ಎಚ್. ಆರ್. ರಾಮಕೃಷ್ಣ ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊಳಲ್ಕೆರೆ ರಂಗರಾವ್ ರಾಮಕೃಷ್ಣ ರಾವ್
ಪ್ರೊ.ಎಚ್.ಆರ್.ರಾಮಕೃಷ್ಣರಾವ್ ಉದಯಭಾನು ಕಲಾಸಂಘದ ಕಾರ್ಯಕ್ರಮವೊಂದರಲ್ಲಿ.
ಜನನ೩೧, ಮೇ,೧೯೩೫
ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ, ಕರ್ನಾಟಕ
ಮರಣ೧೨, ಸೆಪ್ಟೆಂಬರ್, ೨೦೨೨
ಬೆಂಗಳೂರು
ವಾಸಸ್ಥಳಬೆಂಗಳೂರು
ರಾಷ್ಟ್ರೀಯತೆಭಾರತೀಯ
ಸಂಸ್ಥೆಗಳುಕ್ರೈಸ್ಟ್ ಕಾಲೇಜ್
ಅಭ್ಯಸಿಸಿದ ವಿದ್ಯಾಪೀಠನ್ಯಾಷನಲ್ ಕಾಲೇಜ್, ಸೆಂಟ್ರೆಲ್ ಕಾಲೇಜ್,
ಪ್ರಸಿದ್ಧಿಗೆ ಕಾರಣಬಾಹ್ಯಾಕಾಶ ವಿಜ್ಞಾನ ಕುರಿತ ದೂರದರ್ಶನ, ಆಕಾಶವಾಣಿ ಕಾರ್ಯಕ್ರಮಗಳು
ಪ್ರಭಾವಗಳುವಿ.ಸೀ, ಜಿ.ಪಿ.ರಾಜರತ್ನಂ, ತೀನಂಶ್ರೀ
ಸಂಗಾತಿಸೌ.ಲಲಿತಾ ರಾಮಕೃಷ್ಣರಾವ್ ರವರು ಡಯಾಬಿಟೀಸ್ ನಿಂದ ನರಳುತ್ತಿದ್ದು, ೨೦೧೪ ರ ಮೇ ತಿಂಗಳ ೮ ನೆಯ ತಾರೀಖು ನಿಧನರಾದರು.
ಮಕ್ಕಳು

ಪ್ರೊ.ಎಚ್. ಆರ್. ರಾಮಕೃಷ್ಣರಾವ್, (೩೧, ಮೇ ೧೯೩೫-೧೨,ಸೆಪ್ಟೆಂಬರ್,೨೦೨೨) ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಭೌತಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗಗಳ ಮುಖ್ಯಸ್ಥರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ನಿವೃತ್ತಿಯ ನಂತರ ಸಂದರ್ಶಕ ಪ್ರಾಧ್ಯಾಪಕರಾಗಿ ಬೆಂಗಳೂರು ನಗರದ ಯುವ ವಿದ್ಯಾರ್ಥಿಗಳಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಲು ಬೆಂಗಳೂರು ಆಕಾಶವಾಣಿಯನ್ನು ಬಳಸಿಕೊಂಡು ವಿಜ್ಞಾನ ಪ್ರಸಾರದಲ್ಲಿ ಖಗೋಳಶಾಸ್ತ್ರ,ನಕ್ಷತ್ರಗಳು, ಗ್ರಹಗಳಿಗೆ ಸಂಬಂಧಿಸಿದ ನಕ್ಷತ್ರ ವೀಕ್ಷಣೆ, ಮುಂತಾದ ಕಾರ್ಯಕ್ರಮಗಳನ್ನು ಸತತವಾಗಿ ನಡೆಸಿಕೊಟ್ಟ ಪ್ರಮುಖರಲ್ಲೊಬ್ಬರು. ಬೆಂಗಳೂರು ದೂರದರ್ಶನ'ದಲ್ಲಿ ಹಿರಿಯ ವಿಜ್ಞಾನಿಗಳಾದ, ಡಾ.ರಾಜಾರಾಮಣ್ಣ, ಡಾ. ಸಿ. ಎನ್. ಆರ್. ರಾವ್ ಡಾ.ಯು. ಆರ್. ರಾವ್, ಡಾ.ಎಮ್.ಆರ್ ಶ್ರೀನಿವಾಸನ್ ಮುಂತಾದವರ ಜೊತೆ ಸಂವಾದವನ್ನು ಮಾಡಿ, ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶಕ್ಕೆ ಅನೇಕ ಉಪಯುಕ್ತ ಲೇಖನಗಳನ್ನು ಬರೆಯುವ ಜೊತೆಗೆ,'ವಿಜ್ಞಾನ ಲೇಖನಗಳ ಪರಿಶೋಧಕ'ರಾಗಿಯೂ ಸೇವೆಸಲ್ಲಿಸಿದ್ದಾರೆ. "ಕ್ರೈಸ್ಟ್ ಕಾಲೇಜ್ ಕನ್ನಡ ಸಂಘ"ವನ್ನು ಹುಟ್ಟು ಹಾಕುವಲ್ಲಿ ಪ್ರಮುಖಪಾತ್ರ ವಹಿಸಿದ್ದರು.

ಜನನ ಮತ್ತು ಬಾಲ್ಯ[ಬದಲಾಯಿಸಿ]

ಪ್ರೊ.ರಾಮಕೃಷ್ಣರಾವ್, ಹೊಳಲ್ಕೆರೆ [೧] ಚಿತ್ರದುರ್ಗ ಜಿಲ್ಲೆಯ ಚೀರನಹಳ್ಳಿ, ಮತ್ತು ಕುಡಿನೀರ ಕಟ್ಟೆ ಗ್ರಾಮಗಳ ಶ್ಯಾನುಭೋಗರಾಗಿದ್ದ, ಸುಂಕದ ವಂಶ ದ, ಶ್ರೀ.ಎಚ್.ವಿ.ರಂಗರಾವ್ ಅವರ, ನಾಲ್ಕು ಪುತ್ರರಲ್ಲಿ ಎರಡನೆಯವರು. ತಾಯಿ ಮಹಾಸಾಧ್ವಿ ,ರಾಧಮ್ಮನವರು. ರಾಮಕೃಷ್ಣರಾವ್ ಜನಿಸಿದ್ದು, ೩೧, ಮೇ ೧೯೩೫ ರಲ್ಲಿ. ಪ್ರಾಥಮಿಕ ಹಾಗೂ ಸೆಕೆಂಡರಿ ಶಿಕ್ಷಣಗಳು ಊರಿನಲ್ಲಿ ನಡೆದವು. ಬೆಂಗಳೂರಿನ 'ನ್ಯಾಷನಲ್ ಕಾಲೇಜ್' ನಲ್ಲಿ ಇಂಟರ್ಮೀಡಿಯೇಟ್ ಪಾಸ್ ಮಾಡಿ, ಸೆಂಟ್ರಲ್ ಕಾಲೇಜಿನಲ್ಲಿ, B.Sc; M.Sc; ಪದವಿಗಳನ್ನು ಪಡೆದರು. 'ನ್ಯಾಷನಲ್ ಕಾಲೇಜಿ'ನಲ್ಲಿದ್ದಾಗ 'ಡಾ.ಹೆಚ್ ನರಸಿಂಹಯ್ಯ' ನವರ ಪರಿಚಯವಾಯಿತು. ಮುಂದೆ ಸೆಂಟ್ರೆಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಸಂದರ್ಭದಲ್ಲಿ 'ಪ್ರೊ. ಜಿ.ಪಿ.ರಾಜರತ್ನಂ', 'ಪ್ರೊ. ವಿ.ಸೀತಾರಾಮಯ್ಯ','ವಿ.ಸೀ,' ಅವರ ಜತೆಯಲ್ಲಿ ಕೆಲಸಮಾಡಿದರು.

ಬೆಂಗಳೂರಿನ'ಸೆಂಟ್ರೆಲ್ ಕಾಲೇಜ್ ನಲ್ಲಿ ವಿದ್ಯಾಭ್ಯಾಸ[ಬದಲಾಯಿಸಿ]

'ಬೆಂಗಳೂರಿನ ಸೆಂಟ್ರೆಲ್ ಕಾಲೇಜ್' ನಲ್ಲಿ 'ಪ್ರೊ. ಜಿ.ಪಿ.ರಾಜರತ್ನಂ' ಮತ್ತು 'ಪ್ರೊ.ವಿ.ಸೀ' ಯವರ ಒಡನಾಟವಿತ್ತು. 'ಸೆಂಟ್ರೆಲ್ ಕಾಲೇಜ್ ಕರ್ನಾಟಕ ಸಂಘ'ದ ಕಾರ್ಯದರ್ಶಿಯಾಗಿ, [೨] ಸರ್ವಸಮ್ಮತದಿಂದ ಆಯ್ಕೆಯಾಗಿ,ಬಹಳ ಮಹತ್ವದ ಕೆಲಸಗಳನ್ನು ನಿರ್ವಹಿಸಿದರು.

