ಹ್ಯಾರಿ ಸೆಲ್ಡನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಹ್ಯಾರಿ ಸೆಲ್ಡನ್ ಐಸಾಕ್ ಅಸಿಮೋವ್ ರವರ ಪ್ರತಿಷ್ಠಾನ ಸರಣಿ ಕಾದಂಬರಿಗಳ ಕಾಲ್ಪನಿಕ ಪಾತ್ರ - ಇವುಗಳಲ್ಲಿ ಅವನನ್ನು ಮೇಧಾವಿ ಕಥಾನಾಯಕ ಮತ್ತು ಪ್ರತಿಷ್ಠಾನಗಳ ಪ್ರಜೆಗಳ ಗೌರವಪಾತ್ರನೆಂದು ಬಣ್ಣಿಸಲಾಗಿದೆ. ಪ್ರತಿಷ್ಠಾನ ಕಾದಂಬರಿ ಸರಣಿಯ ಕೇವಲ ಮೂರರಲ್ಲಿ ಮಾತ್ರ ಇವನು ಪ್ರತ್ಯಕ್ಷವಾಗಿ ಭಾಗವಹಿಸಿದ್ದರೂ, ಸರಣಿಯುದ್ದಕ್ಕೂ ಇವನ ಪ್ರಸ್ತಾಪ, ಇವನ ಅನ್ವೇಷಣೆ ಮಾನಸಿಕ-ಐತಿಹಾಸಿಕಶಾಸ್ತ್ರದ ಪ್ರಸ್ತಾಪವು ಆಗಿಂದಾಗ್ಗೆ ಇರುವುದು.

[ಬದಲಾಯಿಸಿ] ಸಂಕ್ಷಿಪ್ತ ಪಾತ್ರ ಪರಿಚಯ

ಆರ್ಕ್ಟರಸ್ ವಿಭಾಗದಲ್ಲಿನ ಹೆಲೆಕಾನ್ ಎಂಬ ಗ್ರಹದ ತಂಬಾಕು ಕೃಷಿಕನ ಮಗನಾಗಿ ಹುಟ್ಟಿದ ಮೇಧಾವಿ ಹ್ಯಾರಿ ಸೆಲ್ಡನ್, ಕ್ಷೀರ ಪಥ ಸಾಮ್ರಾಜ್ಯದ ಆಡಳಿತ ಕೇಂದ್ರಗ್ರಹವಾದ ಟ್ರ್ಯಾಂಟರ್ ನ ಸ್ಟ್ರೀಲಿಂಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿರುತ್ತಾನೆ. ಅಲ್ಲದೆ ಅವನು ಚಕ್ರವರ್ತಿ ಮೊದಲನೆಯ ಕ್ಲಿಯಾನ್ ನ ಪ್ರಥಮ ಮಂತ್ರಿಯಾಗಿಯೂ ಸೇವೆ ಸಲ್ಲಿಸಿರುವನು. ಇವನ ಅನ್ವೇಷಣೆಗಳಲ್ಲಿ ಮಾನಸಿಕ-ಐತಿಹಾಸಿಕ ಶಾಸ್ತ್ರವು ಪ್ರಮುಖ - ಈ ಕಾಲ್ಪನಿಕ ಗಣಿತದ ಪ್ರಕಾರ, ವೈಯಕ್ತಿಕ ನಡವಳಿಕೆಗಳು ಗಣಿತ ಸೂತ್ರಗಳ ಹಿಡಿತಕ್ಕೆ ಸಿಲುಕದಿದ್ದರೂ, ಬಹುಸಂಖ್ಯಾತ ಗುಂಪುಗಳ ನಡವಳಿಕೆಗಳನ್ನು ಮುಂಗಾಣಬಹುದು. ಹೀಗಾಗಿ ಕ್ಷೀರಪಥ ಸಾಮ್ರಾಜ್ಯದ ಕ್ವಿಂಟಿಲಿಯನ್ ಗಟ್ಟಲೆ ಪ್ರಮಾಣದ ಜನಸ್ತೋಮಕ್ಕೂ ಈ ಶಾಸ್ತ್ರವು ಅನ್ವಯಿಸುತ್ತದೆ - ಈ ರೀತಿ, ಹ್ಯಾರಿ ಸೆಲ್ಡನ್ ಕ್ಷೀರ ಪಥ ಸಾಮ್ರಾಜ್ಯವು ಪತನದತ್ತ ಸಾಗಿದೆಯೆಂದೂ, ಪುನರುತ್ಥಾನವು ಮೂವತ್ತು ಸಹಸ್ರಮಾನಗಳ ನಂತರವಾಗುವುದೆಂದೂ, ಈ ಹೊಸ ಗಣಿತದ ಸೂಚನೆಯ ಪ್ರಕಾರ ಭವಿಷ್ಯವನ್ನು ರೂಪಿಸಿದ್ದಲ್ಲಿ ಈ ಅಂಧಕಾರಮಯ ಮಧ್ಯಂತರವನ್ನು ಏಕೈಕ ಸಹಸ್ರಮಾನದವರೆಗೆ ಕುಗ್ಗಿಸಬಹುದೆಂದು ಹ್ಯಾರಿ ಸೆಲ್ಡನ್ ಕಂಡುಕೊಳ್ಳುವನು.

ಗಣಿತಜ್ಞನಲ್ಲದೆ ಇವನು ಟ್ವಿಸ್ಟರ್ ಎಂಬ ಮಲ್ಲವಿದ್ಯೆಯಲ್ಲಿಯೂ ಸಿದ್ಧಹಸ್ತನೆಂಬ ಪ್ರಸ್ತಾಪಬರುವುದು.

ಪ್ರತ್ಯಕ್ಷವಾಗಿ ಇವನು ಪ್ರತಿಷ್ಠಾನಕ್ಕೆ ಪೂರ್ವರಂಗ. ಮುಂದೊಯ್ಯಿ ಪ್ರತಿಷ್ಠಾನವನು, ಮತ್ತು ಪ್ರತಿಷ್ಠಾನ ಎಂಬ ಕಾದಂಬರಿಗಳಲ್ಲಿ ಭಾಗವಹಿಸುವನು.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು