ವಿಷಯಕ್ಕೆ ಹೋಗು

ಅಕಿರಾ ಕುರೋಸಾವಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಕಿರಾ ಕುರೋಸಾವಾ

ಅಕಿರಾ ಕುರೋಸಾವಾ (黒澤 明 Kurosawa Akira, ಹಾಗೂ 黒沢 明) (ಮಾರ್ಚ್ ೨೩, ೧೯೧೦ಸೆಪ್ಟೆಂಬರ್ ೬, ೧೯೯೮)ಜಪಾನಿನ ಪ್ರಮುಖ ನಿರ್ದೇಶಕ, ನಿರ್ಮಾಪಕ, ಹಾಗೂ ಚಿತ್ರಕಥಾ ಲೇಖಕರಾಗಿದ್ದರು. ಇವರ ಚಿತ್ರಗಳು ಜಗತ್ತಿನಾದ್ಯಂತ ಪರಿಣಾಮಕಾರಿ ಮತ್ತು ಶ್ರೇಷ್ಠ ಚಿತ್ರಗಳಲ್ಲಿ ಕೆಲವಾಗಿ ಗುರುತಿಸಲಾಗುತ್ತದೆ. ವಿಶ್ವದಾದ್ಯಂತ ಹಲವಾರು ಪ್ರಸಿದ್ಧ ನಿರ್ದೇಶಕರಿಗೆ ಇವರ ಚಿತ್ರಗಳು ಪ್ರೇರಣೆಯಾಗಿವೆ. ೧೯೪೩ರಲ್ಲಿ ತಮ್ಮ ೩೩ನೇ ವಯಸ್ಸಿನಲ್ಲಿ 'ಸಂಶಿರೋ ಸುಗಾತಾ' ಚಿತ್ರದಿಂದ ನಿರ್ದೇಶನ ಪ್ರಾರಂಭಿಸಿದ ಇವರ ಕೊನೆಯ ಚಿತ್ರ 'ಮದದಾಯೋ' ೧೯೯೯ರಲ್ಲಿ (ಮರಣಾನಂತರ) ಹೊರಬಂದದ್ದು. ಪ್ರಾಚೀನ ಜಪಾನ್ ಕುರಿತು ಇವರು ನಿರ್ದೇಶಿಸಿದ ಹಲವು ಚಿತ್ರಗಳು ಇಂದಿಗೂ ಸಹೃದಯಿಗಳ ಮೆಚ್ಚುಗೆ ಪಡೆದಿವೆ. ಅವುಗಳಲ್ಲಿ ದಿ ಸೆವೆನ್ ಸಮುರಾಯ್, ಸಂಜುರೋ, ಕಾಗೆಮುಶಾ ಕೆಲವು.

ಮಿಲಿಟರಿ ರಾಜ್ಯಭಾರದ ಜಪಾನ್‌ನಲ್ಲಿ ಬೆಳೆದ ಕುರೋಸಾವಾ, ವಿಶ್ವ ಮಹಾ ಯುದ್ಧ, ಕೆಂಟೋ ಭೂಕಂಪದಿಂದ ತತ್ತರಿಸಿದ ಜಪಾನ್ ನಲ್ಲಿ ತಮ್ಮ ವೃತ್ತಿಯ ಶಿಖರವನ್ನು ತಲುಪಿದವರು, ಕಷ್ಟಕರವಾದ ಕಾಲದಲ್ಲಿ ಛಲದಿಂದ ಮುಂದೆ ಬಂದವರು. ಓದು ಮುಗಿದ ನಂತರ ಹಲವು ದಿನಗಳ ಕಾಲ ಚಿತ್ರ ಕಲಾವಿದನಾಗಿ ದಿನ ಕಳೆದ ಕುರೋಸಾವಾ, ದೃಶ್ಯಕಲೆಯಲ್ಲಿ ಅಪಾರ ಪರಿಣಿತಿಯನ್ನು ಹೊಂದಿದ್ದುದು ಅವರ ಚಿತ್ರಗಳಲ್ಲಿ ಕಂಡುಬರುತ್ತದೆ.