'ದಿ ಕ್ರೈಸ್ಟ್ ಕಾಲೇಜ್' ನಲ್ಲಿ ಉಪಾಧ್ಯಾಯರಾಗಿ ಪಾದಾರ್ಪಣೆ[ಬದಲಾಯಿಸಿ]

ಪದವಿಯ ನಂತರ, ಆಗ ತಾನೇ ಬೆಂಗಳೂರಿನ ಹೊಸೂರ್ ರಸ್ತೆಯಲ್ಲಿ ಸ್ಥಾಪಿಸಲ್ಪಟ್ಟ,'ದಿ ಕ್ರೈಸ್ಟ್ ಕಾಲೇಜ್', ನಲ್ಲಿ ಪಾದಾರ್ಪಣೆ ಮಾಡಿದರು. ಉಪಾಧ್ಯಾಯರಾಗಿ ಸೇರಿದ ಅವರು ಭೌತಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗಗಳ ಮುಖ್ಯಸ್ಥರಾಗಿ, ಕೆಲಸ ಮಾಡಿ 'ಅತ್ಯಂತ ಪ್ರಭಾವೀ ವಿಜ್ಞಾನ ಶಿಕ್ಷಕ'ರೆಂದು ಹೆಸರು ಪಡೆದರು.

ವೃತ್ತಿ ಮತ್ತು ಪ್ರವೃತ್ತಿ[ಬದಲಾಯಿಸಿ]

ಕಾಲೇಜ್ ನೌಕರಿಯಿಂದ ನಿವೃತ್ತರಾದ ಮೇಲೂ, ವೈಜ್ಞಾನಿಕ ಪ್ರವೃತ್ತಿಯನ್ನು ಪೋಷಿಸಿಕೊಂಡೇ ಬಂದರು. ಬೆಂಗಳೂರಿನಿಂದ ಪ್ರಸಾರವಾದ AIR ನ ವಿಜ್ಞಾನ ಕಾರ್ಯಕ್ರಮದಲ್ಲಿ, ೧೫೦ ಕ್ಕೂ ಹೆಚ್ಚು ವೈಜ್ಞಾನಿಕ-ಉಪನ್ಯಾಸಗಳನ್ನು ಕೊಟ್ಟಿದ್ದಾರೆ ಅವುಗಳೆಲ್ಲಾ ಮುಖ್ಯವಾಗಿ ಖಗೋಳಶಾಸ್ತ್ರ, ಮತ್ತು ನಕ್ಷತ್ರಗಳು, ಗ್ರಹಗಳಿಗೆ ಸಂಬಂಧಿಸಿದ್ದು. 'ಟಿ.ವಿ ಮತ್ತು ದೂರದರ್ಶನ'ದಲ್ಲಿ ಹಿರಿಯ ವಿಜ್ಞಾನಿಗಳಾದ, ಡಾ. ರಾಜಾರಾಮಣ್ಣ, ಡಾ. ಸಿ.ಎನ್.ಆರ್ ರಾವ್,ಡಾ.ಯು.ಆರ್.ರಾವ್, ಡಾ.ಎಮ್.ಆರ್.ಶ್ರೀ ನಿವಾಸನ್, ಮುಂತಾದವರ ಜೊತೆ ಸಂವಾದವನ್ನು ಮಾಡಿ, ಕಾರ್ಯಕ್ರಮಗಳನ್ನು ಕೊಟ್ಟರು. 'ರಾಮನ್ ಶತಮಾನೋತ್ಸವ'ದ ವಿಶೇಷ ಸಮಾರಂಭದಲ್ಲಿ 'ದೆಹಲಿ ದೂರದರ್ಶನ'ಕ್ಕೆ ಮಾಡಿದ "Raman,The natural Philosopher "ಎಂಬ 'ಸಾಕ್ಷಿ ಚಿತ್ರ' ಎಲ್ಲರ ವಿಶೇಷ ಮನ್ನಣೆಗೆ ಪಾತ್ರವಾಯಿತು. ನಿವೃತ್ತಿಯ ಬಳಿಕವೂ ಅನೇಕ ಕಾಲೇಜುಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ 'ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶಕ್ಕೆ ಅನೇಕ ಉಪಯುಕ್ತ ಲೇಖನಗಳನ್ನು ಬರೆಯುವ ಜೊತೆಗೆ,'ವಿಜ್ಞಾನ ಲೇಖನಗಳ ಪರಿಶೋಧಕ'ರಾಗಿಯೂ ಸೇವೆಸಲ್ಲಿಸಿದ್ದಾರೆ.

ಪ್ರೊ.ಎಚ್.ಆರ್.ರಾಮಕೃಷ್ಣರಾಯರು, ಸದಾ ಅಧ್ಯಯನದಲ್ಲಿ ತೊಡಗಿರುತ್ತಾರೆ

ಬಹುಮುಖ ಚಟುವಟಿಕೆಗಳಲ್ಲಿನ ಆಸಕ್ತಿ[ಬದಲಾಯಿಸಿ]

ನೈಸರ್ಗಿಕ ಪ್ರದೇಶಗಳಿಗೆ 'ಚಾರಣ' ಮತ್ತು ಆಸಕ್ತ ವಿಶಯಗಳ ವಿಶೇಷ ಅಧ್ಯಯನಕ್ಕೆ ವಿದೇಶ ಪ್ರವಾಸ- ಇವು ರಾಯರ ಹವ್ಯಾಸಗಳು. [೩]'ಉದಯಭಾನು ಸಂಸ್ಥೆ'ಯಲ್ಲಿ ನಡೆಸಿದ ಉಚಿತ ಪದವಿ ಪೂರ್ವ ತರಗತಿಗಳಿಗೆ, ಭೌತಶಾಸ್ತ್ರದ ಗೌರವವ ಪ್ರಾಧ್ಯಾಪಕ”ರಾಗಿ ಸತತವಾಗಿ ೧೦ ವರ್ಷ ದುಡಿದಿದ್ದಾರೆ.ವೈಜ್ಞಾನಿಕ ಮನೊವೃತ್ತಿಯನ್ನು ಚಿಕ್ಕಂದಿನಿಂದಲೇ ಮೈಗೂಡಿಸಿಕೊಂಡು ವಿಜ್ಞಾನದ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ೨೦೧೨ರಲ್ಲಿ 'ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ'ಯ ಅಧ್ಯಕ್ಷರಾಗಿ [೪] ಆಯ್ಕೆಯಾಗಿದ್ದು, ಜನತೆಯಲ್ಲಿ ವೈಜ್ಞಾನಿಕ ಮನೋಭಾವ ಬಿತ್ತುವ ಜನ ವಿಜ್ಞಾನ ಅಂದೋಳನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನ ಬಸವನಗುಡಿ ಜಿಲ್ಲೆಯಲ್ಲಿರುವ ಪ್ರತಿಷ್ಠಿತ 'ದ ನ್ಯಾಷನಲ್ ಕಾಲೇಜ್ ಸೈನ್ಸ್ ಫೋರಂ'[೫] ನ ಕಾರ್ಯಕಾರಿ ಸಮಿತಿಯಲ್ಲಿ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

"ಸಮಾಜಸೇವಾ ಪುರಸ್ಕಾರ "[ಬದಲಾಯಿಸಿ]

