ವಿಷಯಕ್ಕೆ ಹೋಗು

ಕಾಲಾ ಘೋಡ

ನಿರ್ದೇಶಾಂಕಗಳು: 18°55′51″N 72°49′59″E / 18.9307°N 72.8331°E / 18.9307; 72.8331
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಾಲ ಘೋಡ ಇಂದ ಪುನರ್ನಿರ್ದೇಶಿತ)

ಕಾಲಾಘೋಡ,[] ಮುಂಬಯಿ ನಗರದ ಐತಿಹಾಸಿಕ ಮಹತ್ವವಿರುವ ಸ್ಥಳಗಳಲ್ಲೊಂದು.

೨೦೧೭ ರ ನಂತರ ಸ್ಥಾಪಿಸಿದ ಕಾಲಾಘೋಡ ಪ್ರತಿಮೆ.
ಆರ್ಟ್ ಜಿಲ್ಲೆ
ಕಾಲ ಘೋಡ ಆರ್ಟ್ ಜಿಲ್ಲೆ
ಕಾಲಾ ಘೋಡ ಪ್ರತಿಮೆ.
ಕಾಲಾ ಘೋಡ ಪ್ರತಿಮೆ.
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/Mumbai" does not exist.
Coordinates: 18°55′51″N 72°49′59″E / 18.9307°N 72.8331°E / 18.9307; 72.8331
Countryಭಾರತ
ಮಹಾರಾ�ಷ್ಟ್ರ ರಾಜ್ಯಮಹಾರಾಷ್ಟ
Metroಮುಂಬೈ
PIN Code
೪೦೦ ೦೩೨

ಕಲಾ ಜಿಲ್ಲೆ (Art District) ಎಂದು ಕರೆಯಲಾಗುವ ದಕ್ಷಿಣ ಮುಂಬಯಿನಲ್ಲಿ 'ಕಾಲಾ ಘೋಡಾ' (ಕಪ್ಪು ಕುದುರೆ)ಎಂದು ಕರೆಯುವ ಅರ್ಧ ಚಂದ್ರಾಕೃತಿಯ ಜಮೀನು ಬಹಳ ಮಹತ್ವದ ಪಾತ್ರವಹಿಸಿದೆ.ಆಗಿನ ಬೊಂಬಾಯಿಯ ಗವರ್ನರ್ ಆಗಿದ್ದ 'ಸರ್ ರಿಚರ್ಡ್ ಟೆಂಪಲ್' ಎನ್ನುವವರು, ೨೯, ಜೂನ್, ೧೮೭೯ ರಂದು ಕಪ್ಪು ಕಂಚಿನ ಕುದುರೆಯ ಮೇಲೇರಿ ಸವಾರಿ ಮಾಡುತ್ತಿರುವ ಬ್ರಿಟನ್ನಿನ ರಾಜಕುಮಾರ ೭ನೇ ಎಡ್ವರ್ಡ್ ಚಕ್ರವರ್ತಿಯ ಪುಥಳಿಯನ್ನು ಅನಾವರಣಗೊಳಿಸಿದ್ದರು. ೧೨,೫೦೦ ರೂಪಾಯಿಗಳ ವೆಚ್ಚದಲ್ಲಿ ತಯಾರಾದ ಈ ಪುಥಳಿಯ ನಿರ್ಮಾಣ ಕಾರ್ಯದ ಶಿಲ್ಪಿ, ಲಂಡನ್ನಿನ ನಿವಾಸಿ ಸರ್. ಜೋಸೆಫ್ ಬೊಹೆಮ್ ರವರು. ಆಗಿನಿಂದಲೂ ಈ ಪ್ರದೇಶವನ್ನು ಸ್ಥಾನೀಯ ನಿವಾಸಿಗಳು 'ಕಾಲಾ ಘೋಡಾ' (ಕಪ್ಪು ಕುದುರೆ) ಎಂದು ಕರೆಯಲು ಪ್ರಾರಂಭಿಸಿದರು. ೧೮೭೫ ರಲ್ಲಿ 'ಕಿಂಗ್ ಎಡ್ವರ್ಡ್' ರು,ಇಂಗ್ಲೇಂಡ್ ನಿಂದ ಭಾರತದ ಬೊಂಬಾಯಿ ನಗರಕ್ಕೆ ಬಂದಿದ್ದರು.[೨] ಆ ಸಮಯದಲ್ಲಿ ಅವರು "ಪ್ರಿನ್ಸ್ ಆಫ್ ವೇಲ್ಸ್ ಪದವಿ" ಯಲ್ಲಿದ್ದರು. ಆಗಿನಕಾಲದ ಪತ್ರಿಕೆಗಳಲ್ಲಿ ನಿಖರವಾಗಿ ದಾಖಲಿಸಿರುವ ಪ್ರಕಾರ, ಡೇವಿಡ್ ಸಸೂನ್ ಲೈಬ್ರೆರಿ ಕಟ್ಟಡದ ಮುಂದೆ, ಈಗಿನ ಜಹಾಂಗೀರ್ ಆರ್ಟ್ ಗ್ಯಾಲರಿಯ ಬದಿಯಲ್ಲಿ ಈ ಬೃಹದ್ ಪ್ರತಿಮೆಯನ್ನು 'ಅಲ್ಬರ್ಟ್ ಅಬ್ದುಲ್ಲಾ ಡೇವಿಡ್ ಸಸೂನ್' ಎಂಬ ಬೊಂಬಾಯಿನಲ್ಲಿದ್ದ ಯಹೂದಿ ವ್ಯಾಪಾರಿ ನಿರ್ಮಿಸಲು ಧನ ಸಹಾಯಮಾಡಿದ್ದರು. ಕುದುರೆಯ ಮುಖ ದಕ್ಷಿಣ-ಉತ್ತರಾಭಿಮುಖವಾಗಿ ಫ್ಲೋರಾ ಫೌಂಟೆನ್ ಕಡೆಗೆ ಮುಖಮಾಡಿಕೊಂಡಿತ್ತು.

