ಹೆವ್ಲೆಟ್-ಪ್ಯಾಕರ್ಡ್
ಹೆವ್ಲೆಟ್-ಪ್ಯಾಕರ್ಡ್ ಕಂಪನಿ (NYSE: HPQ), ಸಾಮಾನ್ಯವಾಗಿ HP ಎಂದು ಹೆಸರಿಸಲಾಗುತ್ತದೆ, USAದ ಕ್ಯಾಲಿಫೋರ್ನಿಯಾದ ಪಾಲೊ ಆಲ್ಟೊದಲ್ಲಿ ಮುಖ್ಯ ಕಛೇರಿ ಹೊಂದಿರುವ ಒಂದು ಗ್ರಾಹಕರ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ . HP ವಿಶ್ವದ ಅತಿ ದೊಡ್ಡ ತಂತ್ರಜ್ಞಾನ ಹೊಂದಿರುವ ಕಂಪನಿ ಸುಮಾರು ಎಲ್ಲದೇಶಗಳಲ್ಲಿಯೂ ಇದು ಕಾರ್ಯ ನಿರ್ವಹಿಸುತ್ತದೆ. HP ಯು ಉತ್ಪಾದನಾ ಎಣಿಕೆಯಲ್ಲಿ, ಶೇಖರಣೆಯಲ್ಲಿ, ಸಾಫ್ಟವೇರ್, ಹಾರ್ಡವೇರ್ ಜಾಲವನ್ನು ವೃದ್ಧಿಗೊಳಿಸುವಲ್ಲಿ ಮತ್ತು ಸೇವೆಯಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊ೦ದಿದೆ. ಪ್ರಮುಖ ಉತ್ಪಾದನೆಗಳೆ೦ದರೆ, ವೈಯಕ್ತಿಕ ಕಂಪ್ಯೂಟಿಂಗ್ ಡಿವೈಸ್‌ಗಳು, ವ್ಯಾವಹಾರಿಕ ಸರ್ವರ್ ಗಳು, ಸ೦ಬ೦ದಿಸಿದ ಶೇಖರಣಾ ಡಿವೈಸ್‌ಗಳು, ಅಲ್ಲದೆ ವಿವಿಧ ಶ್ರೇಣಿಗಳ ಪ್ರಿ೦ಟರ್ ಗಳು ಹಾಗು ಇತರ ಇಮೇಜಿಂಗ್ ಉತ್ಪನ್ನಗಳು. HP ಯು ತನ್ನ ಉತ್ಪಾದನೆಗಳನ್ನು ದಿನಬಳಕೆಗೆ, ಸಣ್ಣದರಿ೦ದ ಮಧ್ಯ ಗಾತ್ರದ ವ್ಯಾಪಾರಗಳಲ್ಲಿ ಹಾಗು ವ್ಯಾವಹಾರದಲ್ಲಿ ನೇರವಾಗಿ, ಆನಲೈನ್ ಹ೦ಚುವಿಕೆಯ ಮುಖಾ೦ತರ, ಗ್ರಾಹಕರ-ಎಲೆಕ್ಟ್ರಾನಿಕ್ಸ್ ಮತ್ತು ಕಚೇರಿಗಳಿಗೆ-ವಿತರಿಸುವ ವ್ಯಾಪಾರಿಗಳಗೆ, ಸಾಫ್ಟವೇರ್ ಪಾಲುದಾರರಿಗೆ ಹಾಗು ಪ್ರಮುಖ ತಂತ್ರಜ್ಞಾನ ಮಾರಾಟಗಾರರಿಗೆ ಒದಗಿಸುತ್ತದೆ.2006 ರಲ್ಲಿ HP ಯ ಹೇಳಿಕೆಯ೦ತೆ ಅದರ ವಾರ್ಷಿಕ ಆದಾಯ ಯು ಎಸ್ $91.7 ಬಿಲಿಯನ್,[೨] ಈ ಆದಾಯವನ್ನು IBM ಗೆ ಹೋಲಿಸಿದರೆ ಅದರ ವಾರ್ಷಿಕ ಆದಾಯ ಯು ಎಸ್ $91.4 ಇದರಿ೦ದಾಗಿ HP ಯು ಪ್ರಪ೦ಚದಲ್ಲಿಯೇ ಅತೀ ಹೆಚ್ಚು ತಂತ್ರಜ್ಞಾನ ಮಾರಾಟಮಾಡಿದ ಹೆಗ್ಗಳಿಕೆ ಹೊಂದಿತು .2007 ರ ಆದಾಯವು $104 ಬಿಲಿಯನ್,[೩] ಇದರಿ೦ದಾಗಿ HP ಯು ಇತಿಹಾಸದಲ್ಲಿಯೇ $100 ಬಿಲಿಯನ್ ಆದಾಯವನ್ನು ಮೀರಿದ ಮೊದಲ IT ಕ೦ಪೆನಿಯಾಗಿ ಹೊರಹೊಮ್ಮಿತು.[೪]ಜನವರಿ 2008 ರಲ್ಲಿ ಮಾರ್ಕೆಟ್ ಸ೦ಶೋಧನಾ ಸ೦ಸ್ಥೆಯ ಗಾರ್ಟ್ನರ್ ಹಾಗು ಐಡಿಸಿ ಯವರ ದಾಖಲೆಯ ಪ್ರಕಾರ, HP ಯು ತನ್ನ ಪ್ರತಿಸ್ಪರ್ಧಿ ಡೆಲ್ ಅನ್ನು ಮೀರಿಸಿ ಪ್ರಪ೦ಚದಲ್ಲಿಯೇ ಅತೀ ಹೆಚ್ಚು ಪರ್ಸನಲ್ ಕ೦ಪ್ಯೂಟರ್ ಅನ್ನು ಮಾರಾಟ ಮಾಡಿದ ಕ೦ಪೆನಿಯಾಗಿದೆ ಎ೦ದು ಹೇಳಿದರು; [೫] HP ಯು 3.9% ಮಾರುಕಟ್ಟೆಯ ಪಾಲನ್ನು ತನ್ನದಾಗಿಸಿಕೊಳ್ಳುವ ಮೂಲಕ 2007ರ ಅ೦ತ್ಯದಲ್ಲಿ ತನ್ನ ಹಾಗು ಡೆಲ್‌ನ ಮಧ್ಯದ ಅ೦ತರವನ್ನು ಹೆಚ್ಚಿಸಿತು.HP ಯು ಪ್ರಪ೦ಚದಲ್ಲಿಯೇ ಆರನೇ ಅತೀ ದೊಡ್ಡ ಸಾಫ್ಟವೇರ್ ಕ೦ಪೆನಿ.[೬] 2008ರಲ್ಲಿ HP ಯು ಇ೦ಕ್ ಜೆಟ್, ಲೇಸರ್, ಲಾರ್ಜ್ ಫಾರ್ಮ್ಯಾಟ್ ಹಾಗು ಮಲ್ಟಿ ಫ೦ಕ್ಷನ್ ಪ್ರಿಂಟರ್‌ಗಳ ಮಾರಾಟದಲ್ಲಿ ವಿಶ್ವವ್ಯಾಪಿ ನಾಯಕತ್ವವನ್ನು ಉಳಿಸಿಕೊ೦ಡಿತು. ಅಲ್ಲದೆ ಐಡಿಸಿ ಹಾಗು ಗಾರ್ಟ್ನರ್ ಅವರ ಪ್ರಕಾರ HP ಯು ವಿಶ್ವದಲ್ಲಿಯೇ IT ಸೇವೆಯಲ್ಲಿ #2 ಸ್ಥಾನವನ್ನು ಪಡೆಯಿತು.[೭] ಸಾರ್ವಜನಿಕವಾಗಿ NYSE ನ ಅಧೀನದಲ್ಲಿ PC ಗಳನ್ನು ಮಾರಾಟ ಮಾಡುವತ್ತ ಕೇಂದ್ರೀಕರಿಸಿದ ಏಕೈಕ ಕಂಪ್ಯೂಟರ್ ಕಂಪನಿಯಾಗಿದೆ.1999ರಲ್ಲಿ ಕ೦ಪೆನಿಯಲ್ಲಾದ ಪ್ರಮುಖ ಬದಲಾವಣೆಗಳೆ೦ದರೆ ಸ್ಪಿನ್-ಆಫ್, ಇದು ಒ೦ದು ವ್ಯಾಪಾರದ ಅಜಿಲೆ೦ಟ್ ಟೆಕ್ನಾಲಜೀಸ್‌ನ ಒ೦ದು ಭಾಗ, 2002 ರಲ್ಲಿ ಇದು ಕಾ೦ಪ್ಯಾಕ್‌ನ ಜೊತೆಗೆ ಒಕ್ಕೂಟವನ್ನು ಸ್ಥಾಪಿಸಿತು, ಹಾಗು 2008 ರಲ್ಲಿ ಇಡಿಎಸ್ ಅನ್ನು ಸ್ವಾಧಿನಪಡಿಸಿಕೊಂಡಿತು, ಇದರಿ೦ದಾಗಿ 2008ರಲ್ಲಿ ಕ೦ಪೆನಿಯ ಆದಾಯ ಯುಎಸ್ ನ $118.4 ಬಿಲಿಯನಷ್ಟಾಯಿತು, ಹಾಗು 2009 ರಲ್ಲಿ ಫಾರ್ಚುನ್ ೫೦೦ ರಲ್ಲಿ 9 ನೇ ಸ್ಥಾನವನ್ನು ಪಡೆಯಿತು.[೭] ನವೆ೦ಬರ್ 2009 ರಲ್ಲಿ, 3 ಕಾಮ್ ಸ್ವಾಧೀನ ಪಡಿಸಿಕೊಂಡಿದುದನ್ನು HP ಘೋಷಿಸಿತು.
ಪರಿವಿಡಿ |
ಕಂಪನಿಯ ಇತಿಹಾಸ [ಬದಲಾಯಿಸಿ]
ಸ್ಥಾಪನೆ [ಬದಲಾಯಿಸಿ]
ವಿಲಿಯಮ್ (ಬಿಲ್) ಹೆವ್ಲೆಟ್ ಹಾಗೂ ಡೇವಿಡ್ (ಡೇವ್) ಪಾಕರ್ಡ್ ಇಬ್ಬರು ಸಹ ಸ್ಟಾನ್‌ಫೋರ್ಡ್ ಯುನಿವರ್ಸಿಟಿಯಿಂದ ಎಲೆಕ್ಟ್ರಿಕಲ್ ಇ೦ಜಿನಿಯರಿ೦ಗ್‌ನಲ್ಲಿ 1935ರಲ್ಲಿ ಪದವಿಯನ್ನು ಪಡೆದರು. ಕ೦ಪೆನಿಯ ಉಗಮವು, ಅವರ ಹಿ೦ದಿನ ಪ್ರಾದ್ಯಾಪಕರಾದ, ಫ್ರೆಡೆರಿಕ್ ಟರ್ಮನ್ ರವರ ಜೊತೆಗೆ ಪಾಲುದಾರಿಕೆಯಲ್ಲಿ ಸ್ಟಾನಫೋರ್ಡ್ ಯುನಿವರ್ಸಿಟಿಯಲ್ಲಿನ ಗ್ರೇಟ್ ಡಿಪ್ರೆಶನ್‌ನ ಸಮಯದಲ್ಲಿ ಪಾಲ್ ಆಲ್ಟೊನ ಹತ್ತಿರದ ಗ್ಯಾರೇಜಿನಲ್ಲಿ ಆಯಿತು.ಹೆವ್ಲೆಟ್-ಪ್ಯಾಕರ್ಡ್‌ನ ಬೆಳವಣಿಗೆಯಲ್ಲಿ ಟರ್ಮನ್‌ಅನ್ನು ಉಲ್ಲೇಖಾರ್ಹ ವ್ಯಕ್ತಿ ಎ೦ದು ಪರಿಗಣಿಸಲಾಯಿತು.[೮]1939ರಲ್ಲಿ, ಪ್ಯಾಕರ್ಡ್ ಹಾಗು ಹೆವ್ಲೆಟ್ ಅವರು ಹೆವ್ಲೆಟ್-ಪ್ಯಾಕರ್ಡ್(HP) ಅನ್ನು ಪ್ಯಾಕರ್ಡ್ ಗ್ಯಾರೇಜ್‌ನಲ್ಲಿ ಯುಎಸ್ $538 ರಷ್ಟು ಹಣಹೂಡಿಕೆಯಿ೦ದ ಸ್ಥಾಪಿಸಿದರು.[೯] ಹೆವ್ಲೆಟ್ ಹಾಗು ಪ್ಯಾಕರ್ಡ್ ಅವರುಗಳು ಒ೦ದು ನಾಣ್ಯವನ್ನು ಟಾಸ್ ಮಾಡಿ ಅವರು ಸ್ಥಾಪಿಸಿದ ಕ೦ಪೆನಿಗೆ ಹೆವ್ಲೆಟ್-ಪ್ಯಾಕರ್ಡ್ ಅಥವಾ ಪ್ಯಾಕರ್ಡ್-ಹೆವ್ಲೆಟ್ ಎ೦ಬ ಹೆಸರಿಡಬೇಕೆ ಎ೦ದು ನಿರ್ಧರಿಸಿದರು. ಪ್ಯಾಕರ್ಡ್ ತಾನು ನಾಣ್ಯವನ್ನು ಟಾಸ್ ಮಾಡಿ ಗೆದ್ದ ನ೦ತರವು ಸಹ ಅವರ ಎಲೆಕ್ಟ್ರಾನಿಕ್ ಉತ್ಪಾದನಾ ಕ೦ಪೆನಿಗೆ "ಹೆವ್ಲೆಟ್-ಪ್ಯಾಕರ್ಡ್ ಕಂಪನಿ" ಎ೦ದು ನಾಮಕರಣ ಮಾಡಿದರು. HPಯು 1947 ಆಗಸ್ಟ್ 18 ರಲ್ಲಿ ಏಕೀಕೃತವಾಯಿತು, ಹಾಗು 1957 ನವೆ೦ಬರ್ 6ರಲ್ಲಿ ಸಾರ್ವಜನಿಕವಾಗಿ ಬಿಡುಗಡೆಯಾಯಿತು. ಅವರು ಕೆಲಸ ಮಾಡಿದ ಬಹಳ ಯೋಜನೆಗಳಲ್ಲಿ, ಹಣಕಾಸಿನಲ್ಲಿ ಉತ್ತಮ ಪ್ರಗತಿ ಸಾಧಿಸಿದ ಮೊದಲ ಉತ್ಪಾದನೆಯೆ೦ದರೆ ಪ್ರಿಸಿಶನ್ ಆಡಿಯೋ ಆಸಿಲೇಟರ್, HP200A ಮಾದರಿ. ಈ ಹೊಸ ಕಲ್ಪನೆಯ ಉಪಯೋಗವೆ೦ದರೆ ಒ೦ದು ಸಣ್ಣ ಲೈಟ್ ಬಲ್ಬ್‌ನ ತಾಪಮಾನ ಅವಲ೦ಬಿತ ರೆಸಿಸ್ಟರ್ ಸರ್ಕ್ಯುಟ್‌ನಲ್ಲಿ ಸ೦ಧಿಗ್ಧ ಸ್ಥಾನದಲ್ಲಿ ಇರುತ್ತದೆ. ಇದರಿ೦ದಾಗಿ ಅವರುಗಳು 200A ಮಾದರಿಯ ಆಸಿಲೇಟರ್‌ಗಳನ್ನು $54.40 ಕ್ಕೆ ಮಾರಾಟ ಮಾಡಿದರು ಆದರೆ ಅದೇ ಸಮಯದಲ್ಲಿ ಅದಕ್ಕಿ೦ತ ಕಡಿಮೆ ಶಕ್ತಿಯ ಆಸಿಲೇಟರ್ ಗಳನ್ನು $200 ಗಳಿಗೆ ಅವರ ಪ್ರತಿಸ್ಪರ್ದಿಗಳು ಮಾರಾಟ ಮಾಡುತ್ತಿದ್ದರು.200AB ಟ್ಯೂಬ್ ಆಧಾರಿತ ಆದರೆ ಸ್ವಲ್ಪ ಸುಧಾರಿತ ವಿನ್ಯಾಸಗಳು ಮು೦ಬರುವ ವರ್ಷಗಳಲ್ಲಿ ಬರುವವರೆಗೆ, 200 ಮಾದರಿಯ ಶ್ರೇಣಿಗಳ ಜೆನೆರೇಟರ್‌ಗಳು 1972 ರವರೆಗೆ ಮು೦ದುವರಿಯಿತು. ಇದು ಪ್ರಾಯಶಃ ಸುಮಾರು 33 ವರ್ಷಗಳವರೆಗೆ ಎಲ್ಲ ಕಾಲದಲ್ಲಿಯು ಅತೀ ಹೆಚ್ಚು ಮಾರಾಟವಾದ ಮೂಲ ಎಲೆಕ್ಟ್ರಾನಿಕ್ ವಿನ್ಯಾಸವಾಗಿತ್ತು. ಆ ಕ೦ಪೆನಿಯ ಮೊದಲ ಗ್ರಾಹಕ ದಿ ವಾಲ್ಟ್ ಡಿಸ್ನಿ ಕ೦ಪೆನಿ , ಇದು ಎ೦ಟು ಮಾದರಿಯ 200B ಆಸಿಲೇಟರ್‌ಗಳನ್ನು ಖರೀದಿಸಿತು ಅದರ (ಪ್ರತಿಯೊ೦ದಕ್ಕೂ $71.50 )ಉಪಯೋಗವೆ೦ದರೆ ಸಿನಿಮಾ ಥಿಯೇಟರ್ ಗಳಲ್ಲಿ ಫಾ೦ಟಸಿಯಾ ಸಿನಿಮಾಕ್ಕಾಗಿ ಅಳವಡಿಸಿದ ಫಾ೦ಟ ಸೌ೦ಡ್ ಸರೌ೦ಡ್ ಸೌ೦ಡ್ಸಿಸ್ಟೆಮ್ಸ್‌ಗಳು ಪ್ರಮಾಣಿಸಲಾಗಿದೆ.
ಆರಂಭದ ದಿನಗಳು [ಬದಲಾಯಿಸಿ]
ಕ೦ಪೆನಿಯು ಮೂಲತಃ ಕಾರ್ಖಾನೆಗಳಿಗೆ ಹಾಗು ಅಗ್ರಿಕಲ್ಚರ್‌ಗೆ ಎಲೆಕ್ಟ್ರಾನಿಕ್ಸ್ ಉತ್ಪಾದನೆಗಳನ್ನು ವಿಸ್ತಾರವಾದ ಶ್ರೇಣಿಗಳಲ್ಲಿ ಒದಗಿಸುವುದರ ಬಗೆಗೆ ಹೆಚ್ಚಾಗಿ ಕೇ೦ದ್ರೀಕರಿಸಲಿಲ್ಲ. ನ೦ತರದ ಸಮಯದಲ್ಲಿ ಕ೦ಪೆನಿಯು ಹೆಚ್ಚು-ಉತ್ಕೃಷ್ಟವಾದ ಎಲೆಕ್ಟ್ರಾನಿಕ್ ಟೆಸ್ಟ್ ಹಾಗು ಅಳತೆಯ ಸಾಧನೆಗಳನ್ನು ಉತ್ಪಾದನೆಯನ್ನು ಆಯ್ಕೆ ಮಾಡಿಕೊಂಡಿತು. 1940 ರಿ೦ದ 1990 ರವರೆಗೆ ಕ೦ಪೆನಿಯು ಎಲೆಕ್ಟ್ರಾನಿಕ್ ಟೆಸ್ಟ್ ಸಾಧನಗಳಾದ-ಸಿಗ್ನಲ್ ಜೆನರೇಟರ್ಸ್,ವೋಲ್ಟ್ ಮೀಟರ್ಸ್,ಆಸಿಲೋಸ್ಕೋಪ್ಸ್,ಥರ್ಮಾಮೀಟರ್, ಟೈಮ್ ಸ್ಟಾ೦ಡರ್ಡ್ಸ್,ವೇವ್ ಅನಲೈಸರ್, ಹಾಗು ಕೆಲವು ಬೇರೆ ಉಪಕರಣಗಳನ್ನು ತಯಾರಿಸುವತ್ತ ಏಕಾಗ್ರತೆ ವಹಿಸಿದರು. ಅಳತೆಯ ಸಾಧನಗಳು ಹಾಗು ಅದರ ನಿಖರ ಮಟ್ಟವನ್ನು ಬಹಳಷ್ಟು ಭಿನ್ನವಾದ ಮುಖ್ಯಲಕ್ಷಣಗಳು ಪ್ರಚೋದಿಸಿದವು, ಅಲ್ಲದೆ ಬಹಳಷ್ಟು HP ಯ ಸಾಧನಗಳು ಬೇರೆ ಸಾಧನಗಳಿಗೆ ಹೋಲಿಸಿದರೆ ಹೆಚ್ಚು ಸೂಕ್ಷ್ಮ,ನಿಖರ, ಹಾಗು ಖಚಿತತೆಯನ್ನು ಹೊಂದಿರುತ್ತವೆ.[ಉಲ್ಲೇಖದ ಅಗತ್ಯವಿದೆ]ಕ೦ಪೆನಿಯು ತನ್ನ ಮೊದಲ ಉತ್ಪಾದನೆ 200Aಯ ಮಾದರಿಯನ್ನು ಅನುಸರಿಸಿ ತನ್ನ ಮು೦ದಿನ ಸಾಧನಗಳಿಗೆ ಮೂರರಿ೦ದ ಐದು ಅ೦ಕೆಗಳನ್ನು ಅನುಸರಿಸಿ "A" ಅಕ್ಷರವು ಬರುವ೦ತೆ ಹೆಸರಿಸಿತು. ಸುಧಾರಿತ ರೂಪಾ೦ತರಗಳ ಹೆಸರುಗಳು "B" ಇ೦ದ "E" ವರೆಗು ಸಹ ಹೆಸರುಗಳನ್ನು ಪಡೆಯಿತು. ಉತ್ಪಾದನೆಯು ಹೆಚ್ಚಿದ೦ತೆ HP ಯು ತನ್ನ ಉತ್ಪಾದನೆಗಳಿಗೆ ಅದರ ಉದ್ದೇಶಿತ ಹೆಸರಿನ ಮೊದಲ ಅಕ್ಷರವನ್ನು ಅ೦ದರೆ ಪರಿಕರಗಳು,ಸಾಫ್ಟವೇರ್‌ಗಳು,ಸಪ್ಲೈಗಳು ಹಾಗು ಬಿಡಿಭಾಗಗಳಿಗೆ ಇಡಲಾಯಿತು.
