ಹೊಮೋಫಿಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊಮೋಫಿಲಿ(i.e., Homophily - "love of the same")ಯು, ತನ್ನಂತೆಯೇ ಇರುವ ಇತರರೊಂದಿಗೆ ಸ್ನೇಹ ಬೆಳೆಸಿಕೊಳ್ಳುವ ಸ್ವಭಾವವಾಗಿದೆ. ಅನೇಕ ಸಾಮಾಜಿಕ ಜಾಲಬಂಧ(social network)ಗಳಲ್ಲಿ ಹೋಮೋಫಿಲಿಯನ್ನು ಗಮನಿಸಲಾಗಿದೆ. ಮ್ಯಾಕ್ಫರ್ಸನ್, ಸ್ಮಿತ್-ಲೊವಿನ್ ಮತ್ತು ಕುಕ್, ತಮ್ಮ ದೀರ್ಘವಾದ review paperನಲ್ಲಿ (೨೦೦೧), ನೂರಕ್ಕೂ ಹೆಚ್ಚು ವಿವಿಧ ರೀತಿಯ ಹೋಮೋಫಿಲಿಯ ಅಧ್ಯಯನಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಅಧ್ಯಯನಗಳು ಲಿಂಗ, ವಯಸ್ಸು, ಹುದ್ದೆ ಹಾಗೂ ವಿವಿಧರೀತಿಯ ದರ್ಜೆಗಳಾಧಾರಿತ ಹೋಮೊಫಿಲಿಯ ಮೇಲೆ ಗಮನ ಹರಿಸುತ್ತವೆ.

ಲೆಜ಼ಾರ್ಸ್‍ ಫೆಲ್ಡ್ ಮತ್ತು ಮೆರ್ಟೋನ್ (೧೯೫೪)ರು ಮೂಲತಃ ಹೋಮೋಫಿಲಿಯಲ್ಲಿ ದರ್ಜೆಯಾಧಾರಿತ ಹೋಮೋಫಿಲಿ(status homophily) ಮತ್ತು ಮೌಲ್ಯಾಧಾರಿತ ಹೋಮೋಫಿಲಿ(value homophily) ಎಂಬ ಎರಡು ವಿಧಗಳನ್ನು ಗುರುತಿಸಿದ್ದರು. ದರ್ಜೆಯಾಧಾರಿತ ಹೋಮೋಫಿಲಿ(status homophily)ಯ ಪ್ರಕಾರ, ಸಮಾಜದಲ್ಲಿ ಸಮಾನ ದರ್ಜೆಯ ಜನರು ಗುಂಪುಗೂಡುವ ಸಾಧ್ಯತೆಯು, ಆಕಸ್ಮಿಕ ಜನರು ಗುಂಪುಗೂಡುವ ಸಾಧ್ಯತೆಗಿಂತ ಹೆಚ್ಚು. ಹಾಗೆಯೇ, ಮೌಲ್ಯಾಧಾರಿತ ಹೋಮೋಫಿಲಿ(value homophily)ಯಲ್ಲಿ, ಸಮಾನ ಮೌಲ್ಯಗಳನ್ನುಳ್ಳ ಜನರು ಗುಂಪುಗೂಡುವ ಸಾಧ್ಯತೆ ಹೆಚ್ಚು.

ಹೋಮೋಫಿಲಿಯ ಪ್ರಸ್ತುತತೆಯನ್ನು ಪರೀಕ್ಷಿಸುವಸಲುವಾಗಿ, ಸಂಶೋಧನಾಕಾರರು ಹೋಮೋಫಿಲಿಯನ್ನು baseline homophily ಮತ್ತು inbreeding homophily ಎಂದು ಎರಡು ತೀವ್ರತೆಗಳಲ್ಲಿ ವಿಭಾಗಿಸುತ್ತಾರೆ. baseline homophilyಯು, ಸಾಮಾನ್ಯವಾಗಿ ನಿರೀಕ್ಷಿಸಬಹುದಾದಷ್ಟು (expected amount of homophily) ಹೋಮೋಫಿಲಿಯ ಸೂಚಕವಾಗಿದೆ. ಅದೇ, inbreeding homophilyಯು baseline homophilyಗಿಂತಲೂ ಅಧಿಕವಾಗಿ ಕಂಡುಬರುವ ಹೋಮೋಫಿಲಿಯನ್ನು ಸೂಚಿಸುತ್ತದೆ.

ವ್ಯಕ್ತಿಗತವಾದ ಹೋಮೋಫಿಲಿಕ್ ಸಂಬಂಧಗಳು, ಅವರ ಮಧ್ಯದ ಸಾಮಾನ್ಯ ಗುಣಲಕ್ಷಣಗಳ ಮೇಲೆ ಆಧಾರಿತವಾಗಿರುತ್ತವೆ. ನಂಬಿಕೆಗಳು, ಮೌಲ್ಯಗಳು, ಆಸಕ್ತಿಗಳು, ಶೈಕ್ಷಣಿಕ-ಅರ್ಹತೆ ಮುಂತದವುಗಳು ಸಾಮಾನ್ಯ ಗುಣಲಕ್ಷಣಗಳ ಉದಾಹರಣೆಗಳಾಗಿವೆ. ಈ ಸಾಮಾನ್ಯ ಗುಣಲಕ್ಷಣಗಳು, ಈ ಜನರ ತಮ್ಮ-ತಮ್ಮಲ್ಲಿಯೇ ಹೆಚ್ಚಾಗಿ ವ್ಯವಹರಿಸಲು ಹಾಗೂ ಸಂಪರ್ಕವರ್ಧಿಸಲು ಪ್ರೇರೇಪಿಸುತ್ತವೆ. ಅನೇಕ ಸಂದರ್ಭಗಳಲ್ಲಿ ಹೋಮೋಫಿಲಿಯಿಂದ ಒಂದುಗೂಡಿದ ಜನರು ಮದುವೆಯಾಗುವ ಸಾಧ್ಯತೆಯೂ ಇದೆ. ಇದನ್ನು ಹೋಮೋಗ್ಯಾಮಿ(Homogamy) ಎನ್ನುತ್ತಾರೆ.

ಇವನ್ನೂ ಗಮನಿಸಿ[ಬದಲಾಯಿಸಿ]

ಅಡಿ ಟಿಪ್ಪಣಿಗಳು[ಬದಲಾಯಿಸಿ]

  • McPherson, M., Smith-Lovin, L., & Cook, J.M. (2001). Birds of a Feather: Homophily in Social Networks[ಶಾಶ್ವತವಾಗಿ ಮಡಿದ ಕೊಂಡಿ]. Annual Review of Sociology. 27:415–44.
  • P. F. Lazarsfeld, R. K. Merton (1954). Friendship as a Social Process: A Substantive and Methodological Analysis. In Freedom and Control in Modern Society, Morroe Berger, Theodore Abel, and Charles H. Page, eds. New York: Van Nostrand, 18–66.