ಇತಿಹಾಸ

[ಬದಲಾಯಿಸಿ]

ಇತಿಹಾಸದ ಪ್ರಕಾರ, ಕಪ್ಪು ಕಂಚಿನ ಲೋಹದಲ್ಲಿ ನಿರ್ಮಿತ ಕುದುರೆಯಮೇಲೆ ಕುಳಿತ ೭ ನೆಯ, ಕಿಂಗ್ ಎಡ್ವರ್ಡ್ ರವರ ಪುಥಳಿಯನ್ನು ಇಂದಿಗೂ ನಗರದ ಬೈಕಲ್ಲಾ ಜಿಲ್ಲೆಯಲ್ಲಿರುವ 'ರಾಣಿ ಬಾಗ್ ಎನ್ನುವ ಮ್ಯೂನಿಸಿಪಲ್ ಉದ್ಯಾನ'ದಲ್ಲಿ ನೋಡಬಹುದು. (೭ ಕಿಂಗ್ ಎಡ್ವರ್ಡ್ ರವರಿಗೆ ಪ್ರಿನ್ಸ್ ಆಫ್ ವೇಲ್ಸ್ ಎಂಬ ಉಪಾಧಿ ದೊರೆತ ಕಾಲವದು) ಜನಪರ ಸೇವೆಗೆ ಪ್ರಸಿದ್ಧಿಪಡೆದಿದ್ದ'ಅಲ್ಬರ್ಟ್ ಅಬ್ದುಲ್ಲಾ ಡೇವಿಡ್ ಸಸೂನ್' ಎಂಬ ಯಹೂದಿ ವ್ಯಾಪಾರಿ ಈ ಪುಥಳಿಯನ್ನು ನಿರ್ಮಿಸಿದರು. ಅವರು ಬ್ರಿಟನ್ನಿನ ರಾಜರ ಅಚ್ಚುಮೆಚ್ಚಿನ ಸಮರ್ಥಕರಾಗಿದ್ದರು. ಬಹಳ ವರ್ಷಗಳ ವರೆಗೆ ಈ ವಿಗ್ರಹ ಆಗಿನ ಬೊಂಬಾಯಿಗೆ ಬರುವ ಪರ್ಯಟಕರ ಆಕರ್ಷಣೆಯ ಕೇಂದ್ರ ಸ್ಥಳವಾಗಿತ್ತು. ಜನ-ವಾಹನ ಸಾಂದ್ರತೆಯ ದಟ್ಟಣೆಯಿಂದಾಗಿ, ೧೯೬೫ ರಲ್ಲಿ ಇದನ್ನು ಇರುವ ಜಾಗದಿಂದ ತೆಗೆದು, ಬೈಕುಲ್ಲಾ ಜಿಲ್ಲೆಯ "ರಾಣಿ ಬಾಗ್" ಎಂಬ ಪ್ರಾಣಿಸಂಗ್ರಹಾಲಯ/ಉದ್ಯಾನವನದೊಳಗೆ ಹುಲ್ಲಿನ ಮೇಲೆ ತಂದು ಪ್ರದರ್ಶನಕ್ಕಿಟ್ಟಿದ್ದಾರೆ. ಈ ಮುಖ್ಯ ಬದಲಾವಣೆಯ ನಂತರ, 'ಕಾಲಾಘೋಡಾ ಪ್ರದೇಶ'ವೆಂದು ಗುರುತಿಸುತ್ತಿದ್ದ ಸ್ಥಳೀಯ ಜನರೆಲ್ಲರ ಮನಸ್ಸಿನಲ್ಲಿ ಕಪ್ಪು ಕುದುರೆಯ ಪುತ್ಥಳಿಯನ್ನು