ಜೇಸನ್ ಸ್ಟಾತಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jason Statham

Jason Statham, 2007
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Jason Michael Statham
(1967-07-26) ೨೬ ಜುಲೈ ೧೯೬೭ (ವಯಸ್ಸು ೫೬)
ಲಂಡನ್, ಇಂಗ್ಲೆಂಡ್, UK
ವೃತ್ತಿ Actor
ವರ್ಷಗಳು ಸಕ್ರಿಯ 1998–present

ಟೆಂಪ್ಲೇಟು:Dmy

ಜೇಸನ್ ಮೈಕಲ್ ಸ್ಟಾತಮ್ (pronounced /ˈsteɪ θəm/;[೧][೨] 1967 ಜುಲೈ 26 ರಂದು ಜನನ)[೩] ಒಬ್ಬ ಆಂಗ್ಲ ನಟ ಮತ್ತು ರಣಯೋಗ್ಯ ಕಲಾವಿದ(ಮರ್ಚಲ್ ಆರ್ಟಿಸ್ಟ್), ಗೈ ರಿತ್ಚಿಅಪರಾಧದ ಚಿತ್ರಗಳಾದ ಲಾಕ್, ಸ್ಟಾಕ್ ಅಂಡ್ ಟು ಸ್ಮೋಕಿಂಗ್ ಬಾರ್ರೆಲ್ಸ್ ; ರಿವಾಲ್ವರ್ ; ಮತ್ತು ಸ್ನಾಚ್ ಗಳಲ್ಲಿನ ಅವನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾನೆ. ಸ್ಟಾತಮ್ ಹಲವಾರು ಅಮೇರಿಕನ್ ಚಲನಚಿತ್ರಗಳಾದ ದ ಇಟಾಲಿಯನ್ ಜಾಬ್ ನಲ್ಲಿ ಸಹಾಯಕ ನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದ ಟ್ರಾನ್ಸ್ಪೋರ್ಟರ್ , ಕ್ರಾಂಕ್ , ದ ಬ್ಯಾಂಕ್ ಜಾಬ್ , ವಾರ್ (ರಣಯೋಗ್ಯ ತಾರೆಯಾದ ಜೆಟ್ ಲೀ ಜೊತೆಯಲಿ), ಹಾಗು ಡೆತ್ ರೇಸ್ ಮುಂತಾದ ಚಿತ್ರಗಳಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾನೆ. ಸಾಮಾನ್ಯವಾಗಿ ಅವನು ತನ್ನ ಚಿತ್ರಗಲ್ಲಿನ ಹೊಡೆದಾಟ ದೃಶ್ಯಗಳು ಮತ್ತು ಸಾಹಸ ಕೃತ್ಯಗಳನ್ನು[೪] ಸ್ವತಃ ತಾನೇ ನಿರ್ವಹಿಸುತ್ತಾನೆ.

ಆರಂಭದ ಜೀವನ[ಬದಲಾಯಿಸಿ]

