ಆಂಟಿಮೊನಿ
ವಿಕಿಪೀಡಿಯ ಇಂದ
ಆಂಟಿಮೊನಿ ಅಥವಾ ಸ್ಟಿಬಿಯಮ್ ಒಂದು ಮೂಲಧಾತು ಲೋಹ.ಇದು ಪ್ರಾಚೀನ ಕಾಲದಿಂದಲೂ ಪ್ರಪಂಚದ ವಿವಿಧ ದೇಶಗಳಲ್ಲಿ ಉಪಯೋಗದಲ್ಲಿದ್ದ ಬಗ್ಗೆ ಹಲವಾರು ಉಲ್ಲೇಖಗಳಿವೆ.ಇದು ಬಹುತೇಕ ಗಂಧಕದೊಂದಿಗೆ ಬೆರೆತ ರೂಪದಲ್ಲಿ ಭೂಮಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತದೆ.ವಿದ್ಯುತ್ ತಂತಿಗಳ ತಯಾರಿಕೆಯಲ್ಲಿ,ಬ್ಯಾಟರಿಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ.ಕೆಲವು ಔಷಧಗಳ ತಯಾರಿಕೆಯಲ್ಲಿಯೂ ಉಪಯೋಗದಲ್ಲಿದೆ.