ಇಬ್ರಾಹಿಂ ಎನ್. ಸುತಾರ್
ಇಬ್ರಾಹಿಂ ಸುತಾರ್ | |
---|---|
Born | ಮಹಾಲಿಂಗಪುರ[೧] | ೧೦ ಮೇ ೧೯೪೦
Died | 5 February 2022 | (aged 81)
Citizenship | ಭಾರತೀಯ |
Education | ತರಗತಿ 3[೧] |
Occupation | ನೇಕಾರ[೧] |
Known for | ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿ ಕಳೆದ 40 ವರ್ಷಗಳಿಂದ ತಮ್ಮ ಹಾಡುಗಳು ಮತ್ತು ಭಜನೆಗಳ ಮೂಲಕ ಸಾಮಾಜಿಕ ಮತ್ತು ಕೋಮು ಸೌಹಾರ್ದತೆಯನ್ನು ಹರಡಲು ಹೆಸರುವಾಸಿಯಾಗಿದ್ದಾರೆ[೧] |
Spouse | ಮಾರೆಂಬಿ[೧] |
Children | ಹುಮಾಯೂನ್ ಸುತಾರ್ ಮತ್ತು ಇತರ ಇಬ್ಬರು ಮಕ್ಕಳು[೧][೨] |
Website | www |
ಇಬ್ರಾಹಿಂ ಎನ್. ಸುತಾರ್ (ಇಬ್ರಾಹಿಂ ನಬೀ ಸಾಹೇಬ್ ಸುತಾರ್) (೧೦ ಮೇ ೧೯೪೦ - ೦೫ ಫೆಬ್ರವರಿ ೨೦೨೨[೩]) ವೈದಿಕ, ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ಉಂಟು ಮಾಡಿದ ತತ್ವಪದಕಾರ ಮತ್ತು ಪ್ರವಚನಕಾರಾಗಿದ್ದರು. ಇವರಿಗೆ ೨೦೧೮ರ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲಾಗಿದೆ.[೪]
ಬದುಕು
[ಬದಲಾಯಿಸಿ]ಇವರ ತಂದೆ ಮಹಾಲಿಂಗಪುರದ ನಬಿಸಾಹೆಬ್ , ತಾಯಿ ಅಮೀನಾಬಿ. ಬಡತನದಿಂದಾಗಿ ಶಿಕ್ಷಣ ಮೂರನೇ ತರಗತಿಯವರೆಗೆ ಮಾತ್ರ ಕಲಿತರು. ನಂತರ ನೇಕಾರಿಕೆ ಕಲಿತು ಬದುಕು ಸಾಗಿಸತೊಡಗಿದರು.
ಬಾಲ್ಯದಲ್ಲಿ ಮಸೀದಿಯಲ್ಲಿ ನಮಾಜು , ಕಲಿತು ಕುರಾನ್ ಅಧ್ಯಯನ ಮಾಡಿದರು. ಬೇರೆ ಧರ್ಮಗಳನ್ನು ತಿಳಿಯಬಯಸಿದರು. ಊರಿನ ಭಜನಾಸಂಘದಲ್ಲಿ ಪಾಲುಗೊಳ್ಳುವ ಮೂಲಕ ತತ್ವಪದ , ವಚನಗಳನ್ನು ಕಲಿತರು. ಪ್ರವಚನಗಳನ್ನು ಕೇಳಿದರು. ನಿಜಗುಣಯೋಗಿಗಳ ಶಾಸ್ತ್ರ , ಭಗವದ್ಗೀತೆಗಳ ಅಧ್ಯಯನ ಮಾಡಿದರು.
ದೇವರು , ಧರ್ಮ ಬೇರೆ ಆದರೂ ಸತ್ಯ ಒಂದೇ ಎಂದು ಅರಿತರು. ೧೯೮೦ರಲ್ಲಿ ಪ್ರವಚನಗಳನ್ನು ಕೊಡಲು ಆರಂಬಿಸಿದರು
ಸಾಧನೆಗಳು
[ಬದಲಾಯಿಸಿ]ಮಹಾತ್ಮ ಕಬೀರರಂತೆ ಇವರು ಜನರಲ್ಲಿ ಭಾವೈಕ್ಯತೆಯನ್ನು ಉಂಟು ಮಾಡುತ್ತಿದ್ದಾರೆ.
ಇವರ ಭಜನೆ ತತ್ವಪದಗಳ ಸುರುಳಿಗಳು ಬಿಡುಗಡೆ ಆಗಿವೆ. 'ನಾವೆಲ್ಲಾ ಭಾರತೀಯರು' ಎಂಬುದು ಅವರ ಕವನ ಸಂಕಲನ.
ಪ್ರಶಸ್ತಿಗಳು
[ಬದಲಾಯಿಸಿ]- ೧೯೯೫ ರಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ.
- ೨೦೧೮ರಲ್ಲಿ ಭಾರತ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ
ಇದನ್ನು ಸಹ ನೋಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ ೧.೫ "Two from Karnataka get Padma honour". Deccan Herald (in ಇಂಗ್ಲಿಷ್). 26 January 2018. Retrieved 17 December 2019.
- ↑ "For this Sufi saint, harmony begins at home". The New Indian Express. Retrieved 17 December 2019.
- ↑ "ಹೃದಯಾಘಾತದಿಂದ ಪ್ರವಚನಕಾರ ಇಬ್ರಾಹಿಂ ಸುತಾರ ನಿಧನ". ಪ್ರಜಾವಾಣಿ. ಪ್ರಜಾವಾಣಿ. Retrieved 5 February 2022.
- ↑ "Two from Karnataka get Padma honour". www.deccanherald.com. Retrieved 23 February 2018.