Sachidananda Hullahalli/ನನ್ನ ಪ್ರಯೋಗಪುಟ-ಭೂರೆ ಲಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೂರೆ ಲಾಲ್[ಬದಲಾಯಿಸಿ]

ಭೂರೆ ಲಾಲ್. ಅಶೋಕಚಕ್ರ ಪ್ರಶಸ್ತಿ ಸನ್ಮಾನಿತ (೨೦ ಮಾರ್ಚ್ ೧೯೩೮) ಇವರು ಮಧ್ಯಪ್ರದೇಶ ಪೊಲೀಸ್ ಸಿಬ್ಬಂದಿಯಾಗಿದ್ದವರು ಇವರು ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಪಡೆದಿದ್ದರೆ[೧]. ಈ ಗೌರವಕ್ಕೆ ಪಾತ್ರರಾದ ಮೊದಲ ರಾಜ್ಯ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹಿನ್ನೆಲೆ[ಬದಲಾಯಿಸಿ]

ಶ್ರೀ ಭೂರೇಲಾಲ್ ಅವರು ೨೦ ಮಾರ್ಚ್ ೧೯೩೮ ರಂದು ಮಧ್ಯಪ್ರದೇಶದ ಗುನಾ ಜಿಲ್ಲೆಯ ಬಜರಂಗಢ ಗ್ರಾಮದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಶ್ರೀ ನಂಹುಲಾಲ್.

ವೃತ್ತಿ ಜೀವನ[ಬದಲಾಯಿಸಿ]

ಶ್ರೀ ಭೂರೇಲಾಲ್ ಅವರು ೨೦ ಜೂನ್ ೧೯೬೫ ರಂದು ಮಧ್ಯಪ್ರದೇಶ ಪೋಲಿಸಿಗೆ ಸೇರಿದರು. ಅವರು ೭ ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು.

ಘಟನೆಯ ವಿವರ[ಬದಲಾಯಿಸಿ]

ಮಧ್ಯಪ್ರದೇಶದ ಗುನಾ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಖ್ಯಾತ ದರೋಡೆಕೋರ ನಹರ್ ಸಿಂಗ್‌ ಲೂಟಿ ಮಾಡುತ್ತಿದ್ದ. ಹಳ್ಳಿಗಳನ್ನು ಕೊಳ್ಳೆಹೊಡೆಯುತ್ತಿದ್ದ ಮತ್ತು ಪೊಲೀಸರಿಗೆ ತಲೆನೋವಾಗಿದ್ದ.

ಜುಲೈ ೧೪, ೧೫ ರ ರಾತ್ರಿ, ನಹರ್ ಸಿಂಗ್ ತನ್ನ ಗುಂಪಿನೊಂದಿಗೆ ಗಿಂಡ್ಖೋ ಕಾಡಿನಲ್ಲಿ ಅಡಗಿಕೊಂಡಿದ್ದಾನೆ ಎಂಬ ಸುದ್ದಿ ಬಂದಿತು. ಸುದ್ದಿಯನ್ನು ಪರಿಶೀಲಿಸಲು ಶ್ರೀ ಭೂರೇಲಾಲ್ ಸ್ವತಃ ಕಾಡಿಗೆ ಹೋಗಲು ನಿರ್ಧರಿಸಿದರು. ಇದೊಂದು ಅಪಾಯಕಾರಿ ನಡೆ ಅದರೆ ಇದನ್ನ ಲೆಕ್ಕಿಸದ ಧೀರ ಶ್ರೀಮಾನ್ ಭೂರೇಲಾಲ್ ಕಾಡಿಗೆ ಹೊರಟರು. ಕಾಡಿನಲ್ಲಿ ನಹರ್ ಸಿಂಗ್ ಅಡಗಿಕೊಂಡಿದ್ದನು ಕಂಡರು. ತಕ್ಷಣವೇ ಈ ವಿಷಯವನ್ನು ತಮ್ಮ ಇಲಾಖೆಗೆ ತಿಳಿಸಿದರು. ಪೊಲೀಸ ಪಡೆ ತಯಾರಿಯೊಂದಿಗೇ ಕಾಡಿಗೆ ಬರಲು ಸ್ವಲ್ಪ ಸಮಯವಾಯಿತು. ಇದನ್ನರಿತ ಶ್ರೀ ಭೂರೇಲಾಲ್ ದರೋಡೆಕೋರರು ಕಾಡನ್ನು ಬಿಡದಂತೆ ಎಚ್ಚರ ವಹಿಸಿದ್ದರು. ತಮ್ಮ ಬಂದೂಕನ್ನು ಸಿಡ್ಡಪರಿಸಿಕೊಂಡು ಡಕಾಯಿತರ ಹತ್ತಿರ ತಲುಪಿದರು.
ಇದರ ಸುಳಿವರಿತ ನಹಾರ್ ಸಿಂಗ್ ಇವರ ಮೇಲೆ ಗುಂಡು ಹಾರಿಸಿದ. ಇದನ್ನರಿತು ಜಾಗರೂಕರಾಗಿದ್ದ ಭೋರೆಲಾಲ್ ರು ಚಾಣಾಕ್ಷತನದಿಂದ ಆಕ್ರಮಣವನ್ನು ತಪ್ಪಿಸಿಕೊಳ್ಳುತಿದ್ದರು. ಡಕಾಯಿತರ ಮೇಲೆ ಪ್ರತಿಧಾಳಿಯನ್ನು ನಡೆಸುತಿದ್ದರು. ಶ್ರೀ ಭೂರೇಲಾಲ್ ಹೊಡೆದ ಗುಂಡು ನಹರ್ ಸಿಂಗ್ ನನ್ನ ಹೊಡೆದು ಉರುಳಿಸಿತು. ಇದ ನೋಡಿದ ನಹರ್ ಸಿಂಗನ ಸಂಗತಿಗಳು ಭೂರೇಲಾಲ್ ಮೇಲೆ ಆಕ್ರಮಣ ಮಾಡುವಷ್ಟರಲ್ಲಿ ಸಮಯಕ್ಕೆ ಸರಿಯಾಗಿ ಪೋಲೀಸರ ದಂಡು ಆಗಮಿಸಿ ಉಳಿದೆಲ್ಲ ಡಕಾಯಿತರನ್ನ ಬಂದಿಸಿತು

ಅಶೋಕ ಚಕ್ರ ಪುರಸ್ಕೃತರು[ಬದಲಾಯಿಸಿ]

ಶ್ರೀ ಭೂರೇಲಾಲ್ ಅವರು ತಮ್ಮ ಧೈರ್ಯ ಮತ್ತು ಶೌರ್ಯ ದಿಂದ ದರೋಡೆಕೋರ ನಹರ್ ಸಿಂಗ್ ನನ್ನು ಕೊಂದು ಅವನ ಸಹಚರರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಅವರ ಈ ಶೌರ್ಯ ಮತ್ತು ಧೈರ್ಯಕ್ಕಾಗಿ ಅವರಿಗೆ ಅಶೋಕ ಚಕ್ರವನ್ನು ನೀಡಲಾಯಿತು.

ಉಲ್ಲೇಖಗಳು[ಬದಲಾಯಿಸಿ]

  1. https://www.gallantryawards.gov.in/awardee/3500