ಪ್ರೊ.ಎಚ್.ಆರ್.ರಾಮಕೃಷ್ಣರಾಯರು [೬] ಬೆಂಗಳೂರಿನ ಕೆಂಪೇಗೌಡ ನಗರದಲ್ಲಿ, ರಾಮಕೃಷ್ಣ ಬಡಾವಣೆಯಲ್ಲಿರುವ, 'ಉದಯ ಭಾನು ಕಲಾಸಂಘ ' ನೋಂ. ಸಮಾಜ ಸೇವೆಯನ್ನು ನಿರಂತರವಾಗಿ ೪೦ ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ಬೆಂಗಳೂರು ನಗರದ ಸರ್ವತೋಮುಖ ಬೆಳವಣಿಗೆಯನ್ನು ದಾಖಲಿಸುವುದರ ಜೊತೆಗೆ, ನಗರದ ಸಾಂಸ್ಕೃತಿ ಸಾಹಿತ್ಯಗಳನ್ನು, ಸಮಾಜಸೇವೆಗಳನ್ನು ಗುರುತಿಸುವ, ಪ್ರೊತ್ಸಾಹಿಸುವ, ಗುರುತರ ಜವಾಬ್ದಾರಿಯನ್ನು ಸಂಘ ಯಶಸ್ವಿಯಾಗಿ ನಿರ್ವಹಿಸುತ್ತಿದೆ. 'ಉದಯ ಭಾನು ಉನ್ನತ ಅಧ್ಯಯನ ಕೇಂದ್ರ'ದ ಗೌ.ನಿರ್ದೇಶಕರಾಗಿಯೂ ಬೆಂಗಳೂರಿನ ಪ್ರತಿಷ್ಠಿತ 'ಸೈನ್ಸ್ ಫೋರಂನ ಖಜಾಂಚಿ'ಯಾಗಿ ಮತ್ತು 'ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಸಂಸ್ಥಾಪಕ ಉಪಾಧ್ಯಕ್ಷ'ರಾಗಿ ಸೇವೆ ಸಲ್ಲಿಸುತ್ತಿರುವ, ಭೌತಶಾಸ್ತ್ರದ ಪ್ರಾಧ್ಯಾಪಕ, ಪ್ರೊ. ಶ್ರೀ ರಾಮಕೃಷ್ಣರಾಯರನ್ನು "ಉದಯಭಾನು ವಿದ್ಯಾರತ್ನ" ರೆಂದು ಗುರುತಿಸಿ ಸನ್ಮಾನಿಸಿದ್ದರು.'ವಿಜ್ಞಾನ ಕ್ಷೇತ್ರದ ಪ್ರಾಮಾಣಿಕ ಪರಿಚಾಲಕ', ಪ್ರಾಮಾಣಿಕ ಕಳಕಳಿಯ ಚಿಂತಕರೂ, ಭೌತವಿಜ್ಞಾನದ ಪ್ರಾಧ್ಯಾಪಕರೂ ಆದ ಪ್ರೊ.ಶ್ರೀ ರಾಮಕೃಷ್ಣರಾವ್ ದಂಪತಿಗಳನ್ನು, 'ಉದಯ ಭಾನು ವಿದ್ಯಾರತ್ನ ಅಭಿನಂದನಾ ಪತ್ರ' ದಿಂದ ಗೌರವಿಸಿದರು. ಪ್ರೊ. ರಾಮಕೃಷ್ಣರಾವ್-ಲಲಿತ ದಂಪತಿಗಳಿಗೆ ಈ ಗೌರವ ಲಭ್ಯವಾದದ್ದು ಅವರ 'ಅಮೃತೋತ್ಸವ ಸಮಾರಂಭ'ದಂದು.

'ಉದಯಭಾನು ಸಂಸ್ಥೆ'ಯ ಸಮಾಜ ಸೇವಾ ಚಟುವಟಿಕೆಗಳು[ಬದಲಾಯಿಸಿ]

[೭] ’ಬೆಂಗಳೂರು ದರ್ಶನ'ದ ಎರಡು ಸಂಪುಟಗಳ ಪ್ರತಿಗಳನ್ನು'ವಿಶ್ವಕೋಶ'ದ ರೀತಿಯಲ್ಲಿ ಬರೆಯಲಾಗಿದೆ.ಬೆಂಗಳೂರು ನಗರ ಬೆಳೆದ ಬಗೆಯನ್ನು, ಅದರ ಬಹುಮುಖ ಸಾಧನೆಗಳನ್ನು ಮತ್ತು ವಿವರಗಳನ್ನು ಅತ್ಯಂತ ಸಮರ್ಥವಾಗಿ ಖಚಿತವಾಗಿ ದಖಲಿಸಿರುವುದು ಇದರ ವಿಶಿಷ್ಠತೆಗಳಲ್ಲೊಂದು. ಇದರ ಪ್ರಧಾನ ಸಂಪಾದಕರು, ಹಿರಿಯ ಸಾಹಿತಿ, ಡಾ.ಎಲ್. ಎಸ್. ಶೇಷಗಿರಿ ರಾವ್ ಅದರ ಪ್ರಕಾಶಕರು "ಉದಯಭಾನು ಕಲಾ ಸಂಘ, ಕೆಂಪೇಗೌಡ ನಗರ ಬೆಂಗಳೂರು-೫೬೦ ೧೧೯ ೧೨-೦೬-೧೯೬೫ ರಲ್ಲಿ, ಈ ಜನೋಪಕಾರಿ ಸಮಾಜಸೇವಾ ಮನೋಭಾವದ ಸಂಘ ಅಸ್ತಿತ್ವಕ್ಕೆ ಬಂತು.

ಕನ್ನಡ ಮತ್ತು ಆಂಗ್ಲಭಾಷೆಗಳಲ್ಲಿ ವಿಶೇಷ ಪ್ರಭುತ್ವ[ಬದಲಾಯಿಸಿ]

ರಾಮಕೃಷ್ಣರಾಯರ ಕನ್ನಡ ಮತ್ತು ಆಂಗ್ಲಭಾಷೆಗಳ ಮೇಲೆ ಹಿಡಿತವನ್ನು ಅವರು ಬರೆದ ವಿಜ್ಞಾನದ ಲೇಖನಗಳಲ್ಲಿ ನೋಡಬಹುದು.

