ಡ್ರಾಮಾ ಜೂನಿಯರ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡ್ರಾಮಾ ಜೂನಿಯರ್ಸ್ ಒಂದು ಕನ್ನಡ ಭಾಷೆಯ ಪ್ರತಿಭಾ ಅನ್ವೇಷಣೆಯ ರಿಯಾಲಿಟಿ ಶೋ ಆಗಿದೆ. ಇದರಲ್ಲಿ 4 ರಿಂದ 14ರ ವಯಸ್ಸಿನ ಮಕ್ಕಳು ಭಾಗವಹಿಸುತ್ತಾರೆ. [೧] [೨] ಇದು 30 ಏಪ್ರಿಲ್ 2016 ರಂದು ಪ್ರಥಮ ಬಾರಿಗೆ ಝೀ ಕನ್ನಡದಲ್ಲಿ ಪ್ರಸಾರವಾಯಿತು. ಮೊದಲ ಸೀಸನ್‌ನಲ್ಲಿ ಜಂಟಿ ವೀಜೇತರಾಗಿ ಪುಟ್ಟರಾಜು ಮತ್ತು ಚಿತ್ರಾಲಿ ಹೊರಹೊಮ್ಮಿದರು [೩].

ಡ್ರಾಮಾ ಜೂನಿಯರ್ಸ್ ಕನ್ನಡ
ಶೈಲಿರಿಯಾಲಿಟಿ ಶೋ
ನಿರ್ದೇಶಕರುಶರಣಯ್ಯ
ಪ್ರಸ್ತುತ ಪಡಿಸುವವರುಮಾಸ್ಟರ್ ಆನಂದ್
ನ್ಯಾಯಾಧೀಶರು
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ಸ್ಥಳ(ಗಳು)ಬೆಂಗಳೂರು,ಕರ್ನಾಟಕ
ಪ್ರಸಾರಣೆ
ಮೂಲ ವಾಹಿನಿಝೀ ಕನ್ನಡ
ಮೂಲ ಪ್ರಸಾರಣಾ ಸಮಯ30 ಏಪ್ರಿಲ್ 2016 (2016-04-30) – 9 ಅಕ್ಟೋಬರ್ 2016 (2016-10-09)
ಕಾಲಕ್ರಮ
ಸಂಬಂಧಿತ ಪ್ರದರ್ಶನಗಳುಇಂಡಿಯಾಜ಼್ ಬೆಸ್ಟ್ ಡ್ರಾಮೆಬಾಜ್ (ಹಿಂದಿ ಷೋ)
ಜೂನಿಯರ್ ಸೂಪರ್ ಸ್ಟಾರ್

ಕಾರ್ಯಕ್ರಮದ ಒಳನೋಟ[ಬದಲಾಯಿಸಿ]

ಸರಿಗಮಪ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಂತಹ ರಿಯಾಲಿಟಿ ಶೋಗಳು ಸಂಗೀತ ಮತ್ತು ನೃತ್ಯಗಳ ಮೇಲೆ ಕೇಂದ್ರಿಕೃತವಾಗಿದೆ. ಆದರೆ, ಡ್ರಾಮ್ ಜೂನಿಯರ್ಸ್ ಕಾರ್ಯಕ್ರಮವು ಸ್ವಲ್ಪ ಭಿನ್ನವಾಗಿ ನಟನೆಯ ಮೇಲೆ ಕೇಂದ್ರೀಕರಿಸಿದೆ. ಈ ಕಾರ್ಯಕ್ರಮವು ಸಣ್ಣ ವಿಡಂಬನೆಯನ್ನು ನಟನೆ ಮಾಡಿ ತೋರಿಸಬಲ್ಲ ಮಕ್ಕಳ ಕುರಿತಾದ ಕಾರ್ಯಕ್ರಮವಾಗಿದೆ.

ಡ್ರಾಮ ಜೂನಿಯರ್ಸ್ ಸೀಸನ್ ೫ರ ವೀಜೆತರಿಗೆ ೨೫ ಲಕ್ಷ ರೂಪಾಯಿ ಬೆಲೆಬಾಳುವ ೩೦*೪೦ ಸೈಟ್ ಬಹುಮಾನವಾಗಿ ದೊರಕಿದೆ. ಈ ಸೀಸನ್‌ನ ಮೊದಲ ರನ್ನರ್ ಆಫ್‌ಗೆ ೩ ಲಕ್ಷ ರೂಪಾಯಿಗಳು ಮತ್ತು ಎರಡನೇ ರನ್ನರ್ ಆಫ್‌ಗೆ ೧ ಲಕ್ಷ ರೂಪಾಯಿಗಳು ದೊರಕಿದೆ[೪].

