ವಿಷಯಕ್ಕೆ ಹೋಗು

ಡಿ. ಸಿ. ಮೋಟರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಿ.ಸಿ. ಮೋಟರ್

ಡಿ.ಸಿ. ಮೋಟರ್ ಎಂಬುದು ಏಕಮುಖ ವಿದ್ಯುತ್ ಪ್ರವಾಹ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಯಂತ್ರ. ಇವು ಅಯಸ್ಕಾಂತಗಳಿಂದ ಉತ್ಪನ್ನವಾಗುವ ಕಾಂತಕ್ಷೇತ್ರದ ಶಕ್ತಿಯನ್ನು ಬಳಸಿ ಕೆಲಸ ಮಾಡುತ್ತವೆ. ಬಹುತೇಕ ಎಲ್ಲ ಡಿ.ಸಿ. ಮೋಟರುಗಳ ಕೇಂದ್ರಭಾಗದಲ್ಲಿ ರೋಟರ್ ಎಂಬ ತಿರುಗುವ ಭಾಗವಿರುತ್ತದೆ. ಈ ರೋಟರಿಗೆ ವಿದ್ಯುತ್ ಪ್ರವಾಹವನ್ನು ಅನುಮತಿಸುವ ವಾಹಕ ತಂತಿಗಳನ್ನು ಸುತ್ತಿರುತ್ತಾರೆ. ಇದರ ಹೊರಭಾಗದಲ್ಲಿ ಅಯಸ್ಕಾಂತಗಳಿರುತ್ತವೆ. ಈ ಅಯಸ್ಕಾಂತಗಳು ಸ್ಥಾನಿಕವಾಗಿದ್ದು ಅವು ತಿರುಗುವುದಿಲ್ಲ. ತಿರುಗುವ ಭಾಗದಲ್ಲಿರುವ ವಾಹಕ ಸುರುಳಿಗಳಿಗೆ ಏಕಮುಖ ವಿದ್ಯುತ್ತಿನ ಸರಬರಾಜು ಮಾಡಲಾಗುತ್ತದೆ. ಈ ವಿದ್ಯುತ್ ಸರಬರಾಜನ್ನು ಬ್ರಶ್‌ಗಳ ಮೂಲಕ ನೀಡಲಾಗುತ್ತದೆ. ಈ ಬ್ರಶ್‌ಗಳು ರೋಟರ್ ತಿರುಗಿದಾಗ ವಿದ್ಯುತ್ ಸಂಪರ್ಕವನ್ನು ಕಡಿದು ಪಡೆದು ಮಾಡುತ್ತವೆ. ಅಯಸ್ಕಾಂತದ ಧ್ರವಗಳು ವಿದ್ಯುತ್ ಪ್ರವಾಹದಿಂದಾಗಿ ಕಾಂತತ್ವವನ್ನು ಪಡೆದ ರೋಟರನ್ನು ದೂಡುತ್ತವೆ. ಇದರಿಂದಾಗಿ ರೋಟರ್ ತಿರುಗುತ್ತದೆ. ಹೀಗೆ ತಿರುಗಿದಾಗ ಅದು ವಿದ್ಯುತ್ ಸಂಪರ್ಕವನ್ನು ಒಂದು ಭಾಗದಿಂದ ಕಡಿದುಕೊಂಡು ಇನ್ನೊಂದು ಭಾಗದಲ್ಲಿ ಪಡೆದುಕೊಳ್ಳುತ್ತವೆ. ಈಗ ಈ ಭಾಗವನ್ನು ಅಯಸ್ಕಾಂತವು ದೂಡುತ್ತದೆ. ಹೀಗೆ ತಿರುಗುವ ರೋಟರ್ ತಿರುಗುತ್ತಲೇ ಇರುತ್ತದೆ. ಮೋಟರ್ ತಿರುಗುವ ವೇಗವನ್ನು ವಿದ್ಯುತ್ತಿನ ಶಕ್ತಿಯನ್ನು ಹೆಚ್ಚಿಸುವ ಹಾಗೂ ಕಡಿಮೆ ಮಾಡುವ ಮೂಲಕ ನಿಯಂತ್ರಿಸಬಹುದು.[]

ಉಲ್ಲೇಖಗಳು

[ಬದಲಾಯಿಸಿ]