ಸ್ಟಾತಮ್ ಲಂಡನ್[೫][೬] ಸೈಡೆನ್ಹಾಮ್ನಲ್ಲಿ ಜನಿಸಿದನು. ಅವನು, ಕಾಲಹರಣೆ ಮಾಡಲು (ಕ್ಲಬ್ ಗಳಿಗೆ) ಬರುವವರಿಗೆ ಗಾಯಕನಾಗಿ ಮತ್ತು ಬಟ್ಟೆ ಸಿದ್ದಪಡಿಸುವವನಿಂದ ನರ್ತಕನಾಗಿ ಬದಲಾದವನ ಮಗನಾಗಿದ್ದಾನೆ. ಮುಂದೆ ಅವನು ನಾರ್ಫೋಲ್ಕ್ಗ್ರೇಟ್ ಯಾರ್ಮೌಥ್ಗೆ ಚಲಿಸಿ, ಪ್ರಾರಂಭದಲ್ಲಿ ತನ್ನ ಪೋಷಕರ ಹಾದಿಯನ್ನೇ ಅನುಸರಿಸಿ, ಬೀದಿನಾಟಕದಲ್ಲಿ ನೈಪುಣ್ಯತೆಯನ್ನು ಪಡೆಯುತ್ತಾ ಬೆಳೆದನು. ಅವನು ಸ್ಥಳೀಯ ಗ್ರಾಮರ್ ಶಾಲೆಗೆ (1978–83), ಫುಟ್ ಬಾಲ್ ಆಟವನ್ನೂ ಆಡಿದನು. ಆದರೆ ಅವನ ನಿಜವಾದ ಆಸಕ್ತಿ ಡೈವಿಂಗ್ ಆಗಿದ್ದು, 1992[೭] ರಲ್ಲಿ ಅವನು ವರ್ಲ್ಡ್ ಚಾಂಪಿಯನ್-ಶಿಪ್ ನಲ್ಲಿ 12ನೇ ಸ್ಥಾನವನ್ನು ಗಳಿಸಿದನು. ಅವನು ಬ್ರಿಟೈನ್ನ್ಯಾಷನಲ್ ಡೈವಿಂಗ್ ಸ್ಕ್ವಾಡ್ನಲ್ಲಿ, ಹನ್ನೆರಡು ವರ್ಷಗಳವರೆಗೆ ಸದಸ್ಯನಾಗಿಯೂ ಇದ್ದನು. ಸ್ಟಾತಮ್, ಲಂಡನ್ ನ ಕ್ರಿಸ್ಟಲ್ ಪ್ಯಾಲೇಸ್ ನ್ಯಾಷನಲ್ ಸ್ಪೋರ್ಟ್ಸ್ ಸೆಂಟರ್ನಲ್ಲಿ ತರಭೇತಿಗೊಳ್ಳುತ್ತಿದ್ದಾಗ, ಪ್ರತಿಭಾ ಪ್ರತಿನಿಧಿಯೊಬ್ಬನು ವಿಶೇಷವಾಗಿ ಅಥ್ಲೀಟ್ಸ್ ನಲ್ಲಿ ಪ್ರಾವೀಣ್ಯತೆಯನ್ನು ಹೊಂದಿದವನು ಅವನು ಗುರುತಿಸಿದಾಗ, ಮಾಧ್ಯಮದಲ್ಲಿ ಅವನ ಜೀವನ ಪ್ರಾರಂಭವಾಯಿತು. ಆನಂತರ, ಟಾಮಿ ಹಿಲ್ಫಿಗರ್ ಬ್ರಾಂಡ್ ನ ಸಿದ್ಧ ಉಡುಪುಗಳಿಗೆ ರೂಪದರ್ಶಿಯಾದನು. ಸ್ಟಾತಮ್ ಕಿಕ್ಕ್ ಬಾಕ್ಸಿಂಗ್ ಎಂಬ ಮಾರ್ಷಿಯಲ್ ಆರ್ಟ್ನಲ್ಲಿ ಪ್ರವೀಣನಾಗಿದ್ದನು.

ವೃತ್ತಿಜೀವನ[ಬದಲಾಯಿಸಿ]