ವೈವಾಹಿಕ-ಜೀವನ[ಬದಲಾಯಿಸಿ]

ಲಲಿತಾ ಅವರನ್ನು ಮದುವೆಯಾದ ರಾಮಕೃಷ್ಣ ರಾವ್ ಅವರಿಗೆ ೩ ಮಕ್ಕಳಿದ್ದಾರೆ. 'ಡಯಾಬಿಟಿಸ್' ನಿಂದ ನರಳುತ್ತಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದ ಲಲಿತಾ ರಾಮಕೃಷ್ಣ ಅವರು, ವರ್ಷ ೨೦೧೪ ರ ಮೇ ೮ ರಂದು ರಾತ್ರಿ ನಿಧನರಾದರು.

ಸನ್ಮಾನಗಳು[ಬದಲಾಯಿಸಿ]

ಚಿತ್ರ:Chandrayana.jpg
'ಚಂದ್ರಯಾನ ಪುಸ್ತಕ'

ಬರೆದ ಪಠ್ಯಪುಸ್ತಕಗಳು, ಮತ್ತು ವಿಜ್ಞಾನವನ್ನು ಪ್ರಸಿದ್ಧಪಡಿಸಲು ವಿಶೇಷವಾಗಿ ರಚಿಸಿದ ಕೃತಿಗಳು :

  • 'ನಿಶ್ಯಬ್ದದೊಳಗಿನ ಶಬ್ದ',
  • 'ಶಕ್ತಿಗಾಥೆ',
  • 'ಪರಮಾಣು ಪ್ರಪಂಚ',
  • 'ಅದೃಷ್ಯ ಬೆಳಕು-ಎಕ್ಸ್ -ರೇ' ಮುಂತಾದವುಗಳು.[೯]

ರಾಮಕೃಷ್ಣರಾವ್ ಸಂಪಾದಿಸಿದ ಕೃತಿಗಳು :

  • ಬೆಂಗಳೂರಿನ ಪಿ.ಯು ವಿದ್ಯಾರ್ಥಿಗಳಿಗಾಗಿಯೇ ವಿಶೇಷವಾಗಿ ಬರೆದ ಭೌತಶಾಸ್ತ್ರದ ಪಠ್ಯ ಪುಸ್ತಕಗಳು
  • 'The Quest'- A Biography of a Scientist,
  • 'ಅಂತರಿಕ್ಷ',
  • 'ಶುಕ್ರ ಸಂಕ್ರಮ',
  • 'ಒಲವಿನ ಶಿಲೆ-ಅಯಸ್ಕಾಂತ',
  • 'ನಂಬಿಕೆ-ಮೂಢನಂಬಿಕೆ',
  • 'ಕಲಾಂ ಮೇಷ್ಟ್ರು'-(ಮಕ್ಕಳಿಗಾಗಿಯೇ ಬರೆದ ಸಚಿತ್ರ-ಪುಸ್ತಕ)
  • 'ಕಾಸ್ ಮಾಸ್' ಮತ್ತು 'ನಮ್ಮ ವಿಶ್ವ' ಎಂಬ 'ಸಾಕ್ಷಿಚಿತ್ರ'ಗಳನ್ನು ಮಾಡಿದರು.
  • 'ನಿಮಗೆ ತಿಳಿದಿರಲಿ' ಎಂಬ ಧ್ವನಿ ಸುರಳಿ [CD] ಬಿಡುಗಡೆಮಾಡಿದರು.
  • 'ಬಿಗ್ ಬ್ಯಾಂಗ್' !? ಎಂಬ ಮಾನೋಗ್ರಾಫ್, ಬೆಂಗಳೂರು ಸೈನ್ಸ್ ಫೋರಮ್ ನ ವತಿಯಿಂದ, ೪ ನೇ, ಅಕ್ಟೋಬರ್, ೨೦೦೮ ರಂದು, ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ಬಿಡುಗಡೆಯಾಯಿತು. ಅನಂತರ ನಡೆದ ಸಂವಾದದಲ್ಲಿ, ಬಹಳಮಂದಿ ಉಪಸ್ಥಿತರಿದ್ದು, ಹಿರಿಯ ಪ್ರೊಫೆಸರ್ ರಾವ್ ಅವರ, ಜ್ಞಾನದ ಲಾಭ ಪಡೆದರು. ಪುಸ್ತಕದ ಪ್ರಕಟಣೆಯನ್ನು ’ಭಾರತ ಜ್ಞಾನ ವಿಜ್ಞಾನ ಸಮಿತಿ’ ವಹಿಸಿಕೊಂಡಿತ್ತು.
  • 'ಸರ್ ಐಸಾಕ್ ನ್ಯೂಟನ್,
  • 'ಇತಿಹಾಸದಲ್ಲಿ ವಿಜ್ಞಾನ'
  • 'ಸಂಕ್ಷಿಪ್ತ ಖಗೋಳ ವಿಜ್ಞಾನ ಚರಿತ್ರೆ'
  • 'ಪ್ರಳಯ-೨೦೧೨'
  • 'Running through the storm'-Biography of Dr. S.S.Iyengar
  • 'ಕರ್ಣಾಟಕ ಭಾಗವತ', ದ ಕೃತಿ ಸಂಪಾದನಾ ಸಮಿತಿಯ ಸದಸ್ಯರಾಗಿ, ಪ್ರೊ.ರಾವ್ ಬಹುಮೂಲ್ಯ ಯೋಗದಾನವನ್ನು ಮಾಡಿದ್ದಾರೆ.
  • ಪ್ರೊ. ರಾಮಕೃಷ್ಣರಾವ್ ಅಮೆರಿಕ ದೇಶದ ಬಾನುಲಿ ಕೇಂದ್ರದಲ್ಲಿ ವಿಜ್ಞಾನದ ಬಗ್ಗೆ ಉಪನ್ಯಾಸನೀಡಿ, ಅಲ್ಲಿನ ಜನರಆಸಕ್ತಿಗಳಿಗೆ ಸ್ಪಂದಿಸಿದ್ದರು.[೧೦]
  • 'ಕನ್ನಡದಲ್ಲಿ ವಿಜ್ಞಾನ ಸಂವಹನೆ' ಪುಸ್ತಕದ ಸಂಪಾದನೆ, ಶ್ರೀ.ಟಿ. ಅರ್. ಅನಂತರಾಮು ರವರ ಜೊತೆಗೂಡಿ.

