ಹೊನ್ನುಡಿ (ಸಮಾಚಾರಪತ್ರಿಕೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

{{multiple issues|

ಹೊನ್ನುಡಿ

ಕೋಲಾರದಿಂದ 1979ರಲ್ಲಿ ಪ್ರಕಟಣೆ ಆರಂಭಿಸಿದ ‘ಹೊನ್ನುಡಿ’ https://web.archive.org/web/20161227060647/http://rni.nic.in/display_details.asp?regn=29940 ಕನ್ನಡ ದಿನಪತ್ರಿಕೆಗೆ ಆರಂಭದ ಸಂಪಾದಕರಾಗಿದ್ದವರು ಅ.ನಾ.ಪ್ರಹ್ಲಾದರಾವ್. ಕೋಲಾರ ತಾಲ್ಲೂಕಿನ ಅಬ್ಬಣಿ ಗ್ರಾಮದ [[ಅ.ನಾ.ಪ್ರಹ್ಲಾದರಾವ್]] ಅದಕ್ಕೂ ಮುನ್ನ ಕೋಲಾರ ಪತ್ರಿಕೆ ದೈನಿಕದಲ್ಲಿ ಉಪಸಂಪಾದಕ/ವರದಿಗಾರರಾಗಿದ್ದರು.


ಕೋಲಾರದಿಂದ ಪ್ರಕಟಗೊಂಡ ಮೂರನೆಯ ದಿನಪತ್ರಿಕೆಯಾಗಿ ಹೊಮ್ಮಿ ಬಂದ ‘ಹೊನ್ನುಡಿ’ ಹೊಸ ಆಶಯಗಳೊಂದಿಗೆ ಕಾರ್ಯನಿರ್ವಹಿಸಿತು. ತಾಲ್ಲೂಕು ಕೇಂದ್ರಗಳಷ್ಟೇ ಅಲ್ಲದೆ, ಕೆಲವು ಮುಖ್ಯ ಹೋಬಳಿ ಕೇಂದ್ರಗಳಲ್ಲಿ ವರದಿಗಾರರನ್ನು ನೇಮಸಿಕೊಂಡು, ರೈತರ ಸ್ಥಳೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿತು. ಕನ್ನಡಪರ ಹೊರಾಟ, ಆಗ ಮುಂಚೂಣಿಯಲ್ಲಿದ್ದ ದಲಿತ ಸಂಘರ್ಷ ಸಮಿತಿಯ ಚಟುವಟಿಕೆಗಳಿಗೆ ಪ್ರಾಶಸ್ತ್ಯ ನೀಡಿ ವರದಿಗಳನ್ನು ಪ್ರಕಟಿಸಿತು. ಗೋಕಾಕ್ ವರದಿ ಜಾರಿಗಾಗಿ ಡಾ.ರಾಜಕುಮಾರ್ ಅವರ ನೇತೃತ್ವದಲ್ಲಿ ನಡೆದ ಚಳವಳಿಗೆ ಹೆಚ್ಚಿನ ಪ್ರಚಾರ ನೀಡಿ, ಗಡಿ ಭಾಗವಾದ ಕೋಲಾರ ಜಿಲ್ಲೆಯಲ್ಲಿ ಕನ್ನಡಿಗರ ಮನದಲ್ಲಿ ಜಾಗೃತಿ ಬಿತ್ತುವ ಕೆಲಸ ಮಾಡಿತು.


ಜಿಲ್ಲಾ ಮಟ್ಟದ ಪತ್ರಿಕೆಯೊಂದು ಪ್ರಥಮ ಬಾರಿಗೆ ಪ್ರತಿ ನಿತ್ಯ ಸಂಪಾದಕೀಯ ಬರೆಯಲಾರಂಭಿಸಿತು. ಅಲ್ಲದೆ, ಭ್ರಷ್ಟರನ್ನು ನಡುಗಿಸುವಂತಹ ತೀಕ್ಷ್ಣ ಭಾಷೆಯ ‘ಹೊನ್ನಲಗು’ ಹಾಗೂ ಸುದ್ದಿಗಳನ್ನು ಟೀಕಿಸುವ ‘ಹೊನ್ನಂಬು’ ಅಂಕಣಗಳನ್ನು ಆರಂಭಿಸಿತು. ಪ್ರತಿ ನಿತ್ಯ ಸಂಪಾದಕೀಯ ಹಾಗೂ ಈ ಎರಡೂ ಅಂಕಣಗಳನ್ನು ಅ.ನಾ.ಪ್ರಹ್ಲಾದರಾವ್ ಅವರೇ ಬರೆಯುತ್ತಿದ್ದರು. ಪ್ರತಿ ಭಾನುವಾರ ಕಥೆ, ಕವನ, ಲೇಖನಗಳನ್ನು ಪ್ರಕಟಿಸುವ ಮೂಲಕ ಸ್ಥಳೀಯ ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ನೀಡಿತು.


ಕೋಲಾರದ ಹಿರಿಯ ಪತ್ರಕರ್ತರಾಗಿದ್ದ ಜಿ.ನಾರಾಯಣಸ್ವಾಮಿ, ಇಂದಿನ ಖ್ಯಾತ ವಕೀಲ ಸಿ.ಎಸ್.ದ್ವಾರಕಾನಾಥ್, ಕವಿ, ಲೇಖಕ, ಚಿಂತಕ ಕೋಟಿಗಾನಹಳ್ಳಿ ರಾಮಯ್ಯ, ಕಾವ್ಯ ರಚನೆಗಾರ ಲಕ್ಷ್ಮೀಪತಿ ಕೋಲಾರ, ಸಮಾಜವಾದಿ ಹ.ಸೋಮಶೇಖರ್, ಹಿರಿಯ ಪತ್ರಕರ್ತರಾಗಿದ್ದ ಬಾಲಕೃಷ್ಣ ಕಾಕತ್ಕರ್,  ವಿಜ್ಞಾನ ಲೇಖಕ ಹೆಚ್.ಎ.ಪುರುಷೋತ್ತಮರಾವ್, ನಿವೃತ್ತ ಪ್ರಾಂಶುಪಾಲರಾದ ಕೆ.ಆರ್.ನರಸಿಂಹನ್, ಕೋಲಾರದ ರಾಮಮೂರ್ತಿ, ಕನ್ನಡ ಭಾಷಾ ಬೆಳವಣಿಗೆಗೆ ಪೂರಕವಾಗಿರುವ ಕೆ.ರಾಜಕುಮಾರ್, ಲೇಖಕರಾದ ಜಗನ್ನಾಥ ಪ್ರಕಾಶ್, ಗೋ.ರಂಗಪ್ಪ, ಎನ್.ವೆಂಕಟಕೃಷ್ಣ, ಅರಳುಮಲ್ಲಿಗೆ ಗಂಗಾಧರಯ್ಯ, ನಾ.ಗಿರೀಶ್ ಬಾಬು, ನ.ರಾ.ಪುರುಷೋತ್ತಮ್, ಸೋಮಶೇಖರಗೌಡ  ಮುಂತಾದ ಹಿರಿ ಕಿರಿಯ ಲೇಖಕಕರು ಅ.ನಾ.ಪ್ರ ಸಂಪಾದಕತ್ವದ ‘ಹೊನ್ನುಡಿ’ ದಿನ ಪತ್ರಿಕೆಗಾಗಿ, ವರದಿ, ಲೇಖನ, ಕಥೆ, ಕವನಗಳನ್ನು ಬರೆದು ಕೊಡುತ್ತಿದ್ದರು. ಚಿಕ್ಕಬಳ್ಳಾಪುರದಿಂದ ಮಾಜಿ ಸಚಿವರಾಗಿದ್ದ ಕೆ.ಎಂ.ಮುನಿಯಪ್ಪ ವರದಿಗಾರರಾಗಿ ಕಾರ್ಯನಿರ್ವಹಿಸಿದರು.

1983ರಲ್ಲಿ ಅ.ನಾ.ಪ್ರಹ್ಲಾದರಾವ್ ಕರ್ನಾಟಕ ಸರ್ಕಾರದ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಗೆ ಸೇರಿಕೊಂಡ ನಂತರ ಅವರು ಪತ್ರಿಕೆಯ ಸಂಪರ್ಕ ಕಡಿದುಕೊಂಡರು. ಪ್ರಕಾಶಕರಾಗಿದ್ದ ಎಂ.ಜಿ.ಪ್ರಭಾಕರ್ ಕೆಲವು ವರ್ಷ ಮುನ್ನೆಡೆಸಿದರು.