ಭಾರತ

ವಿಕಿಪೀಡಿಯ ಇಂದ
(ಇಂಡಿಯಾ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
भारत गणराज्य
Republic of India

ಭಾರತ ಗಣರಾಜ್ಯ
ಭಾರತ ದೇಶದ ಧ್ವಜ ಭಾರತ ದೇಶದ ಭಾರತದ ರಾಷ್ಟ್ರೀಯ ಚಿಹ್ನೆ
ಧ್ವಜ ಭಾರತದ ರಾಷ್ಟ್ರೀಯ ಚಿಹ್ನೆ
ಧ್ಯೇಯ: "ಸತ್ಯಮೇವ ಜಯತೇ" (ಸಂಸ್ಕೃತ)
सत्यमेव जयते  (ದೇವನಾಗರಿ)
"ಸತ್ಯವೇ ಜಯಿಸುತ್ತದೆ"[೧]
ರಾಷ್ಟ್ರಗೀತೆ: ಜನ ಗಣ ಮನ[೨]

Location of ಭಾರತ

ರಾಜಧಾನಿ ನವದೆಹಲಿ
) 28°34′N 77°12′E
ಅತ್ಯಂತ ದೊಡ್ಡ ನಗರ ಮುಂಬೈ
ಅಧಿಕೃತ ಭಾಷೆ(ಗಳು)
ಸರಕಾರ ಸಂಯುಕ್ತ ಗಣತಂತ್ರ
ಸಂಸದೀಯ ಪ್ರಜಾತಂತ್ರ[೫]
 - ರಾಷ್ಟ್ರಪತಿ ಪ್ರಣಬ್ ಮುಖರ್ಜಿ
 - ಭಾರತದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ
 - ಪ್ರಧಾನಮಂತ್ರಿ ನರೇಂದ್ರ ಮೋದಿ
 - ಮುಖ್ಯ ನ್ಯಾಯಾಧೀಶ ಎಸ್ ಎಚ್ ಕಪಾಡಿಯ
ಸ್ವಾತಂತ್ರ ಯುನೈಟೆಡ್ ಕಿಂಗ್‌ಡಂನಿಂದ 
 - ಘೋಷಿತ ೧೫ ಆಗಸ್ಟ್ ೧೯೪೭ 
 - ಗಣರಾಜ್ಯ ೨೬ ಜನವರಿ ೧೯೫೦ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 3,287,240 ಚದರ ಕಿಮಿ ;  (೭ನೆಯ)
  1,269,210 ಚದರ ಮೈಲಿ 
 - ನೀರು (%) 9.56
ಜನಸಂಖ್ಯೆ  
 - ೨೦೦೮ರ ಅಂದಾಜು 1,147,995,904 (೨ನೆಯ)
 - ೨೦೦೧ರ ಜನಗಣತಿ 1,028,610,328[೬]
 - ಸಾಂದ್ರತೆ 349 /ಚದರ ಕಿಮಿ ;  (೩೨ನೆಯ)
904 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೮ರ ಅಂದಾಜು
 - ಒಟ್ಟು $3.288 ಟ್ರಿಲಿಯನ್[೭] ()
 - ತಲಾ $2,762[೭] (೧೧೮)
ಮಾನವ ಅಭಿವೃದ್ಧಿ
ಸೂಚಿಕ
(2008)
0.609 (132) – ಮಧ್ಯಮ
ಕರೆನ್ಸಿ ಭಾರತದ ರೂಪಾಯಿ ಭಾರತೀಯ ರೂಪಾಯಿ₹ (Rp) (INR)
ಕಾಲಮಾನ IST (UTC+5:30)
 - ಬೇಸಿಗೆ (DST) ಆಚರಣೆಯಲ್ಲಿ ಇಲ್ಲ (UTC+5:30)
ಅಂತರ್ಜಾಲ TLD .in
ದೂರವಾಣಿ ಕೋಡ್ +91

ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದೂ ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟೃವಾಗಿದೆ. ಭಾರತವು ೧೨೧ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ,ನೈರುತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಕೊಳ್ಳುವ ಶಕ್ತಿಯ ಮೇರೆಗೆ, ಪ್ರಪಂಚದ ನಾಲ್ಕನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ. ಭಾರತ ದೇಶವು ಪ್ರಾಚೀನ ಸಿಂಧೂತಟದ ನಾಗರೀಕತೆಯ ತವರು ಮನೆಯಾಗಿದೆ. ಅನೇಕ ಐತಿಹಾಸಿಕ ವಾಣಿಜ್ಯ ಮಾರ್ಗಗಳು ಹಾಗು ಪ್ರಾಚೀನ ಸಾಮ್ರಾಜ್ಯಗಳು ಭಾರತ ದೇಶದಲ್ಲಿ ಉಗಮಿಸಿವೆ. ಪ್ರಪಂಚದ ನಾಲ್ಕು ಪ್ರಮುಖ ಧರ್ಮಗಳಾದ ಹಿಂದೂಧರ್ಮ, ಬೌದ್ಧ, ಜೈನ್ ಧರ್ಮ ಮತ್ತು ಸಿಖ್ ಧರ್ಮಗಳು ಭಾರತದಲ್ಲಿ ಆರಂಭವಾಗಿವೆ. ಝೋ ರಾಷ್ಟ್ರಿಯನಿಸಂ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ ಕ್ರಿ. ಶ1 ನೇ ಸಹಸ್ರಮಾನದಲ್ಲಿ ಆಗಮಿಸಿ ಈ ಪ್ರದೇಶದ ಸಂಸ್ಕೃತಿಯನ್ನು ವೈವಿಧ್ಯಮಯವಾಗಿಸಿವೆ. ೧೮ನೇ ಶತಮಾನದಲ್ಲಿ ಭಾರತ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯಿಂದ ಆಕ್ರಮಣಗೊಂಡು ಇಂಗ್ಲೇಂಡಿನ ಆಡಳಿತಕ್ಕೊಳಪಟ್ಟಿತು. ೧೯ನೇ ಶತಮಾನದ ಮಧ್ಯದಲ್ಲಿ ಭಾರತ ಅನೇಕ ಸ್ವಾತಂತ್ರ್ಯ ಹೋರಾಟದ ಫಲವಾಗಿ ಬ್ರಿಟೀಷರಿಂದ ಸ್ವತಂತ್ರವಾಯಿತು.

ಹೆಸರಿನ ಉಗಮ[ಬದಲಾಯಿಸಿ]

ಭಾರತ ಎಂಬ ಹೆಸರು "ಭರತವರ್ಷ" ಎಂಬ ಹೆಸರಿನಿಂದ ಉಗಮಗೊಂಡದ್ದು. ಪುರಾತನ ಪೌರಾಣಿಕ ಆಕರಗಳಿಂದಲೂ ಈ ಹೆಸರು ಭಾರತಕ್ಕೆ ಸೂಚಿತವಾಗಿದೆ. ಋಷಭದೇವನ ಮಗ ಭರತ ಚಕ್ರವರ್ತಿಯಿಂದ ಅಥವಾ ಮಹಾರಾಜ ದುಶ್ಯಂತನ ಪುತ್ರನಾದ ಭರತ ಮಹಾರಾಜನ ಹೆಸರಿನಿಂದ ಬಂದದ್ದು. "ಇಂಡಿಯಾ" ಎಂಬ ಹೆಸರು ಸಿಂಧೂ ನದಿಯ ಇದರ ಪರ್ಷಿಯನ್ ರೂಪಾಂತರ "ಇಂಡಸ್" ಎಂಬುದರಿಂದ ಬಂದದ್ದು. ಭಾರತವನ್ನು ನಿರ್ದೇಶಿಸಲು ಉಪಯೋಗಿಸಲಾಗಿರುವ ಇತರ ಹೆಸರುಗಳಲ್ಲಿ ಒಂದು ಹಿಂದುಸ್ತಾನ.

ಚರಿತ್ರೆ[ಬದಲಾಯಿಸಿ]

