ಕಾನೂನು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ನಿಯಮಗಳ ಕ್ರಮಬದ್ಧ ಜೋಡಣೆಯೇ ಕಾನೂನು. ಕಾನೂನಿನ ವಿವಿಧ ಸಂಸ್ಥೆಗಳ ಮೂಲಕ ಕಾನೂನನ್ನು ಜಾರಿ ಮಾಡಲಾಗುತ್ತದೆ. ನಮ್ಮ ಜೀವನ ಮತ್ತು ಸಮಾಜವನ್ನು ಕಾನೂನು ಹಲವು ರೀತಿಗಳಲ್ಲಿ ಪರಿಣಾಮ ಬೀರುತ್ತದೆ. ಕರಾರು ಕಾನೂನು ಬಸ್ ಟಿಕೆಟ್ ಪಡೆಯುವುದರಿಂದ ಹಿಡಿದು ಆಸ್ತಿ ಕೊಳ್ಳುವುದರ ತನಕ ಸಹಾಯ ಮಾಡುತ್ತದೆ. ಆಸ್ತಿ ಕಾನೂನು ಒಂದು ಆಸ್ತಿಯ ಒಡೆತನದ ಹಕ್ಕು, ಹೊಣೆಗಾರಿಕೆ ಇತ್ಯಾದಿಗಳ ಬಗ್ಗೆ ವಿವರಿಸುತ್ತದೆ. ಅಪಕೃತ್ಯ ಕಾನೂನು ಖಾಸಗಿ ಮತ್ತು ಕಾನೂನು ಹಕ್ಕುಗಳಿಗೆ (private and legal rights) ಚ್ಯುತಿ (injury) ಬಂದಾಗ ಉಪಯೋಗಿಸಲಾಗುತ್ತದೆ. ಅಪರಾಧ ಕಾನೂನಿನಲ್ಲಿ ಮಾಡಿದ ತಪ್ಪುಗಳಿಗೆ ದಂಡನೀತಿಯ (penal code) ಪ್ರಕಾರ ಶಿಕ್ಶೆ ನೀಡಲಾಗುತ್ತದೆ. ಸಾಂವಿಧಾನಿಕ ಕಾನೂನು ಯಾವುದೇ ರಾಷ್ಟ್ರದಲ್ಲಿ ತನ್ನ ಸಂವಧಾನದ ಚೌಕಟ್ಟಿನೊಳಗೆ ಬೇರೆಯ ಕಾನೂನುಗಳನ್ನು ಸೃಷ್ಟಿ ಮಾಡುವ ಬಗ್ಗೆ ಮತ್ತು ಜನರ ಹಕ್ಕುಗಳನ್ನು ಕಾಪಾಡುವ ಬಗ್ಗೆ ವಿವರಿಸುತ್ತದೆ. ಆಡಳಿತ ಕಾನೂನು ಸರ್ಕಾರದ ಆಡಳಿತ ಸಂಸ್ಥೆಗಳ ಕಾರ್ಯ ಛಟುವಟಿಕೆ ಮತ್ತು ಕ್ರಮಗಳ ಬಗ್ಗೆ ವಿವರಿಸುತ್ತದೆ. ಸರ್ಕಾರಿ ಸಂಸ್ಥೆಗಳು ತಮ್ಮ ಕಾರ್ಯನೀತಿಗಳಲ್ಲಿ ನಿಯಮ ರುಪಿಸುವುದು ಮತ್ತು ಪರಿಪಾಲನೆ ಮಾಡುವುದು ಎಲ್ಲವೂ ಸೇರಿರುತ್ತದೆ. ಅಂತರರಾಷ್ಟ್ರೀಯ ಕಾನೂನು ಸಾರ್ವಭೌಮ ರಾಷ್ಟ್ರಗಳ ನಡುವಿನ ಉದ್ಯಮ, ಸೇನೆ, ಪರಿಸರ ಮತ್ತು ಇತರ ವಿಷಯಗಳ ಬಗ್ಗೆ ವಿವರಿಸುತ್ತದೆ. ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ "ಕಾನೂನಿನ ಆಡಳಿತವು ಒಬ್ಬ ಮನುಷ್ಯನ ಆಡಳಿತಕ್ಕಿಂತ ಉತ್ತಮ" ಎಂದು ಹೇಳಿದ್ದಾನೆ.


  • ಈ ಲೇಖನವನ್ನು ಎಂಗ್ಲೀಷ್ ವಿಕಿಪೀಡಿಯ ದಿಂದ ತರ್ಜುಮೆ ಮಾಡಲಾಗುತ್ತಿದೆ. ಆಸಕ್ತರು ಸಹಾಯ ಮಾಡಬಹುದು.

1. ಕರ್ನಾಟಕ ಎಸ್.ಸಿ. ಮತ್ತು ಎಸ್.ಟಿ ಜಮೀನು ಪರಭಾರೆ ನಿಷೇಧ ಕಾನೂನಿನ ಬಗ್ಗೆ ತಿಳಿಯಲು ಈ ವೆಬ್ ಪ್ರವೇಶಿಸಿ. ಎಸ್.ಸಿ, ಮತ್ತು ಎಸ್.ಟಿ ಜನಾಂಗಕ್ಕೆ ಸರ್ಕಾರದಿಂದ ಮಂಜೂರು ಆಗಿರುವ ಜಮೀನು ಖರೀದಿ ಮಾಡುವ ಹಾಗಿಲ್ಲ. ಹೆಚ್ಚಿನ ವಿವರ ಮುಂದೆ >>>>

http://www.scribd.com/full/46782117?access_key=key-x7fo54jx2fq9y7kcu89

2. ಕರ್ನಾಟಕದಲ್ಲಿ ಭೂಸುದಾರಣೆ ಕಾನೂನು ಕೇವಲ ಭ್ರಷ್ಟಾಚಾರಕ್ಕೆ ಬಳಕೆಯಾಗಿತ್ತಿದೆ. ಅದರ ಮಹತ್ವವನ್ನು ಅರಿಯಲು ವಿಜಯ ಕರ್ನಾಟಕ ಪತ್ರಿಕೆಯ ೨೦-೧೨-೨೦೧೦ ರಲ್ಲಿ ಪ್ರಕಟವಾಗಿರುವ ಲೇಖನವನ್ನು ಓದಿ >>>>>>

http://www.scribd.com/full/45671470?access_key=key-1f9b9prmno4623ibbwzy

3. ಕನ್ನಡದಲ್ಲಿನ ಕಾನೂನು ಬರಹಗಳು/ ಕೋರ್ಟ್ ನಲ್ಲಿ ಹಾಜರು ಮಾಡಿದ ಪತ್ರಗಳು/ ಲಿಖಿತ ವಾದಗಳು/ ಸಂಗ್ರಹಗಳು ಓದಲು ಪ್ರವೇಶಿಸಿ (ವೃತ್ತಿನಿರತರ ಪರಿಶೀಲನೆಗೆ ಮಾತ್ರ ಅನುಕರಣೆಗೆ ಅಲ್ಲ) >>>>>>>>>

http://www.scribd.com/collections/2588533/KANNADA-DRAFTS

4. ಕನ್ನಡದಲ್ಲಿ ಅನುವಾದವಾಗಿರುವ ಕಾಯ್ದೆ ಮತ್ತು ನಿಯಮಗಳ ಸಂಗ್ರಹ (ಕರ್ನಾಟಕ ಸರ್ಕಾರದ ಸಂಬಂದಿಸಿದ ಸರ್ಕಾರಿ ನೌಕರರ ಕೊಡುಗೆ ಆದರೂ, ಇತ್ತೀಚೆಗೆ ಅದರ ವೆಬ್ ಲಿಂಕ್ ಗಳನ್ನು ಮೊಟಕು ಗೊಳಿಸಿದ್ದಾರೆ ಕಾರಣ ಸರ್ಕಾರವೇ ಹೇಳಬೇಕು)

http://www.scribd.com/collections/2810419/KANNADA-FONT-ACT-AND-RULES

5. ನನ್ನ ಎಲ್ಲಾ ಬ್ಲಾಗ್ ಬರಹಗಳ ಹೊಸ ಸೇಪಡೆಗಳನ್ನು ನಿಮ್ಮ ಬ್ರೌಸಿಂಗ್ ಪೇಜ್ ನಲ್ಲಿ ಟೂಲ್ ಬಾರ್ ಸಂಗ್ರಹಿಸಲು ಈ ಕೆಳಕಂಡ ವೆಬ್ ಪ್ರವೇಶಿಸಿ (ಕಾನೂನು, ಸಂಗೀತ, ಕಾನೂನು ಪುಸ್ತಕ ಗಳ ಬ್ಲಾಗ್)

http://www.google.com/sidewiki/entry/sridharababu1234/id/nwalioW0U9DjaVJ1r5sB1CX3Jl0



ಸಂಗ್ರಹ ಎನ್.ಶ್ರೀಧರ ಬಾಬು ವಕೀಲರು, ತುಮಕೂರು, ದೂರವಾಣಿ 9880339764 ಈಮೇಲ್: adv_sbn@yahoo.co.in    ವೆಬ್ಸೈಟ್:- http://sridharababu.blogspot.com,  http://sbn-kannada.blogspot.com/