ಕಾಣದೆ ಗೊಂದಲ, ಮುಜುಗರ ಶುರುವಾಯಿತು. ಇದನ್ನು ಮನಗಂಡ ಅಂದಿನ ಮಹಾರಾಷ್ಟ್ರದ ಮುಖ್ಯ ಮಂತ್ರಿಯವರು, ೨೦೧೭ ರಲ್ಲಿ ಕಾಲಘೋಡದ ಹಿಂದಿನ ತರಹವೇ ಕಾಣಿಸುವ ಕಪ್ಪು ಕಲ್ಲಿನ ೨೫ ಅಡಿ ಎತ್ತರದ ಕುದುರೆಯ ಪುಥಳಿಯನ್ನು ಕಾಲಾಘೋಡಾ ಸಂಘದವರ ಸಹಕಾರದಿಂದ ನಿರ್ಮಿಸಿ, "ಸ್ಪಿರಿಟ್ ಆಫ್ ಕಾಲ ಘೋಡಾ" ಎಂಬ ಹೊಸ ಹೆಸರಿನಿಂದ 'ರಿದಮ್ ಹೌಸ್' ಮತ್ತು 'ಜಹಾಂಗೀರ್ ಆರ್ಟ್ ಗ್ಯಾಲರಿ' ಕಟ್ಟಡದ ಮಧ್ಯೆ ಸ್ಥಾಪನೆ ಮಾಡಿದರು. ಈ ಪುಥಳಿಯ ನಿರ್ಮಾಣಕಾರ್ಯವನ್ನು ಆಲ್ಫಾಜ್ ಮಿಲ್ಲರ್ ಎಂಬ ವಿನ್ಯಾಸಕಾರರು ತಯಾರು ಮಾಡಿದರು. ಶ್ರೀಹರಿ ಭೋಸ್ಲೆ ಎನ್ನುವ ಶಿಲ್ಪಿಯವರ ಕೈನಲ್ಲಿ ಕಾರ್ಯ ಸಂಪನ್ನವಾಯಿತು.

ಮುಂಬಯಿ ನಗರದ ಅನೇಕ ಪಾರಂಪಾರಿಕ ಕಟ್ಟಡಗಳು, ವಸ್ತುಸಂಗ್ರಹಾಲಯಗಳು, (ಕಲಾ ಗ್ಯಾಲರಿಗಳು) ,ಚಿತ್ರಶಾಲೆ, ಕಲಾ ಕೃತಿಗಳ ಪ್ರದರ್ಶನ ಮಂದಿರಗಳು, ಶಿಕ್ಷಣ ಸಂಸ್ಥೆಗಳು, ಜೆಹಾಂಗಿರ್ ಆರ್ಟ್ ಗ್ಯಾಲರಿ, ಸಿಮ್ವ್ಸ್ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಇತ್ಯಾದಿಗಳು ಈ ಜಿಲ್ಲೆಗೆ ಸೇರಿದ ಪ್ರಮುಖ ಸಂಘ ಸಂಸ್ಥೆಗಳು. The Arts Trust - Institute of Contemporary Indian Art. ಎನ್ನುವ ಸಂಸ್ಥೆಯೂ ಇದೇ ಪ್ರದೇಶದಲ್ಲಿದೆ.

