ಕಾಲಾ ಘೋಡ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪ್ರತಿವರ್ಷವೂ ಮುಂಬಯಿಯಲ್ಲಿ "ಕಾಲಾಘೋಡ ಫೆಸ್ಟಿವಲ್" ಫೆಬ್ರವರಿ ತಿಂಗಳಿನಲ್ಲಿ ನಡೆಯುತ್ತದೆ. ಬ್ರಿಟನ್ನಿನ ರಾಜಕುಮಾರ ೭ನೇ ಎಡ್ವರ್ಡ್ ಚಕ್ರವರ್ತಿ ಕುದುರೆಯಮೇಲೇರಿ ಸವಾರಿ ಮಾಡುತ್ತಿದ್ದ ಒಂದು ಕಪ್ಪು ಕಂಚಿನ ಕುದುರೆಯ ಪ್ರತಿಮೆಯನ್ನು ಬಹಳ ಹಿಂದೆ ಅಂದರೆ, ಸನ್, ೧೮೭೦ ರಲ್ಲೇ ಇಲ್ಲಿನ ತಾಣದಲ್ಲಿ ಸ್ಥಾಪಿಸಿದ್ದ ಕಾರಣಕ್ಕಾಗಿ, ಈ ಪ್ರದೇಶಕ್ಕೆ 'ಕಾಲಾ ಘೋಡಾ' (ಕಪ್ಪು ಕುದುರೆ) ಎಂದೇ ಹೆಸರು ಬಂದಿದೆ. ಸನ್, ೧೮೭೫ ರಲ್ಲಿ 'ಕಿಂಗ್ ಎಡ್ವರ್ಡ್' ರು, ಭಾರತವನ್ನು ಭೆಟ್ಟಿಮಾಡಲು ಬಂದು ಬೊಂಬಾಯಿನಗರದಲ್ಲಿ ತಂಗಿದ್ದರು. ಆ ಸಮಯದಲ್ಲಿ ಅವರಿನ್ನೂ ಪ್ರಿನ್ಸ್ ಆಫ್ ವೇಲ್ಸ್ ಪದವಿಯಲ್ಲಿದ್ದರು. ಚಕ್ರವರ್ತಿಯಾಗಿರಲಿಲ್ಲ. ೧೯೬೫ ರಲ್ಲಿ ಈ ಪ್ರತಿಮೆಯನ್ನು ಪ್ರಿನ್ಸ್ ಆಫ್ ವೇಲ್ಸ್ ವಸ್ತು ಸಂಗ್ರಹಾಲಯದ ಸ್ಥಳದಿಂದ ಬೇರ್ಪಡಿಸಿ ಹೊರತೆಗೆದು ಬೈಕುಲ್ಲಾ ಉಪನಗರದ ’ಜೀಜಾಮಾತ ಉದ್ಯಾನ’ದಲ್ಲಿರಿಸಲಾಯಿತು.

ಕಾಲಾಘೋಡ ಜಿಲ್ಲೆ[ಬದಲಾಯಿಸಿ]

ಇದು ಮುಂಬಯಿಯ ಚಿಕ್ಕ ಪ್ರದೇಶ.ಹಿಂದಿನ ಚರಿತ್ರೆಯ ಕೆಲವು ಪುಟಗಳಲ್ಲಿ ನಮೂದಿಸಿರುವ ಚಿತ್ರಗಳಿಂದ, ಅದು ಆಗ ಇದ್ದ ಸ್ಥಳದ ಅರಿವಾಗುತ್ತದೆ. ಅಲ್ಲಿದ್ದ ಕಟ್ಟಡದ ದ್ವಾರದ ಬಳಿ, ಈಗಿರುವ 'ಎಲಿವೇಟರ್,' ನ ಸಮೀಪದಲ್ಲಿ, 'ಕಾಮರ್ಸ್ ಹೌಸ್,' ಕಟ್ಟಡವಿದ್ದ ಜಾಗ. 'ರೋಪ್ ವಾಕ್ ಸ್ಟ್ರೀಟ್ ' ಮತ್ತು 'ಮೆಡೊ ರಸ್ತೆ ' ('ನಾಗಿನ್ ದಾಸ್ ಮಾಸ್ತರ್ ರಸ್ತೆ.'), ಬಿಟ್ಟು 'ವಿ .ಬಿ.ಗಾಂಧಿ ರಸ್ತೆ' ಎಲ್ಲವೂ ಈ ಜಿಲ್ಲೆಯಲ್ಲೇ ಇವೆ. ಇದು, ಮುಂಬೈನ ಅತ್ಯಂತ ದುಬಾರಿ ಜಾಗ. ಈ ಭಾಗದ ಜನರು ಪ್ರತಿವರ್ಷವೂ ಕಲೆ, ನೃತ್ಯ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.

ಕಾಲಾಘೋಡ ಪ್ರತಿಮೆಯಿದ್ದ ಜಾಗ[ಬದಲಾಯಿಸಿ]

ನಿಖರವಾಗಿ ಆಗಿನಕಾಲದ ಚಿತ್ರಗಳಲ್ಲಿ ದಾಖಲಿಸಿರುವ ಪ್ರಕಾರ,ಡೇವಿಡ್ ಸಸೂನ್ ಲೈಬ್ರೆರಿ ಕಟ್ಟಡದ ಮುಂದೆ, ಈಗಿನ ರಿದಮ್ ಹೌಸ್ ಅಂಗಡಿಯ ಎದುರಿಗೆ ಮಧ್ಯಬಾಗದಲ್ಲಿ ಬೃಹದ್ ಪ್ರತಿಮೆಯನ್ನು ಸ್ಥಾಪಿಸಿದ್ದರು. ಅದು ದಕ್ಷಿಣ ಉತ್ತರಾಭಿಮುಖವಾಗಿ ಕಾಣಿಸಿಕೊಂಡಿತ್ತು. ಅಂದರೆ ಫ್ಲೋರಾ ಫೌಂಟೆನ್ ಕಡೆಗೆ ಮುಖ ಮಾಡಿಕೊಂಡು.

ಸುಪ್ರಸಿದ್ಧ ವ್ಯಾಟ್ಸನ್ ಹೋಟೆಲ್[ಬದಲಾಯಿಸಿ]

'ಭಾರತದ ಪ್ರಪ್ರಥಮ ಮೂಕಿ ಚಲನಚಿತ್ರ,' ವನ್ನು ಪ್ರದರ್ಶಿಸಿದ ಖ್ಯಾತಿ 'ವ್ಯಾಟ್ಸನ್ ಹೋಟೆಲ್,' ನದು. ಅದು, 'ಕಾಲಾಘೋಡ ಜಾತ್ರೆ' ಗೆ ಸಮೀಪದಲ್ಲಿದೆ. ಸನ್ ೧೮೯೬, ರಲ್ಲಿ ಭಾರತದ ಪ್ರಪ್ರಥಮ ಮೂಕಿ ಚಲನಚಿತ್ರ ವನ್ನು ಈ ಹೋಟೆಲ್ ನಲ್ಲಿ ತಯಾರಿಸಿದ್ದರು. ಪೂರ್ವದಲ್ಲಿ ಮುಂಬೈನ ಬಂದರು, ದಕ್ಷಿಣಕ್ಕೆ, 'ರೀಗಲ್ ಸಿನೆಮ', ಚಿತ್ರಮಂದಿರ. 'ಫ್ಲೋರ ಫೌಂಟೆನ್,' ಉತ್ತರದಲ್ಲಿ, ಪಶ್ಚಿಮದಲ್ಲಿ 'ಓವಲ್ ಕ್ರೀಡಾಂಗಣ', ವಿದೆ. ಇವುಗಳೆಲ್ಲದರ ಮಧ್ಯೆ, ಕಾಲಾಘೋಡ ಪ್ರದೇಶ, ಸಿಕ್ಕಿಹಾಕಿಕೊಂಡಂತಿದೆ. ಕಾಲಘೊಡ ದ ಉತ್ತರಕ್ಕೆ, ಫೌಂಟೆನ್ ಜಿಲ್ಲೆ, ಇದೆ. ಇದರ ದಕ್ಷಿಣದಿಕ್ಕಿಗೆ, ಎಲ್ಲರು ಕರೆಯುವ 'ಎಸ್.ಪಿ.ಮುಕರ್ಜಿ ಚೌಕ್' ('ಹಿಂದಿನ 'ವೆಲ್ಲಿಂಗ್ಡನ್ ಸರ್ಕಲ್'), ('ಪ್ರಿನ್ಸ್ ಆಫ್ ವೇಲ್ಸ್ ') ಮ್ಯೂಸಿಯಮ್, ಹಾಗೂ 'ರೀಗಲ್ ಸಿನೆಮ' ಕಾಣಿಸುತ್ತದೆ. ಉತ್ತರ ಪೂರ್ವದಲ್ಲಿ 'ಮುಂಬೈ ಸ್ಟಾಕ್ ಎಕ್ಸ್ಚೇಂಜ್ ' ಇಲಾಖೆ, ಶೋಭಾಯಮಾನವಾಗಿ, ಗೋಚರಿಸುತ್ತದೆ. ಇದು 'ದಲಾಲ್ ರಸ್ತೆ,' ಯಲ್ಲಿದೆ.