ಫ್ರೆಂಚ್ ಕನೆಕ್ಷನ್ಗಾಗಿ ಕೆಲಸ ಮಾಡುತ್ತಿದ್ದಾಗ, ಗೈ ರಿಚ್ಚಿ[೮] ಎಂಬ ಬೆಳೆಯುತ್ತಿರುವ ಬ್ರಿಟಿಷ್ ನಿರ್ದೇಶಕನಿಗೆ ಪರಿಚಯಿಸಲ್ಪಟ್ಟನು. ಆಗ ಈ ನಿರ್ದೇಶಕ ಚಿತ್ರ ಯೋಜನೆಯೊಂದನ್ನು ತಯಾರಿಸುತ್ತಿದ್ದು, ಸ್ಟ್ರೀಟ್-ವೈಸ್ ಕಾನ್ ಆರ್ಟಿಸ್ಟ್ ನ ಪಾತ್ರವನ್ನು ತುಂಬಬೇಕಾದ ಅವಶ್ಯಕತೆಯಿತ್ತು. ಸ್ಟಾತಮ್ ನ ಹಿಂದಿನ ಜೀವನವನ್ನು ತಿಳಿದನಂತರ,ರಿಚ್ಚೀಸ್ ನ ದಾಖಲೆ ಮುರಿದ 1998 ರ ಯಶಸ್ವೀ ಲಾಕ್,ಸ್ಟಾಕ್ ಅಂಡ್ ಟು ಸ್ಮೋಕಿಂಗ್ ಬಾರ್ರೆಲ್ಸ್ [೯], ಚಿತ್ರದಲ್ಲಿ "ಬಕಾನ್" ಪಾತ್ರ ಅಭಿನಯಿಸಲು ಅವನನ್ನು ಆಯ್ಕೆ ಮಾಡಿಕೊಂಡನು. ಈ ಚಿತ್ರವು, ಪ್ರೇಕ್ಷಕರು ಮತ್ತು ವಿಮರ್ಶೆಗಾರರಿಬ್ಬರಿಂದಲೂ ಉತ್ತಮ ಅಭಿಪ್ರಾಯಕ್ಕೊಳಗಾಯಿತು. ಇದು ಪರಿಚಯವಿಲ್ಲದ ನಟನಾದ ಸ್ಟಾತಮ್ ನನ್ನು ಸಾರ್ವಜನಿಕರ ದೃಷ್ಟಿಯಲ್ಲಿ ಪ್ರಖ್ಯಾತಿಗೊಳಿಸಿತು. 2000ದಲ್ಲಿ ಬಂದ ಸ್ನಾಚ್ [೩] ಚಿತ್ರದಲ್ಲಿ, ಸ್ಟಾತಮ್ ಎರಡನೇ ಬಾರಿಗೆ ರಿಚ್ಚಿಯೊಂದಿಗೆ ಸೇರಿ ಕೆಲಸಮಾಡಿದನು. ಬ್ರಾಡ್ ಪಿಟ್ಟ್, ಡೆನ್ನಿಸ್ ಫಾರಿನ ಮತ್ತು ಬೆನಿಸಿಯೋ ಡೆಲ್ ಟೋರೋ ಮುಂತಾದ ಪ್ರಖ್ಯಾತ ನಟರೊಂದಿಗೆ ಅಭಿನಯಿಸಿದ ನಂತರ, ಹಾಗು ಈ ಚಿತ್ರವು 80 ಮಿಲಿಯನ್ ಡಾಲರ್ ಗಳಿಗಿಂತ ಹೆಚ್ಚು ಹಣ ಗಳಿಸಿದ್ದರಿಂದ, ಸ್ಟಾತಮ್ ಹಾಲಿವುಡ್ ಅನ್ನು ಪ್ರವೇಶಿಸಿ 2001ರಲ್ಲಿ ಘೋಸ್ಟ್ಸ್ ಆಫ್ ಮಾರ್ಸ್ ಮತ್ತು ದ ಒನ್ ಎಂಬ ಎರಡು ಚಿತ್ರಗಳಲ್ಲಿ ನತಿಸಿದನು.

ಸ್ಟಾತಮ್ ನಿಗೆ ಅನೇಕ ಚಿತ್ರಗಳಲ್ಲಿನ ಪಾತ್ರಗಳನ್ನು ಅಭಿನಿಯಿಸುವ ಅವಕಾಶ ಸಿಕ್ಕಿತು ಮತ್ತು 2002ರ ದ ಟ್ರಾನ್ಸ್ಪೋರ್ಟರ್ ಚಿತ್ರದಲ್ಲಿ ಚಾಲಕ ಫ್ರಾಂಕ್ ಮಾರ್ಟಿನ್ ಎಂಬ ಮುಖ್ಯ ಪಾತ್ರವನ್ನು ನಿರ್ವಹಿಸಿದನು. ಮಾರ್ಷಿಯಲ್ ಆರ್ಟ್ಸ್ ನ ಹಿನ್ನಲೆ ಹೊಂದಿರುವ ಸ್ಟಾತಮ್, ಈ ಚಿತ್ರದಲ್ಲಿನ ಅತಿ ಹೆಚ್ಚು ಸಾಹಸಕೃತ್ಯಗಳನ್ನು[೩] ಸ್ವತಃ ತಾನೇ ನಿಭಾಯಿಸಿದನು. ಇದರ ಮುಂದಿನ ಪ್ರಕರಣ, 2005[೩] ರಲ್ಲಿ ಟ್ರಾನ್ಸ್ಪೋರ್ಟರ್ 2 ಚಿತ್ರವನ್ನು, ಮತ್ತು ಮೂರನೇ ಟ್ರಾನ್ಸ್ಪೋರ್ಟರ್ ಚಿತ್ರವನ್ನು 2008ರಲ್ಲಿ ಬಿಡುಗಡೆ ಮಾಡಲಾಯಿತು. ಅವನು, (2003)ರ ದ ಇಟಾಲಿಯನ್ ಜಾಬ್ ನಲ್ಲಿ (ಹ್ಯಾಂಡ್-ಸಮ್ ರಾಬ್ ಪಾತ್ರವನ್ನು)[೩] ಮತ್ತು (2004)ರ ಸೇಲ್ಲ್ಯುಲಾರ್ ಚಿತ್ರದಲ್ಲಿ ಸಹಾಯಕ ನಟನ ಪಾತ್ರಗಳಲ್ಲಿ,[೩] ಮತ್ತು ಕೊಲ್ಲಾಟೆರಲ್ ಚಿತ್ರದಲ್ಲಿ ಕ್ಷಣಿಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, (2006)ರ ಕ್ರಾಂಕ್ ಚಿತ್ರದಲ್ಲಿ ಮುಖ್ಯ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾನೆ.[೩] ಸ್ಟಾತಮ್, ಸೆಪ್ಟೆಂಬರ್ 2006ರ ಮಾಕ್ಷಿಮ್ ನಿಯತಕಾಲಿಕದಲ್ಲಿ, ಕ್ರಾಂಕ್ ಚಿತ್ರದಲ್ಲಿನ ಪಾತ್ರವು ತನ್ನ ನಿಜ ಜೀವನಕ್ಕೆ ಹೊಲುವಂತಹದು ಎಂದು ಹೇಳಿದ್ದಾನೆ. 2005ರಲ್ಲಿ, ರಿಚ್ಚಿಯು ತನ್ನ ಹೊಸ ಚಿತ್ರವಾದ ರಿವಾಲ್ವರ್ ನಲ್ಲಿ ನಟಿಸಲು ಸ್ಟಾತಮ್ ನನ್ನು ಆಯ್ಕೆ ಮಾಡಿದನು. ಅವನ, ಇತ್ತೀಚಿಗೆ ಬಿಡುಗಡೆಯಾದ ಚಿತ್ರಗಳೆಂದರೆ ಇನ್ ದಿ ನೇಮ್ ಆಫ್ ದಿ ಕಿಂಗ್: ಅ ಡಂಜಿಯನ್ ಸೀಜ್ಹ್ ಟೇಲ್ , ಟ್ರಾನ್ಸ್ಪೋರ್ಟರ್ 3 ಹಾಗು Crank: High Voltage .

2006ರಲ್ಲಿ ಸ್ಟಾತಮ್

2008ರಲ್ಲಿ ಅಮೆರಿಕಾದ ಚಲನಚಿತ್ರ ವಿಮರ್ಶಕ ಅರ್ಮಾಂಡ್ ವೈಟ್, ಸ್ಟಾತಮ್ ನು ಚಿತ್ರರಂಗದಲ್ಲಿ ಮುಂದೆ ಬಂದಿದ್ದನ್ನು ಕಂಡು ಅವನನ್ನು ಅಂತರರಾಷ್ಟ್ರೀಯ ಮೇರು ಆಕ್ಷನ್ ಚಿತ್ರ ತಾರೆ ಎಂದು ಪ್ರಶಂಸಿಸಿದ್ದಾನೆ. ಡೆತ್ ರೇಸ್ ಚಲನಚಿತ್ರದ ಚಿತ್ರೀಕರಣದ ಸಮಯದಲ್ಲಿ, ವೈಟ್ "ಬೆಸ್ಟ್ ಟ್ರಾಕ್ ರೆಕಾರ್ಡ್ ಆಫ್ ಎನಿ ಕಾಂಟೆಂಪೊರರಿ ಮೂವಿ ಸ್ಟಾರ್."[೧೦] ಎಂದು ಸ್ಟಾತಮ್ ನನ್ನು ಸಮರ್ಥಿಸಿಕೊಂಡಿದ್ದಾನೆ. ನಂತರ 2008ರಲ್ಲಿ ವೈಟ್, ಸ್ಟಾತಮ್ ನ ಟ್ರಾನ್ಸ್ಪೋರ್ಟರ್ 3 ಚಲನಚಿತ್ರವನ್ನು ಕೈನೆಟಿಕ್ ಪಾಪ್ ಆರ್ಟ್ ನ ಅತ್ಯುತ್ತಮ ಉದಾಹರಣೆ ಎಂದು ಹೊಗಳಿದ್ದಾನೆ.