ಪ್ರತಿವರ್ಷವೂ ಫೆಬ್ರವರಿ ತಿಂಗಳಲ್ಲಿ "ಕಾಲಾಘೋಡಾ ಆರ್ಟ್ಸ್ ಫೆಸ್ಟಿವಲ್" ಎಂಬ ಹಬ್ಬವನ್ನು ಈ ಚಿಕ್ಕ ಪ್ರದೇಶವನ್ನು ಕೇಂದ್ರವಾಗಿಟ್ಟುಕೊಂಡು, ಆಯೋಜಿಸಲಾಗುತ್ತದೆ. ಪೂರ್ವಭಾಗದಲ್ಲಿ ಮುಂಬಯಿನ ಬಂದರಿನ ಡಾಕ್ ಯಾರ್ಡ್ ಕಾಣಿಸುತ್ತದೆ. ದಕ್ಷಿಣಭಾಗದಲ್ಲಿ "ರೀಗಲ್ ಸಿನೆಮಾ ಟಾಕೀಸ್" ಇದೆ. ಉತ್ತರಭಾಗದಲ್ಲಿ "ಹುತಾತ್ಮ ಚೌಕ್", ಮತ್ತು "ಫ್ಲೋರಾಫೌಂಟೆನ್" ಇದೆ. ಪಶ್ಚಿಮದಿಕ್ಕಿನಲ್ಲಿ "ಓವಲ್ ಮೈದಾನ"ವೂ ಹಾಗೂ ಉತ್ತರ ಪೂರ್ವದಲ್ಲಿ "ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಕಟ್ಟಡ" (BSE/೧೮೭೫ ರಲ್ಲಿ ಸ್ಥಾಪನೆಯಾಯಿತು) ವನ್ನೂ ನೋಡಬಹುದು.

ಕಾಲಾಘೋಡ ಜಿಲ್ಲೆ

[ಬದಲಾಯಿಸಿ]

ಇದು ಮುಂಬಯಿಯ ಅತಿ ಚಿಕ್ಕ ಪ್ರದೇಶ. ಹಿಂದಿನ ಚರಿತ್ರೆಯ ಕೆಲವು ಪುಟಗಳಲ್ಲಿ ನಮೂದಿಸಿರುವ ಚಿತ್ರಗಳಿಂದ, ಅದು ಆಗ ಇದ್ದ ಸ್ಥಳದ ಅರಿವಾಗುತ್ತದೆ. ಸಮೀಪದಲ್ಲಿ, 'ಕಾಮರ್ಸ್ ಹೌಸ್, ಎಂಬ' ಕಟ್ಟಡವಿದ್ದ ಜಾಗವನ್ನೂ ವೀಕ್ಷಿಸಬಹುದು. 'ರೋಪ್ ವಾಕ್ ಸ್ಟ್ರೀಟ್ ' ಮತ್ತು 'ಮೆಡೊ ರಸ್ತೆ ' ('ನಗಿನ್ ದಾಸ್ ಮಾಸ್ತರ್ ರಸ್ತೆ.'), ಬಿಟ್ಟು 'ವಿ.ಬಿ.ಗಾಂಧಿ ರಸ್ತೆ' ಎಲ್ಲವೂ ಈ ಜಿಲ್ಲೆಯಲ್ಲೇ ಇವೆ. ಇದು, ಮುಂಬಯಿನ ಅತ್ಯಂತ ದುಬಾರಿ ಜಾಗ. ಈ ಭಾಗದ ಜನರು ಪ್ರತಿವರ್ಷವೂ ಕಲೆ, ನೃತ್ಯ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಇಷ್ಟಪಡುತ್ತಾರೆ.

ಕಾಲ ಘೋಡಾ ಆರ್ಟ್ ಫೆಸ್ಟಿವಲ್

[ಬದಲಾಯಿಸಿ]

"ಕಾಲಾಘೋಡಾ ಆರ್ಟ್ ಫೆಸ್ಟಿವಲ್ ಅಸೋಸಿಯೇಷನ್"(KAF) ೩೦, ಅಕ್ಟೋಬರ್ ೧೯೯೮ ರಲ್ಲಿ ಪ್ರಾರಂಭವಾಯಿತು. ಒಂದು ವರ್ಷದ ಬಳಿಕ ೧೯೯೯ ರಲ್ಲಿ ಪ್ರಪ್ರಥಮವಾಗಿ ಬೀದಿ ನಾಟಕ, ಗಾಯನ, ನೃತ್ಯ, ಕಲಾಪ್ರದರ್ಶನ, ಮೊದಲಾದವುಗಳನ್ನು ನಡೆಸಿಕೊಂಡು ಬರುವ ಒಂದು ಸಾಂಸ್ಕೃತಿಕ ಹಬ್ಬವಾಗಿ ರೂಪುಗೊಂಡಿದೆ. [] ಪ್ರತಿ ವರ್ಷವೂ ಫೆಬ್ರವರಿ ತಿಂಗಳಲ್ಲಿ ಶುರುವಾಗುವ ೯ ದಿನಗಳ ಈ ಕಾರ್ಯಕ್ರಮ, ತಿಂಗಳ ಮೊದಲನೆಯ ಶನಿವಾರ ಮತ್ತು ಎರಡನೆಯ ರವಿವಾರದ ವರೆಗೆ ಆಯೋಜಿಸಲಾಗುತ್ತಿದೆ. ಮುಂಬಯಿಗರಲ್ಲದೆ ಕಲೆ, ನೃತ್ಯ, ನಾಟಕ, ಸಾಂಸ್ಕತಿಕ ಪ್ರಕಾರಗಳನ್ನು ಪ್ರತಿಪಾದಿಸುವ ಯಾವನೇ ಭಾರತೀಯನಿಗೆ/ಳಿಗೆ ಈ ಹಬ್ಬಕ್ಕೆ ಸ್ವಾಗತವಿದೆ.

ಕಾಲಾಘೋಡ ಪ್ರತಿಮೆಯಿದ್ದ ಜಾಗ

[ಬದಲಾಯಿಸಿ]

ನಿಖರವಾಗಿ ಆಗಿನಕಾಲದ ಚಿತ್ರಗಳಲ್ಲಿ ದಾಖಲಿಸಿರುವ ಪ್ರಕಾರ,ಡೇವಿಡ್ ಸಸೂನ್ ಲೈಬ್ರೆರಿ ಕಟ್ಟಡದ ಮುಂದೆ, ಈಗಿನ ರಿದಮ್ ಹೌಸ್ ಅಂಗಡಿಯ ಎದುರಿಗೆ ಮಧ್ಯಬಾಗದಲ್ಲಿ ಬೃಹದ್ ಪ್ರತಿಮೆಯನ್ನು ಸ್ಥಾಪಿಸಿದ್ದರು. ಅದು ದಕ್ಷಿಣ ಉತ್ತರಾಭಿಮುಖವಾಗಿ ಕಾಣಿಸಿಕೊಂಡಿತ್ತು.ಫ್ಲೋರಾ ಫೌಂಟೆನ್ ಕಡೆಗೆ ಮುಖವಾಗಿತ್ತು.[]

ಸುಪ್ರಸಿದ್ಧ ವ್ಯಾಟ್ಸನ್ ಹೋಟೆಲ್

[ಬದಲಾಯಿಸಿ]

