ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ ಚಂದ್ರು ಈ ಹೆಸರಿನಿಂದ ಕನ್ನಡ ಚಿತ್ರರಂಗದಲ್ಲಿ ಪ್ರಖ್ಯಾತರಾಗಿರುವ ಇವರ ನಿಜವಾದ ಹೆಸರು ಚಂದ್ರಶೇಖರ್.ರಂಗಭೂಮಿ,ಕಿರುತೆರೆ,ಸಿನಿಮಾ ಮಾತ್ರವಲ್ಲದೆ ರಾಜಕೀಯದಲ್ಲೂ ಮಿಂಚಿದ್ದಾರೆ.ಹುಟ್ಟಿದ್ದು ಆಗಸ್ಟ್ ೨೮,೧೯೫೩ ರಂದು ನೆಲಮಂಗಲ ತಾಲೂಕಿನ ಹೊನ್ನಸಂದ್ರದಲ್ಲಿ.ತಂದೆ ಎನ್.ನರಸಿಂಹಯ್ಯ,ತಾಯಿ ತಿಮ್ಮಮ್ಮ.
ಪರಿವಿಡಿ |
[ಬದಲಾಯಿಸಿ] ರಂಗ ಪ್ರವೇಶ
'ತಾಯಿ' ನಾಟಕದ ಪಾತ್ರದಿಂದ ಪ್ರಸಿದ್ಧಿಯಾದರು.'ಮುಖ್ಯಮಂತ್ರಿ' ನಾಟಕದ ಪಾತ್ರದಿಂದ ಇವರ ಹೆಸರಿನ ಜೊತೆಗೆ ಆ ಪದ ಸೇರಿಕೆಯಾಯಿತು.ಆ ವೇಳೆಗೆ ಕನ್ನಡದಲ್ಲಿ ಮತ್ತೊಬ್ಬ ಚಂದ್ರಶೇಖರ್ (ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ) ಇದ್ದುದರ ಫಲವಾಗಿ,ಇವರಿಗೆ 'ಮುಖ್ಯಮಂತ್ರಿ ಚಂದ್ರು' ಎಂಬ ಹೆಸರು ಖಾಯಂ ಆಯಿತು.ಬಿ.ವಿ.ರಾಜಾರಾಂ ಜೊತೆ ಸೇರಿ,'ಅಚಲಾಯತನ' ನಾಟಕ ನಿರ್ದೇಶಿಸಿದರು.ಕತ್ತಲೆ ದಾರಿ ದೂರ,ಫಾಸಿರಾಂ ಕೊತ್ವಾಲ್,ಶಾಲಿಗುಲ,ನಮ್ಮೊಳಗೊಬ್ಬ ನಾಜೂಕಯ್ಯ,ಆಸ್ಫೋಟ.. ಮೊದಲಾದ ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಮೂಕಾಭಿನಯದಲ್ಲಿ ಪರಿಣತಿ ಸಾಧಿಸಿ,ವಿದೇಶಗಳಲ್ಲಿ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ.
[ಬದಲಾಯಿಸಿ] ಇವರು ನಿರ್ದೇಶಿಸಿದ ಕೆಲವು ನಾಟಕಗಳು
- ಮೋಡಗಳು
- ಮೂಕಿ-ಟಾಕಿ
- ಎಲ್ಲಾರೂ ಮಾಡುವುದು
- ಗರ್ಭಗುಡಿ
- ಕತ್ತಲೆ ದಾರಿ ದೂರ
- ಭರತಪ್ಪನ ಸೊಂಟಕ್ಕೆ ಗಂಟೆ
- ಕೇಳು ಜನಮೇಜಯ
- ಕಂಬಳಿ ಸೇವೆ (ಹಾಸ್ಯ ನಾಟಕ)
- ಹೋಂ ರೂಲು
[ಬದಲಾಯಿಸಿ] ಸಿನಿಮಾ ರಂಗದಲ್ಲಿ
ಕನ್ನಡ ಸಿನಿಮಾಗಳಲ್ಲಿ,ಹಾಸ್ಯ,ಖಳ,ಪೋಷಕ ನಟ..- ಹೀಗೆ ಹಲಬಗೆಯ ಪಾತ್ರ್ಗಗಳನ್ನು ಅಭಿನಯಿಸಿ,ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ.ಅಸಂಖ್ಯಾತ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ, ತಮ್ಮ ವಿಶಿಷ್ಟವಾದ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ.
[ಬದಲಾಯಿಸಿ] ಇವರ ಅಭಿನಯದ ಕೆಲವು ಚಿತ್ರಗಳು
- ಮಾಲಾಶ್ರೀ ಮಾಮಾಶ್ರೀ
- ಗುಂಡನ ಮದುವೆ
- ಚಕ್ರವ್ಯೂಹ
ಎದುರು ಮನೆ ಗಂಡ ಪಕ್ಕದ ಮನೆ ಹೆಂಡ್ತಿ ಗಣೇಶನ ಮದುವೆ
- ಗೌರಿ ಗಣೇಶ
[ಬದಲಾಯಿಸಿ] ಪ್ರಶಸ್ತಿ / ಪುರಸ್ಕಾರಗಳು
- ರಾಜ್ಯ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಿರ್ದೇಶನಕ್ಕೆ ಪ್ರಶಸ್ತಿ
- ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
ಹಲವಾರು ಸಂಘ-ಸಂಸ್ಥೆಗಳಿಂದ ಪುರಸ್ಕಾರ ಸಂದಿದೆ.ಸಾಮಾಜಿಕ ಕಾರ್ಯಕರ್ತರಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.
[ಬದಲಾಯಿಸಿ] ರಾಜಕೀಯದಲ್ಲಿ
ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ,ಪ್ರಸ್ತುತ ಎರಡನೆಯ ಬಾರಿಗೆ ಕರ್ನಾಟಕ ವಿಧಾನ ಪರಿಷತ್‌ನ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈಗ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ.