ಉತ್ಕೆಲಾ ವಿಮಾನ ನಿಲ್ದಾಣ
{{{name}}} | |
---|---|
ಐಎಟಿಎ: none – ಐಸಿಎಒ: none | |
ಸಾರಾಂಶ |
ಉತ್ಕೆಲ ವಿಮಾನನಿಲ್ದಾಣ ವು (IATA: UKE, ICAO: VEUK) ಒಂದು ಒಳನಾಡು ವಿಮಾನನಿಲ್ದಾಣ ಆಗಿದ್ದು ಒಡಿಶಾ ಸರ್ಕಾರದ ಒಡೆತನದಲ್ಲಿ ಒಡಿಶಾ ಇಂಡಿಯಾ ದ ಕಲಹಂಡಿ ಜಿಲ್ಲೆಯ ಉತ್ಕೆಲ ಎಂಬಲ್ಲಿದೆ.[೧] ಇದು ಭವಾನಿಪಟ್ನಂದಿಂದ ಉತ್ತರಕ್ಕೆ ೧೫ ಕಿ.ಮೀ. (೯.೩ಮೈಲು) ದೂರದಲ್ಲಿದೆ. ಇದು ಒಕ್ಕೂಟ ಸರ್ಕಾರದ ಉಡಾನ್ ಯೋಜನೆಯನ್ವಯ ಪ್ರಾದೇಶಿಕ ವಿಮಾನನಿಲ್ದಾಣ ಎಂದು ಪರಿಗಣಿತವಾಗಿದೆ.[೨][೩]
ಅಭಿವೃದ್ಧಿ[ಬದಲಾಯಿಸಿ]
ಒಡಿಶಾದಲ್ಲಿ ಅಭಿವೃದ್ಧಿ, ಸಂಪರ್ಕ ಮತ್ತು ಒಡಿಶಾ ಪ್ರವಾಸೋದ್ಯಮವನ್ನು ಸುಧಾರಿಸಲು, ನಾಗರಿಕ ವಿಮಾನಯಾನ ಸಚಿವಾಲಯವು ಉಡಾನ್ ಹಮ್ಮುಗೆಯ ಪ್ರಕಾರ ಈ ವಿಮಾನನಿಲ್ದಾಣವು ಪ್ರಾದೇಶಿಕ ವಿಮಾನನಿಲ್ದಾಣವಾಗಿ ಕೆಲಸ ಮಾಡಲಿದೆ. ದಶಕಗಳಿಂದ ಈ ವಿಮಾನನಿಲ್ದಾಣವು ಖಾಸಗಿ ಮತ್ತು ಸೇನಾಬಳಕೆಗಷ್ಟೇ ಮೀಸಲಾಗಿತ್ತು, ಆಗಸ್ಟ್ ೨೦೨೩ರಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸಲು ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಅನುಮತಿಸಿದ್ದಾರೆ. ಮುಂದಿನ ತಿಂಗಳುಗಳಲ್ಲಿ ಇಲ್ಲಿಂದ ಬಿಜುಪಟ್ನಾಯಕ್ ವಿಮಾನನಿಲ್ದಾಣ,ಭುಬನೇಶ್ವರ ಮತ್ತು ಸ್ವಾಮಿ ವಿವೇಕಾನಂದ ವಿಮಾನನಿಲ್ದಾಣ, ರಾಯಪುರಕ್ಕೆ ಸೇವೆ ಶುರುವಾಗಲಿದೆ.[೪] ೨೦೨೩ ಆಗಸ್ಟ್ ೩೧ರಂದು ಇಂಡಿಯಾ ಒನ್ ವಿಮಾನಯಾನ ಸಂಸ್ಥೆಯು ಭುವನೇಶ್ವರಕ್ಕೆ ಸಂಚಾರ ಪ್ರಾರಂಭಿಸಿತು.[೫]
ವಿಮಾನಸೇವೆ ಮತ್ತು ತಾಣಗಳು[ಬದಲಾಯಿಸಿ]
ಇದನ್ನೂ ನೋಡಿ[ಬದಲಾಯಿಸಿ]
ಉಲ್ಲೇಖಗಳು[ಬದಲಾಯಿಸಿ]
- ↑ "AAI Unserved Airports" (PDF). aai.aero. Airports Authority of India.
- ↑ "Utkela Airport". centreforaviation.com. CAPA.
- ↑ "List of Airstrip in the State maintained by State Government" (PDF). ct.odisha.gov.in. Commerce and Transport Department, Government of Odisha. Retrieved 14 January 2023.
- ↑ Pradhan, Hemanta (7 August 2023). "Utkela airport receives DGCA license to start flight operations". The Times of India (in ಇಂಗ್ಲಿಷ್). Retrieved 8 August 2023.
- ↑ ೫.೦ ೫.೧ Cassian, Baliarsingh (31 August 2023). "Odisha's Utkela Airport welcomes first flight from Bhubaneswar; check timings, price, other details". Odisha TV (in ಇಂಗ್ಲಿಷ್). Retrieved 31 August 2023.