ಸ್ಟಾತಮ್ ಪ್ರಸ್ತುತ[when?] ಡೇವಿಡ್ ಪೀಪಲ್ಸ್ ಮತ್ತು ಜಾನೆಟ್ ಪೀಪಲ್ಸ್(ಟ್ವೆಲ್ವ್ ಮಂಕೀಸ್ ) ರಚಿತವಾದ ದಿ ಗ್ರಾಬ್ಬೆರ್ಸ್ ಚಿತ್ರದ ತಯಾರಿಕೆಯಲ್ಲಿ ಇದ್ದಾನೆ. ಸ್ಟಾತಮ್ ನ ಹೇಳಿಕೆಯಂತೆ “ಡೇವಿಡ್ ಪೀಪಲ್ಸ್ ಮತ್ತು ಜಾನೆಟ್ ಪೀಪಲ್ಸ್ ಅವರುಗಳಿಂದ ರಚಿಸಲ್ಪಟ್ಟ ಒಂದು ಕಥೆಯನ್ನು ನಾವು ಚಿತ್ರ ರೂಪದಲ್ಲಿ ತಯಾರಿಸಲು ಪ್ರಯತ್ನಿಸುತ್ತಿದೇವೆ, ಅದನ್ನು ಹಳೆಯ ಚಿತ್ರವಾದ ದಿ ಟ್ರೆಸರ್ ಆಫ್ ದಿ ಸಿಯರ ಮಾಡ್ರೆ ಚಿತ್ರದ ರೀತಿಯಲ್ಲೇ ತಯಾರಿಸುವ ಉದ್ದೇಶವಿದೆ. ಈ ಚಿತ್ರವು ರೀಮೇಕ್ ಅಥವಾ ಬೇರೆ ಏನೂ ಅಲ್ಲ, ಆದರೆ ಇದು ಅದನ್ನು ಸ್ವಲ್ಪ ಹೋಲುವಂತೆಯೇ ಇದೆ, ಇದು ಸಂಬಹಂದಗಳು ಮತ್ತು ದುರಾಸೆಯಿಂದ ಈ ಮೂವರಲ್ಲಿ ಸಂಭಂದಗಳು ಹೇಗೆ ಹದಗೆಡುತ್ತದೆ ಎಂಬುದರ ಬಗ್ಗೆ ಚಿತ್ರಿತವಾಗಿದೆ. ಈ ಚಿತ್ರದ ಶಿರೋನಾಮ ದಿ ಗ್ರಾಬ್ಬೆರ್ಸ್ ಎಂಬುದಾಗಿದೆ."[೧೧]

ದಿ ಸನ್ ಪತ್ರಿಕೆಯ ವರದಿಯಂತೆ[ಸೂಕ್ತ ಉಲ್ಲೇಖನ ಬೇಕು], ರಿಚ್ಚಿ ಮತ್ತು ಸ್ಟಾತಮ್ ಮತ್ತೆ ಒಟ್ಟುಗೂಡಿ ಹೊಸದಾದ ನೃತ್ಯ ರೂಪದ ಚಿತ್ರವೊಂದನ್ನು ತಯಾರಿಸುತ್ತಿದ್ದು, ಇದು "ವುರ್ಜೆಲ್ ಗುಮ್ಮಿದ್ಜ್ ಮತ್ತು ಬಲ್ಲಿಟ್ಟ್" ನ ಸಂಮಿಶ್ರಣಗೊಂಡ ಚಿತ್ರವೆಂದು ವಿವರಿಸಲಾಗಿದೆ.

ದಿ ಕಿಲ್ಲರ್ ಎಲೈಟ್ ಹೆಸರಿನ ಆಕ್ಷನ್ ಚಿತ್ರದಲ್ಲೂ ಅವನು ನಟಿಸುತ್ತಾನೆ. ವರೈಟಿ ಪತ್ರಿಕೆಯ ಪ್ರಕಾರ ಈ ಚಿತ್ರವು ನೈಜ ಘಟನೆಗಳನ್ನು ಆಧಾರವನ್ನಾಗಿ ಇಟ್ಟುಕೊಂಡಿದೆ, ಇದು ರನುಲ್ಪ್ಹ್ ಫೈನ್ನೆಸ್ ರಚಿತವಾದ ದಿ ಫೆಧರ್ಮೆನ್ ಪುಸ್ತಕದ ವಿಷಯವೂ ಆಗಿತ್ತು. ಸ್ಟಾತಮ್ ನು, ಮಾಜಿ ನೇವಿ ಸೀಲ್ ಆಗಿದ್ದು, ಗೆಳೆಯನೊಬ್ಬನನ್ನು ರಕ್ಷಿಸಲು ನಿವೃತ್ತಿಯಿಂದ ಹೊರಬರುವ ಪಾತ್ರವನ್ನು ಮಾಡಿದ್ದಾನೆ.

ವೈಯಕ್ತಿಕ ಜೀವನ[ಬದಲಾಯಿಸಿ]

ಸ್ಟಾತಮ್ ನು ಬ್ರಹ್ಮಚಾರಿ, ಆದರೆ ರೂಪದರ್ಶಿ ಕೆಲ್ಲಿ ಬ್ರೂಕ್ಳ ಜೊತೆ ಹಲವಾರು ವರ್ಷಗಳವರೆಗೆ[೧೨][೧೩] ಸಂಬಂಧವನ್ನು ಇಟ್ಟುಕೊಂಡಿದ್ದ.

ಸ್ಟಾತಮ್ ನು ಮಿಕ್ಸೆಡ್ ಮಾರ್ಷಿಯಲ್ ಆರ್ಟ್ಸ್(ಎಂಎಂಎ)ನ ಅಭಿಮಾನಿಯಾಗಿದ್ದು ಮತ್ತು ಅನೇಕ ಪಿಪಿವಿ [clarification needed] ಕಾರ್ಯಕ್ರಮ[ಸೂಕ್ತ ಉಲ್ಲೇಖನ ಬೇಕು]ಗಳಲ್ಲಿ ಭಾಗವಹಿಸಿದ್ದಾನೆ.

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
೧೯೯೮ ಲಾಕ್, ಸ್ಟಾಕ್ ಅಂಡ್ ಟು ಸ್ಮೋಕಿಂಗ್ ಬ್ಯಾರ್ರೆಲ್ಸ್ ಬೇಕನ್
೨೦೦೦ ಸ್ನ್ಯಾಚ್ ಟರ್ಕಿಷ್
ಟರ್ನ್ ಇಟ್ ಅಪ್ ಮಿಸ್ಟರ್. ಬಿ
೨೦೦೧ ಘೋಸ್ಟ್ಸ್ ಆಫ್ ಮಾರ್ಸ್ ಸಾರ್ಜೆಂಟ್. ಜೆರಿಚೋ ಬಟ್ಲರ್
"ದಿ ಒನ್‌" ಎಂವಿಎ ಏಜೆಂತ್ ಇವನ್ ಫನ್ಸ್ಚ್ ಮೊದಲನೇ ಬಾರಿ ಜೆಟ್ ಲೀ ಯ ಜೊತೆಗಾರನಾಗಿ
ಮೀನ್ ಮಿಷೀನ್ ಮಾಂಕ್
೨೦೦೨ Thai Boxing: A Fighting Chance ನಿರೂಪಕ/ವಿವರಣೆಕಾರ
ದಿ ಟ್ರಾನ್ಸ್ಪೋರ್ಟರ್ ಫ್ರಾಂಕ್ ಮಾರ್ಟಿನ್
೨೦೦೩ ದಿ ಇಟಾಲಿಯನ್ ಜಾಬ್ ಹ್ಯಾಂಡ್-ಸಮ್ ರಾಬ್
೨೦೦೪ ಕೊಲ್ಲಾಟೆರಲ್ ಫ್ರಾಂಕ್ ಮಾರ್ಟಿನ್

(ಭಾವಿಸಲಾಗಿದೆ)

ಕ್ಷಣಿಕ ಪಾತ್ರ
ಸೆಲ್ಲ್ಯುಲಾರ್ ಎಥನ್ ಗ್ರೀರ್
೨೦೦೫ ಟ್ರಾನ್ಸ್ಪೋರ್ಟರ್ 2 ಫ್ರಾಂಕ್ ಮಾರ್ಟಿನ್
ರಿವಾಲ್ವರ್ ಜೇಕ್ ಗ್ರೀನ್
ಲಂಡನ್‌ ಬೇಟ್-ಮ್ಯಾನ್
೨೦೦೬ ಖೆಯೋಸ್ ದಿಟೆಕ್ತೀವ್. ಕ್ವೇನ್ಟಿನ್ ಕಾನ್ನರ್ಸ್
ದಿ ಪಿಂಕ್ ಪಾನ್ಥೆರ್ ಐವ್ಸ್ ಗ್ಲುಆನ್ಟ್ ನಾಮಫಲಕವಿಲ್ಲದ ಪಾತ್ರ
ಕ್ರಾಂಕ್ ಚೆವ್ ಚೀಲಿಯೋಸ್
೨೦೦೭ ವಾರ್ ಎಫ್ ಬಿ ಐ ಏಜೆಂಟ್ ಜಾಹ್ನ್ ಕ್ರಾಫೋರ್ಡ್ ಎರಡನೇ ಬಾರಿ ಜೆಟ್ ಲೀ ಯ ಜೊತೆಗಾರನಾಗಿ
೨೦೦೮ ದಿ ಬ್ಯಾಂಕ್ ಜಾಬ್ ಟೆರ್ರಿ ಲೆಧರ್
ಇನ್ ದಿ ನೇಮ್ ಆಫ್ ದಿ ಕಿಂಗ್: ಎ ಡಂಜಿಯನ್ ಸೀಜ್ಹ್ ಟೇಲ್ ಫಾರ್ಮರ್ ಡೈಮ್ಯಾನ್
ಡೆಥ್ ರೇಸ್ ಜೆನ್ಸೇನ್ "ಫ್ರಾಂಕೆನ್ಸ್ಟೈನ್" ಏಮ್ಸ್
ಟ್ರಾನ್ಸ್ಪೋರ್ಟರ್ 3 ಫ್ರಾಂಕ್ ಮಾರ್ಟಿನ್
೨೦೦೯ Crank: High Voltage ಚೆವ್ ಚೀಲಿಯೋಸ್
ಟ್ರುಥ್ ಇನ್ 24 ನಿರೂಪಕ/ವಿವರಣೆಕಾರ
೨೦೧೦ 13 ಜ್ಯಾಸ್ಪರ್‌ ನಿರ್ಮಾಣ-ನಂತರದ ಹಂತ
ದಿ ಎಕ್ಷ್ಪೆನ್ಡೆಬಲ್ಸ್ ಲೀ ಕ್ರಿಸ್ಟ್ಮಸ್ ಮೂರನೇ ಬಾರಿ ಜೆಟ್ ಲೀ ಯ ಜೊತೆಗಾರನಾಗಿ
ಬ್ಲಿಟ್ಜ್ ನಿರ್ಮಾಣ-ಮುಂಚಿನ ಹಂತ
ಪ್ರೆಟ್ಟಿ, ಬೇಬಿ, ಮಿಷೀನ್ ಪ್ರೆಟ್ಟಿ ಬಾಯ್ ಫ್ಲಯಡ್ (ಗಾಳಿ ಸುದ್ಧಿ) ನಿರ್ಮಾಣ-ಮುಂಚಿನ ಹಂತ
ದಿ ಮೆಖಾನಿಕ್ ನಿರ್ಮ್ಮಾಣ [೧೪]
೨೦೧೧ ದಿ ಬ್ರೆಜಿಲಿಯನ್ ಜಾಬ್ ಹ್ಯಾಂಡ್-ಸಮ್ ರಾಬ್

ಗಲ್ಲಾ ಪೆಟ್ಟಿಗೆ ಸಾಧನೆ[ಬದಲಾಯಿಸಿ]

1998ರಿಂದ ಸ್ಟಾತಮ್ ಇಪ್ಪತ್ತಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾನೆ. ಅವುಗಳಲ್ಲಿ ಸ್ನಾಚ್ ಮತ್ತು ದಿ ಬ್ಯಾಂಕ್ ಜಾಬ್ ಮುಂತಾದ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಅದ್ದೂರಿಯಾಗಿ ಯಶಷನ್ನು ಕಂಡಿದೆ. ಅವನು ಎರಡು-ಜೊತೆ ಚಲನಚಿತ್ರ ಸರಣಿಗಳಲ್ಲಿ ನಟಿಸಿದ್ದಾನೆ, ದಿ ಟ್ರಾನ್ಸ್ಪೋರ್ಟರ್ ಮತ್ತು ಕ್ರಾಂಕ್. ಅವನು ನಟಿಸಿರುವ ಎಲ್ಲ ಚಿತ್ರಗಳಿಂದ ಗಲ್ಲಾ ಪೆಟ್ಟಿಗೆಯಲ್ಲಿ 1 ಬಿಲಿಯನ್ ಗೂ ಹೆಚ್ಚು ಅಮೇರಿಕನ್ ಡಾಲರ್ಗಳಲ್ಲಿ ಹಣ ಗಳಿಸಿದ್ದು, ಅವುಗಳಲ್ಲಿ ಅತಿ ಹೆಚ್ಚು ಹಣ ಟ್ರಾನ್ಸ್ಪೋರ್ಟರ್ 3 ಚಿತ್ರವೊಂದರಿಂದಲೇ ಗಳಿಸಿದುದಾಗಿದೆ.

ವೀಡಿಯೊ ಗೇಮ್ ಮೇಲು-ಧ್ವನಿ(ವಾಯ್ಸ್ ಓವರ್ಸ್)[ಬದಲಾಯಿಸಿ]

ವಿಡಿಯೋ ಆಟಗಳು ವರ್ಷ Character
ರೆಡ್ ಫಾಕ್ಷನ್ II 2002 ಶ್ರೈಕ್
ಕಾಲ್ ಆಫ್ ಡ್ಯೂಟಿ 2003 ಸೆರ್ಜೆಂಟ್. ವಾಟರ್ಸ್

ಆಕರಗಳು[ಬದಲಾಯಿಸಿ]

  1. BBC "Jason Statham interview" (video). BBC. Retrieved 18 ಮೇ 2009. {{cite news}}: Check |url= value (help)
  2. "Jason Statham interview on ROVE (live in studio) - Bank Job" (video). Australia: Rove. 13 ಜುಲೈ 2008. Retrieved 18 ಮೇ 2009. {{cite web}}: Italic or bold markup not allowed in: |publisher= (help)
  3. ೩.೦ ೩.೧ ೩.೨ ೩.೩ ೩.೪ ೩.೫ ೩.೬ ಇಂಟರ್ನೆಟ್ ಮೂವೀ ಡೇಟಾಬೇಸ್ ನಲ್ಲಿ ಜೇಸನ್ ಸ್ಟಾತಮ್
  4. Endelman, Michael (1 ಸೆಪ್ಟೆಂಬರ್ 2006). "Five Things You Should Know About Jason Statham". Entertainment Weekly. Archived from the original on 5 ಡಿಸೆಂಬರ್ 2014. Retrieved 1 ನವೆಂಬರ್ 2009. {{cite news}}: Italic or bold markup not allowed in: |publisher= (help)
  5. Iley, Chrissy (5 ಅಕ್ಟೋಬರ್ 2008). "Jason Statham, last action hero". London: The Times. Retrieved 8 ಜೂನ್ 2009. {{cite news}}: Italic or bold markup not allowed in: |publisher= (help)
  6. Barlow, Helen (13 ಜುಲೈ 2008). "All action". The Sydney Morning Herald. Retrieved 1 ನವೆಂಬರ್ 2009. {{cite news}}: Italic or bold markup not allowed in: |publisher= (help)
  7. ಜೇಸನ್ ಸ್ಟಾತಮ್ ನೊಂದಿಗೆ ಸಂಧರ್ಷನ
  8. ಆಸ್ಕ್-ಮೆನ್.ಕಾಂ ನಲ್ಲಿ ಜೇಸನ್ ಸ್ಟಾತಮ್ Archived 20 July 2008[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
  9. ಫಿಲಂ-ಬಗ್ ನಲ್ಲಿ ಜೇಸನ್ ಸ್ಟಾತಮ್
  10. http://www.nypress.com/article-19048-transcendent-thrill-drive.html[ಶಾಶ್ವತವಾಗಿ ಮಡಿದ ಕೊಂಡಿ]
  11. Sampson, Thomas (17 ಸೆಪ್ಟೆಂಬರ್ 2008). "Jason Statham up for The Grabbers". The Hollywood News. Archived from the original on 28 ಆಗಸ್ಟ್ 2009. Retrieved 26 ಜನವರಿ 2009.
  12. Nashawaty, By Chris (24 ಆಗಸ್ಟ್ 2007). "Cut To The Chase". Entertainment Weekly. Archived from the original on 3 ಫೆಬ್ರವರಿ 2012. Retrieved 1 ನವೆಂಬರ್ 2009. {{cite news}}: Italic or bold markup not allowed in: |publisher= (help)
  13. Day, Elizabeth (1 ನವೆಂಬರ್ 2009). "Kelly Brook". The Guardian. Retrieved 2 ನವೆಂಬರ್ 2009. {{cite news}}: Italic or bold markup not allowed in: |publisher= (help)
  14. http://www.nola.com/movies/index.ssf/2009/11/new_orleans_film_shoot_to_disr.html

ಹೊರಗಿನ ಕೊಂಡಿಗಳು[ಬದಲಾಯಿಸಿ]