ಮುಖ್ಯ ಲೇಖನ: ಭಾರತದ ಇತಿಹಾಸ

ಭಾರತದಲ್ಲಿ ಜನವಸತಿಯ ವೊದಲ ಕುರುಹುಗಳೆಂದರೆ ಈಗಿನ ಮಧ್ಯ ಪ್ರದೇಶ ರಾಜ್ಯದ ಬಿಂಭೇಟ್ಕಾದಲ್ಲಿ ದೊರೆತಿರುವ ಶಿಲಾಯುಗದ ಪಳೆಯುಳಿಕೆಗಳು. ಸುಮಾರು ೯೦೦೦ ವರ್ಷಗಳ ಹಿಂದೆ ನಾಗರೀಕತೆಯ ಕುರುಹುಗಳು ಕಂಡು ಬಂದು ಕ್ರಿ.ಪೂ ೨೬೦೦ ರಿಂದ ಕ್ರಿ.ಪೂ. ೧೯೦೦ ರ ವರೆಗೆ ಸಿಂಧೂ ಕಣಿವೆ ನಾಗರೀಕತೆ ಅಸ್ತಿತ್ವದಲ್ಲಿತ್ತು. ನಂತರ ವೇದಗಳನ್ನು ಆಧರಿಸಿ ಹಿಂದೂ ಧರ್ಮ ಬೆಳೆಯಿತು. ಆ ಸಂದರ್ಭದಲ್ಲಿ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ಸಹ ಉಗಮಗೊಂಡವು. ಕ್ರಿ.ಪೂ ೫೦೦ ರ ನಂತರ ಅನೇಕ ಸ್ವತಂತ್ರ ರಾಜ್ಯಗಳು ತಲೆಯೆತ್ತಲಾರಂಭಿಸಿದವು. ಮೌರ್ಯ ಸಾಮ್ರಾಜ್ಯ ಭಾರತವನ್ನು ಸರಿ ಸುಮಾರಾಗಿ ಒಗ್ಗೂಡಿಸಿದ ವೊದಲ ಸಾಮ್ರಾಜ್ಯ. ನಂತರ ಗುಪ್ತ ಸಾಮ್ರಾಜ್ಯ ಭಾರತದ "ಸುವರ್ಣ ಯುಗ"ದಲ್ಲಿ ಆಡಳಿತ ನಡೆಸಿತು. ಈ ಕಾಲದಲ್ಲಿ ಸಾಹಿತ್ಯ, ವಿಜ್ಞಾನ, ತತ್ವಶಾಸ್ತ್ರ ವೊದಲಾದ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಭಾರತ ಸಾಧಿಸಿತು. ಎರಡನೆಯ ಸಹಸ್ರಮಾನದ ಆರಂಭದಲ್ಲಿ ಅನೇಕ ಮುಸ್ಲಿಮ್ ರಾಜರ ದಾಳಿ ಆರಂಭವಾಗಿ ೧೨ ನೆಯ ಶತಮಾನದಿಂದ ಮುಂದಕ್ಕೆ ಉತ್ತರ ಭಾರತದ ಅನೇಕ ಭಾಗಗಳು ಮತ್ತು ದಕ್ಷಿಣ ಭಾರತದ ಕೆಲ ಭಾಗಗಳು ಮುಸ್ಲಿಮ್ ಆಡಳಿತಕ್ಕೆ ಒಳಪಟ್ಟವು. (ಉದಾಹರಣೆಗೆ ದೆಹಲಿ ಸುಲ್ತಾನೇಟ್, ಬಹಮನಿ ಸುಲ್ತಾನರು, ಮೊಘಲ್ ಸಾಮ್ರಾಜ್ಯ). ೧೭ ನೆಯ ಶತಮಾನದಿಂದ ಮುಂದಕ್ಕೆ ಪೋರ್ಚುಗೀಸ್, ಫ್ರೆಂಚ್ ಮತ್ತು ಬ್ರಿಟಿಷ್ ವ್ಯಾಪಾರಿಗಳು ಭಾರತಕ್ಕೆ ಬರಲಾರಂಭಿಸಿದರು. ಹಂಚಿಹೋಗಿದ್ದ ಭಾರತದ ರಾಜಕೀಯ ಪರಿಸ್ಥಿತಿಯ ಲಾಭ ಪಡೆದು ಭಾರತದ ಅನೇಕ ಪ್ರದೇಶಗಳನ್ನು ಇವರು ವಶಪಡಿಸಿಕೊಳ್ಳಲಾರಂಭಿಸಿದರು. ಎಲ್ಲರಿಗಿಂತ ಪ್ರಬಲವಾಗಿ ಬೆಳೆದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಹೆಚ್ಚು ಕಡಿಮೆ ಸಂಪೂರ್ಣ ಭಾರತದ ಮೇಲೆ ಅಧಿಪತ್ಯ ಸ್ಥಾಪಿಸಿತು. ೧೮೫೭ ರಲ್ಲಿ ಭಾರತದ ಅನೇಕ ರಾಜ್ಯಗಳು ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡವು. ಇದರ ನಂತರ ನೇರ ಬ್ರಿಟಿಷ್ ಆಡಳಿತಕ್ಕೆ ಭಾರತ ಸಾಗಿತು. ಸ್ವಲ್ಪ ಕಾಲದಲ್ಲಿಯೇ ಭಾರತ ಸ್ವಾತಂತ್ರ್ಯ ಚಳುವಳಿ ಆರಂಭವಾಗಿ ಆಗಸ್ಟ್ ೧೫, ೧೯೪೭ ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯಿತು. ಸ್ವಾತಂತ್ರ್ಯಾ ನಂತರ ನೆರೆಯ ದೇಶಗಳೊಂದಿಗೆ ಒಟ್ಟು ನಾಲ್ಕು ಯುದ್ಧಗಳು ನಡೆದಿವೆ. ೧೯೭೪ ರಲ್ಲಿ ಭಾರತ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಪಡೆಯಿತು. ೧೯೭೫ ರಿಂದ ೭೭ ರ ವರೆಗೆ ಇಂದಿರಾ ಗಾಂಧಿಯವರ ಸರ್ಕಾರದಲ್ಲಿ ತುರ್ತು ಪರಿಸ್ಥಿತಿ ಏರ್ಪಟ್ಟಿತ್ತು. ೯೦ ರ ದಶಕದಿಂದ ಆರ್ಥಿಕ ಉದಾರೀಕರಣ ನೀತಿಯನ್ನು ಭಾರತ ಪಾಲಿಸುತ್ತಾ ಬಂದಿದೆ.

