ವಿಷಯಕ್ಕೆ ಹೋಗು

ಹ್ಯಾಕರ್ ನ್ಯೂಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹ್ಯಾಕರ್ ನ್ಯೂಸ್
ಜಾಲತಾಣದ ವಿಳಾಸnews.ycombinator.com
ತಾಣದ ಪ್ರಕಾರNews aggregator
ನೊಂದಾವಣಿOptional
ಲಭ್ಯವಿರುವ ಭಾಷೆಇಂಗ್ಲೀಷ್
ಬಳಸಿದ ಭಾಷೆಆರ್ಕ್
ಒಡೆಯವೈ-ಕಾಂಬಿನೇಟರ್
ಪ್ರಾರಂಭಿಸಿದ್ದುಫೆಬ್ರವರಿ 19, 2007; 6480 ದಿನ ಗಳ ಹಿಂದೆ (2007-೦೨-19)
ಸಧ್ಯದ ಸ್ಥಿತಿಅಸ್ತಿತ್ವದಲ್ಲಿದೆ


ಹ್ಯಾಕರ್ ನ್ಯೂಸ್ ಕಂಪ್ಯೂಟರ್ ವಿಜ್ಞಾನ ಮತ್ತು ಉದ್ಯಮಶೀಲತೆಯ ಸುದ್ದಿತಾಣವಾಗಿದೆ.ಇದನ್ನು ಪಾಲ್ ಗ್ರಹಾಂರ ಬಂಡವಾಳ ನಿಧಿ ಮತ್ತು ಆರಂಭಿಕ-ಉದ್ಯಮಶೀಲತೆಯ ಇನ್ಕ್ಯುಬೇಟರ್, ವೈ-ಕಾಂಬಿನೇಟರ್ ಸಂಸ್ಥೆ ನಿರ್ವಹಿಸುತ್ತದೆ. ಇಲ್ಲಿಗೆ ಸುದ್ದಿಗಳನ್ನು ಯಾವುದೇ ವ್ಯಕ್ತಿ ಸಲ್ಲಿಕೆ ಮಾಡಬಹುದು. ಸುದ್ದಿ ಬಗೆ "ಬೌದ್ಧಿಕ ಕುತೂಹಲವನ್ನು ತಣಿಸುವ, ಯಾವುದಾದರೂ ವಿಷಯದ ಬಗ್ಗೆ ಇರಲಿ" ಎಂಬುದು. []


ಇತಿಹಾಸ

[ಬದಲಾಯಿಸಿ]

ಫೆಬ್ರವರಿ ೨೦೦೭ರಲ್ಲಿ ಈ ಸುದ್ದಿತಾಣವನ್ನು ಪಾಲ್ ಗ್ರಹಾಂ ಶುರು ಮಾಡಿದರು. ಡಾಟ್. ಕಾಂ ಹಿಂಜರಿತದ ನಂತರ ನವೋದ್ಯಮಕ್ಕೆ ಬಂಡವಾಳ ಹೂಡುವ ಮೂಲಧನ ಪ್ರವರ್ತಕರ ಬಗ್ಗೆ ಅಮೇರಿಕೆಯ ಸಿಲಿಕಾನ್ ವ್ಯಾಲಿಯಲ್ಲಿ ಕೊಂಚ ಹೊಯ್ದಾಟವಿತ್ತು. ಇದನ್ನು ನಿವಾರಿಸಲೋಸುಗ ಮತ್ತು ಉದ್ಯಮಶೀಲತೆಯನ್ನು ಹೆಚ್ಚು ಜನಪ್ರಿಯಗೊಳಿಸಲು ಹ್ಯಾಕರ್ ನ್ಯೂಸ್ ಜಾಲತಾಣವನ್ನು ಶುರುಗೈದ್ದಿದಾಗಿ ಪಾಲ್ ಗ್ರಹಾಂ ಹೇಳಿಕೊಂಡಿದ್ದಾರೆ. ಚಿಲ್ಲರೆ ಅಂಗಡಿಗಳಿಗೆ ವೆಬ್ ಜಾಲತಾಣವನ್ನು ರೂಪಿಸುವ ತಮ್ಮ ಸಂಸ್ಥೆಯನ್ನು ಯಾಹೂ ಕಂಪನಿಗೆ ಯಾಹೂ ಸ್ಟೋರ್ಸ್ ತಮ್ಮ ಕಂಪನಿಯನ್ನು ಮಾರಿದ ನಂತರ ಗ್ರಹಾಂ ಹ್ಯಾಕರ್ ನ್ಯೂಜ಼್‌ ತಮ್ಮ ಬದುಕಿನ ಮುಖ್ಯ ಘಟ್ಟ ಎಂದು ಬಣ್ಣಿಸುತ್ತಾರೆ.


