ವಚನ ಸಾಹಿತ್ಯ

ವಿಕಿಪೀಡಿಯ ಇಂದ
(ವಚನ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಚನ ಎಂದರೆ 'ಪ್ರಮಾಣ' ಎಂದರ್ಥ - ಕನ್ನಡದ ಸಾಹಿತ್ಯ ರೂಪಗಳಲ್ಲಿ ಬಹು ಪ್ರಮುಖವಾದದ್ದು. ಇದು ಸಾಹಿತ್ಯ ಪರಿಭಾಷೆಯಾಗಿ ಒಂದು ಪ್ರಕಾರದ ಕಾವ್ಯ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶಿಷ್ಟ ಕಾವ್ಯ ಪ್ರಕಾರ. ವಚನ ಸಾಹಿತ್ಯವು ಲಿಂಗಾಯತರ ಆಂದೋಲನ ಮತ್ತು ಅಭಿವ್ಯಕ್ತಿಗೆ ಸಂಗಾತಿಯಾಯಿತು.

ಪರಿವಿಡಿ

ಇತಿಹಾಸ [ಬದಲಾಯಿಸಿ]

೧೨ನೇ ಶತಮಾನದಲ್ಲಿ ಉದಯಿಸಿದ ಧರ್ಮ ಪ್ರೇರಿತ ಸಾಹಿತ್ಯವಾದ ವಚನವು, ಕನ್ನಡದ ಪ್ರಾಚೀನ ಸಾಹಿತ್ಯದಡಿಯಲ್ಲಿ ವರ್ಗಾಯಿಸಲ್ಪಟ್ಟಿದೆ. ಸ್ವಂತಿಕೆಯಿಂದ ಮೆರೆವ ವಚನಗಳು ಕನ್ನಡ ಸಾಹಿತ್ಯದಲ್ಲಿ ಪ್ರಭಾವಶಾಲೀ ಆತ್ಮವಿಮರ್ಶೆಯ ಮಾಧ್ಯಮವಾಗಿ ಸ್ವತಂತ್ರವಾಗಿ ಬೆಳೆದು ವಿಜೃಂಭಿಸಿ ಮುಂದಿನ ಸಾಹಿತ್ಯ ಪರಂಪರೆಗಳ ಮೇಲೆ ಪ್ರಭಾವ ಬೀರಿ ವಿಶ್ವಸಾಹಿತ್ಯದಲ್ಲೂ ಒಂದು ಅವಿಭಾಜ್ಯ ಅಂಗವಾಗಿದೆ.ವಚನ ಸಾಹಿತ್ಯವನ್ನು ಗುರು ಬಸವಣ್ಣನವರು ಮತ್ತು ಅವರ ಸಮಕಾಲೀನ ಶರಣರು ನೀಡಿದರು.

ಪರಿಣಾಮ [ಬದಲಾಯಿಸಿ]

ಸಮಾಜದ ಎಲ್ಲಾ ಜಾತಿಯವರೂ ವಚನವನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡು, ತಮ್ಮ ಅನುಭವಗಳನ್ನು ಹೇಳಿಕೊಳ್ಳತೊಡಗಿದ್ದರಿಂದ ವಚನ ಸಾಹಿತ್ಯ ಒಂದು ಚಳವಳಿಯೂ ಆಯಿತು. ಬಂಡಾಯ ಸಾಹಿತ್ಯಕ್ಕಿಂತ ಮೊದಲು ಕನ್ನಡ ನಾಡಿನಲ್ಲಿ ವಚನ ಒಂದು ಚಳವಳಿಯ ಮುಖವಾಣಿಯಾಗಿತ್ತೆಂದರೆ ಅದರ ಸಾಮಾಜಿಕ ವ್ಯಾಪಕತೆ ಅಪಾರವಾದುದೆಂಬುದು ಅರಿವಿಗೆ ಬಾರದೆ ಇರದು. ವಚನಗಳು ಅತ್ಯಂತ ಸರಳ ಹಾಗೂ ನೇರವಾಗಿವೆ.

ಹಲವಾರು ಕವಿಗಳು, ಮಠಾಧೀಶರು ವೀರಶೈವ ಸಿದ್ಧಾಂತವನ್ನು ಅಳವಡಿಸಿ ಸಾಹಿತ್ಯ ರಚಿಸಿದ್ದರೂ, ಇಡೀ ಲಿಂಗಾಯತ ಸಾಹಿತ್ಯದಲ್ಲಿ ಮುಖ್ಯ ಮತ್ತು ಅಪರೂಪದ ಅಭಿವ್ಯಕ್ತಿಯೆಂದರೆ ವಚನ ಸಾಹಿತ್ಯ. ಅದು ಸ್ಥಾವರ ಸಮಾಜವನ್ನು ತಿರಸ್ಕರಿಸಿ ಜಂಗಮ ಸಮಾಜವನ್ನು ನಂಬಿದ ಬಹಳ ದೊಡ್ಡ ಮಾನವೀಯ ಮೌಲ್ಯ. ಕಾಯಕ ಮತ್ತು ದಾಸೋಹಗಳ ಮೂಲಕ ಸಮಾಜೋತ್ಪನ್ನಗಳ ಸಮಪಾಲು ಸಿದ್ಧಾಂತವನ್ನು ಮಂಡಿಸುವ ಈ ಚಳವಳಿ ಭಾರತೀಯ ಸಂಸ್ಕ್ರಿತಿಯಲ್ಲೇ ಅತಿ ಮುಖ್ಯವಾದುದು.