'ಡಾ.ಸುಬ್ರಹ್ಮಣ್ಯನ್ ಚಂದ್ರಶೇಖರ್' ಬಗ್ಗೆ ಬರೆದ ಕನ್ನಡ-ಪುಸ್ತಕ[ಬದಲಾಯಿಸಿ]

ಚಿತ್ರ:Dr.S. Chandrashekhar (Kan).jpg
'ಡಾ.ಎಸ್.ಚಂದ್ರಶೇಖರ್, ಬದುಕು-ಬರಹ'

ಭೌತಶಾಸ್ತ್ರದಲ್ಲಿ ಸಾಧನೆಯನ್ನು ಮಾಡಿ, 'ನೊಬೆಲ್ ಪ್ರಶಸ್ತಿ ಪುರಸ್ಕೃತ'ರಾದ 'ಡಾ.ಎಸ್.ಚಂದ್ರಶೇಖರ್' ಅವರ 'ನೂರನೆ ಹುಟ್ಟುಹಬ್ಬದ ಶುಭ ಸಂದರ್ಭ'ಕ್ಕಾಗಿಯೇ 'ಪ್ರೊ.ಎಚ್.ಆರ್.ರಾಮಕೃಷ್ಣರಾವ್' ಬರೆದು ಸಿದ್ಧಪಡಿಸಿದ ಪುಸ್ತಕವನ್ನು, 'ಬೆಂಗಳೂರಿನ ಭವನದ ಗಾಂಧಿ ಸೈನ್ಸ್ ಸೆಂಟರ್' ನ ವತಿಯಿಂದ ಪ್ರಕಟಿಸಲಾಗಿತ್ತು. ಅದನ್ನು, ಮುಂಬೈನ ಪ್ರತಿಷ್ಠಿತ 'ಟಿ.ಐ.ಎಫ್.ಆರ್. ಸಂಸ್ಥೆಯ ಮಾಜೀ ನಿರ್ದೇಶಕ'ರಾದ, 'ಡಾ. ಬಿ.ವಿ.ಶ್ರೀಕಂಠನ್' ರವರು, 'ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಸಭಾಂಗಣ'ದಲ್ಲಿ ಆಹ್ವಾನಿತ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.[೧೧]

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (KJVS)[ಬದಲಾಯಿಸಿ]

'ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಹೊಸ ಅಧ್ಯಕ್ಷರಾಗಿ [೧೨] ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಕಾರ್ಯನಿರ್ವಹಿಸುತ್ತಿದ್ದಾರೆ'.