ಕಮ್ಯೂನಿಟಿ ಅರ್ಥಾತ್ ಜನರ ನಡುವಣ ಪರಸ್ಪರ ಸಂಪರ್ಕಕ್ಕೆ ಒತ್ತು ನೀಡುವಂತೆ ಆರಂಭಿಸಿದ ಯೋಜನೆಯ ಅನ್ವಯ ಹ್ಯಾಕರ್ ನ್ಯೂಜ಼್‌ ಬಹು ಬೇಗ ಜನಪ್ರಿಯವಾಯಿತು. ನವ-ಉದ್ಯಮದ ಬಗ್ಗೆ, ವಿಚಾರಶೀಲತೆಯ ಬಗ್ಗೆ ಮತ್ತು ಕಂಪ್ಯೂಟರ್/ಇಂಟರ್ನೆಟ್ ಸಂಬಂಧಿತ ಮಾಹಿತಿಯ ವಿನಿಮಯ-ವಿಮರ್ಶೆ-ಚರ್ಚೆ ಇವುಗಳಿಗೆ ಮೊದಲ ತಾಣವಾಗಿ ಹ್ಯಾಕರ್ ನ್ಯೂಸ್ ಹೆಸರಾಯಿತು
೨೦೧೩ರ ಹೊತ್ತಿಗೆ ದಿನವಹಿ ೨ ಲಕ್ಷಕ್ಕೂ ಹೆಚ್ಚಿನ ಮಂದಿ ಹ್ಯಾಕರ್ ನ್ಯೂಸ್ ಜಾಲತಾಣಕ್ಕೆ ಭೇಟಿ ನೀಡಿ, ಮಾಹಿತಿ ವಿನಿಮಯ ಮಾಡೀಕೊಳ್ಳುತ್ತಿದ್ದರು. ೨೦೧೭ರ ಹೊತ್ತಿಗೆ ಇದು ದಿನಕ್ಕೆ ೧೬ ಲಕ್ಷ ಮಂದಿಗೆ ಏರಿತು. [] ಆರಂಭದಲ್ಲಿ ಇದನ್ನು ಸ್ಟಾರ್ಟ್ ಅಪ್ ನ್ಯೂಸ್ ಅಥವಾ ಕೆಲವೊಮ್ಮೆ ನ್ಯೂಸ್ ಎಂದು ಕರೆಯಲಾಗುತ್ತಿತ್ತು. ಆಗಸ್ಟ್ ೧೪, ೨೦೦೭ ರಂದು, ಅದರ ಪ್ರಸಕ್ತ ಹೆಸರಿನಿಂದ ಅಂದರೆ, ಹ್ಯಾಕರ್ ನ್ಯೂಸ್ ಎಂದು ಹೆಸರು ಬದಲಿಸಲಾಯಿತು. [] ಇದು ಗ್ರಹಾಂ ಸ್ವತಃ ಸಹ-ಅಭಿವೃದ್ಧಿ ಪಡಿಸಿದ ಆರ್ಕ್ ಪ್ರೊಗ್ರಾಮಿಂಗ್ ಭಾಷೆಯ ನೈಜ-ಪ್ರಪಂಚದ ಅನ್ವಯಿಕೆಯಾಗಿ ಗಣನೆಗೆ ಬಂತು.ಗ್ರಹಾಂ ಇದನ್ನು ತನ್ನ ಕಂಪೆನಿ ವೈ ಕಾಂಬಿನೇಟರ್ ಯೋಜನೆಯಂತೆ ಅಭಿವೃದ್ದಿ ಪಡಿಸಿದರು

ಮಾರ್ಚ್ 2014 ರ ಕೊನೆಯಲ್ಲಿ, ಗ್ರಹಾಂ ವೈ ಕಾಂಬಿನೇಟರ್ನಲ್ಲಿ ಅವರ ನಾಯಕತ್ವ ಪಾತ್ರದಿಂದ ಹೊರಬಂದರು, ಹ್ಯಾಕರ್ ನ್ಯೂಸ್ ಆಡಳಿತವನ್ನು ಇತರ ಸಿಬ್ಬಂದಿಗಳ ಕೈಗಿತ್ತರು. [][]

ದೃಷ್ಟಿ, ಅಭ್ಯಾಸಗಳು, ಮತ್ತು ವಿಮರ್ಶೆ

[ಬದಲಾಯಿಸಿ]

೨೦೦೭ರ ಹೊತ್ತಿಗೆ ಹ್ಯಾಕರ್ ನ್ಯೂಸ್ ನ ಪ್ರಮುಖ ಉದ್ದೇಶವು ರೆಡ್ಡಿಟ್ ನಂತೆ ಸಮುದಾಯವನ್ನು ರಚಿಸುವುದು ಆಗಿತ್ತು.[][] ಆದಾಗ್ಯೂ, ಹೊಸ ಬಳಕೆದಾರರಿಗೆ ತಕ್ಷಣವೇ ಅಪ್-ಮತ ಮತ್ತು ಡೌನ್-ಮತ ವಿಷಯಗಳೆರಡೂ ರೆಡ್ಡಿಟ್ಗಿಂತ ಭಿನ್ನವಾಗಿದೆ. ಉದ್ದಹರಣೆಗೆ, ನ್ಯೂಸ್ ಬಳಕೆದಾರರು 501 "ಕರ್ಮ" ಪಾಯಿಂಟ್ಗಳನ್ನು ಸಂಗ್ರಹಿಸುವುದಕ್ಕಿಂತ ಮುನ್ನ ಡೌನ್-ಮತ ಹಾಕಲು ಅನುಮತಿಸುವುದಿಲ್ಲ. [] ಕರ್ಮ ಪಾಯಿಂಟ್ಗಳು ನೀಡಿದ ಬಳಕೆದಾರರ ವಿಷಯವು ಡೌನ್ವೊಟ್ಗಳ ಸಂಖ್ಯೆಯನ್ನು ಕಡಿಮೆಗೊಳಿಸಿದ ಅಪ್-ಮತಗಳ ಸಂಖ್ಯೆಯೆಂದು ಲೆಕ್ಕಹಾಕಲಾಗುತ್ತದೆ. [2] ಅದೇ ರೀತಿ ಈ ಮಾಹಿತಿ ತಪ್ಪು ಎಂದು ಹೇಳುವ ಫ್ಳಾಗ್ ಅನ್ನು ಮಾಡಲು ಬಳಕೆದಾರನು 30 ಕರ್ಮ ಪಾಯಿಂಟ್ ಗಳನ್ನು ಪಡೆವ ಮುನ್ನ ಅನುಮತಿ ಇರುವುದಿಲ್ಲ.. []
ಒಂದು ಸಮುದಾಯದಲ್ಲಿ ಬುದ್ಧಿವಂತ ಪ್ರವಚನಗಳ ಸಾಮಾನ್ಯ ಕುಸಿತವನ್ನು ಉಂಟುಮಾಡುವ ಪ್ರಕ್ರಿಯೆಗೆ ಎಟರ್ನಲ್ ಸೆಪ್ಟೆಂಬರ್ ಎನ್ನುತ್ತಾರೆ. [] ಅದನ್ನು ತಪ್ಪಿಸಲು, ಗ್ರಹಾಂ, ಜಾಲತಾಣದಲ್ಲಿ ಸ್ವಯಂಚಾಲಿತವಾಗಿ ದುರುದ್ದೇಶಪೂರ್ವಕ ಹೇಳಿಕೆ ಮತ್ತು ಸ್ಪ್ಯಾಮ್ ಡಿಟೆಕ್ಟರ್ಗಳನ್ನು ಒಳಗೊಂಡ ಸುದ್ದಿಗಳನ್ನು ನಿಯಂತ್ರಿಸುವಲ್ಲಿ ಸಕ್ರಿಯವಾದ ತಂತ್ರಜ್ಞಾನವನ್ನು ಹೊಂದಿದೆ. ಬಳಕೆದಾರರಿಗೆ ತಿಳಿಯದಿರುವಂತಹ ಬಳಕೆದಾರರ ಪೋಸ್ಟ್ಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಇದು ರಹಸ್ಯ ನಿಷೇಧವನ್ನು ಸಹ ಮಾಡುತ್ತದೆ.[]