ಪ್ರಮುಖ ವಚನಕಾರರು [ಬದಲಾಯಿಸಿ]

ವಚನ ಸಾಹಿತ್ಯದ ಶ್ರೀಮಂತನಕ್ಕೆ ನೂರಾರು ಶರಣರು ಶ್ರಮಿಸಿದ್ದಾರೆ. ತಮ್ಮ ವಚನಗಳಲ್ಲಿ ತಮ್ಮದೇ ಆದ ಅಂಕಿತನಾಮಗಳನ್ನು ಬಳಸಿದ್ದಾರೆ. ಜೇಡರ ದಾಸಿಮಯ್ಯ 'ರಾಮನಾಥ' ಎಂದು ಬಳಸಿದರೆ, ಅಕ್ಕಮಹಾದೇವಿಯು 'ಚೆನ್ನಮಲ್ಲಿಕಾರ್ಜುನ' ಹಾಗು ಬಸವಣ್ಣನವರು 'ಕೂಡಲ ಸಂಗಮದೇವ'ಮತ್ತು 'ಲಿಂಗದೇವ' ಎಂದು ಬಳಸಿದ್ದಾರೆ. ಮತ್ತಿತರ ಸುಪ್ರಸಿದ್ಧ ವಚನಕಾರರೆಂದರೆ: ಅಲ್ಲಮ ಪ್ರಭು, ಅಂಬಿಗರ ಚೌಡಯ್ಯ, ಮಾದಾರ ಚೆನ್ನಯ್ಯ, ಸೂಳೆ ಸಂಕವ್ವೆ, ಏಕಾಂತ ರಾಮಯ್ಯ, ಹಡಪದ ಅಪ್ಪಣ್ಣ, ಒಕ್ಕಲು ಮಾದಯ್ಯ, ಮಡಿವಾಳ ಮಾಚಯ್ಯ,ಅದಕ್ಕಿ ಲಕ್ಕಮ, ಹೆಂಡದ ಮಾರಯ್ಯ ಮುಂತಾದ ೧೫೦ಕ್ಕೂ ಹೆಚ್ಚು ಶರಣರು ೫೦ಕ್ಕೂ ವೈವಿಧ್ಯಮಯ ಕಸುಬುಗಳಲ್ಲಿ ತೊಡಗಿದ್ದವರಾಗಿದ್ದರು.

ಒಂದು ತುಣುಕು [ಬದಲಾಯಿಸಿ]


ಅಲ್ಲಮ ಪ್ರಭುಗಳ ವಚನದ ಒಂದು ಸಣ್ಣ ತುಣುಕು ಹೀಗಿದೆ:

ಹೊನ್ನು ಮಾಯೆಯೆಂಬರು,
ಹೆಣ್ಣು ವಮಾಯೆಯೆಂಬರು,
ಮಣ್ಣು ಮಾಯೆಯೆಂಬರು
ಹೊನ್ನು ಹೆಣ್ಣು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಶೆಯೇ ಮಾಯೆ ಕಾಣ ಗುಹೇಶ್ವರ ||

ಸಂಕೀರ್ಣ ವ್ಯಕ್ತಿತ್ವವನ್ನು ಪಡೆದು ಬಾಳಿದ ಮಹಾಯೋಗಿಯಾದ ಪ್ರಭುಗಳ ಅನುಭವದ ತೀವ್ರತೆಯು ತಮ್ಮ ಈ ಸಣ್ಣ ವಚನವೇ ಸಾರಿ ಹೇಳುತ್ತದೆ.

ಇತರೆ ವಿಕಿಮೀಡಿಯ ಯೋಜನೆಗಳಲ್ಲಿ ವಚನ ಸಾಹಿತ್ಯ [ಬದಲಾಯಿಸಿ]

ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ ಹೆಣ್ಣು ಮಾಯೆಯೆಂಬರು, ಹೆಣ್ಣು ಮಾಯೆಯಲ್ಲ ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ ಮನದ ಮುಂದಣ ಆಸೆಯೆ ಮಾಯೆ ಕಾಣ ಗುಹೇಶ್ವರ ||

ಸಾವನ್ನಕ್ಕ ಸರಸ ಮಾಡಿದರೆ ಇನ್ನುಕಾನದುವ ದಿನವಾವುದು? ಬಾಳುವನ್ನಕ್ಕರ ಭಜಿಸುತ್ತಿದ್ದರೆ ತಾನಹ ದಿನವಾವುದು? ಅರ್ಥವುಳ್ಳನ್ನಕ್ಕರ ಅರಿವುತ್ತಿದ್ದರೆ ನಿಜವನೈದುವ್ ದಿನವಾವುದು? ಕಾರ್ಯಕ್ಕೆ ಬಂದು ಕಾರ್ಯ ಕೈಸಾರಿದ ಬಳಿಕ ಇನ್ನು ಮರ್ತ್ಯಲೋಕದ ಹಂಗೇಕೆ?

ಬಾಹ್ಯ ಸಂಪರ್ಕಗಳು [ಬದಲಾಯಿಸಿ]