ಧೂಮಕೇತು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಧೂಮಕೇತು' - ಕನ್ನಡ ಚಲನಚಿತ್ರದ ಬಗ್ಗೆ ಮಾಹಿತಿಗೆ ಈ ಲೇಖನವನ್ನು ನೋಡಿ.
ಧೂಮಕೇತು -ಪರಿಭ್ರಮಣ
ಹೇಲಿ-ಬೊಪ್ ಧೂಮಕೇತು, ಎಪ್ರಿಲ್ ೧೯೯೭

ಧೂಮಕೇತು - ಸೂರ್ಯ ನನ್ನು ಪರಿಭ್ರಮಿಸಿ, ಕಡೇ ಪಕ್ಷ ಒಮ್ಮೊಮ್ಮೆ ಒಂದು ವಾಯುಮಂಡಲ ಮತ್ತು ಒಂದು ಬಾಲವನ್ನು ಹೊಂದಿರುವ ಸಣ್ಣ ಕಾಯ. ಧೂಮಕೇತುವನ್ನು ಆಂಗ್ಲಭಾಷೆಯಲ್ಲಿ comet ಎನ್ನುತಾರೆ. ಧೂಮಕೇತು ಎನ್ನುವ ಪದ ಸಂಸ್ಕೃತದ್ದು. ಧೂಮಕೇತು ಸೂರ್ಯನ ಸುತ್ತ ಪರಿಭ್ರಮಿಸುವಾಗ, ದೂರದಲ್ಲಿ ಇದ್ದ ಸಮಯದಲ್ಲಿ ಅತಿಶೀತಲ ವಾಗಿ, ಇದರಲ್ಲಿ ಇರುವ ಪದಾರ್ಥಗಳು, ಆವಿ(gas)ಗಳು ಘನೀಭವಿಸಿ, ಘನಸ್ಥಿತಿಯಲ್ಲಿರುತ್ತವೆ. ಹತ್ತಿರದಲ್ಲಿ ಪರಿಭ್ರಮಿಸುವ ಸಮಯದಲ್ಲಿ, ಸೂರ್ಯನ ಬೇಗೆಯಿಂದ ಕರಗಿ ಹೋಗುತ್ತವೆ. ಒಂದು ಭಾಗದಲ್ಲಿ ತಲೆ, ಕೊನೆಯ ಭಾಗದಲ್ಲಿ ಬಾಲ(Tail)ವನ್ನು ಹೊಂದಿರುತ್ತದೆ. ಧೂಮಕೇತು ತಲೆಭಾಗದಲ್ಲಿ ಮಿಥೇನ್, ಅಮ್ಮೋನಿಯಾ ಆವಿಗಳು ಮತ್ತು ನೀರು ಘನಸ್ಥಿತಿಯಲ್ಲಿ ಇರುತ್ತವೆ. ಇನ್ನು ಗಡ್ಡೆಯಲ್ಲಿ ಕಬ್ಬಿನ, ನಿಕೆಲ್ ಕ್ಯಾ ಲ್ಷಿಯಂ, ಮೆಗ್ನೀಷಿಯಂ, ಸಿಲಿಕಾನ್, ಸೋಡಿಯಂ ಮುಂತಾದ ಧಾತು (elements)ಗಳು ಇರುತ್ತವೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]


"http://kn.wikipedia.org/w/index.php?title=ಧೂಮಕೇತು&oldid=402117" ಇಂದ ಪಡೆಯಲ್ಪಟ್ಟಿದೆ