ಪ್ರೇರಣೆ

[ಬದಲಾಯಿಸಿ]

ಜಾರ್ಜ್ ಲ್ಯೂಕಾಸ್, ಫ್ರಾಂಸಿಸ್ ಫೋರ್ಡ್ ಕೊಪ್ಪಲಾ, ಸ್ಟೀವನ್ ಸ್ಪೀಲ್ಬರ್ಗ್ ಮುಂತಾದ ವಿಶ್ವವಿಖ್ಯಾತ ನಿರ್ದೇಶಕರಿಗೆ ಇವರು ಪ್ರೇರಣೆಯಾಗಿದ್ದರು. ಇದನ್ನೇ ಸೂಚಿಸುವೆಂಬಂತೆ, ೧೯೮೦ರಲ್ಲಿ ಕುರೋಸಾವಾ ಹಲವು ದಿನಗಳ ನಂತರ ಮತ್ತೊಂದು ಚಿತ್ರವನ್ನು ನಿರ್ದೇಶಿಸಲು ಬಯಸಿದಾಗ ಜಾರ್ಜ್ ಲ್ಯೂಕಾಸ್, ಫ್ರಾಂಸಿಸ್ ಫೋರ್ಡ್ ಕೊಪ್ಪಲಾರವರು ಜೊತೆಯಾಗಿ ಮುಂದೆ ಬಂದು 'ಕಗೆಮುಶಾ' (ನೇಪಥ್ಯದ ಯೋಧ) ಚಿತ್ರಕ್ಕೆ ಹಣದ ನೆರವು ನೀಡಿದರಂತೆ. ಇವರ ಚಿತ್ರ 'ಸೆವೆನ್ ಸಮುರಾಯ್' ಹಿಂದಿಯ 'ಶೋಲೆ', ಮತ್ತು ಇಂಗ್ಲೀಷಿನ 'ಮ್ಯಾಗ್ನಿಫಿಸಿಯೆಂಟ್ ಸೆವೆನ್' ಚಿತ್ರಗಳಿಗೆ ಸ್ಪೂರ್ತಿಯಾಗಿದೆ.

ಸ್ಫೂರ್ತಿ

[ಬದಲಾಯಿಸಿ]

ಕುರೊಸಾವಾ, ಪಾಶ್ಚಿಮಾತ್ಯ ಸಾಹಿತ್ಯವನ್ನು ಬಹಳವಾಗಿ ಅಧ್ಯಯನ ಮಾಡಿದವರು. ವಿಲ್ಲಿಯಮ್ ಷೇಕ್‍ಸ್ಪಿಯರ್ ನ ಹಲವು ನಾಟಕಗಳ ಸೊಬಗು ಅಲ್ಲಲ್ಲಿ ಕುರೊಸಾವಾರವರ ಚಿತ್ರಗಳಲ್ಲೂ ಮೂಡಿ ಬರುತ್ತದೆ.

ದಂತ ಕಥೆ

[ಬದಲಾಯಿಸಿ]

ಕುರೊಸಾವಾರವರಿಗೆ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಇವರ ಚಿತ್ರ 'ಡೆರ್ಸು ಉಝಾಲಾ' (Dersu Uzala), ಉತ್ತಮ ವಿದೇಶೀ ಚಿತ್ರ ಪ್ರಶಸ್ತಿಯನ್ನು ಪಡೆಯಿತು. ಇದಲ್ಲದೆ, ಇವರ ಸಾಧನೆಯನ್ನು ಗುರುತಿಸಲು ಆಸ್ಕರ್ ನ 'ಅಜೀವ ಸಾಧನೆ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ.

ಚಿತ್ರಗಳು

[ಬದಲಾಯಿಸಿ]

ಇವನ್ನೂ ನೋಡಿ

[ಬದಲಾಯಿಸಿ]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]