ಕೋಳಿ ಅಂಕ
ವಿಕಿಪೀಡಿಯ ಇಂದ
ಕೋಳಿ ಅಂಕ ಕೋಳಿಗಳ ಕಾದಾಟದ ಆಟ. ಎರಡು ಬಲಿತ, ಬಲಿಷ್ಠ ಹುಂಜಗಳ ಕಾಲಿಗೆ ಹರಿತವಾದ ಸಣ್ಣ ಕತ್ತಿ(ಬಾಲು)ಗಳನ್ನು ಕಟ್ಟಿ ಅವುಗಳನ್ನು ಹೋರಾಟಕ್ಕೆ ಬಿಡುವರು. ಹುಂಜಗಳು ಪರಸ್ಪರ ಕಾದಾಡುವಾಗ ಯಾವ ಹುಂಜವುೆದುರಾಳಿಯನ್ನು ಗಾಯಗೊಳಿಸಿ ಹೈರಾಣಾಗಿಸುವುದೋ ಆ ಹುಂಜವು ವಿಜಯಿಯಾದಂತೆ. ಅದರ ಯಜಮಾನನಿಗೆ ಬಹುಮಾನ ಸಲ್ಲುವುದು. ಅಂತೆಯೇ ಕೋಳಿ ಅಂಕದಲ್ಲಿ ಗೆಲ್ಲಲೆಂದು ಮುತುವರ್ಜಿವಹಿಸಿ ಕೋಳಿ ಸಾಕುವುದೂ ಸಹಜ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಆಟವು ಕೋಳಿ ಕಟ್ಟ ಎಂದು ಪ್ರಸಿದ್ಧಿ. ಕಂಬಳದಂತೆಯೇ ಕೋಳಿ ಕಟ್ಟವೂ ಸ್ಥಳೀಯರಲ್ಲಿ ಜನಪ್ರಿಯ.
ಗೆಲ್ಲಬಹುದಾದ ಕೋಳಿಯ ಮೇಲೆ ಬಾಜಿ ಕಟ್ಟುವುದರಿಂದ ಇದನ್ನು ಜೂಜಾಟ ಎಂದು ಪರಿಗಣಿಸಿ ಆಗಾಗ್ಗೆ ಅಂತಹ ಪ್ರಯತ್ನಗಳನ್ನು ತಡೆಗಟ್ಟುವುದೂ ನಡೆಯಿತ್ತಿರುತ್ತದೆ.