'ಭಾರತದ ಪ್ರಪ್ರಥಮ ಮೂಕಿ ಚಲನಚಿತ್ರ,' ವನ್ನು ವ್ಯಾಟ್ಸನ್ ಹೋಟೆಲಿನಲ್ಲಿ ಪ್ರದರ್ಶಿಸಿದ ಖ್ಯಾತಿ ಚಾರಿತ್ರ್ಯಿಕ ಮಹತ್ವದ 'ವ್ಯಾಟ್ಸನ್ ಹೋಟೆಲ್,' ನದು. ಅದು, 'ಕಾಲಾಘೋಡ ಜಾತ್ರೆ' ಗೆ ಸಮೀಪದಲ್ಲಿದೆ. ಸನ್ ೧೮೯೬, ರಲ್ಲಿ ಭಾರತದ ಪ್ರಪ್ರಥಮ ಮೂಕಿ ಚಲನಚಿತ್ರವನ್ನು ಈ ಹೋಟೆಲ್ ನಲ್ಲಿ ತಯಾರಿಸಿದ್ದರು. ಕಾಲಾಘೋಡ ಪುಠಳಿಯ ಪೂರ್ವದಿಕ್ಕಿನಲ್ಲಿ ಮುಂಬಯಿನ ಬಂದರು, ದಕ್ಷಿಣಭಾಗಕ್ಕೆ,'ರೀಗಲ್ ಸಿನೆಮ ಚಿತ್ರಮಂದಿರ' ವಿದೆ. 'ಫ್ಲೋರ ಫೌಂಟೆನ್,' ಉತ್ತರದಿಕ್ಕಿನಲ್ಲಿದೆ. ಪಶ್ಚಿಮದಿಕ್ಕಿನಲ್ಲಿ 'ಓವಲ್ ಕ್ರೀಡಾಂಗಣ', ವಿದೆ. ಇವುಗಳೆಲ್ಲದರ ಮಧ್ಯೆ, ಇಕ್ಕಟ್ಟಿನ ಪ್ರದೇಶದಲ್ಲಿ ಕಾಲಾಘೋಡ ಪ್ರತಿಮೆ, ಸಿಕ್ಕಿಹಾಕಿಕೊಂಡಂತೆ ತೋರುತ್ತದೆ. ಕಾಲಘೊಡ ದ ಉತ್ತರಕ್ಕೆ, ಫೌಂಟೆನ್ ಜಿಲ್ಲೆ, ಇದೆ. ಇದರ ದಕ್ಷಿಣದಿಕ್ಕಿಗೆ, ಎಲ್ಲರು ಕರೆಯುವ 'ಎಸ್.ಪಿ.ಮುಖರ್ಜಿ ವೃತ್ತವಿದೆ. ('ಹಿಂದಿನ 'ವೆಲ್ಲಿಂಗ್ಡನ್ ಸರ್ಕಲ್'), ('ಪ್ರಿನ್ಸ್ ಆಫ್ ವೇಲ್ಸ್') ಮ್ಯೂಸಿಯಮ್, ಹಾಗೂ 'ರೀಗಲ್ ಸಿನೆಮ' ಕಾಣಿಸುತ್ತದೆ. ಉತ್ತರ ಪೂರ್ವದಲ್ಲಿ 'ಮುಂಬಯಿ ಸ್ಟಾಕ್ ಎಕ್ಸ್ಚೇಂಜ್ 'ಹಿಂದೆ ಬಾಂಬೆ ಸ್ಟಾಕ್ ಎಸ್ಚೇಂಜ್ ಕಟ್ಟಡವೆಂದು ಹೆಸರಾಗಿದ್ದ (BSE/೧೮೭೫), ಶೋಭಾಯಮಾನವಾಗಿ, ಗೋಚರಿಸುತ್ತದೆ. ಇದು 'ದಲಾಲ್ ರಸ್ತೆ,' ಯಲ್ಲಿದೆ.

ಎಸ್ಪ್ಲನೇಡ್ ಮ್ಯಾನ್ಷನ್

[ಬದಲಾಯಿಸಿ]

