ಇಂಡೀನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಂಡೀನ್

ಇಂಡೀನ್ ಬಣ್ಣವಿಲ್ಲದ ದ್ರವರೂಪದ ಹೈಡ್ರೋಕಾರ್ಬನ್. ಇದರ ರಾಸಾಯನಿಕ ನಾಮ ಬೆಂಜ಼ೋಸೈಕ್ಲೊಪೆಂಟಡೀನ್ C9H8.

ಗುಣಗಳು[ಬದಲಾಯಿಸಿ]

181o ಸೆಂ.ಗ್ರೇ. ಉಷ್ಣತೆಯಲ್ಲಿ ಕುದಿಯುತ್ತದೆ. -2o ಸೆಂ.ಗ್ರೇ. ಉಷ್ಣತೆಯಲ್ಲಿ ಘನೀಭವಿಸುತ್ತದೆ.

ತಯಾರಿಕೆ ಮತ್ತು ಉಪಯೋಗಗಳು[ಬದಲಾಯಿಸಿ]

ಕಲ್ಲಿದ್ದಲನ್ನು ವಿಧ್ವಂಸಕ ಬಟ್ಟಿ ಇಳಿಸುವ (ಡಿಸ್ಟ್ರಕ್ವಿವ್ ಡಿಸ್ಟಿಲ್ಲೇಷನ್) ವಿಧಾನದಿಂದ ದೊರೆವ ಲೈಟ್ ಆಯಿಲ್ ಅಂಶದಿಂದ (ಲೈಟ್ ಆಯಿಲ್ ಫ್ರ್ಯಾಕ್ಷನ್) ಇದನ್ನು ಪಡೆಯಬಹುದು. ಕೆಲವು ಪೆಟ್ರೋಲಿಯಂ ಅಂಶಗಳ ಉತ್ತಾಪವಿಚ್ಛೇದನೆಯಿಂದಲೂ (ಪೈರೋಲಿಸಿಸ್) ಇದನ್ನು ಪಡೆಯಬಹುದು. ಸೈಕ್ಲೊಪೆಂಟಡೀನನ್ನು ಇದು ಹೋಲುವುದಾದರೂ ಅದರ ಮೆಥಿಲೀನ್ (CH2) ಗುಂಪಿನ ಹೈಡ್ರೊಜನ್ನಿಗೆ (ಜಲಜನಕ) ಬದಲಾಗಿ ಒಂದು ಸೋಡಿಯಂ ಅಣು ಇರುತ್ತದೆ. ಇಂಡೀನನ್ನು ಉತ್ಕರ್ಷಿಸಿದರೆ ಥ್ಯಾಲಿಕ್ ಆಮ್ಲವೂ ಅಪಕರ್ಷಿಸಿದರೆ ಇಂಡಾನ್ (C9H10) ಎಂಬ ಹೈಡ್ರೋಕಾರ್ಬನ್ನೂ ಉಂಟಾಗುತ್ತದೆ. ಆಮ್ಲದ ಜೊತೆ ಇಂಡೀನ್ ಬಹ್ವಂಗೀಕರಣಗೊಳ್ಳುತ್ತದೆ (ಪಾಲಿಮರೈಜ಼್) ಬೆಂಜ಼ೋಪ್ಯುರಾನಿನ ಜೊತೆಯಲ್ಲಿಯೇ ಸಹ ಬಹ್ವಂಗೀಕಾರಕಗಳನ್ನು (ಕೋಪಾಲಿಮರ್ಸ್) ಅಲ್ಪ ಪ್ರಮಾಣದಲ್ಲಿ ತಯಾರಿಸಲಾಗಿದ್ದು ಅವನ್ನು ಲೇಪನಕಾರ್ಯದಲ್ಲೂ ನೆಲಕ್ಕೆ ಹೊದಿಕೆಗಳನ್ನು ಕೊಡುವಲ್ಲೂ ಉಪಯೋಗಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

[೧] [೨] [೩]

  1. https://books.google.co.in/books?isbn=313172031X
  2. https://books.google.co.in/books?isbn=0080542727
  3. https://books.google.co.in/books?isbn=3131722819
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಇಂಡೀನ್&oldid=1159531" ಇಂದ ಪಡೆಯಲ್ಪಟ್ಟಿದೆ