೮೦ ನೆಯ ಹುಟ್ಟುಹಬ್ಬದ ಕಾರ್ಯಕ್ರಮ[ಬದಲಾಯಿಸಿ]

ಪ್ರೊ. ಎಚ್.ಆರ್. ರಾಮಕೃಷ್ಣರಾವ್ ರವರ 80 ನೆಯ ಹುಟ್ಟುಹಬ್ಬವನ್ನು ಅವರ ಗೆಳೆಯರು, ಹಿತೈಷಿಗಳು ಮತ್ತು ವಿದ್ಯಾರ್ಥಿಗಳು, ಕನ್ನಡಿಗರು, ೨೦೧೫ ರ, ಮೇ, ೩೦ ರಂದು, ಸಂಭ್ರಮದಿಂದ ಆಚರಿಸಿದರು.

ನಿಧನ[ಬದಲಾಯಿಸಿ]

ರಾಮಕೃಷ್ಣರಾಯರು,(೮೭) ಬಹಳ ದಿನಗಳಿಂದ ನಿಶ್ಯಕ್ತಿ ಮತ್ತು ವೃದ್ಧಾಪ್ಯಕ್ಕೆ ಸಂಬಂದಿಸಿದ ಸಮಸ್ಯೆಗಳಿಂದ ನರಳುತ್ತಿದ್ದರು. ಅವರು ಖಾಸಗಿ ಆಸ್ಪತ್ರೆಯಲ್ಲಿ ೧೨, ಸೋಮವಾರ, ಸೆಪ್ಟೆಂಬರ್, ೨೦೨೨ ರ ಸಾಯಂಕಾಲ ನಿಧನರಾದರು. [೧೩] [೧೪]

ಉಲ್ಲೇಖಗಳು[ಬದಲಾಯಿಸಿ]

  1. "ಹೊಳಲ್ಕೆರೆಗ್ರಾಮದ ಬಗ್ಗೆ ಮಾಹಿತಿ". Archived from the original on 2018-06-15. Retrieved 2017-05-06.
  2. http://www.shorpy.com/node/9052
  3. http://www.kscst.iisc.ernet.in/outreach/outreach1.html
  4. citizenmatters. in/articles/1215-bangalore-science-forum-2009 Bamgalore Science Forum[ಶಾಶ್ವತವಾಗಿ ಮಡಿದ ಕೊಂಡಿ]
  5. "The Bangalore Science Forum, 15-04-2015, Wednesday,(2631)Prof.H.R.RAMAKRISHNA RAO,Formerly,Head of the Dept.of Physics,Christ College & Treasurer, Spoke on the subject, Cosmos-21st Century'". Archived from the original on 2017-04-23. Retrieved 2015-07-05.
  6. [https://web.archive.org/web/20160306223852/http://archive.deccanherald.com/Deccanherald/jan172005/snt6.asp Archived 2016-03-06 ವೇಬ್ಯಾಕ್ ಮೆಷಿನ್ ನಲ್ಲಿ. 'ಪ್ರತಿಷ್ಠಿತ ಉದಯಭಾನು ವಿದ್ಯಾರತ್ನ ಪುರಸ್ಕಾರ' ದಿಂದ ಸನ್ಮಾನಿತರಾದಾಗ]]
  7. http://bedrefoundation.blogspot.in/2011/03/subhashita-sukthi-mala-and-dr.html
  8. * 'Release of Karnataka Bhagavata on Sunday' Archived 2008-11-03 ವೇಬ್ಯಾಕ್ ಮೆಷಿನ್ ನಲ್ಲಿ.
  9. Public lectures by Professor Ajit Varki[ಶಾಶ್ವತವಾಗಿ ಮಡಿದ ಕೊಂಡಿ]
  10. "ಆರ್ಕೈವ್ ನಕಲು". Archived from the original on 2016-03-04. Retrieved 2014-05-10.
  11. "ಆರ್ಕೈವ್ ನಕಲು". Archived from the original on 2016-03-05. Retrieved 2014-05-10.
  12. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಹೊಸ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ
  13. ಲೇಖಕ,ಚಿಂತಕ, ಎಚ್.ಆರ್.ರಾಮಕೃಷ್ಣರಾವ್ ಇನ್ನಿಲ್ಲ.
  14. 'ಪ್ರೊ.ಎ‍‍ಚ್. ಆರ್.ರಾಮಕೃಷ್ಣರಾವ್-ನುಡಿನಮನ' ಪ್ರಜಾವಾಣಿ, ೨೬, ಸೆಪ್ಟೆಂಬರ್, ೨೦೨೨

ಬಾಹ್ಯ ಸಂಪರ್ಕಗಳು[ಬದಲಾಯಿಸಿ]