ಸೀಸನ್ ೫ರ ರಂಗ ಮೇಷ್ಟ್ರುಗಳಾಗಿ ಅರುಣ್‌ ಸಾಗರ್‌ ಮತ್ತು ರಾಜು ತಾಳಿಕೋಟೆ ಕೆಲಸ ಮಾಡಿದ್ದಾರೆ.

ಸೀಸನ್‌ಗಳು[ಬದಲಾಯಿಸಿ]

ಸೀಸನ್ ಪ್ರಥಮ ಪ್ರಸಾರ ನಿರೂಪಕರು ತೀರ್ಪುಗಾರರು ವೀಜೇತರು ರನ್ನರ್ಸ್ ಅಪ್ ಕೊನೆಯ ಪ್ರಸಾರ ಸಂಚಿಕೆಗಳು ಇತರೆ ಟಿಪ್ಪಣಿ
1 30 ಏಪ್ರಿಲ್ 2016 ಮಾಸ್ಟರ್ ಆನಂದ್ ಲಕ್ಷ್ಮೀ, ಟಿ.ಎನ್ ಸೀತಾರಾಂ ಮತ್ತು ವಿಜಯ ರಾಘವೇಂದ್ರ ಪುಟ್ಟರಾಜು ಹಗರ್ ಮತ್ತು ಚಿತ್ರಾಲಿ ತೇಜ್‌ಪಾಲ್ ಬೋಲಾರ್ (ಜಂಟಿ ವೀಜೇತರು) 9 ಅಕ್ಟೋಬರ್ 2016 41
2 22 ಜುಲೈ 2017 ಮಾಸ್ಟರ್ ಆನಂದ್ ಲಕ್ಷ್ಮೀ, ಟಿ.ಎನ್ ಸೀತಾರಾಂ ಮತ್ತು ವಿಜಯ ರಾಘವೇಂದ್ರ ವಂಶಿ ರತ್ನಕುಮಾರ್ ಮತ್ತು ಅಮಿತ್ ಎಮ್‌ಬಿ ಸುಮೀತ್ ಆರ್ ಸಂಕೋಜಿ 24 ಡಿಸೆಂಬರ್ 2017 38
3 20 ಅಕ್ಟೋಬರ್ 2018 ಮಾಸ್ಟರ್ ಆನಂದ್ ಲಕ್ಷ್ಮೀ, ವಿಜಯ ರಾಘವೇಂದ್ರ ಮತ್ತು ಮುಖ್ಯಮಂತ್ರಿ ಚಂದ್ರು 24 ಮಾರ್ಚ್ 2019 37
4 19 ಮಾರ್ಚ್ 2022 ಮಾಸ್ಟರ್ ಆನಂದ್ ಲಕ್ಷ್ಮೀ, ರವಿಚಂದ್ರನ್ ಮತ್ತು ರಚಿತ ರಾಮ್ 20 ಆಗಸ್ಟ್ 2022 45
5 17 ನವೆಂಬರ್ 2023 ಮಾಸ್ಟರ್ ಆನಂದ್ ಲಕ್ಷ್ಮೀ,ರವಿಚಂದ್ರನ್ ಮತ್ತು ರಚಿತ ರಾಮ್ ರಿಷಿಕಾ ಕುಂದೇಶ್ವರ್ ಮತ್ತು ವಿಷ್ಣು ಕುಣಿಗಲ್ (ಜಂಟಿ ವೀಜೇತರು) ಮಹಾಲಕ್ಷ್ಮಿ(ಮೊದಲ ರನ್ನರ್ ಆಫ್) 21 ಏಪ್ರಿಲ್ 2024 41 [೫]

ಸೀಸನ್ 1[ಬದಲಾಯಿಸಿ]

  • ಪುಟ್ಟರಾಜು ಹಗರ್ - ಜಂಟಿ ವಿಜೇತ
  • ಚಿತ್ರಾಲಿ ತೇಜ್‌ಪಾಲ್ ಬೋಲಾರ್ - ಜಂಟಿ ವಿಜೇತ
  • ಮಹೇಂದ್ರ ಪ್ರಸಾದ್
  • ಅಮೋಘ ಎಸ್.ಪಿ
  • ತುಷಾರ್ ಗೌಡ
  • ರೇವತಿ ಕೆ.ಆರ್.ಗೌಡ
  • ತೇಜಸ್ವಿನಿ ಶಿವಪ್ರಸಾದ್
  • ಎಂ ಅಚಿಂತ್ಯ ಪುರಾಣಿಕ್
  • ಮಹಾತಿ ವೈಷ್ಣವಿ ಭಟ್
  • ಪ್ರಣೀತ್ ಪಿ
  • ನಿಹಾಲ್ ಸಾಗರ್ ವಿಷ್ಣು
  • ಎ.ಎಸ್.ಸುರಜ್
  • ಅಭಿಷೇಕ್ ರಾಯಣ್ಣ
  • ಆದಿತ್ಯ ಮನೋಹರ್
  • ಆರ್ಯನ್ ಎಂ
  • ಅಮೋಘ್ ಎಂ ಕೆರೂರ್
  • ಅರಘ್ಯ ಸಾಯಿ
  • ಅನ್ಶಿಕಾ ಕೆ.ಎಂ.
  • ಕಮಲೇಶ್ ಕುಮಾರ್ ಎಸ್

ಸೀಸನ್ 3[ಬದಲಾಯಿಸಿ]

  • ಅನುಪ್
  • ಅನುರಾಗ್
  • ಅನ್ವಿಷಾ
  • ಬಸವ ಕಿರಣ್
  • ಡಿಂಪನಾ
  • ಕುಶಾಲ್
  • ಮಂಜು
  • ನೇಹಾ
  • ನಿತ್ಯ
  • ಪ್ರಜ್ವಲ್
  • ಪ್ರಕ್ಷಿತ್
  • ಸಿಂಚನಾ
  • ಸೋಮೇಶ್
  • ಶ್ರುಷ್ಟಿ
  • ಸುಪ್ರಜಾ
  • ಸ್ವಾತಿ

ಸೀಸನ್ 3 ರ ಪ್ರಥಮ ದಿನಾಂಕ 20 ಅಕ್ಟೋಬರ್ 2018 ಆಗಿದೆ.

ಗ್ರ್ಯಾಂಡ್ ಫಿನಾಲೆ 17 ಮಾರ್ಚ್ 2019 ರಂದು ತಿಪಟೂರಿನಲ್ಲಿ ನಡೆಯಿತು ಮತ್ತು ಇದು 24 ಮಾರ್ಚ್ 2019 ರಂದು ಪ್ರಸಾರವಾಯಿತು.

ವಿಜೇತೆ - ಸ್ವಾತಿ (13 ವರ್ಷ, ಬೆಳಗಾವಿ)

1 ನೇ ರನ್ನರ್ ಅಪ್ - ಮಂಜು (11 ವರ್ಷ, ಕೊಪ್ಪಳ)

2 ನೇ ರನ್ನರ್ ಅಪ್ - ಡಿಂಪಾನಾ (5 ವರ್ಷ, ಹಾಸನ)

ಉಲ್ಲೇಖಗಳು[ಬದಲಾಯಿಸಿ]

  1. "Drama Juniors". www.cinemaone.in.[ಶಾಶ್ವತವಾಗಿ ಮಡಿದ ಕೊಂಡಿ]
  2. "Drama Juniors Kannada".
  3. "Drama Juniors Winner". www.ibtimes.co.in.[ಶಾಶ್ವತವಾಗಿ ಮಡಿದ ಕೊಂಡಿ]
  4. "Drama Juniors: ಡ್ರಾಮಾ ಜೂನಿಯರ್ಸ್ 5ರಲ್ಲಿ ಇಬ್ಬರು ವಿನ್ನರ್ಸ್! ಟ್ರೋಫಿ ಗೆದ್ದ ವಿಷ್ಣು-ರಿಷಿಕಾ". The Times of India. Retrieved 22 ಏಪ್ರಿಲ್ 2024.
  5. "'ಡ್ರಾಮಾ ಜ್ಯೂನಿಯರ್ಸ್' ಸೀಸನ್ 5ರ ಫಿನಾಲೆ; ಈ ಬಾರಿ ಇಬ್ಬರಿಗೆ ಒಲಿಯಿತು ವಿನ್ನರ್ ಪಟ್ಟ". ವಿಜಯ ಕರ್ನಾಟಕ. Retrieved 22 ಏಪ್ರಿಲ್ 2024.