ಟೆಂಪೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಾಜಾ ಟೆಂಪೆ

ಟೆಂಪೆ ಹುದುಗಿಸಿದ ಸೋಯಾಅವರೆಗಳಿಂದ ತಯಾರಿಸಿದ ಸಾಂಪ್ರದಾಯಿಕ ಇಂಡೋನೇಷಿಯನ್ ಆಹಾರವಾಗಿದೆ.[೧] ಸೋಯಾಅವರೆಯನ್ನು ಕೇಕ್ ರೂಪದಲ್ಲಿ ಬಂಧಿಸುವ ಒಂದು ನೈಸರ್ಗಿಕ ಸಂವರ್ಧನೆ ಮತ್ತು ನಿಯಂತ್ರಿತ ಹುದುಗುವಿಕೆ ಪ್ರಕ್ರಿಯೆಯಿಂದ ಇದನ್ನು ತಯಾರಿಸಲಾಗುತ್ತದೆ.[೨] ಒಂದು ಶಿಲೀಂಧ್ರವಾದ, ರೈಜ಼ೋಪಸ್ ಆಲಿಗೋಸ್ಪೊರಸ್ ಅಥವಾ ರೈಜ಼ೋಪಸ್ ಒರಿಜ಼ೆಯನ್ನು ಕಿಣ್ವನ ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ ಮತ್ತು ಇದನ್ನು ಟೆಂಪೆ ಪ್ರಾರಂಭಕ ಎಂದೂ ಕರೆಯಲಾಗುತ್ತದೆ.

ಇಂಡೋನೇಷ್ಯಾದಲ್ಲಿನ ಸಾಂಪ್ರದಾಯಿಕ ಮಾರುಕಟ್ಟೆಯಲ್ಲಿ ಟೆಂಪೆ ಮಾರಾಟವಾಗುತ್ತಿದೆ

ಇದು ಜಾವಾ ದ್ವೀಪದಲ್ಲಿ ವಿಶೇಷವಾಗಿ ಜನಪ್ರಿಯವಾಗಿದೆ. ಅಲ್ಲಿ ಇದು ಪ್ರೋಟೀನ್‍ನ ಪ್ರಮುಖ ಮೂಲವಾಗಿದೆ. ಟೋಫುವಿನಂತೆ, ಟೆಂಪೆಯನ್ನು ಸೋಯಾಅವರೆಗಳಿಂದ ತಯಾರಿಸಲಾಗುತ್ತದೆ, ಆದರೆ ಇದು ವಿಭಿನ್ನ ಪೌಷ್ಟಿಕ ಗುಣಲಕ್ಷಣಗಳು ಮತ್ತು ರಾಚನಿಕ ಗುಣಗಳುಳ್ಳ ಸಂಪೂರ್ಣ ಸೋಯಾಅವರೆ ಉತ್ಪನ್ನವಾಗಿದೆ. ಟೆಂಪೆಯ ಹುದುಗುವಿಕೆ ಪ್ರಕ್ರಿಯೆ ಮತ್ತು ಇಡೀ ಅವರೆಯನ್ನು ಅದು ಉಳಿಸಿಕೊಳ್ಳುವುದರಿಂದ ಅದಕ್ಕೆ ಪ್ರೋಟೀನ್, ನಾರಿನಾಂಶ ಮತ್ತು ಜೀವಸತ್ವಗಳ ಹೆಚ್ಚಿನ ಪ್ರಮಾಣವನ್ನು ನೀಡುತ್ತದೆ. ಇದು ದೃಢವಾದ ರಚನೆ ಮತ್ತು ಮಣ್ಣಿನಂಥ ರುಚಿಯನ್ನು ಹೊಂದಿದೆ. ಇದು ಕಾಲ ಕಳೆದಂತೆ ಹೆಚ್ಚು ಎದ್ದುಕಾಣುತ್ತದೆ.[೩][೪]

ಉಲ್ಲೇಖಗಳು[ಬದಲಾಯಿಸಿ]

  1. Shurtleff, William; Aoyagi, Akiko. "History of Tempeh". www.soyinfocenter.com. p. 1. Retrieved 2018-09-16.
  2. "Tempeh". Dictionary.com.
  3. Bennett, Beverly Lynn; Sammartano, Ray (2008). The Complete Idiot's Guide to Vegan Cooking. Penguin. p. 17. ISBN 9781592577705. Retrieved 6 May 2011.
  4. Dragonwagon, Crescent; Gourley, Robbin (2002). Passionate Vegetarian. Workman Publishing. p. 639. ISBN 9781563057113. Retrieved 6 May 2011.
"https://kn.wikipedia.org/w/index.php?title=ಟೆಂಪೆ&oldid=1225189" ಇಂದ ಪಡೆಯಲ್ಪಟ್ಟಿದೆ