಭೂತ (ನಾಟಕ) ೨. ಮುಂದೇನು? (ನಾಟಕ) ೩. ಗೇರಸೊಪ್ಪೆ ೪. ಕದಂಬ ಮಯೂರಶರ್ಮ ೫. ಬಾಲಗಂಧರ್ವ ೬. ಪುಲಿನ ಬಿಹಾರಿದಾಸ್ ೭. ಸದಾಶಿವ ಬ್ರಹ್ಮೇಂದ್ರ ೮. ಶರಾವತಿ ೯. ಸಂಗೀತಪುರ ೧೦. ಸೊರಬ ೧೧. ಬೆಳಕಿನೊಡನೆ ಬಂತು ನೆನಪು ೧೨. ಹಕ್ಕಿಗಳಿಗೆ ಬಂತು ಬಣ್ಣ ೧೩. ನೇತ್ರಾಣಿ ಗುಡ್ಡಕ್ಕೆ ಯಾತ್ರೆ ೧೪. ದಂತ ಮತ್ತು ಗಂಧ ೧೫. ಆನೆ ಬಂತೊಂದಾನೆ ೧೬. ಆನೆ ಹುಡುಗ ಅಬ್ದುಲ್ಲಾ ೧೭. ಗೋಡೆ ಬೇಡ ೧೮. ಕಾಡಾನೆಯ ಕೊಲೆ ೧೯. ಗೋಪಿಯ ಗೊಂಬೆ ೨೦. ಕೋಳಿ ಅನಂತ
ರೇಡಿಯೋ ನಾಟಕಗಳು ೧. ಭುವಿಗೆ ಬಂದ ಬೆಳಕು ೨. ರೂಪದರ್ಶಿ ೩. ಹಿಪ್ಪಿ ಮತ್ತು ಅಜ್ಜಿ ೪. ಮಲೆನಾಡಿನ ಮದಕರಿ ೫. ಊರಾಳು ಅರಮನೆಗೆ ಜನ ಬಂದರು ೬. ಬೆಳಗಾಗಿ ನಾನೆದ್ದು ೭. ಹಳೆಯ ಬಳಗಕ್ಕೆ ಜೈ (ಮಕ್ಕಳ ನಾಟಕ)
ಕಿರುಕಾದಂಬರಿ ೧. ತಿರುಗೋಡಿನ ರೈತ ಮಕ್ಕಳು ೨. ಗುಡಿಗಾರರು ೩. ತಿರುವುಗಳು ೪. ಹಕ್ಕಿ ಹಾರಿತು ೫. ನಾಯಕ ೬. ಜಾತ್ರೆಯಲ್ಲಿ ಕಂಡವಳು ೭. ಸುರಂಗ ೮. ಶರಾವತಿ ಎಂಬ ಮಾನಿನಿ ೯. ಮಹಾಸತಿ ೧೦. ಇತಿಹಾಸದ ಕಪ್ಪು ಚುಕ್ಕೆ ೧೧. ಎರಡು ರಾತ್ರಿ ಒಂದು ಹಗಲು