1960ರ ಸಮಯದಲ್ಲಿ [ಬದಲಾಯಿಸಿ]
1960 ರಲ್ಲಿ HPಯನ್ನು ಸಿಲಿಕಾನ್ ವ್ಯಾಲಿಯ ಸಾ೦ಕೇತಿಕ ಸ್ಥಾಪಕ ಎ೦ದು ಗುರುತಿಸಲಾಯಿತು, ಅದಾಗ್ಯೂ 1957 ರಲ್ಲಿ ಫೇರ್ ಸೆಮಿಕ೦ಡಕ್ಟರ್ ಅನ್ನು ರೂಪಿಸಲು "[[ಟ್ರೈಟೋರಸ್ ಎ೦ಟು"ರ ನ೦ತರ ಅದು ಹಲವಾರು ವರ್ಷಗಳವರೆಗೆ ವಿಲಿಯಮ್ ಶೋಕ್ಲೆ|ಟ್ರೈಟೋರಸ್ ಎ೦ಟು[["ರ ನ೦ತರ ಅದು ಹಲವಾರು ವರ್ಷಗಳವರೆಗೆ ವಿಲಿಯಮ್ ಶೋಕ್ಲೆ]]]] ಗೆ ನಿಷೇಧ ಹೇರಿತು ಹಾಗು ಸೆಮಿಕ೦ಡಕ್ಟರ್ ನ ಸ೦ಶೋಧನೆಯನ್ನು ಕ್ರಿಯಾಶೀಲವಾಗಿ ನಡೆಸಲಿಲ್ಲ. ಹೆವ್ಲೆಟ್-ಪ್ಯಾಕರ್ಡ್ ನ HP ಜತೆಗೂಡಿದ ಸ೦ಸ್ಥೆಯು, 1960 ರಲ್ಲಿ ಸ್ಥಾಪಿತವಾಯಿತು, ಹಾಗು ಸೆಮಿಕ೦ಡಕ್ಟರ್ ಸಾಧನಗಳನ್ನು ಆ೦ತರಿಕ ಬಳಕೆಗಾಗಿ ಮೊದಲು ರೂಪುಗೊಳಿಸಿದರು. ಉಪಕರಣಗಳು ಹಾಗು ಕ್ಯಾಲುಕ್ಯುಲೇಟರ್‌ಗಳು ಈ ಸಾಧನಗಳನ್ನು ಬಳಸಿಕೊ೦ಡವು.1960ರಲ್ಲಿ ಜಪಾನ್‌ನಲ್ಲಿ ಸೋನಿ ಹಾಗು ಯೊಕೋಗಾವ ಎಲೆಕ್ಟ್ರಿಕ್ ಕ೦ಪೆನಿಗಳ ಜೊತೆ HPಯು ಹಲವಾರು ಹೆಚ್ಚು-ಗುಣಮಟ್ಟದ ಉತ್ಪಾದನೆಗಳನ್ನು ಉತ್ಪಾದಿಸಲು ಸಹಯೋಗಮಾಡಿಕೊ೦ಡಿತು. ಈ ಉತ್ಪಾದನೆಗಳು ಭಾರಿ ಯಶಸ್ಸನ್ನು ನಿಡಲಿಲ್ಲ, ಏಕೆ೦ದರೆ ಜಪಾನ್ ನಲ್ಲಿ HP-ಯ ಉತ್ಪಾದನೆಗಳನ್ನು ಬೆಳೆಸಲು ಹೆಚ್ಚು ಬೆಲೆ ಬೇಕಾಗುತ್ತಿತ್ತು. HP ಹಾಗು ಯೊಕೋಗಾವ ಜೊತೆಯಲ್ಲಿ (ಯೊಕೋಗಾವ-ಹೆವ್ಲೆಟ್-ಪ್ಯಾಕರ್ಡ್) 1963 ರಲ್ಲಿ HPಯ ಉತ್ಪಾದನೆಗಳನ್ನು ಜಪಾನ್‌ನಲ್ಲಿ ಮಾರಾಟಮಾಡಲು ಪಣತೊಟ್ಟರು.[೧೦] ಯೊಕೋಗಾವ ಎಲೆಕ್ಟ್ರಿಕ್‌ನ ಹೆವ್ಲೆಟ್-ಪ್ಯಾಕರ್ಡ್‌ನ ಪಾಲನ್ನು ಜಪಾನ್‌ನಲ್ಲಿ 1999 ರಲ್ಲಿ HPಯು ತೆಗೆದುಕೊಂಡಿತು .[೧೧]HPಯು ಅತ್ಯ೦ತ ಸಣ್ಣ ಕ೦ಪೆನಿ, ಡೈನಾಕ್, ಅನ್ನು ವಿಶೇಷವಾದ ನಾಜೂಕಿನ ಡಿಜಿಟಲ್ ಸಾಧನಗಳನ್ನು ರೂಪುಗೊಳಿಸಲು ಪ್ರೇರೇಪಿಸಿತು. ಈ ಹೆಸರನ್ನು HP ಯ ಲೋಗೋ "hp" ಯಿಂದ ತೆಗೆದುಕೊಳ್ಳಲಾಯಿತು ಏಕೆ೦ದರೆ ಅದರ ಮೇಲಿನಿ೦ದ ಕೆಳಗಿನ ತಿರುಚಿದ ಪ್ರತಿಬಿ೦ಬವು ಹೊಸ ಕ೦ಪೆನಿ "dy" ಯ ಚಿಹ್ನೆಯನ್ನು ಹೋಲುತ್ತಿತ್ತು. ಡೈನಾಕ್ ಕಾಲಕ್ರಮೇಣ ಡೈಮೆಕ್ ಆಗಿ ಬದಲಾಯಿತು, ಹಾಗು 1959ರಲ್ಲಿ ಅದು ಮತ್ತೆ HP ಗೆ ವಾಪಸ್ಸಾಯಿತು.[೧೨]HP ಯು ಡಿಜಿಟಲ್ ಎಕ್ವಿಪಮೆ೦ಟ್ ಕಾರ್ಪೊರೇಶನ್ನ ಮಿನಿಕ೦ಪ್ಯೂಟರ್ ಹಾಗು ಅದರ ಉಪಕರಣಗಳನ್ನು ಬಳಸಿ ಸ೦ಶೋಧನೆಯನ್ನು ಮಾಡಿತು.ಆದರೆ DEC ಯ ಜೊತೆಗೆ ಒ೦ಪ್ಪ೦ದ ಮಾಡಿಕೊಳ್ಳುವುದಕ್ಕಿ೦ತ ಒ೦ದು ಸಣ್ಣ ಗು೦ಪನ್ನು ಕಟ್ಟುವುದು ಸುಲಭ ಎ೦ದು ನಿಶ್ಚಯಿಸಿ, HPಯು 1966 ರಲ್ಲಿ HP 2100 / HP 1000 ಶ್ರೇಣಿಯ ಮಿನಿ ಕ೦ಪ್ಯೂಟರ್ ಗಳ ಮಾರಾಟಕ್ಕೆ ಮಾರುಕಟ್ಟೆಯನ್ನು ಪ್ರವೇಶಿಸಿತು. ಇವುಗಳು ಸರಳ ಅಕ್ಯುಮುಲೇಟರ್ ನ ವಿನ್ಯಾಸವನ್ನು ಹೊ೦ದಿತ್ತು, ಅಲ್ಲದೆ ಅವುಗಳು ಇವತ್ತಿಗೂ ಬಳಕೆಯಲ್ಲಿರುವ ಇ೦ಟೆಲ್l x86 ನ ವಿನ್ಯಾಸಕ್ಕೆ ಹೋಲುವ೦ತೆ ಅದರ ದಾಖಲೆಗಳು ಇದ್ದವು. ಅದರ ಹಿಂದಿನ ಡೆಸ್ಕ್ ಟಾಪ್ ಶ್ರೇಣಿಗಳಾದ HP 9800 ಹಾಗು HP 250 ಮತ್ತು ವ್ಯಾಪಾರದ ಕ೦ಪ್ಯೂಟರ್‌ಗಳನ್ನು ಉತ್ಪಾದಿಸಲು ಸುಮಾರು 20 ವರ್ಷಗಳು ಬೇಕಾಯಿತು, ಅದಾಗ್ಯು ಅದನ್ನು ಬದಲಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರು.
1970ರ ಸಮಯದಲ್ಲಿ [ಬದಲಾಯಿಸಿ]
HP 3000 ವ್ಯಾಪಾರದ ಲೆಕ್ಕಪರಿಶೋಧನೆಗೆ ಸಹಾಯಕಾರಿಯಾದ ಮು೦ದುವರಿದ ಸ೦ಗ್ರಹಗಳ ವಿನ್ಯಾಸವಾಗಿದೆ, ಸ್ವಲ್ಪ ಕಾಲದ ನ೦ತರ ಇತ್ತೀಚೆಗೆ ಮಾರುಕಟ್ಟೆಯಿ೦ದ ನಿವೃತ್ತಿಹೊಂದಿ೦ದ RISC ತಂತ್ರಜ್ಞಾನದ ಜೊತೆಗೆ ಅದನ್ನು ಮರುವಿನ್ಯಾಸಗೊಳಿಸಲಾಯಿತು. ಫಾರ್ಮ್ಸ್-ಮೂಲದ ಸ೦ಪರ್ಕಗಳನ್ನು ASCII ಯ ತುದಿಗೆ ಜೋಡಿಸಲು ಸರಳ ಹಾಗು ಇಂಟಲಿಜೆಂಟ್ ಟರ್ಮಿನಲ್‌ಗಳನ್ನು ಹೊ೦ದಿರುವ HP 2640 ಶ್ರೇಣಿಗಳನ್ನು ಪರಿಚಯಿಸಿದರು, ಹಾಗು ಸ್ಕ್ರೀನ್ ಲೇಬಲ್ಡ್ ಫ೦ಕ್ಷನ್ ಕೀಗಳನ್ನು ಸಹ ಜೋಡಿಸಲಾಯಿತು, ಈಗ ಇವುಗಳನ್ನು ಸಾಮಾನ್ಯವಾಗಿ ಗ್ಯಾಸ್ ಪ೦ಪ್‌ಗಳಲ್ಲಿ ಹಾಗು ಬ್ಯಾ೦ಕ್ ಎಟಿಎಮ್ ಗಳಲ್ಲಿ ಉಪಯೋಗಿಸಲಾಗುತ್ತದೆ. ಅಲ್ಲದೆ ಲೆಕ್ಕಪರಿಶೋಧನೆಯಲ್ಲಿ ಬಳಸುವ ತಂತ್ರಜ್ಞಾನದ ಕಬಳಿಕೆಯಾಗದಿದ್ದರೆ, HP ಯು ನಿಧಾನವಾಗಿ ತಂತ್ರಜ್ಞಾನದ ಮಾರಾಟದಲ್ಲಿ IBM ಅನ್ನು ಸಹ ಮೀರಿಸಿ ಪ್ರಪ೦ಚದ ಅತಿ ಹೆಚ್ಚು ತಂತ್ರಜ್ಞಾನ ಮಾರಾಟಮಾಡುವ ಕಂಪನಿಯಾಗಿ ಹೊರಹೊಮ್ಮುತ್ತಿತ್ತು.[೧೩]
HP ಯು ಪ್ರಪ೦ಚದಲ್ಲಿಯೇ ಮೊದಲ ಭಾರಿಗೆ ದೊಡ್ಡ ಪ್ರಮಾಣದಲ್ಲಿ ವೈಯಕ್ತಿಕ ಕ೦ಪ್ಯೂಟರ್ ಹೆವ್ಲೆಟ್-ಪ್ಯಾಕರ್ಡ್ 9100A ಅನ್ನು ಉತ್ಪಾದಿಸಿ 1968ರಲ್ಲಿ ಮಾರುಕಟ್ಟೆಗೆ ಅದನ್ನು ಪರಿಚಯಿಸುವುದರ ಮೂಲಕ ವೈರ್ಡ್ ಮ್ಯಾಗಜೀನ್ ನಲ್ಲಿ ಗುರುತಿಸಲ್ಪಟ್ಟಿತು.[೧೪] HP ಯನ್ನು ಡೆಸ್ಕ್ ಟಾಪ್ ಕ೦ಪ್ಯೂಟರ್ ಎ೦ದು ಕರೆಯಲಾಯಿತು, ಏಕೆ೦ದರೆ ಬಿಲ್ ಹೆವ್ಲೆಟ್ ಅವರ ಹೇಳಿಕೆಯ೦ತೆ," ನಾವು ಅದನ್ನು ಕ೦ಪ್ಯೂಟರ್ ಎ೦ದು ಕರೆದಿದ್ದರೆ, ಅದು ಬಹುಶಃ ನಮ್ಮ ಕ೦ಪ್ಯೂಟರ್ ಗುರುಗಳಾದ ಗ್ರಾಹಕರಿ೦ದ ಕಡೆಗಣಿಸಲ್ಪಡುತ್ತಿತ್ತು’, ಏಕೆ೦ದರೆ ಅದು IBM ತರಹ ಕಾಣುತ್ತಿರಲಿಲ್ಲ. ಆದ್ದರಿ೦ದಲೇ ನಾವು ಅದನ್ನು ಕ್ಯಾಲುಕ್ಯುಲೇಟರ್ ಎ೦ದು ಕರೆಯಲು ತೀರ್ಮಾನಿಸಿದೆವು, ಹಾಗು ಆಗ ಎಲ್ಲ ತರಹದ ಅಸಂಬದ್ಧಗಳು ಕಣ್ಮರೆಯಾದವು." ಲಾಜಿಕ್ ಸರ್ಕ್ಯೂಟ್ ಗಳನ್ನು ಇ೦ಟೆಗ್ರೇಟೆಡ್ ಸರ್ಕ್ಯೂಟ್ಗಳನ್ನು ಉಪಯೋಗಿಸದೆ ಉತ್ಪಾದಿಸಲಾಯಿತು; CPU ನ್ನು ಬೇರೆ ಬೇರೆ ರೀತಿಯ ಭಾಗಗಳನ್ನು ಉಪಯೋಗಿಸಿ ಜೋಡಣೆಯನ್ನು ಮಾಡಲಾಯಿತು, ಇವುಗಳು ಆ ಸಮಯದಲ್ಲಿನ ಎ೦ಜಿನಿಯರಿ೦ಗ್ ಕ್ಷೇತ್ರದ ಗೆಲುವುಗಳಾಗಿವೆ. CRT ಪ್ರದರ್ಶನ, ಮ್ಯಾಗ್ನೆಟಿಕ್-ಕಾರ್ಡ್‌ನ ಸ೦ಗ್ರಹ, ಹಾಗು ಪ್ರಿಂಟರ್, ಈ ಎಲ್ಲವುಗಳ ಬೆಲೆ ಸುಮಾರು $5000 ಗಳಷ್ಟಾಗಿತ್ತು. ಆ ಮೆಶೀನ್‌ನ ಕೀಬೋರ್ಡ್, ವೈಜ್ಞಾನಿಕ ಕ್ಯಾಲುಕ್ಯುಲೇಟರ್ ಹಾಗು ಕೂಡಿಸುವ ಮೆಶೀನ್‌ಗಳೆರಡರ ನಡುವಿನ ಮಾದರಿಯಾಗಿತ್ತು. ಅದರಲ್ಲಿ ವರ್ಣಮಾಲೆಯ ಕೀಬೋರ್ಡ್ ಇರಲಿಲ್ಲ..[ಉಲ್ಲೇಖದ ಅಗತ್ಯವಿದೆ]ಆಪಲ್‌ನ ಸಹ-ಸ್ಥಾಪಕ ಸ್ಟೀವ್ ವೋಜ್ನಿಯಾಕ್, ಮೂಲತಃ ಆಪಲ್ Iಕಂಪ್ಯೂಟರ್ ಅನ್ನು HP ಯಲ್ಲಿ ಕೆಲಸ ಮಾಡುವಾಗ ವಿನ್ಯಾಸಗೊಳಿಸಿದರು, ಹಾಗು ಅವರ ಕೆಲಸವನ್ನು ರೈಟ್ ಆಫ್ ಫರ್ಸ್ಟ್ ರೆಫ್ಯುಸಲ್‌ನ ಅಡಿಯಲ್ಲಿ ಕ೦ಪೆನಿಗೆ ಪ್ರಸ್ಥಾಪಿಸಿದರು, ಆದರೆ ಕ೦ಪೆನಿಯು ವೈಜ್ಞಾನಿಕ, ವ್ಯಾಪಾರಿಕ, ಹಾಗು ಕೈಗಾರಿಕಾ ಮಾರುಕಟ್ಟೆಯಲ್ಲಿ ಉಳಿಯಲು ಬಯಸಿದ್ದರಿ೦ದ, ಆ ಪ್ರಸ್ಥಾವನೆಯನ್ನು ತೆಗೆದುಕೊಳ್ಳಲ್ಲಿಲ್ಲ.[ಉಲ್ಲೇಖದ ಅಗತ್ಯವಿದೆ] ಕ೦ಪೆನಿಯು ತನ್ನ ವಿವಿಧ ಉತ್ಪನ್ನಗಳಿಗೆ ಪ್ರಪ೦ಚದಾದ್ಯ೦ತ ಪ್ರಶ೦ಸೆಯನ್ನು ಗಳಿಸಿತು. ಅವರು ಪ್ರಪ೦ಚದ ಮೊದಲ ವೈಜ್ಞಾನಿಕ ಎಲೆಕ್ಟ್ರಾನಿಕ್ ಕೈಬಳಕೆಯ ಕ್ಯಾಲುಕ್ಯುಲೇಟರ್ (ದಿ HP-35) ಅನ್ನು 1972 ರಲ್ಲಿ , ಹಾಗು 1974 ರಲ್ಲಿ ಮೊದಲ ಹಾ೦ಡ್ ಹೆಲ್ಡ್ ಪ್ರೊಗ್ರಾಮೆಬಲ್ (ದಿ HP-65), 1979 ರಲ್ಲಿ ಮೊದಲ ವರ್ಣಮಾಲೆಯ, ಪ್ರೊಗ್ರಾಮೆಬಲ್, ಎಕ್ಸಪಾ೦ಡಬಲ್ (ದಿ HP-41C), ಹಾಗು ಮೊದಲ ಸಾ೦ಕೇತಿಕ ಮತ್ತು ರೇಖಾಚಿತ್ರದ ಕ್ಯಾಲುಕ್ಯುಲೇಟರ್, ದಿHP-28C ಬಳಕೆಗೆ ತ೦ದರು. ಅವರ ವೈಜ್ಞಾನಿಕ ಹಾಗು ಕೈಗಾರಿಕಾ ಕ್ಯಾಲುಕ್ಯುಲೇಟರ್ ಗಳ ತರಹ, ಅವರ ಆಸಿಲೋಸ್ಕೋಪ್, ಲಾಜಿಕ್ ಅನಲೈಸೆರ್, ಹಾಗು ಬೇರೆ ಅಳೆಯಬಲ್ಲ ಉಪಕರಣಗಳು ಸಹ ಅವುಗಳ ಸತ್ವದಿ೦ದ ಮತ್ತು ಬಳಕೆಯಿ೦ದ ಪ್ರಸಿದ್ಧಿಯನ್ನು ಪಡೆದವು ( ನ೦ತರದ ಉತ್ಪನ್ನಗಳು ಈಗಿನ ಎಜಿಲೆ೦ಟ್ ಉತ್ಪನ್ನಗಳ ಸಾಲಿನಲ್ಲಿಯೇ ಬರುತ್ತವೆ). ಕ೦ಪೆನಿಯ ಈಗಿನ ಸಮಯದಲ್ಲಿನ ವಿನ್ಯಾಸದ ತತ್ವಜ್ಞಾನವನ್ನು ಕ್ರೋಡೀಕರಿಸಿ ಈ ರೀತಿ ಹೇಳಬಹುದು "ಮು೦ದಿನ ಸಾಲಿನ ಹುಡುಗನಿಗೆ ಈ ವಿನ್ಯಾಸ".[ಉಲ್ಲೇಖದ ಅಗತ್ಯವಿದೆ]ತಾ೦ತ್ರಿಕ ಡೆಸ್ಕ್ ಟಾಪ್ ಕಂಪ್ಯೂಟರ್‌ಗಳ 98x5 ಶ್ರೇಣಿಗಳು 1975 ರಲ್ಲಿ 9815 ರ ಜೊತೆಗೆ ಪ್ರಾ೦ಭವಾಯಿತು, ಹಾಗು ಕಡಿಮೆ ಬೆಲೆಯ 80 ಶ್ರೇಣಿಗಳು, ಮತ್ತೆ ತಾ೦ತ್ರಿಕ ಕಂಪ್ಯೂಟರ್‌ಗಳು 1979 ರಲ್ಲಿ 85[೧]ರ ಜೊತೆಗೆ ಆರ೦ಭವಾಯಿತು. ಈ ಉಪಕರಣಗಳು BASIC ಪ್ರೋಗ್ರಾಮಿ೦ಗ್ ಭಾಷೆಯ ರೂಪಾ೦ತರವನ್ನು ಬಳಸಿದವು, ಇವುಗಳು ಉಪಕರಣಗಳನ್ನು ತೆಗೆದ ತಕ್ಷಣವೇ ಪರದೆಯ ಮೇಲೆ ಬರುತ್ತಿದ್ದವು ಹಾಗು ಅಯಸ್ಕಾ೦ತೀಯ ಒಡೆತನದ ಟೇಪ್ ಗಳನ್ನು ಸ೦ಗ್ರಹಕ್ಕಾಗಿ ಬಳಸಿದವು. HP ಕಂಪ್ಯೂಟರ್ ಗಳು ನ೦ತರದIBM ಪರ್ಸನಲ್ ಕಂಪ್ಯೂಟರ್ಗಳಿಗೆ ಸರಿಸಮಾನವಾದ ಸಾಮರ್ಥ್ಯವನ್ನು ಹೊ೦ದಿದ್ದವು, ಅಲ್ಲದೇ ಬಳಕೆಯಲ್ಲಿರುವ ತಂತ್ರಜ್ಞಾನಗಳು ಕೆಲವು ಮಿತಿಗಳನ್ನು ಹೊ೦ದಿದ್ದರಿ೦ದ ಅವುಗಳ ಬೆಲೆ ಏರಿಕೆಗೆ ದಾರಿಯಾಯಿತು.[ಉಲ್ಲೇಖದ ಅಗತ್ಯವಿದೆ]
1980ರ ಸಮಯದಲ್ಲಿ [ಬದಲಾಯಿಸಿ]
1984 ರಲ್ಲಿ, HP ಯು inkjet ಹಾಗು ಲೇಸರ್ ಪ್ರಿಂಟರ್ ಎರಡನ್ನು ಡೆಸ್ಕ್‌ಟಾಪ್‌ಗಳಿಗಾಗಿ ಪರಿಚಯಿಸಿತು. ತನ್ನ ಸ್ಕ್ಯಾನರ್ ಉತ್ಪಾದನಾ ಸಾಲುಗಳ ಜೊತೆಗೆ, ನ೦ತರದ ದಿನಗಳಲ್ಲಿ ವಿವಿಧ ಉಪಯೋಗದ ಉತ್ಪಾದನೆಗಳನ್ನು ಪರಿಚಯಿಸಿದರು, ಅದರಲ್ಲಿ ಪ್ರಮುಖವಾದವುಗಳೆ೦ದರೆ ಸಿ೦ಗಲ್-ಯುನಿಟ್ ಪ್ರಿಂಟರ್/ ಸ್ಕ್ಯಾನರ್/ ಕಾಪಿಯರ್/ ಫಾಕ್ಸ್ ಉಪಕರಣಗಳು. HP ಯ ಬೃಹತ್ ಪ್ರಸಿದ್ಧಿಯ ಲೇಸರ್ ಜೆಟ್ ಪ್ರಿಂಟರ್ ಗಳ ಪಾಯಿ೦ಟ್ ಯಾಂತ್ರಿಕರಚನೆಯ ಬಹಳಷ್ಟು ಭಾಗವು ಕೆನಾನ್ 'ನ ಭಾಗ (ಪ್ರಿ೦ಟ್ ಇ೦ಜಿನ್), ಗಳನ್ನು ಹೋಲುತ್ತಿದ್ದವು, ಅಲ್ಲದೆ ಅವುಗಳು ಜೆರಾಕ್ಸ್ ಸಿದ್ಧಪಡಿಸಿದ ತಂತ್ರಜ್ಞಾನವನ್ನು ಬಳಸಿದ್ದವು. HP ಯು ಮಾಹಿತಿಯಿ೦ದ ಚುಕ್ಕೆಗಳಿಗೆ ಪರಿವರ್ತನೆ ಮಾಡಿ ಪ್ರಿ೦ಟ್ ಮಾಡುವ ಹಾರ್ಡವೇರ್, ಸಾಫ್ಟವೇರ್, ಹಾಗು ಫರ್ಮವೇರ್ ತಂತ್ರಜ್ಞಾನವನ್ನು ಸಿದ್ಧಪಡಿಸಿದರು. ಮಾರ್ಚ್ 3, 1986 ರಲ್ಲಿ HP ಯು HP.com ಡೊಮೈನ್ ಹೆಸರನ್ನು ಪಡೆಯಿತು, ಹಾಗು ಅ೦ತರ್ಜಾಲದಲ್ಲಿ ತನ್ನ ಹೆಸರಿನ ಡೊಮೈನ್ ಅನ್ನು ದಾಖಲಿಸಿದ ಒ೦ಭತ್ತನೇ ಕ೦ಪೆನಿಯಾಯಿತು.[೧೫]ಇದರಿ೦ದಾಗಿ HP ಯು ಪ್ರಪ೦ಚದಾದ್ಯ೦ತ ಇರುವ ದೊಡ್ಡ ಕ೦ಪೆನಿಗಳಲ್ಲಿ ಅ೦ತರ್ಜಾಲದಲ್ಲಿ ಎರಡು ಅಕ್ಷರದ ಡೊಮೈನ್ ಹೆಸರನ್ನು ಪಡೆದ ಒ೦ದು ಕ೦ಪೆನಿಯಾಗಿ ಹೊರಹೊಮ್ಮಿತು[೧೬]1987 ರಲ್ಲಿ, ಹ್ಯಾವ್ಲೆಟ್ ಹಾಗು ಪ್ಯಾಕರ್ಡ್ ತಮ್ಮ ಮೊದಲ ವ್ಯಾಪಾರ ಪ್ರಾರ೦ಭಿಸಿದ ಸ್ಥಳ ಪಾಲ್ ಆಲ್ಟೊ ಗ್ಯಾರೇಜ್‌ಅನ್ನು ಕ್ಯಾಲಿಫೋರ್ನಿಯ ಸ್ಟೇಟ್ ಹಿಸ್ಟಾರಿಕಲ್ ಲಾ೦ಡ್ಮಾರ್ಕ್ ಎ೦ದು ನಾಮಕರಣ ಮಾಡಲಾಯಿತು.
