ಡೀಪ್ ಬ್ಲೂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
IBM logo
IBM logo
ಗ್ಯಾರಿ ಕ್ಯಾಸ್ಪರೊವ್ - ಡೀಪ್ ಬ್ಲೂ ಸೆಣಸಾಟ

ಡೀಪ್ ಬ್ಲೂ ಐಬಿಎಂ ಸಂಸ್ಥೆಯ ಚದುರಂಗವನ್ನು ಆಡುವ ಗಣಕಯಂತ್ರ. ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲ್ಪಟ್ಟ ಡೀಪ್ ಥಾಟ್ ಗಣಕಯಂತ್ರದ ವಿಕಸಿತ ರೂಪ ಡೀಪ್ ಬ್ಲೂ.

ಡೀಪ್ ಬ್ಲೂ ಒಂದು "ಸಮಾನಾಂತರ ಗಣಕಯಂತ್ರ" - ಇದರಲ್ಲಿ ಅನೇಕ ಸಿಪಿಯುಗಳು ಒಟ್ಟಿಗೆ ಕೆಲಸ ಮಾಡುತ್ತವಲ್ಲದೆ ಚದುರಂಗಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ೪೮೦ ಸಿಪಿಯುಗಳನ್ನು ಸಹ ಒಳಗೊಂಡಿದೆ.

ಚೆಸ್ ನ ವಿಶ್ವ ಚಾಂಪಿಯನ್ ಒಬ್ಬರ ಮೇಲೆ ಚದುರಂಗದ ಪಂದ್ಯಾವಳಿಯನ್ನು ಗೆದ್ದ ಮೊದಲ ಗಣಕಯಂತ್ರ ಡೀಪ್ ಬ್ಲೂ. ಫೆಬ್ರವರಿ ೧೯೯೬ ರಲ್ಲಿ ಆಗಿನ ವಿಶ್ವಚಾಂಪಿಯನ್ ಆಗಿದ್ದ ಗ್ಯಾರಿ ಕ್ಯಾಸ್ಪರೋವ್ ಅವರನ್ನು ಇದು ಪಂದ್ಯವೊಂದರಲ್ಲಿ ಸೋಲಿಸಿದರೂ ಒಟ್ಟು ಪಂದ್ಯಾವಳಿಯನ್ನು ಗ್ಯಾರಿ ಕ್ಯಾಸ್ಪರೋವ್ ೪-೨ ಅಂತರದಲ್ಲಿ ಗೆದ್ದರು. ಇದರ ನಂತರ ಅಪ್‍ಗ್ರೇಡ್ ಮಾಡಲ್ಪಟ್ಟ ಡೀಪ್ ಬ್ಲೂ ಮೇ ೧೯೯೭ ರಲ್ಲಿ ಇನ್ನೊಂದು ಪಂದ್ಯಾವಳಿಯಲ್ಲಿ ಗ್ಯಾರಿ ಕ್ಯಾಸ್ಪರೋವ್ ರನ್ನು ೩.೫-೨.೫ ಅಂತರದಲ್ಲಿ ಸೋಲಿಸಿತು.

ಈ ಪಂದ್ಯಾವಳಿಯ ನಂತರ ಈ ಗಣಕಯಂತ್ರವನ್ನು ಐಬಿಎಂ "ನಿವೃತ್ತಗೊಳಿಸಿತು." ಈಗ ಡೀಪ್ ಬ್ಲೂ ಅನ್ನು ಅಮೆರಿಕದ ರಾಷ್ಟ್ರೀಯ ಚಾರಿತ್ರಿಕ ವಸ್ತುಪ್ರದರ್ಶನದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

ಇತಿಹಾಸ[ಬದಲಾಯಿಸಿ]

ಡೀಪ್ ಬ್ಲೂ ಬಗೆಗಿನ ಮೊದಲ ಕೆಲಸ ಪ್ರಾರಂಭಿಸಿದ್ದು ಫೆಂಗ್-ಹ್ಸಿಂಗ್ ಹ್ಸು ಅವರು, ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದಲ್ಲಿನ ಚಿಪ್‍ಟೆಸ್ಟ್ ಎಂಬ ಯೋಜನೆಯ ಹೆಸರಿನಲ್ಲಿ. ಮೊದಲು ಈ ಗಣಕಯಂತ್ರವನ್ನು ಡೀಪ್ ಥಾಟ್ ಎಂದು ಹೆಸರಿಸಲಾಯಿತು(ಒಂದು ಕಾಲ್ಪನಿಕ ಗಣಕಯಂತ್ರದ ಹೆಸರಿನಿಂದ ಪ್ರಭಾವಿತವಾಗಿ). ೧೯೮೯ರಲ್ಲಿ ಹ್ಸು ಅವರು ಐಬಿಎಂ ಕಂಪನಿಯನ್ನು ಸೇರಿ ಮರ್ರೆ ಕ್ಯಾಂಪ್‍ಬೆಲ್ ಅವರೊಡನೆ ಸಮಾನಂತರ ಕಂಪ್ಯೂಟಿಂಗ್ ಸಮಸ್ಯೆಗಳ ಬಗ್ಗೆ ಕೆಲಸಮಾಡತೊಡಗಿದರು. ಆ ಸಮಯದಲ್ಲೇ 'ಡೀಪ್ ಬ್ಲೂ'ವನ್ನು ತಯಾರಿಸಲಾಯಿತು. ಮೊದಲಿನ ಡೀಪ್ ಥಾಟ್ ಹೆಸರು ಮತ್ತು ಐಬಿಎಂ ಕಂಪನಿಯ ನಿಕ್‍ನೇಮ್ ಬಿಗ್‍ಬ್ಲೂ ಎರಡನ್ನೂ ಸೇರಿಸಿ, ಡೀಪ್ ಬ್ಲೂ ಎಂಬ ಹೆಸರನ್ನು ನಾಮಕರಣ ಮಾಡಲಾಯಿತು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]