ಗುರುಗಳಿಂದ ಮೊದಲ ಪಾಠ.... ಡೇವಿಡ್ ಪರವಾಗಿ ಯುವ ವಕೀಲ ಮೈಕೇಲ್ ವಾದ ಮಾಡತೊಡಗುತ್ತಾನೆ. ಬಾರ್ನಲ್ಲಿ ಲಾರೆನ್ಸ್ ಎನ್ನುವ ಸೀನಿಯರ್ ವಕೀಲನಿರುತ್ತಾನೆ. ಯುವ ವಕೀಲರಿಗೆ ಕೋರ್ಟ್ ನಲ್ಲಿ ಸಲಹೆ ನೀಡಿ ತಿದ್ದುವಷ್ಟು ದೊಡ್ಡಮನಸ್ಸಿನವ ಆತನಾಗಿರುತ್ತಾನೆ. ಕೊಲೆ ಮೊಕದ್ದಮೆಯಾದ್ದರಿಂದ ಎಲ್ಲರೂ ಕುತೂಹಲದಿಂದ ಈ ಕೇಸ್ ನ ಪ್ರಕ್ರಿಯೆಯನ್ನು ಅವಗಾಹನಿಸುತ್ತಿರುತ್ತಾರೆ. ಲಾರೆನ್ಸ್ ಹತ್ತಿರ ಯುವ ವಕೀಲ ಸಲಹೆ, ಮಾರ್ಗದರ್ಶನಗಳನ್ನು ಪಡೆದುಕೊಂಡು ಮುಖ್ಯ ಐ ವಿಟ್ನೆಸ್ ಫ್ಲವರ್ ನನ್ನು ಕ್ರಾಸ್ ಮಾಡಲು ನಿಂತಿರುತ್ತಾನೆ: “ಸಾಮುಯೆಲ್ ಕೊಲೆಯಾದಾಗ ಸಮಯ ಎಷ್ಟಾಗಿತ್ತು?” “ರಾತ್ರಿ ಹತ್ತೂವರೆ."" “ನಿನ್ನ ಕೈಯಲ್ಲಿ ಟಾರ್ಚ್ ಇತ್ತೆ?” “ಇಲ್ಲ” “ಮಳೆ ಬರುತ್ತಿತ್ತೊ?” “ಹೌದು.” “ಕರೆಂಟ್ ಹೋಗಿ ಎಲ್ಲೆಡೆ ಕತ್ತಲಾವರಿಸಿತ್ತೋ?” “ಹೌದು” ಮೈಕೇಲ್ ಇಷ್ಟು ಪ್ರಶ್ನೆಗಳನ್ನು ಕೇಳಿ ಮುಗಿಸುತ್ತಲೇ ಸೀನಿಯ್ ರ್ ವಕೀಲ ಲಾರೆನ್ಸ್ ಹಿಂದಿನಿಂದ ಮೈಕೇಲ್ ನ ಕೋಟನ್ನು ಜಗ್ಗಿ ಇಲ್ಲಿಗೇ ಸಾಕು ಮಾಡು ಮುಂದೆ ಪ್ರಶ್ನೆಗಳನ್ನು ಕೇಳಿದರೆ ಕೇಸ್ ಬಿಡುತ್ತದೆ ಎಂದು ಪಿಸುಗುಟ್ಟಿದ. ಆದರೆ ಮೈಕೇಲ್ ತಾನು ಕ್ರಾಸ್ ಮಾಡಿದ ಸ್ಟೈಲ್ ಮತ್ತು ಗತ್ತುಗಳಿಗೆ ತಾನೇ ಮಾರುಹೋಗಿದ್ದ. ಕೋರ್ಟ್ ಹಾಲ್ ಎಲ್ಲ ವಕೀಲರ ಮೆಚ್ಚುಗೆಯ ನೋಟಗಳೊಂದಿಗೆ ಜಡ್ಜ್ ಮುಖದ ಮೇಲಿನ ಮೆಚ್ಚುಗೆಯ ಮುಗುಳ್ನಗೆ ಮೈಕೇಲ್ ನನ್ನು ಉದ್ದೀಪನಗೊಳಿಸಿತು. ಸೀನಿಯರ್ ವಕೀಲ ಲಾರೆನ್ಸ್ ನ ಮಾತನ್ನು ತಾನು ಕೇಳಿಸಿಯೇಕೊಂಡಿಲ್ಲ ಎಗ್ಸಾಮಿನೇಷನ್ ಅನ್ನು ಮುಂದುವರಿಸಿಯೇ ಬಿಟ್ಟ... “ಮಳೆ ಬರುತ್ತಿತ್ತು, ಕತ್ತಲಾಗಿತ್ತು, ಕೈಯಲ್ಲಿ ಟಾರ್ಚ್ ಇರಲಿಲ್ಲ, ಆದರೂ ಕೊಲೆ ಮಾಡಿದವನು ಇವನೇ ಎಂದು ಹೇಗೆ ಹೇಳುತ್ತೀಯ?” ಎಂದು ಕೇಳಿಬಿಟ್ಟ. “ಡೇವಿಡ್ ನನ್ನ ಓಣಿಯಲ್ಲೇ ಇರುವವ ಮತ್ತು ಪರಿಚಿತ. ಅವನು ಕೊಲೆ ಮಾಡಿದ ಮೇಲೆ ‘ನನಗೆ ಈಗ ನಿಜವಾದ ಪರಿಹಾರ ಸಿಕ್ಕಿತು; ಎಂದು ಉನ್ಮಾದದಿಂದ ಕೂಗಿದ. ಅದಕ್ಕಾಗಿಯೇ ನಾನು ಅವನ ಮುಖ ನೋಡದೆಯೇ ‘ಏನಾಯ್ತು ಡೇವಿಡ್?’ ಎಂದು ಕೂಗಿ ಕೇಳಿದೆ. ಅಷ್ಟರಲ್ಲಿ ಅವನು ಓಡಿಹೋದ. ಕತ್ತಲಲ್ಲಿ ಓಡುತ್ತಿದ್ದು ದೇಹದ ಎತ್ತರ, ಮಾಟ, ಓಟಗಳು ಕೇಳಿಸಿಕೊಂಡ ಧ್ವನಿಯೊಂದಿಗೆ ಸೇರಿ ಅದು ಡೇವಿಡ್ ನೇ ಹೌದು ಎನ್ನುವ ತೀರ್ಮಾನಕ್ಕೆ ಬಂದೆ...” ಎಂದು ಉತ್ತರಿಸಿಬಿಟ್ಟ. ಇಡೀ ಕೋರ್ಟ್ ಮೌನವಾಗಿಬಿಟ್ಟಿತು. ಡೇವಿಡ್ ಗೆ ಶಿಕ್ಷೆ ಗ್ಯಾರೆಂಟಿ ಎನ್ನುವ ಭಾವನೆ ಜಡ್ಜ್ ಮುಖದಲ್ಲಿ ತೇಲಿದ್ದನ್ನು ಮೈಕೇಲ್ ಗಮನಿಸಿದ. ತನ್ನ ತಪ್ಪಿನ ಅರಿವಾಗಿ ಸಿನೀಯರ್ ಲಾರೆನ್ಸ್ ಕಡೆಗೆ ನೋಡಿದ. ಲಾರೆನ್ಸ್ “ಮೈ ಡಿಯರ್ ಬಾಯ್, ನಾನು ನಿನ್ನ ಕೋಟ್ ಜಗ್ಗಿ ಎಳೆದಾಗಲೇ ಸಾಕು ಮಾಡಿದಿದ್ದರೆ ನಿನ್ನ ಕ್ಲೈಂಟ್ ಉಳಿಯುತ್ತಿದ್ದ. ಈಗ ಅವನು ಸ್ವರ್ಗಕ್ಕೋ, ನರಕಕ್ಕೋ ಹೋಗುತ್ತಾನೆ. ಅಲ್ಲಿಗೆ ನೀನೂ ಹೋಗಿ ಅವನ ಕ್ಷಮಾಪಣೆಯನ್ನು ಯಾಚಿಸು...” ಎಂದು ಕೋರ್ಟ್ ಹಾಲ್ ನಿಂದ್ ನಿರ್ಗ್ ಮಿ ಸುತ್ತಾನೆ! ದೇವದಾಸ್, “ಹೂಂ, ಆಯಿತು ಇದು ಮೊದಲ ಪಾಠ ನಿನಗೆ. ಗುರುದಕ್ಷಿಣಿಯಾಗಿ ಟೀ ತೆಗೆದುಕೊಂಡು ಬಾ ಹೋಗು” ಎಂದಾಗಲೇ ಇಗ್ಲೆಂಡ್ ಕೋರ್ಟ್ ಹಾಲ್ ನಿಂದ ಹೊರಬಂದು ಸುಜಾತ ಹೋಟೆಲ್ ಕಡೆ ಓಡಿದೆ.

"http://kn.wikipedia.org/w/index.php?title=ಕಾನೂನು&oldid=318184" ಇಂದ ಪಡೆಯಲ್ಪಟ್ಟಿದೆ