'ಕಾಲಾಘೋಡ,' ಇಲಾಖೆಯ ಹತ್ತಿರವಿರುವ, ಪ್ರಮುಖ ಸ್ಥಳಗಳು[ಬದಲಾಯಿಸಿ]

'೭ ನೇ ಕಿಂಗ್ ಎಡ್ವರ್ಡ್ ಕುದುರೆಯನ್ನೇರಿದ ಕಪ್ಪು ಕಂಚಿನ ವಾಸ್ತು ಶಿಲ್ಪದ ವಿಗ್ರಹ-ಈ ಪುತ್ಥಳಿಯನ್ನೇ ಸ್ಥಾನೀಯರು, ಕಾಲಾಘೋಡವೆಂದು ಇಂದಿಗೂ ಕರೆಯುತ್ತಾರೆ.ಈಗ ಈ ವಿಗ್ರಹ, ಬೈಕುಲ್ಲಾದ ಜೀಜಾಮಾತಾ ಉದ್ಯಾನದಲ್ಲಿದೆ'
'ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ'
'ಎಲ್ಫಿನ್ ಸ್ಟನ್ ಕಾಲೇಜು'
'ಡೇವಿಡ್ ಸಸೂನ್ ಪುಸ್ತಕ ಭಂಡಾರ'
'ಜಹಾಂಗೀರ್‍ ಆರ್ಟ್ ಗ್ಯಾಲರಿ'
'ಎಸ್ಪ್ಲನೇಡ್ ಮ್ನಾನ್ಷನ್ ಅಥವಾ ವ್ಯಾಟ್ಸನ್ಸ್ ಹೋಟೆಲ್'
'ಮುಂಬಯಿ ವಿಶ್ವವಿದ್ಯಾಲಯ'
'ಸಿವಿಲ್ ಮತ್ತು ಸೆಶನ್ಸ್ ಕೋರ್ಟ್'
ಬೈಕುಲ್ಲಾದ ರಾಣಿಬಾಗ್ ಉದ್ಯಾನದಲ್ಲಿ ಸ್ಥಾಪಿಸಿರುವ ಕಿಂಗ್ ಎಡ್ವರ್ಡ್-೭ ರವರ ಪ್ರತಿಮೆ'

ತಿಂಡಿ -ತಿನಸುಗಳಿಗಾಗಿ, ಹೋಟೆಲ್ ಗಳು[ಬದಲಾಯಿಸಿ]

  • 'Copper Chimney' ಕಾಪರ್ ಚಿಮಿನಿ).
  • 'Noodle Bar'(ನೂಡಲ್ ಬಾರ್)
  • 'Gelato'(ಗೆಲೆಟೊ)
  • 'Joss' (ಜೋಸ್)
  • 'Silk Route' (ಸಿಲ್ಕ್ ರೂಟ್)
  • 'Chetana' (ಚೇತನ)
"http://kn.wikipedia.org/w/index.php?title=ಕಾಲಾ_ಘೋಡ&oldid=335179" ಇಂದ ಪಡೆಯಲ್ಪಟ್ಟಿದೆ