ಸರ್ಕಾರ ಮತ್ತು ರಾಜಕೀಯ[ಬದಲಾಯಿಸಿ]

ಭೂಗೋಳ[ಬದಲಾಯಿಸಿ]

ಭಾರತದ ನಕ್ಷೆ

ಭಾರತದ ಭೌಗೋಳಿಕ ಭಾಗಗಳಲ್ಲಿ ಮುಖ್ಯವಾದವು:

ಭಾರತದಲ್ಲಿ ಹರಿಯುವ ಮುಖ್ಯವಾದ ನದಿಗಳಲ್ಲಿ ಕೆಲವೆಂದರೆ ಸಿಂಧೂ, ಗಂಗಾ, ಬ್ರಹ್ಮಪುತ್ರ, ಯಮುನಾ, ನರ್ಮದಾ, ಗೋದಾವರಿ, ಕೃಷ್ಣಾ, ಕಾವೇರಿ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು[ಬದಲಾಯಿಸಿ]

ಭಾರತವನ್ನು ಕೆಳಗಿನ ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ:

 • ೨೯ ರಾಜ್ಯಗಳು
 • ೬ ಕೇಂದ್ರಾಡಳಿತ ಪ್ರದೇಶಗಳು
 • ರಾಷ್ಟ್ರೀಯ ರಾಜಧಾನಿ: ನವದೆಹಲಿ
ಭಾರತದ ರಾಜ್ಯಗಳು

ರಾಜ್ಯಗಳು

 1. ಆಂಧ್ರ ಪ್ರದೇಶ
 2. ಅರುಣಾಚಲ ಪ್ರದೇಶ
 3. ಅಸ್ಸಾಮ್
 4. ಬಿಹಾರ್
 5. ಚತ್ತೀಸ್‍ಗಢ
 6. ಗೋವ
 7. ಗುಜರಾತ್
 8. ಹರ್ಯಾಣಾ
 9. ಹಿಮಾಚಲ ಪ್ರದೇಶ
 10. ಜಮ್ಮು ಮತ್ತು ಕಾಶ್ಮೀರ
 11. ಜಾರ್ಖಂಡ್
 12. ಕರ್ನಾಟಕ
 13. ಕೇರಳ
 14. ಮಧ್ಯ ಪ್ರದೇಶ
 1. ಮಹಾರಾಷ್ಟ್ರ
 2. ಮಣಿಪುರ
 3. ಮೇಘಾಲಯ
 4. ಮಿಝೋರಾಮ್
 5. ನಾಗಾಲ್ಯಾಂಡ್
 6. ಒರಿಸ್ಸಾ
 7. ಪಂಜಾಬ್
 8. ರಾಜಸ್ಥಾನ
 9. ಸಿಕ್ಕಿಮ್
 10. ತಮಿಳುನಾಡು
 11. ತ್ರಿಪುರ
 12. ಉತ್ತರಾಂಚಲ
 13. ಉತ್ತರ ಪ್ರದೇಶ
 14. ಪಶ್ಚಿಮ ಬಂಗಾಳ
 15. ತೆಲಂಗಾಣ

ಕೇಂದ್ರಾಡಳಿತ ಪ್ರದೇಶಗಳು:

ರಾಜಧಾನಿ: ನವದೆಹಲಿ.

ಆರ್ಥಿಕ ವ್ಯವಸ್ಥೆ[ಬದಲಾಯಿಸಿ]

ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಭಾರತ ಹೊಂದಿದ್ದು, ಒಟ್ಟು ರಾಷ್ಟ್ರೀಯ ಉತ್ಪಾದನೆಯ ದೃಷ್ಟಿಯಿಂದ ಪ್ರಪಂಚದಲ್ಲಿ ಹನ್ನೆರಡನೆಯ ಸ್ಥಾನವನ್ನು ಹೊಂದಿದೆ. ಕೊಳ್ಳುವ ಶಕ್ತಿಯ ಮೇರೆಗೆ ನಾಲ್ಕನೆಯ ಸ್ಥಾನವನ್ನು ಹೊಂದಿದೆ. ಆದರೆ ಭಾರತದ ಜನಸಂಖ್ಯೆಯನ್ನು ಗಮನಿಸಿ ಸರಾಸರಿ ಒಬ್ಬ ವ್ಯಕ್ತಿಯ ಆದಾಯ ಸುಮಾರು ವರ್ಷಕ್ಕೆ ೧೧,೦೦೦ ರೂಪಾಯಿಗಳಷ್ಟು. ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಬೆಳೆದ ನಂತರ ಭಾರತೀಯ ಮಧ್ಯಮ ವರ್ಗ ಹೆಚ್ಚುತ್ತಾ ಬಂದಿದೆ. ಭಾರತದ ಮುಖ್ಯ ವೃತ್ತಿಗಳಲ್ಲಿ ಕೆಲವೆಂದರೆ ಕೃಷಿ, ಬಟ್ಟೆಗಳ ತಯಾರಿಕೆ, ಪೆಟ್ರೋಲಿಯಮ್ ಉತ್ಪನ್ನಗಳು, ಮಾಹಿತಿ ತಂತ್ರಜ್ಞಾನ, ಚಲನ ಚಿತ್ರಗಳು ಹಾಗೂ ಕುಶಲ ಕೈಗಾರಿಕೆ. ವಾರ್ಷಿಕವಾಗಿ ಸುಮಾರು ೨೦ ಲಕ್ಷ ಅಂತರರಾಷ್ಟ್ರೀಯ ಪ್ರವಾಸಿಗಳು ಭಾರತಕ್ಕೆ ಬರುತ್ತಾರೆ. ಭಾರತದೊಂದಿಗೆ ಹೆಚ್ಚಾಗಿ ಅಂತಾರಾಷ್ಟ್ರೀಯ ವ್ಯಾಪಾರ ನಡೆಸುವ ದೇಶ-ಸಂಸ್ಥೆಗಳೆಂದರೆ ಅಮೆರಿಕದ ಸಂಯುಕ್ತ ಸಂಸ್ಥಾನ, ರಷ್ಯಾ, ಯುರೋಪಿಯನ್ ಒಕ್ಕೂಟ, ಚೀನಾ ಮತ್ತು ಜಪಾನ್.