ಪುರಾತನ, ಹಾಗೂ ಇಂದು ಶಿಥಿಲವಾದ ಅವಸ್ಥೆಯಲ್ಲಿರುವ 'ಎಸ್ ಪ್ಲನೇಡ್ ಮ್ಯಾನ್ ಷನ್'- ಒಂದಾನೊಂದು ಕಾಲದಲ್ಲಿ ವ್ಯಾಟ್ಸನ್ಸ್ ಹೋಟೆಲ್ ಎಂದು ಪ್ರಖ್ಯಾತವಾಗಿತ್ತು. ಬರಿಯ ಬಿಳಿಯರಿಗಾಗಿಯೇ ಮೀಸಲಾಗಿದ್ದ ಈ ಹೋಟೆಲಿಗೆ ಒಂದು ಐತಿಹ್ಯದ ಪ್ರಕಾರ,ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ ಒಬ್ಬ ಬಿಳಿಯ ಸ್ನೇಹಿತನ ಜೊತೆ ಹೋದಾಗ, ಸ್ನೇಹಿತನನ್ನು ಆಹ್ವಾನಿಸಿದ ಪೇದೆ, ಟಾಟರವರನ್ನು ಒಳಗೆ ಬಿಡಲಿಲ್ಲ. ಈ ಘಟನೆಯಿಂದ ನೊಂದ ಅವರು , ಭಾರತೀಯರಿಗೆ ಮುಕ್ತ ಪ್ರವೇಶವಿರುವ ಹೋಟೆಲ್ ಕಟ್ಟಬೇಕೆಂದು ನಿರ್ಧರಿಸಿದರು. ಆ ನಿರ್ಧಾರದ ಫಲವೇ ಮುಂಬಯಿಯ ಪ್ರಸಿದ್ಧ ತಾಜಮಹಲ್ ಹೋಟೆಲ್. ಮುಂದೆ 'ತಾಜಮಹಲ್ ಹೋಟೆಲ್' ಪ್ರಖ್ಯಾತವಾದಂತೆ, 'ವ್ಯಾಟ್ಸನ್ ಹೋಟೆಲ್' ಅವನತಿಯ ದಾರಿ ಹಿಡಿಯಿತು. ಇಂದು ಈ ಕಟ್ಟಡದಲ್ಲಿ ಹೋಟೆಲ್ ಇಲ್ಲ. ಕೆಲವು ಅಂಗಡಿಗಳು, ಮತ್ತು ಕೆಲ ಬಾಡಿಗೆದಾರರು ಮಾತ್ರಾ ಇದ್ದಾರೆ. ಜಹಾಂಗೀರ್‍ ಆರ್ಟ್ ಗ್ಯಾಲರಿ-'ಮುಂಬಯಿಯ ಪ್ರಸಿದ್ಧ ಕಲಾ ಪ್ರದರ್ಶನಾಲಯ'ಗಳಲ್ಲಿ ಒಂದು. ಇಲ್ಲಿ ಪ್ರವೇಶ ಉಚಿತ. ಇದರ ಪ್ರಾಂಗಣದಲ್ಲಿಯ 'ಸಮೋವಾರ್‍,'ಎಂಬ ರೆಸ್ಟೋರಂಟ್ ಪ್ರಸಿದ್ಧವಾದದ್ದು.

'ಕಾಲಾಘೋಡ,' ಹತ್ತಿರವಿರುವ, ಪ್ರಮುಖ ಕಟ್ಟಡಗಳು/ಸ್ಥಳಗಳು

[ಬದಲಾಯಿಸಿ]
ಬೈಕುಲ್ಲಾದ ರಾಣಿಬಾಗ್ ಉದ್ಯಾನದಲ್ಲಿ ಮರುಸ್ಥಾಪಿಸಲಾಗಿರುವ ಕಿಂಗ್ ಎಡ್ವರ್ಡ್-೭ ರವರ ಪ್ರತಿಮೆ'
'ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ'
'ಎಲ್ಫಿನ್ ಸ್ಟನ್ ಕಾಲೇಜು'
'ಡೇವಿಡ್ ಸಸೂನ್ ಪುಸ್ತಕ ಭಂಡಾರ'
'ಜಹಾಂಗೀರ್‍ ಆರ್ಟ್ ಗ್ಯಾಲರಿ'
'ಎಸ್ಪ್ಲನೇಡ್ ಮ್ನಾನ್ಷನ್ ಅಥವಾ ವ್ಯಾಟ್ಸನ್ಸ್ ಹೋಟೆಲ್'
'ಮುಂಬಯಿ ವಿಶ್ವವಿದ್ಯಾಲಯ'
'ಸಿವಿಲ್ ಮತ್ತು ಸೆಶನ್ಸ್ ಕೋರ್ಟ್'
  • 'Copper Chimney' ಕಾಪರ್ ಚಿಮಿನಿ).
  • 'Noodle Bar'(ನೂಡಲ್ ಬಾರ್)
  • 'Gelato'(ಗೆಲೆಟೊ)
  • 'Joss' (ಜೋಸ್)
  • 'Silk Route' (ಸಿಲ್ಕ್ ರೂಟ್)
  • 'Chetana' (ಚೇತನ)

ಉಲ್ಲೇಖಗಳು

[ಬದಲಾಯಿಸಿ]
  1. MUMBAI FABLES By Gyan Prakash
  2. [೧]
  3. "King Edward's Statue (Kala Ghoda) (Code: 032)". Archived from the original on 2016-03-04. Retrieved 2015-04-09.

ಬಾಹ್ಯಸಂಪರ್ಕಗಳು

[ಬದಲಾಯಿಸಿ]