ಜಡತ್ವ
ಗೋಚರ
ಜಡತ್ವ ವು ಪ್ರತಿಯೊಂದು ದ್ರವ್ಯ (matter)ದ ಒಂದು ಗುಣವಾಗಿದೆ. ಪ್ರತಿ ವಸ್ತುವೂ ಚಲನೆಯಲ್ಲಿದ್ದಾಗ ಚಲಿಸುತ್ತಲೇ ಇರುವ ಹಾಗೂ ನಿಶ್ಚಲವಾಗಿರುವಾಗ ನಿಶ್ಚಲತೆಯಲ್ಲಿರುವ ಗುಣವನ್ನು ಜಡತ್ವ ಎನ್ನುತ್ತಾರೆ. ಈ ಸ್ಥಿತಿಯನ್ನು ಬದಲಾಯಿಸಲು ಬಲವನ್ನು ಉಪಯೋಗಿಸಬೇಕಾಗುತ್ತದೆ. ಈ ಬಲವು ವಸ್ತುವಿನ ದ್ರವ್ಯರಾಶಿ ಅವಲಂಬಿಸಿರುತ್ತದೆ. ದ್ರವ್ಯರಾಶಿ ಹೆಚ್ಚಿದ್ದಾಗ ಅದರ ಸ್ಥಿತಿಯನ್ನು ಬದಲಾಯಿಸಲು, ಚಲನೆಯ ದಿಕ್ಕನ್ನು ಬದಲಾಯಿಸಲು, ಜವ(speed)ನ್ನು ಬದಲಾಯಿಸಲು ಹೆಚ್ಚಿನ ಬಲವನ್ನು ಪ್ರಯೋಗಿಸಬೇಕಾಗುತ್ತದೆ.