ಜನಸಂಖ್ಯಾ ಅಂಕಿ ಅಂಶಗಳು[ಬದಲಾಯಿಸಿ]

ಭಾರತ ಪ್ರಪಂಚದಲ್ಲಿ ಎರಡನೆ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಭಾರತೀಯ ಸಮಾಜದಲ್ಲಿ ಭಾಷೆ, ಧರ್ಮ, ಜಾತಿ ವೊದಲಾದ ಅನೇಕ ಅಂಶಗಳು ವಿವಿಧ ಪಾತ್ರಗಳನ್ನು ವಹಿಸುತ್ತವೆ. ಭಾರತದ ನಾಲ್ಕು ಅತಿ ದೊಡ್ಡ ನಗರಗಳೆಂದರೆ ಮುಂಬೈ, ದೆಹಲಿ, ಕೋಲ್ಕಟಾ (ಕಲ್ಕತ್ತೆ) ಮತ್ತು ಚೆನ್ನೈ. ಭಾರತದ ಸಾಕ್ಷರತಾ ಪ್ರಮಾಣ ಶೇ. ೬೪.೮. ಧರ್ಮದ ದೃಷ್ಟಿಯಿಂದ, ಜನಸಂಖ್ಯೆಯ ವಿಂಗಡಣೆ ಹೀಗಿದೆ: ಹಿಂದೂ (೮೦.೫ %), ಮುಸ್ಲಿಮ್ (೧೩.೪ %), ಕ್ರೈಸ್ತ (೨.೩೩ %), ಸಿಖ್ (೧.೮೪ %), ಬೌದ್ಧ (೦.೭೬ %), ಜೈನ (೦.೪ %). ಭಾರತದಲ್ಲಿರುವ ಇತರ ಧಾರ್ಮಿಕ ವರ್ಗಗಳಲ್ಲಿ ಕೆಲವೆಂದರೆ ಯಹೂದಿ, ಪಾರ್ಸಿ, ಅಹ್ಮದಿ ಮತ್ತು ಬಹಾ-ಈ. ಭಾರತದಲ್ಲಿರುವ ಎರಡು ಮುಖ್ಯ ಭಾಷಾ ಬಳಗಗಳೆಂದರೆ ಉತ್ತರ ಭಾರತದ ಇಂಡೋ-ಆರ್ಯನ್ ಭಾಷಾ ಬಳಗ ಮತ್ತು ದಕ್ಷಿಣ ಭಾರತದ ದ್ರಾವಿಡ ಭಾಷಾ ಬಳಗ. ಭಾರತ ೨೨ ಅಧಿಕೃತ ಭಾಷೆಗಳನ್ನು ಹೊಂದಿದೆ.

೧೯೦೧ ಮತ್ತು ನಂತರದ ಗಣತಿ[ಬದಲಾಯಿಸಿ]