2013 TechCrunch ಲೇಖನವೊಂದರ ಪ್ರಕಾರ: "ಹ್ಯಾಮರ್ ನ್ಯೂಸ್ ಜಾಲತಾಣವು ವೈ ಕಾಂಬಿನೇಟರ್ ಉದ್ಯಮಗಳ ಬಗ್ಗೆ ಕಥೆಗಳನ್ನು ಹೊಂದಿರುವ ಕಡೆಗೆ ಪಕ್ಷಪಾತವನ್ನು ಹೊಂದಿದೆ ಎಂದು ಆರೋಪಿಸಿದೆ.ಆದರೆ ಅಂತಹ ಪಕ್ಷಪಾತವಿಲ್ಲ ಎಂದು ಗ್ರಹಾಂ ಅವರು ಹೇಳುತ್ತಾರೆ. ಗ್ರಹಾಂ ಅವರು ಪಕ್ಷಪಾತ ಅಥವಾ ಸೆನ್ಸಾರ್ ಮಾಡಲಾದ ಬಳಕೆದಾರರ ಪೂರ್ವಗ್ರಹಗಳು ಇವು ಎಂದು ಬಣ್ಣಿಸುತ್ತಾರೆ."[]

ಉಲ್ಲೇಖಗಳು

[ಬದಲಾಯಿಸಿ]
  1. Graham, Paul. "Hacker News Guidelines". Archived from the original on 2013-01-12. Retrieved 2009-04-29. {{cite news}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. ೨.೦ ೨.೧ ೨.೨ ೨.೩ ಂಷ್ಝ್ (May). "The Evolution of Hacker News". news.ycombinator.com. Retrieved 10 August 2014. {{cite news}}: Check date values in: |date= (help)
  3. ೩.೦ ೩.೧ Paul Graham. "What I've Learned from Hacker News".
  4. Colleen Taylor (29 March 2014). "After Stepping Aside From Y Combinator, Paul Graham Hands Over The Reins At Hacker News". TechCrunch. Retrieved 10 August 2014.
  5. Isaac, Mike (29 March 2014). "Paul Graham Steps Down From Daily Hacker News Duties". Re/code. Retrieved 10 August 2014.
  6. Paul Graham. "New: Y Combinator Startup News". Archived from the original on 2014-06-25. Retrieved 2018-05-06. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  7. "Hacker News FAQ". Hacker News. Retrieved 1 March 2018.
  8. "Pando: Can the democratic power of a platform like Hacker News be applied to products?". Pando. Archived from the original on 2020-04-24. Retrieved 2018-05-06.

ಹೊರಗಿನ ಕೊಂಡಿಗಳು

[ಬದಲಾಯಿಸಿ]