 • ಇಸವಿ -- -ಒಟ್ಟು ಜನಸಂಖ್ಯೆ --ಗ್ರಾಮೀಣ --- --ನಗರ -----ಶೇಕಡವಾರು ಜನಸಂಖ್ಯೆಯ ದರ ಏರಿಕೆ
 • ೧೯೦೧ --೨೩೮,೩೯೬,೩೨೭- ೨೧೨,೫೪೪,೪೫೪- ೨೫,೮೫೧,೫೭೩
 • ೧೯೧೧ --೨೫೨,೦೯೩,೩೯೦- ೨೨೬,೧೫೧,೭೫೭- ೨೫,೯೪೧,೬೩೩
 • ೧೯೨೧ --೨೫೧,೩೫೧,೨೧೩-೨೨೩,೨೩೫,೦೪೩- ೨೮,೦೮೬,೧೭೦
 • ೧೯೩೧ --೨೭೮,೯೭೭,೨೩೮- ೨೪೫,೫೨೧,೨೪೯- ೩೩,೪೫೫,೬೮೬
 • ೧೯೪೧-- ೩೧೮,೬೬೦,೫೮೦-೨೭೫,೫೦೭,೨೮೩- ೪೪,೧೫೩,೨೯೭
 • ೧೯೫೧ --೩೬೨,೦೮೮,೦೯೦-೨೯೮,೬೪೪,೩೮೧- ೬೨,೪೪೩,೭೦೯
 • ೧೯೬೧ --೪೩೯,೨೩೪,೭೭೧- ೩೬೦,೨೯೮,೧೬೮- ೭೮,೯೩೬,೬೦೩- ೨೧.೬%
 • ೧೯೭೧ --೫೪೮,೧೫೯,೬೫೨- ೪೩೯,೦೪೫,೬೭೫- ೧೦೯,೧೧೩,೬೭೭- ೨೪.೮%
 • ೧೯೮೧ --೬೮೩,೩೨೯,೦೯೭- ೬೨೩,೮೬೬,೫೫೦- ೧೫೯,೪೬೨,೫೪೭- ೨೪.೭%
 • ೧೯೯೧ --೮೪೬,೩೦೨,೬೮೮- ೬೨೮,೬೯೧,೬೭೬- ೨೧೭,೬೧೧,೦೧೨- ೨೩.೯%
 • ೨೦೦೧ --೧,೦೨೮೭೩೭,೪೩೬- ೭೪೨,೪೯೦,೬೩೯- ೩೮೬,೧೧೯,೬೮೯- ೨೧.೫%
 • ೨೦೧೧ --೧,೨೧೦,೧೯೩,೪೨೨- </ ಏರಿಕೆ - ೧೭.೬% (ಮುಸ್ಲಿಮರು ಅಂದಾಜು ೧೩.೪%)>
 • ೨೦೧೧ --೧,೨೧,೦೧,೯೩,೪೨೨- ೮೩,೩೦,೮೭,೬೬೨- ೩೭,೭೧,೦೫,೭೬೦- ೬೮.೮೪ ಗ್ರಾಮ- ೩೧.೧೬ನಗರ
 • ೧,೨೧,೦೧,೯೩,೪೨೨- ಪುರುಷರು-೬೨,೩೭,೨೪,೨೪೮; ಮಹಿಳೆಯರು-೫೮,೬೪,೬೯,೧೭೪: - ೧೦೦೦ ಪುರುಷರಿಗೆ ೯೪೩ ಮಹಿಳೆಯರು

ಜನಸಂಖ್ಯೆಯ ಬೆಳವಣಿಗೆ ಮತ್ತು ಹೋಲಿಕೆ[ಬದಲಾಯಿಸಿ]


ಇದು ಜನಸಂಖ್ಯಾ ವಿವರ ಮತ್ತು ಹೋಲಿಕೆ :

 • 1947 ರಲ್ಲಿ ಭಾರತ ವಿಭಜನೆ ಗೊಂಡಾಗ ವಿಭಜಿತ ಭಾರತದ ಜನಸಂಖ್ಯೆ ಕೇವಲ ೩೫೦ ಮಿಲಿಯನ್. (೩೫ ಕೋಟಿ) ೧೯೪೭ ಪೂರ್ವ ಪಾಕಿಸ್ತಾನ ೪.೨೬ ಮಿಲಿಯನ್ +೩.೪೦ಮಿ ಪಶ್ಚಿಮ ಪಾಕಿಸ್ತಾನ =(೭ಕೋಟಿ ೬೬ ಲಕ್ಷ)
 • ೧೯೪೭ ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕಿಸ್ತಾನ :೭೬ ಮಿಲಿಯನ್ ಪಶ್ಚಿಮ ಪಾಕಿಸ್ತಾನ ೩೪೦೦೦೦೦ ಪೂರ್ವ ಪಾಕಿಸ್ತಾನ ೪೨೬೦೦೦೦೦
 • ೧೯೬೭ ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕಿಸ್ತಾನ :೯೪ ಮಿಲಿಯನ್ ಪಶ್ಚಿಮ ಪಾಕಿಸ್ತಾನ ೪೩೦೦೦೦೦೦ ಪೂರ್ವ ಪಾಕಿಸ್ತಾನ ೫೧೦೦೦೦೦೦
 • ೨೦೧೧ / ೨೦೧೨ ರಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಒಟ್ಟು ಜನಸಂಖ್ಯೆ ೩೩೧ ಮಿಲಿಯನ್ :(೩೩ ಕೋಟಿ ೧೦ಲಕ್ಷ )

ಪಶ್ಚಿಮ ಪಾಕಿಸ್ತಾನ (೧೭೦,೦೦೦೦೦೦) ೧೮೦೪೪೦೦೦೫; ಪೂರ್ವ ಪಾಕಿಸ್ತಾನ ೧೬೧,೦೮೩,೮೦೪/ ೧೬೧೦೮೩೮೦೪

 • ೧೯೪೭ವಿಭಜಿತ ಭಾರತದ ಜನಸಂಖ್ಯೆ ೩೫೦,೦೦೦,೦೦೦ (೩೫ಕೋಟಿ)

೨೦೧೧ (ವಿಭಜಿತ) ಈಗಿನ ಭಾರತದ ಜನಸಂಖ್ಯೆ ೧೨೧,೦೧,೯೩,೪೨೨ (೧೨೧ ಕೋಟಿ).

[ರಾಜ್ಯಸಭೆ] ೨೦೧೩ ಸೆಪ್ಟಂಬರ್ ೩[ಬದಲಾಯಿಸಿ]

 • September 04, 2013
 • ಕ್ರ.ಸಂ. ಪಕ್ಷ ಸ್ಥಾನಗಳು
 • 1 ಕಾಂಗ್ರೆಸ್ (ಯು.ಪಿ.ಎ.) (INC) 72
 • 2 ಬಿ.ಜೆ.ಪಿ.(BJP) 49
 • 3 ಬಹುಜನ ಸಮಾಜವಾದಿ ಪಾರ್ಟಿ(ಮಾಯಾವತಿ)(BSP) 15
 • 4 ಕಮ್ಯೂನಿಸ್ಟ್ ಪಾರ್ಟಿ (Marxist) (CPI(M)) 11
 • 5 ಜನತಾ ದಳ (ಶರದ್ ಯಾದವ್) (United) (JD(U)) 9
 • 6 ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (AITC) 9
 • 7 ನಾಮಕರಣ (NOM) 9
 • 8 ಸಮಾಜವಾದಿ ಪಾರ್ಟಿ(ಮುಲಾಯಂ ಸಿಂಗ್) (SP) 9
 • 9 ಪಕ್ಷ ರಹಿತ = ಇತರೆ (IND.) 8
 • 10 ಆಲ್ ಇಂಡಿಯಾ ಅಣ್ಣಾದ್ರಾವಿಡ ಮುನ್ನೇತ್ರ ಕಜಗಮ್ (AIADMK) 7
 • 11 ಬಿಜು ಜನತಾದಳ (ಯು.ಪಿ.ಎ.) (BJD) 6
 • 12 ದ್ರವಿಡ ಮುನ್ನೇತ್ರ ಕಜಗಮ್ (ಯು.ಪಿ.ಎ.) (DMK) 6
 • 13 ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್) (ಯು.ಪಿ.ಎ.) (NCP) 6
 • 14 ಶಿವಸೇನಾ (SಮS) 4
 • 15 ತೆಲಗು ದೇಶಂ ಪಾರ್ಟಿ (TDP) 4
 • 16 ಶಿರೋಮಣಿ ಅಕಾಲಿದಳ (SAD) 3
 • 17 ರಾಷ್ತ್ರೀಯ ಜನತಾದಳ (ಲಾಲೂ ಯಾದವ) (ಯು.ಪಿ.ಎ.) (RJD) 2
 • 18 ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (J&KNC) (ಯು.ಪಿ.ಎ.) 2
 • 19 ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI) 2
 • 20 ಬೋಡೋ ಲ್ಯಾಂಡ್ ಪೀಪಲ್ ಪಾರ್ಟಿ (BPF) 1
 • 21 ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ (AIFB) 1
 • 22 ಇಂಡಿಯನ್ ನ್ಯಾಷನಲ್ ಲೋಕ ದಳ (INLD) (ಯು.ಪಿ.ಎ.) 1
 • 23 ಝಾರ್ಕಂಡ್ ಮುಕ್ತಿ ಮೋರ್ಚಾ (JMM) 1
 • 24 ಕೇರಳ ಕಾಂಗ್ರೆಸ್ (ಮಣಿ) (KC(M)) (ಯು.ಪಿ.ಎ ?.) 1
 • 25 ಲೋಕ ಜನಶಕ್ತಿ ಪಾರ್ಟಿ (LJP) 1
 • 26 ಮಿಜೋ ನ್ಯಾಷನಲ್ ಫ್ರಾಂಟ್ t (MNF) 1
 • 27 ಅಸೋಂಮ್ ಗಣ್ ಪರಿಷತ್ (AGP) 1
 • 28 ನಾಗಾಲ್ಯಾಂಡ್ ಪೀಪಲ್ ಫ್ರಾಂಟ್ (NPF) 1
 • 29 ಸಿಕ್ಕಿಮ್ ಡೆಮೋಕ್ರಾಟಿಕ್ ಫ್ರಾಂಟ್ (SDF) (ಯು.ಪಿ.ಎ ?.) 1
  • ಖಾಲಿ ಸ್ಥಾನ ಗಳು 2
  • ಒಟ್ಟು ಸ್ಥಾನಗಳು 245
  • ಯುಪಿಎ- ೯೭ (ಬಹುಮತಕ್ಕೆ -೧೨೩ಕಡಿಮೆ=೨೬)

೧೯೯೮ ರಿಂದ ೨೦೧೪/2014 ರ ವರೆಗಿನ ಲೋಕಸಭೆ ಚುನಾವಣೆ ಸಾರಾಂಶ[ಬದಲಾಯಿಸಿ]

ವರ್ಷ ಕಾಂಗ್ರೆಸ್.ಸ್ಥಾನ .ಶೇಕಡ ಓಟು. ಹೆಚ್ಚು/ಕಡಿಮೆ ಯು.ಪಿ.ಎ. ಬಿ ಜೆ ಪಿ.ಸ್ಥಾನ .ಶೇಕಡ ಓಟು ಹೆಚ್ಚು/ಕಡಿಮೆ. +/-% ಎನ್.ಡಿ.ಎ
1998 141 25.82% - ೧ 26.14% (26.42) 182  :25.59% +25 --- 37.21%(46.61)
1999(0 114 -- -27 Utd. Ft 28.30% 182 -- -- -- 269+29 TDP;37.06%
2004 145 26.53% 31:+7.1% 218+117 /35.4% 138 22.16% -44 -3.76% ಎನ್.ಡಿ.ಎ(-89: 33.3%)
2009 206 +2 28.55% +80:2.೦2% 262 +63 ಇತರೆ (37.22%) 116 18.80% -22 -3.36% ಎನ್.ಡಿ.ಎ:159:24.63% (:-4.88%)
2009-> ಕಾಂ:ಪಡೆ ದ ಓಟು 153482356 -- ಬಿಜೆಪಿ ಪಡೆದ ಓಟು 102689312 -- -- -- --
2014 1 44 19.4 -9.2 58 283 31.2 116+167 +12.4 ಎನ್.ಡಿಎ.283+54=337

ನೋಡಿ[ಬದಲಾಯಿಸಿ]


ಉಲ್ಲೇಖಗಳು[ಬದಲಾಯಿಸಿ]

 1. "State Emblem -Inscription". ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ ಐ ಸಿ). Retrieved 2007-06-17. 
 2. "National Anthem - Know India portal". ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ ಐ ಸಿ). 2007. Retrieved 2007-08-31. 
 3. "The Union: Official Language". Ministry of Home Affairs, ಭಾರತ ಸರ್ಕಾರ. ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ ಐ ಸಿ). 2007. Retrieved 2009-06-11. 
 4. "Notification No. 2/8/60-O.L., dated 27 April, 1960". Ministry of Home Affairs, ಭಾರತ ಸರ್ಕಾರ. ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ ಐ ಸಿ). Retrieved 2009-06-11. 
 5. ೫.೦ ೫.೧ "India at a Glance". Know India Portal. ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ ಐ ಸಿ). Retrieved 2007-12-07. 
 6. "India at a glance: Population". Census of India, 2001. Government of India. Retrieved 2009-04-25. 
 7. ೭.೦ ೭.೧ "India". International Monetary Fund. Retrieved 2009-04-22. 
 8. "Total Area of India" (PDF). Country Studies, India. Library of Congress Federal Research Division. December 2004. Retrieved 2007-09-03. "The country’s exact size is subject to debate because some borders are disputed. The Indian government lists the total area as 3,287,260 square kilometres and the total land area as 3,060,500 square kilometres; the United Nations lists the total area as 3,287,263 square kilometres and total land area as 2,973,190 square kilometres." 

Current Population Of India 1,065,070,607 (July 2004 est.) Population Density of India 324 persons per square kilometre Age structure 0 to 14 years 31.7% (male 173,869,856; female 164,003,915) 15 to 64 years 63.5% (male 349,785,804; female 326,289,402) 65 years and over 4.8% (male 25,885,725; female 25,235,905) (2004 estimate) Median age Total 24.4 years Male 24.4 years female 24.4 years (2004 est.) Population growth rate 1.44% (2004 est.) Birth rate 22.8 births/1,000 population (2004 est.) Death rate 8.38 deaths/1,000 population (2004 est.) Net migration rate -0.07 migrant(s)/1,000 population (2004 est.) Infant mortality rate Total 57.92 deaths/1,000 live births Female 57.29 deaths/1,000 live births (2004 est.) Male 58.52 deaths/1,000 live births Life expectancy at birth Total population 63.99 years Male 63.25 years Female 64.77 years (2004 est.) Total fertility rate 2.85 children born/woman (2004 est.) HIV / AIDS Adult prevalence rate 0.8% (2001 est.) People living with HIV / AIDS 3.97 million (2001 est.) Deaths because of HIV / AIDS 310,000 (2001 est.) Nationality Noun Indian(s) Adjective Indian Ethnic groups Indo-Aryan 72% Dravidian 25% Mongoloid and other's 3% (2000) Religions Hindu 81.3% Muslim 12% Christian 2.3% Sikh 1.9% Other groups including Buddhist, Jain, Parsi 2.5% (2000) Languages English enjoys associate status but is the most important language for national, political, and commercial communication; Hindi is the official language and primary tongue of 30% of the people; there are 14 other official languages: Bengali, Telugu, Marathi, Tamil, Urdu, Gujarati, Malayalam, Kannada, Oriya, Punjabi, Assamese, Kashmiri, Sindhi, and Sanskrit; Hindustani is a popular variant of Hindi/Urdu spoken widely throughout northern India but is not an official language. Literacy Rate (Definition: Age 15 and over that can read and write) Total Population 59.5% Male 70.2% Female 48.3% (2003 est.)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"http://kn.wikipedia.org/w/index.php?title=ಭಾರತ&oldid=521883" ಇಂದ ಪಡೆಯಲ್ಪಟ್ಟಿದೆ