1990ರ ಸಮಯದಲ್ಲಿ [ಬದಲಾಯಿಸಿ]
ಮೊದಲಿಗೆ ಕೇವಲ ವಿಶ್ವವಿದ್ಯಾನಿಲಯಗಳು, ಸ೦ಶೋಧನೆ, ಹಾಗು ಕೈಗಾರಿಕಾವಲಯದಲ್ಲಿ ಇರುವ ಗ್ರಾಹಕರನ್ನು ಗುರಿಯಾಗಿ ಇಟ್ಟುಕೊ೦ಡಿದ್ದ HP ಯು 1990 ರಲ್ಲಿ, ತನ್ನ ಕ೦ಪ್ಯೂಟರ್ ಉತ್ಪಾದನೆಯನ್ನು ವಿವಿಧ ವಲಯಗಳಿಗೆ ವಿಸ್ತರಿಸಿತು.HP ಯು 1989 ರಲ್ಲಿ ಅಪೊಲೊ ಕಂಪ್ಯೂಟರ್ ಹಾಗು 1995ರಲ್ಲಿ ಕಾನ್ವೆಕ್ಸ್ ಕಂಪ್ಯೂಟರ್ ಅನ್ನು ಕೊಳ್ಳುವುದರ ಮೂಲಕ ತನ್ನ ವ್ಯಾಪಾರವನ್ನು ಹೆಚ್ಚಿಸಿತು.ನ೦ತರದ ದಶಕದಲ್ಲಿ, HP ಯು hpಶಾಪಿ೦ಗ್.ಕಾಮ್ ಎ೦ಬ ಸ್ವತಂತ್ರವಾಗಿ ಆನ್ ಲೈನ್ ನಲ್ಲಿ, ನೇರವಾಗಿ ಗ್ರಾಹಕರಿಗೆ ಮಾರಾಟಮಾಡಲು ಸಹಾಯಮಾಡುವ ಒ೦ದು ಜಾಲವನ್ನು ತೆರೆಯಿತು ಹಾಗು 2005ರಲ್ಲಿ ಅದನ್ನು "HP ಹೋಮ್ ಹಾಗು ಹೋಮ್ ಆಫೀಸ್ ಸ್ಟೋರ್." ಎ೦ದು ಮರು ನಾಮಕರಣ ಮಾಡಲಾಯಿತು. 1999 ರಲ್ಲಿ, ಕಂಪ್ಯೂಟರ್ ಗಳು, ಸ೦ಗ್ರಹ ಹಾಗು ಅದರ ಬಿ೦ಬಗಳಿಗೆ ಸ೦ಬಂಧ ಪಡದ ವ್ಯಾಪಾರಗಳನ್ನು HPಯು ಹೊರಹಾಕಿತು ಹಾಗು ಎಜಿಲೆ೦ಟ್ ಅನ್ನು ಹುಟ್ಟುಹಾಕಿತು. ಎಜಿಲೆ೦ಟ್ ನ ಹೊರಹಾಕುವಿಕೆಯೆ ಸಿಲಿಕಾನ್ ವ್ಯಾಲಿ ಯ ಇತಿಹಾಸದಲ್ಲಿ ಅತಿದೊಡ್ಡ ಆರಂಭದ ಸಾರ್ವಜನಿಕರಿಗೆ ಕೊಡುಗೆಯಾಗಿತ್ತು.[೧೭] ಈ ಹೊರಹಾಕುವಿಕೆಯ ಪ್ರಕ್ರಿಯೆಯಿ೦ದ ಕ೦ಪೆನಿಯು 30,000 ಕೆಲಸಗಾರರಿ೦ದ $8 ಬಿಲಿಯನ್ ನಷ್ಟು ಲಾಭವನ್ನು ಪಡೆಯಿತು, ಅಲ್ಲದೆ ವೈಜ್ಞಾನಿಕ ಸಲಕರಣೆಗಳು, ಸೆಮಿಕ೦ಡಕ್ಟರ್, ಆಪ್ಟಿಕಲ್ ನೆಟ್ವರ್ಕಿ೦ಗ್ ಸಾಧನಗಳು ಹಾಗು ಎಲೆಕ್ಟ್ರಾನಿಕ್ ಟೆಸ್ಟ್ ಸಾಧನಗಳ ಉತ್ಪಾದನೆಯನ್ನು ಟೆಲಿಕಾಮ್ ಹಾಗು ತ೦ತಿರಹಿತ R&D ಉತ್ಪಾದನೆಗಾಗಿ ಮಾಡಲಾಯಿತು. ಜುಲೈ 1999ರಲ್ಲಿ, ಕಾರ್ಲಿ ಫಿಯೊರಿನ ಅವರನ್ನು ಕ೦ಪೆನಿಯ ಸಿಇಒ ಆಗಿ HP ನೇಮಕಮಾಡಿತು, ಅಲ್ಲದೆ ಡೌ ಜೋನ್ಸ್ ಇ೦ಡಸ್ಟ್ರಿಯಲ್ ಆವರೇಜ್‌ನಲ್ಲಿ ಆಕೆ ಮೊದಲ ಮಹಿಳಾ ಸಿಇಒ. ಫಿಯೊರಿನ ಅವರು ಎರಡನೆಯ ಸಹಸ್ರವರ್ಷದ ನಡುಭಾಗದಲ್ಲಿ ಕ೦ಪೆನಿಯ ಸಿಇಒ ಆಗಿ ಕೆಲಸವನ್ನು ನಿರ್ವಹಿಸಿದರು. ಆಕೆಯ ಅನುಭವದಲ್ಲಿ, HPಯು ಆ ಸಮಯದಲ್ಲಿ ಬೇರೆ ಕ೦ಪೆನಿಗಳಿಗೆ ಹೋಲಿಸಿದರೆ ತಂತ್ರಜ್ಞಾನದಲ್ಲಿ ತಕ್ಕದ್ದಾಗಿತ್ತು ಹಾಗು ಆ ಕ೦ಪೆನಿ ಕೆಲಸಗಳಿಲ್ಲದೆ ನಷ್ಟಕ್ಕೀಡಾಯಿತು.[೧೮]
HP ಕ೦ಪೆನಿಯ ಆಡಳಿತ ಮ೦ಡಳಿಯವರು 2005ರಲ್ಲಿ ಆಕೆಯನ್ನು ಕೆಲಸ ಬಿಡಲು ಹೇಳಿದರು ಹಾಗು ಆಕೆ ಫೆಬ್ರವರಿ 9, 2005 ರಲ್ಲಿ ರಾಜಿನಾಮೆ ಕೊಟ್ಟಳು.
2000 ಹಾಗು ಅದಕ್ಕಿ೦ತ ಮು೦ಚೆ [ಬದಲಾಯಿಸಿ]
HP 2002 ರಲ್ಲಿ, ಕಾಂಪ್ಯಾಕ್‌ನ ಜೊತೆಗೆ ವಿಲೀನ ವಾಯಿತು. ವಿಲೀನ ಪ್ರಕ್ರಿಯೆಯು ಅಧಿಕೃತ ಪ್ರತಿನಿಧಿಯಾದ ಬಿಲ್ ಹೆವ್ಲೆಟ್‌ನ ಮಗ ವಾಲ್ಟರ್‌ನ ಹೋರಾಟದ ನ೦ತರ ಆಯಿತು, ಏಕೆ೦ದರೆ ಆತ ವಿಲೀನಕ್ಕೆ ತನ್ನ ಭಿನ್ನಾಭಿಪ್ರಾಯವನ್ನು ಸೂಚಿಸಿದ್ದನು.ಕಾಂಪ್ಯಾಕ್ ತಾನೇ ಸ್ವತಃ ಟಾ೦ಡೆಮ್ ಕ೦ಪ್ಯೂಟರ್‌ಗಳನ್ನು 1997ರಲ್ಲಿ (ಈ ಕ೦ಪೆನಿಯನ್ನು HP ಯ ಹಳೆಯ ಕೆಲಸಗಾರರು ಸ್ಥಾಪಿಸಿದ್ದರು) ಹಾಗು ಡಿಜಿಟಲ್ ಇಕ್ವಿಪ್‌ಮೆಂಟ್ ಕಾರ್ಪೊರೇಷನ್ ಅನ್ನು 1998 ರಲ್ಲಿ ಹೊರ ತ೦ದಿತು. ಈ ಕೌಶಲ್ಯಗಳನ್ನು ಬಳಸಿಕೊ೦ಡು, HP ಡೆಸ್ಕ್ ಟಾಪ್ಗಳು, ಲ್ಯಾಪ್‌ಟಾಪ್‌ಗಳು ಹಾಗು ಅನೇಕ ಸರ್ವರ್ ಗಳನ್ನು ವಿವಿಧ ಮಾರುಕಟ್ಟೆಗಳಲ್ಲಿ ಮಾರುವ ಬಹಳದೊಡ್ಡ ಕ೦ಪೆನಿಯಾಯಿತು. ಕಾ೦ಪ್ಯಾಕ್‌ನ ಜೊತೆಗಿನ ವಿಲೀನದ ನ೦ತರ, ಟಿಕ್ಕರ್ ಚಿಹ್ನೆ "HPQ" ಎ೦ದಾಯಿತು, ಇದು ಹಳೆಯ ಎರಡು ಚಿಹ್ನೆಗಳಾದ "HWP" ಹಾಗು "CPQ" ನ ಸ೦ಯುಕ್ತವಾಗಿದೆ ಹಾಗು ಒ೦ಪ್ಪ೦ದದ ಅ೦ತರ೦ಗವನ್ನು ತಿಳಿಯಪಡಿಸಲು, ಮತ್ತು ಇದು ಎರಡು ಕ೦ಪೆನಿಗಳಾದ ಹೆವ್ಲೆಟ್-ಪ್ಯಾಕರ್ಡ್ ' ಹಾಗು ಕಾ೦ಪಕ್' ನ ಮುಖ್ಯ ಅಕ್ಷರಗಳಾಗಿದೆ (ಕಾ೦ಪ್ಯಾಕ್ ತನ್ನ ಉತ್ಪನ್ನಗಳ ಮೇಲಿನ ಚಿಹ್ನೆ ಹಾಗು ಚಿಹ್ನೆಯಲ್ಲಿರುವ "Q" ಅಕ್ಷರದಿ೦ದಾಗಿ ಪ್ರಸಿದ್ಧವಾಯಿತು.ಮೇ 2006 ರಲ್ಲಿ, HPಯು ತನ್ನ ದಿ ಕಂಪ್ಯೂಟರ್ ಈಸ್ ಪರ್ಸನಲ್ ಅಗೈನ್ ಎ೦ಬ ಹೋರಾಟವನ್ನು ಪ್ರಾರ೦ಭಿಸಿತು. ಈ ಹೋರಾಟವನ್ನು ಪಿಸಿ ಒ೦ದು ವೈಯಕ್ತಿಕ ಉತ್ಪಾದನೆ ಎ೦ಬ ಸತ್ಯವನ್ನು ತಿಳಿಯಪಡಿಸಲು ವಿನ್ಯಾಸಗೊಳಿಸಲಾಯಿತು. ಮಾರುಕಟ್ಟೆಗೆ, ಕಣ್ಣಿಗೆ ಗೋಚರಿಸುವ ಹಾಗೆ ಇರುವ ಸೌಲಭ್ಯಗಳನ್ನು ಹಾಗು ತನ್ನ ಸ್ವ೦ತ ಅ೦ತರ್ಜಾಲವನ್ನು (www.hp.com/personal) ಹುಟ್ಟುಹಾಕಲು ಈ ಹೋರಾಟವನ್ನು ಉಪಯೋಗಿಸಿಕೊಳ್ಳಲಾಯಿತು ಕೆಲವೊ೦ದು ಜಾಹೀರಾತುಗಳಲ್ಲಿ ಪ್ರಸಿದ್ಧ ವ್ಯಕ್ತಿಗಳಾದ, ಫಾರೆಲ್ಲ್, ಪೆಟ್ರ ನೆಮ್ಕೊವ, ಮಾರ್ಕ್ ಬರ್ನೆಟ್ಟ್, ಮಾರ್ಕ್ ಕ್ಯುಬನ್, ಜೇ-Z, ಗ್ವೆನ್ ಸ್ಟಿಫಾನಿ ಹಾಗು ಶಾನ್ ವೈಟ್ ಗಳು ಸಹ ಪಾತ್ರಧಾರಿಗಳಾಗಿದ್ದರು. ಮೇ 13, 2008 ರಲ್ಲಿ, HP ಹಾಗು ಎಲೆಕ್ಟ್ರಾನಿಕ್ ಡಾಟ ಸಿಸ್ಟೆಮ್ ಈ ರೀತಿಯಾಗಿ ಘೋಷಿಸಿತು [೧೯]ನಾವುಗಳು ಒ೦ದು ಒ೦ಪ್ಪ೦ದಕ್ಕೆ ಸಹಿ ಹಾಕಿದ್ದೇವೆ ಅದರ ಪ್ರಕಾರ HPಯು EDS ಅನ್ನು ಕೊ೦ಡುಕೊಳ್ಳುತ್ತದೆ. ಜೂನ್ 30ರಲ್ಲಿ HP ಈ ರೀತಿಯಾಗಿ ಹೇಳಿಕೆಯನ್ನು ನೀಡುತ್ತದೆ ಅದೇನೆ೦ದರೆ [೨೦] ಹಾರ್ಟ್-ಸ್ಕಾಟ್-ರೊಡಿನೊ ಅ೦ಟಿಟ್ರಸ್ಟ್ ಇ೦ಪ್ರುವ್‌ಮೆಂಟ್ಸ್ ಆಕ್ಟ್ನ ಅಡಿಯಲ್ಲಿ ಕಾಯುವ ಸಮಯವು 1976ರಲ್ಲಿ ಕೊನೆಗೊಳ್ಳುತ್ತದೆ "ವ್ಯವಹಾರಕ್ಕೆ ಇ೦ದಿಗೂ ಸಹ EDS ನ ಶೇರುದಾರರ ಸಮ್ಮತಿ ಅಗತ್ಯ ಹಾಗು ಯುರೋಪಿಯನ್ ಕಮಿಷನ್ ಹಾಗು ಇತರ ಯು ಎಸ್ ಕಾನೂನಿನ ಅಡಿಯಲ್ಲಿ ಬರುವ ಸ೦ಸ್ಥೆಗಳಿ೦ದ ನಿಯ೦ತ್ರಕ ಸಮ್ಮತಿ ಪತ್ರವನ್ನು ಪಡೆಯಬೇಕು ಹಾಗು ನ೦ತರ ಅದನ್ನು ಸಮಾಧಾನ ಅಥವ ಬದಲಿಯ ವಿಷಯಗಳಿಗೆ ಸ೦ಭ೦ದಿಸಿದ೦ತೆ ಮುಕ್ತಾಯದ ಅ೦ಶವನ್ನು ಸ್ಪಷ್ಟವಾಗಿ ವಿಲೀನ ಒ೦ಪ್ಪ೦ದದಲ್ಲಿ ನಮೂದಿಸಬೆಕಾಗುತ್ತದೆ." ಈ ಒಪ್ಪ೦ದವು ಆಗಸ್ಟ್ 26, 2008 ರಲ್ಲಿ ತೀರ್ಮಾನವಾಯಿತು ಹಾಗು EDS ಅನ್ನು "EDS ಒ೦ದು HP ಕಂಪನಿ" ಎ೦ದು ಮರು ನಾಮಕ ಮಾಡಿ ಸಾರ್ವಜನಿಕವಾಗಿ ಘೋಷಿಸಲಾಯಿತು. ಸೆಪ್ಟೆ೦ಬರ್ 23, 2009ರ ಸಮಯಕ್ಕೆ ಅದನ್ನು HP ಎ೦ಟರ್ಪೈಸ್ ಸರ್ವಿಸ್ ಎ0ದು ಕರೆಯಲಾಯಿತು.ನವೆ೦ಬರ್ 11, 2009ರಲ್ಲಿ, ಹೆವ್ಲೆಟ್-ಪ್ಯಾಕರ್ಡ್ ಸಂಸ್ಥೆಯು 3ಕಾಮ್ ಅನ್ನು $2.7 ಬಿಲಿಯನ್ ಹಣಕ್ಕೆ ತನ್ನದಾಗಿಸಿಕೊಳ್ಳುತ್ತದೆ ಎ೦ದು 3ಕಾಮ್ ಹಾಗು ಹೆವ್ಲೆಟ್-ಪ್ಯಾಕರ್ಡ್ ಘೋಷಿಸಿದವು.[೨೧]ತನ್ನದಾಗಿಸಿಕೊಳ್ಳುವುದು ವಶಪಡಿಸಿಕೊಳ್ಳುವಿಕೆಯ ವಿಧದಲ್ಲಿ ಒ೦ದು ದೊಡ್ಡ ಭಾಗವಾಗಿದೆ ಹಾಗು ತಂತ್ರಜ್ಞಾನದ ದೈತ್ಯ ಭಾಗದಲ್ಲಿ ಅದನ್ನು ದೂರ ತಳ್ಳುವ ಒ೦ದು ವಿಧವಾಗಿದೆ. 2007ರ ಹಣಕಾಸಿನ ವಿವಾದದ ಪ್ರಾರ೦ಭದಲ್ಲಿ, ತಂತ್ರಜ್ಞಾನದ ದೈತ್ಯರು ಸತತವಾಗಿ ಈಗಿರುವ ಮಾರುಕಟ್ಟೆಯ ನೆಲೆಯಲ್ಲಿ ಅದರ ಆಚೆಗೆ ಒತ್ತಡವನ್ನು ತಳ್ಳಲು ಪ್ರಯತ್ನಿಸಿದರು. ಡೆಲ್, ಪೆರೋಟ್ ಸಿಸ್ಟೆಮ್ ಅನ್ನು ಇತ್ತೀಚೆಗೆ ಹಿ೦ದಿನIBMನ ಒಡೆತನದ ವ್ಯಾವಹಾರಿಕ ತಂತ್ರಜ್ಞಾನದ ಪ್ರದೇಶವನ್ನು ತನ್ನದಾಗಿಸಿಕೊಳ್ಳಲು ಕೊ೦ಡುಕೊ೦ಡಿತು. ಹೆವ್ಲೆಟ್-ಪ್ಯಾಕರ್ಡ್' ಇತ್ತೀಚಿನ ಪ್ರತಿಸ್ಪರ್ಧಿಗಳ ಧಾಳಿಯಿ೦ದ ವ್ಯಾವಹಾರಿಕ ಜಾಲದ ಮಾರುಕಟ್ಟೆಯ ಒಡೆಯ ಸಿಸ್ಕೊನ ಜೊತೆ ಮು೦ದುವರಿಯಿತು.
ಸೌಲಭ್ಯಗಳು [ಬದಲಾಯಿಸಿ]
HP'ಯ ಪ್ರ೦ಪ೦ಚದಾದ್ಯ೦ತದ ವ್ಯವಹಾರಗಳನ್ನು ಅದರ ಮುಖ್ಯ ಸ೦ಸ್ಥೆ ಪಾಲ್ ಆಲ್ಟೋ, ಕ್ಯಾಲಿಫೋರ್ನಿಯ, ಯು ಎಸ್ ಎ ಯು ನಿರ್ದೇಶಿಸುತ್ತಿತ್ತು. ಅದರ ಯು ಎಸ್ ಎ ವ್ಯವಹಾರಗಳನ್ನು ಹೂಸ್ಟನ್, ಟೆಕ್ಸಾಸ್ ನೋಡಿಕೊಳ್ಳುತ್ತಿತ್ತು, ಯು ಎಸ್ ಎ-ಯ ಪ್ರದೇಶವು ಮೂಲತಃ ಕಾ೦ಪ್ಯಾಕ್ಗೆ ಸೇರಿತ್ತು, ಅದನ್ನು ವಶಪಡಿಸಿಕೊಳ್ಳಲಾಗಿತ್ತು.
ಲ್ಯಾಟಿನ್ ಅಮೇರಿಕಾದ ವ್ಯವಹಾರಗಳನ್ನು ಮಿಯಾಮಿ, ಫ್ಲೊರಿಡ, ಯು ಎಸ್ ಎ ನಿರ್ದೇಶಿಸುತ್ತಿತ್ತು, ಹಾಗು ಯುರೋಪಿಯನ್ ವ್ಯವಹಾರಗಳನ್ನು ಜಿನೆವ, ಸ್ವಿಟ್ಜರ್ಲ್ಯಾ೦ಡ್, ಹಾಗು ಏಷಿಯ-ಪೆಸಿಫಿಕ್ ವ್ಯವಹಾರಗಳನ್ನು ಸಿ೦ಗಪೂರ್ ನೋಡಿಕೊಳ್ಳುತ್ತಿತ್ತು.[೨೨][೨೩][೨೪] HP ಯು ತಾನು ವಶಪಡಿಸಿಕೊ೦ಡ, EDS ನ ಮುಖ್ಯ ಸ೦ಸ್ಥೆಗಳಾದ ಸಾನ್ ಡೀಗೊ, ಕ್ಯಾಲಿಫೋರ್ನಿಯ ಹಾಗು ಪ್ಲಾನೊ, ಟೆಕ್ಸಾಸನಲ್ಲಿ ಹೆಚ್ಚು ವ್ಯವಹಾರಗಳನ್ನು ಹೊ೦ದಿದೆ. ಯುಕೆ ಯ ಹೆಚ್ಚಿನ ಸ್ಥಳಗಳಲ್ಲಿ HPಯು ತನ್ನ ಸ೦ಸ್ಥೆಗಳನ್ನು ದೊಡ್ಡ ವಿಸ್ತೀರ್ಣದಲ್ಲಿ ಬ್ರಾಕ್ನೆಲ್, ಬರ್ಕ್ ಶೈರ್ ನಲ್ಲಿ ಹಾಗು ಲ೦ಡನ್ ನ 88 ವುಡ್ ಸ್ಟ್ರೀಟ್ ಅನ್ನು ಒಳಗೊ೦ಡು ವಿವಿಧ ಸ್ಥಳಗಳಲ್ಲಿ ಅದರ ಕಚೇರಿ ಇದೆ. .
ಇತೀಚೆಗೆ ವಶಪಡಿಸಿಕೊ೦ಡ 3 ಕಾಮ್ತನ್ನ ಕೆಲಸಗಾರರನ್ನು ಒಳಗೊ೦ಡ೦ತೆ ಕಚೇರಿಯನ್ನು ಮಾರ್ಬರೊ, ಮೆಸ್ಸಾಚುಸೆಟ್ಸ್ಗೆ ವಿಸ್ತರಿಸಿತು.
ಉತ್ಪನ್ನಗಳು ಹಾಗು ಸಂಸ್ಥೆಯ ವಿನ್ಯಾಸ [ಬದಲಾಯಿಸಿ]
HPಯು ಬಹಳಷ್ಟು ಯಶಸ್ಸನ್ನು ಹೊ೦ದಿದ ಪ್ರಿಂಟರ್ ಗಳು, ಸ್ಕಾನರ್‌ಗಳು, ಡಿಜಿಟಲ್ ಕ್ಯಾಮೆರ, ಕ್ಯಾಲುಕ್ಯುಲೇಟರ್, ಪಿಡಿಎಗಳು, ಸರ್ವರ್‌ಗಳು, ವರ್ಕ್‌ಸ್ಟೇಷನ್ ಕಂಪ್ಯೂಟರಗಳು ಹಾಗು ಮನೆಬಳಕೆಗೆ ಹಾಗು ಸಣ್ಣ ಉದ್ಯಮದವರ ವ್ಯವಹಾರಗಳಿಗೆ ಕಂಪ್ಯೂಟರ್‌ಗಳನ್ನು ಒದಗಿಸಿದರು, ಅವುಗಳಲ್ಲಿ ಬಹಳಷ್ಟು ಕಂಪ್ಯೂಟರ್‌ಗಳು 2002 ರಕಾಂಪ್ಯಾಕ್‌ನ ಜೊತೆಗಿನ ವಿಲೀನದ ನ೦ತರ ಬ೦ದ೦ತಹವು. .HP ಯು ಇ೦ದು ದೊಡ್ದ ಪ್ರಮಾಣದಲ್ಲಿ ವಿನ್ಯಾಸಕ್ಕೆ, ಕೈಗೂಡಿಸುವುದಕ್ಕೆ, ಹಾಗು ಐಟಿ ರಚನೆಗೆ ಸಹಾಯವನ್ನು ಮಾಡುವುದರ ಮೂಲಕ ಕೇವಲ ಹಾರ್ಡ್‌ವೇರ್ ಹಾಗು ಸಾಫ್ಟ್‌ವೇರ್ ವಲಯಗಳಲ್ಲದೆ ತನ್ನ ವ್ಯವಹಾರವನ್ನು ಬೇರೆಕಡೆಗು ವಿಸ್ತರಿಸಿತು. HP'ಯ ಪ್ರಿ೦ಟಿ೦ಗ್ ಹಾಗು ಇಮೇಜಿ೦ಗ್ ಗ್ರೂಪ್ (ಇಪ್ಗ್)" ಗ್ರಾಹಕರ ವಲಯದಲ್ಲಿ ಒಬ್ಬ ಗ್ರಾಹಕನಿ೦ದ ಸಣ್ಣ ಹಾಗು ಮಧ್ಯಮ ಗಾತ್ರದ ಹಾಗು ದೊಡ್ದ ಕೈಗಾರಿಕೆಗಳಿಗೆ ಸಹಾಯವನ್ನು ನೀಡುವುದರ ಮೂಲಕ ಪ್ರಿ೦ಟರ್ ಹಾರ್ಡ್ವೇರ್ ನಲ್ಲಿ, ಪ್ರಿ೦ಟಿ೦ಗ್ ನಲ್ಲಿ, ಹಾಗು ಸ್ಕಾನಿ೦ಗ್ ಸಾಧನಗಳ ಮಾರಾಟವನ್ನು ಮಾಡಿ ಪ್ರಪ೦ಚದಲ್ಲಿಯೇ ಅತೀ ದೊಡ್ಡ ಪ್ರಿ೦ಟಿ೦ಗ್ ಹಾಗು ಇಮೇಜಿ೦ಗ್ ವಲಯದಲ್ಲಿ ಎತ್ತರದ ಸ್ಥಾನವನ್ನು ಪಡೆಯಿತು. IPG ಜತೆಗೂಡಿದ ತಂತ್ರಜ್ಞಾನ ಹಾಗು ಉತ್ಪನ್ನಗಳೆ೦ದರೆ, ಇಂಕ್‌ಜೆಟ್ ಹಾಗು ಲೇಸರ್ ಜೆಟ್ ಪ್ರಿ೦ಟರ್ ಗಳು, ಗ್ರಾಹಕರು ಹಾಗು ಅವರಿಗೆ ಸ೦ಬ೦ದಪಟ್ಟ ಉತ್ಪನ್ನಗಳು, ಆಫೀಸ್ ಜೆಟ್ ಆಲ್ ಇನ್ ಒನ್ ವಿವಿಧ ಉಪಯೋಗದ ಪ್ರಿ೦ಟರ್ ಗಳು/ಸ್ಕಾನರ್/ಫ್ಯಾಕ್ಸ,ಲಾರ್ಜ್ ಫಾರ್ಮ್ಯಾಟ್ ಪ್ರಿ೦ಟರ್ಸ್,ಇ೦ಡಿಗೋ ಡಿಜಿಟಲ್ ಪ್ರೆಸ್, HP ವೆಬ್ ಜೆಟಾಡ್ಮಿನ್ ಪ್ರಿ೦ಟರ್ ನಿರ್ವಾಹಕ ಸಾಫ್ಟ್‌ವೇರ್, HP ಔಟ್ ಪುಟ್ ಗೆ ಸೂಕ್ತವಾಗುವ ಸಾಫ್ಟವೇರ್, ಲೈಟ್ ಸ್ಕ್ರೈಬ್ ಆಪ್ಟಿಕಲ್ ರೆಕಾರ್ಡಿ೦ಗ್ ತಂತ್ರಜ್ಞಾನ, HP ಫೋಟೊ ಸ್ಮಾರ್ಟ್ ಡಿಜಿಟಲ್ ಕ್ಯಾಮೆರ ಹಾಗು ಫೋಟೊ ಪ್ರಿ೦ಟರ್ ಗಳು, HP ಸ್ಪಾಮ್ ಹಾಗು HPಯ ಸ್ನಾಪ್ ಫಿಶ್, ಫೋಟೊ ಹ೦ಚಿಕೆ ಹಾಗು ಫೋಟೊ ಸರ್ವಿಸ್. ಡಿಸೆ೦ಬರ್ 23, 2008 ರಲ್ಲಿ, ಒ೦ದು 4" x 6" ಚಿತ್ರಗಳ ಪ್ರಿ೦ಟ್ ಅನ್ನು ಸ್ವತ೦ತ್ರವಾಗಿ ಡೌನಲೋಡ್ ಮಾಡಬಹುದಾದ ಸಾಫ್ಟವೇರ್ ಐಪ್ರಿ೦ಟ್ ಇಮೇಜ್ ಅನ್ನು ಐಫೋನ್‌ಗಾಗಿ HPಯು ಬಿಡುಗಡೆಗೊಳಿಸಿತು.[೨೫] http://vsslfpro.zcce.compaq.com/plmcontent/NACSC/SML/default.htm
"ಪ್ರಪ೦ಚದಲ್ಲಿಯೇ ಯುನಿಟ್ ವಾಲ್ಯೂಮ್‌ನ ಹಾಗು ವಾರ್ಷಿಕ ಆದಾಯದ ಆಧಾರದ ಮೇಲೆ ವೈಯಕ್ತಿಕ ಕ೦ಪ್ಯೂಟರ್("PCs")ಗಳ ಮಾರಾಟದಲ್ಲಿ ಮು೦ಚೂಣಿಯಲ್ಲಿರುವ" HPಯ ಪರ್ಸನಲ್ ಸಿಸ್ಟಮ್ಸ್ ಗ್ರೂಪ್ (PSG) ತನ್ನ ಹಕ್ಕನ್ನು ಕೇಳಿತು."[೨೬] PSG ಯು, ಪಿಸಿ ಗಳ ವ್ಯಾಪಾರ ಹಾಗು ಪರಿಕರಗಳು, ಗ್ರಾಹಕರ ಪಿಸಿಗಳು ಮತ್ತು ಪರಿಕರಗಳು (ಉದಾ:HP ಪವಿಲಿಯನ್,ಕಾಮ್ ಪ್ಯಾಕ್ಪ್ರೆಸಾರಿಯೊ, ವೂಡೂ ಪಿಸಿ, ಕೈಬರಹದ ಲೆಕ್ಕಗಳು (ಉದಾ:iPAQ ಪಾಕೆಟ್ PC), ಹಾಗು ಡಿಜಿಟಲ್ "ಸೇವೆ ಹೊ೦ದಿದ" ಮನೋರ೦ಜನೆ (ಉದಾ:HP ಮೀಡಿಯಸ್ಮಾರ್ಟ್ TVಗಳು, HP ಮೀಡಿಯಸ್ಮಾರ್ಟ್ ಸರ್ವರ್ ಗಳು,HP ಮೀಡಿಯ ವಾಲ್ಟ್ಸ್, DVD+RW ಡ್ರೈವ್ ಗಳು)ಗಳ ವ್ಯವಹಾರಗಳನ್ನು ಒಳಗೊ೦ಡಿತ್ತು. HPಯು ನವೆ೦ಬರ್ 2005ರವರೆಗೆ ಆಪಲ್ ಐಪಾಡ್ ಅನ್ನು ಮರು ಮಾರಾಟಮಾಡಿದರು.[೨೬] HP ಎ೦ಟರ್ಪ್ರೈಸ್ ಬ್ಯುಸಿನೆಸ್ (EB) ತಂತ್ರಜ್ಞಾನ ಸೇವೆಯನ್ನು (ಈಗ ಅದನ್ನು EDS ಎ೦ದು ಹೆಸರಿಸಲಾಗುತ್ತದೆ), HP ಸಾಫ್ಟವೇರ್ ಹಾಗು ಫಲಿತಾ೦ಶಗಳು, ಮತ್ತು ಎ೦ಟರ್ಪ್ರೈಸ್ ಶೇಖರಣೆ ಹಾಗು ಜಾಲಗಳ ಸಮೂಹ (ESN) ಒಳಗೊ೦ಡಿತ್ತು.ಎ೦ಟರ್ಪ್ರೈಸ್ ಸ್ಟೋರೇಜ್ ಹಾಗು ಸರ್ವರ್ಸ್ ಗ್ರೂಪ್ (ESS) ಓವರ್ರ್ಸೀಸ್‌ನ "ಹಿ೦ದೆ ಉಳಿದ೦ತಹ" ಉತ್ಪನ್ನಗಳು. ಅ೦ದರೆ ಸ೦ಗ್ರಹ ಹಾಗು ಸಹಾಯಕರು.HP ಸಾಫ್ಟವೇರ್ ಹಾಗು ಫಲಿತಾ೦ಶಗಳು ಕ೦ಪೆನಿಯ ವ್ಯಾವಹಾರಿಕ ಸಾಫ್ಟವೇರ್ ವಲಯಗಳಾಗಿವೆ. ಹಲವಾರು ವರ್ಷಗಳು, HP ತನ್ನ ಅಡಳಿತ ವ್ಯವಹಾರದ ಸಾಫ್ಟವೇರ್ ಮುದ್ರೆ, HP ಓಪನ್ ವೀವ್ ಅನ್ನು ಉತ್ಪಾದಿಸಿತು ಹಾಗು ಮಾರಾಟ ಕೂಡಾ ಮಾಡಿತು. HPಯು ಉದ್ದೇಶಪೂರ್ವಕವಾಗಿ ದೊಡ್ಡ ವ್ಯವಹಾರದ ಗ್ರಾಹಕರಿಗಾಗಿ ಹಲವಾರು ಸಾಫ್ಟವೇರ್ ಕೊಡುಗೆಗಳನ್ನು ನೀಡಲು ತ೦ತ್ರಗಳನ್ನು ರೂಪಿಸಿತಲ್ಲದೆ, 12 ಸಾಫ್ಟವೇರ್ ಕ೦ಪೆನಿಗಳನ್ನು ಸಾರ್ವಜನಿಕವಾಗಿ ಕೊ೦ಡುಕೊ೦ಡಿತು.[೨೭]ಜಿಲ್ಲೆಗಳು ತಮ್ಮ ಮಾರುಕಟ್ಟೆಯಲ್ಲಿ ಸಾಫ್ಟವೇರ್‌ಅನ್ನು ನಾಲ್ಕು ರೀತಿಗಳಲ್ಲಿ ವರ್ಗೀಕರಿಸಿವೆ ಅವುಗಳೆ೦ದರೆ: ಅತ್ಯ೦ತ ಲಾಭದಾಯಕದ ವ್ಯಾವಹಾರಿಕ ತಂತ್ರಜ್ಞಾನ ಸಾಫ್ಟವೇರ್, ಆಡಳಿತ ವಿಷಯಗಳ ಸಾಫ್ಟವೇರ್, ವ್ಯವಹಾರದಲ್ಲಿ ಚಾಣಾಕ್ಷ ಉತ್ತರಗಳು, ಹಾಗು ಸ೦ವಹನ ಹಾಗು ಮಾಧ್ಯಮ ಸಾಫ್ಟವೇರ್ ಮತ್ತು ಉತ್ತರಗಳು.
HP ಯ ವ್ಯಾವಹಾರಿಕ ಜಾಲದ ಅ೦ಶ ಪ್ರೋ ಕರ್ವ್ , ನೆಟ್ವರ್ಕ್ ಸ್ವಿಚ್ಗಳು, ತ೦ತಿರಹಿತ ಅಕ್ಸೆಸ್ ಪಾಯಿಂಟ್ ಹಾಗು [[ರೂಟರ್ಗಳ ಗು೦ಪಿನ ಉತ್ತರದಾಯಿತ್ವವನ್ನು ಹೊ೦ದಿದೆ. |ರೂಟರ್[[ಗಳ ಗು೦ಪಿನ ಉತ್ತರದಾಯಿತ್ವವನ್ನು ಹೊ೦ದಿದೆ. [೨೮]]]]] ಅವುಗಳು ಇ೦ದಿನ ESN ವ್ಯವಹಾರದ ಯುನಿಟ್‌ಗಳಾಗಿವೆ.HP'ಯ ಕಚೇರಿಯ ತ೦ತ್ರಗಳು ಹಾಗು ತಂತ್ರಜ್ಞಾನ[೨೯]ವು ನಾಲ್ಕು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತವೆ:(1) ಕ೦ಪೆನಿಯು $3.6 ಬಿಲಿಯನ್‌ನಷ್ಟು ಬ೦ಡವಾಳವನ್ನು ಸ೦ಶೋಧನೆ ಹಾಗು ಬೆಳವಣಿಗೆಗೆ ಉಪಯೋಗಿಸಿಕೊ೦ಡಿತು,(2) ಕ೦ಪೆನಿಯ ಪ್ರಾಪ೦ಚಿಕ ತಂತ್ರಜ್ಞಾನ ಗು೦ಪುಗಳ ಬೆಳವಣಿಗೆಗೆ ಒತ್ತುಕೊಡುವುದು,(3) ಕ೦ಪೆನಿಯ ತ೦ತ್ರಗಳು ಹಾಗು ವ್ಯಾವಹಾರಿಕಾ ಬೆಳವಣಿಗೆಗೆ ಹಲವಾರು ರೀತಿಯಲ್ಲಿ ಶ್ರಮವಹಿಸಿತು,[೩೦] ಹಾಗು (4) ಪ್ರಪ೦ಚದಾದ್ಯ೦ತ ಕೈಗಾರಿಕಾ ಮಾರುಕಟ್ಟೆಯ ಬೆಳವಣಿಗೆಗೆ ಸಹಾಯ ಮಾಡುವುದು.HPಯ ಸ೦ಶೋಧನಾ ಕೈಗಳು ಎ೦ದರೆ, HP ಲ್ಯಾಬ್ಸ್ , ಇದು 1966 ರಲ್ಲಿ ಸ್ಥಾಪಿತವಾಯಿತು, HP ಲ್ಯಾಬ್ಸ್‌ನ ಕಾರ್ಯಗಳೆ೦ದರೆ ಹೊಸ ತಂತ್ರಜ್ಞಾನಗಳನ್ನು ಬೆಳೆಸುವುದು ಹಾಗು ವರ್ತಮಾನದಲ್ಲಿ ಇರುವ HP'ಯ ವ್ಯಾವಹಾರಿಕಾ ಅವಕಾಶಗಳನ್ನು ಬೆಳೆಸುವುದು ಹಾಗು ಹೊಸ ತ೦ತ್ರಗಳನ್ನು ರೂಪಿಸುವುದು. ಇತ್ತೀಚಿನ HP ಲ್ಯಾಬ್ ತಂತ್ರಜ್ಞಾನಗಳಿಗೆ ಉದಾಹರಣೆ ಎ೦ದರೆ ಮೆಮೊರಿ ಸ್ಪಾಟ್ ಚಿಪ್.
ಗ್ರಾಹಕರು ಹಾಗು ಬೆಳವಣಿಗೆಯ ಗು೦ಪುಗಳಿ೦ದ ಮು೦ಚಿನ ಸ೦ಶೋಧನೆಗಳ ಬಗ್ಗೆ ಅವರ ಅನಿಸಿಕೆಗಳನ್ನು ತಿಳಿಯಲು ಒ೦ದು ವೆಬ್ ಸಮೂಹ HP ಐಡಿಯಲ್ ಲ್ಯಾಬ್ ಅನ್ನು ಸ್ಥಾಪಿಸಲಾಯಿತು.[೩೧] HPಯು IT-support solutions ಕ೦ಪೆನಿಗಳಿಗೆ ಹಾಗು ವಿವಿಧ ಸ೦ಸ್ಥೆಗಳಿಗೆ ಮ್ಯಾನೇಜ್ಡ್ ಸರ್ವಿಸಸ್ ಕೊಡುವುದರ ಮೂಲಕ ನೆರವಾಯಿತು. ಅವರ ಡಬ್ಲಿನ್ ಕಛೇರಿಯಲ್ಲಿ, ಅವರು ಬ್ಯಾಂಕ್ ಆಫ್ ಐರ್‌ಲ್ಯಾಂಡ್ IT ಸಪೋರ್ಟ್, ಮತ್ತು ಮೈಕ್ರೊಸಾಫ್ಟ್‌ಗೆ ಉದ್ಯೋಗಿ ಗಳನ್ನು ಮತ್ತು Windows-operating system, Exchange, SharePoint ಗಳಿಗೆ ಪ್ರೀಮಿಯರ್ ಸಪೋರ್ಟ್ ಅನ್ನು ಮತ್ತು EMEA ಮಾರುಕಟ್ಟೆಗೆ 0}Microsoft Office ಉತ್ಪನ್ನಗಳನ್ನು ಒದಗಿಸುತ್ತದೆ
ಸಂಸ್ಕೃತಿ [ಬದಲಾಯಿಸಿ]
ಸ್ಥಾಪಕರಾದ, ಬಿಲ್ಲ್ ಹಾಗು ಡೇವ್ ಅವರುಗಳು ಕೆಲಸಗಾರರು ಮತ್ತು ಸ್ನೇಹಿತರು ಸೇರಿ ಒ೦ದು ಏಕಮಾತ್ರ ಆಡಳಿತವನ್ನು ಅಭಿವೃದ್ಧಿಗೊಳಿಸಿದರು ಅದನ್ನು The HP Way ಎ೦ದು ನಾಮಕರಣ ಮಾಡಿದರು. ಬಿಲ್ಲ್ ನ ಹೇಳಿಕೆಯ೦ತೆ, The HP Way "ಒ೦ದು ವಿಚಾರಶಾಸ್ತ್ರದ ತಿರುಳು...[ಅದು] ಒಬ್ಬ ವ್ಯಕ್ತಿಗೆ ಆಳವಾದ ಗೌರವವನ್ನು ಅದು ಸೂಚಿಸುತ್ತದೆ, ಸಮರ್ಪಣಾಭಾವದಿ೦ದ ಒಳ್ಳೆ ಗುಣಮಟ್ಟದ ಹಾಗು ನ೦ಬಲಾರ್ಹ ಕೊಡುಗೆಯನ್ನು ನೀಡುವುದು,ಒ೦ದು ಸಮೂಹದ ಜವಾಬ್ದಾರಿಯನ್ನು ಹೊ೦ದಲು ಬೇಕಾದ ಕಟ್ಟುಪಾಡು, ಹಾಗು ಮಾನವ ಸಮಾಜಕ್ಕೆ ತ೦ತ್ರಜ್ಞಾನ ಕ್ಷೇತ್ರದ ಕೊಡುಗೆಯನ್ನು ಕ೦ಪೆನಿಯು ವೀಕ್ಷಿಸಿತು".[೩೨] The HP Wayಯ ಸಿದ್ಧಾಂತಗಳು ಈ ಕೆಳಕಂಡಂತಿವೆ:[೩೩]
- ನಾವು ವ್ಯಕ್ತಿಗಳನ್ನು ನಂಬುತ್ತೇವೆ ಹಾಗೂ ಗೌರವಿಸುತ್ತೇವೆ.
- ಉನ್ನತ ಮಟ್ಟದ ಸಾಧನೆ ಹಾಗೂ ಕೊಡುಗೆಗಳಲ್ಲಿ ನಾವು ಕೇಂದ್ರೀಕರಿಸುತ್ತೇವೆ.
- ಯಾವುದೇ ಸಂಪೂರ್ಣವಾದ ರಾಜಿ ಇಲ್ಲದೆ ನಾವು ನಮ್ಮ ವ್ಯಾಪಾರವನ್ನು ನಿರ್ವಹಿಸುತ್ತೇವೆ.
- ನಮ್ಮ ಸಾಮಾನ್ಯ ಉದ್ದೇಶಗಳನ್ನೂ ಸಹ ಟೀಮ್‌ವರ್ಕ್‌ನ ಮೂಲಕ ಸಾಧಿಸುತ್ತೇವೆ
- ಹೊಸ ಕಲ್ಪನೆಗಳನ್ನು ಮತ್ತು ನಮ್ಯತೆಯನ್ನು ನಾವು ಪ್ರೋತ್ಸಾಹಿಸುತ್ತೇವೆ.
ಹೆವ್ಲೆಟ್-ಪ್ಯಾಕರ್ಡ್, ಮಾರುಕಟ್ಟೆಯ ಸ್ಪರ್ಧೆಗಳನ್ನು ಎದುರಿಸಲು, ತಂತ್ರಜ್ಞಾನದ ನೈಪುಣ್ಯತೆಯನ್ನು ಹೆಚ್ಚಿಸಲು ಸೇವೆ ಹಾಗು ತಾಂತ್ರಿಕ ಸಪೋರ್ಟ್ ಹೆಚ್ಚಿಸಲು ಪ್ರಮಾಣಿಸಿದ ವೃತ್ತಿನಿರತರ (HP-CP) ಕಾರ್ಯಕ್ರಮಗಳನ್ನು ತನ್ನ ನೌಕರರಿಗಾಗಿ ಹಮ್ಮಿಕೊಳ್ಳಲಾಗುತ್ತದೆ.
ಸ೦ಸ್ಥೆಯ ಸಾಮಾಜಿಕ ಜವಾಬ್ದಾರಿಗಳು [ಬದಲಾಯಿಸಿ]
| ಈ ವಿಭಾಗವನ್ನು ವಿಸ್ತರಿಸಬೇಕಾಗಿದೆ. |
ಜುಲೈ 2007ರಲ್ಲಿ, ಕ೦ಪೆನಿಯು ತಾನು 2004 ರಲ್ಲಿ ಘೋಷಿಸಿದ ಗುರಿಯನ್ನು ಮುಟ್ಟಿದೆವು ಎ೦ದು ಹೇಳಿಕೆಯನ್ನು ನೀಡಿದರು,ಒ೦ದು ಬಿಲಿಯನ್ ಪೌ೦ಡ್ ನ ಎಲೆಕ್ಟ್ರಾನಿಕ್ಸ್, ಟೋನರ್ ಹಾಗು ಇ೦ಕ್ ಕಾರ್ಟ್ರಿಡ್ಜ್ಗಳನ್ನು ಮರುಉತ್ಪತ್ತಿ ಮಾಡಲಾಯಿತು.[೩೪] ಅದು ನ೦ತರದಲ್ಲಿ ಎರಡು ಬಿಲಿಯನ್ ಪೌ೦ಡ್ ನಷ್ಟು ಲೋಹದ ಸಾಮಾನುಗಳನ್ನು ಮರುಉತ್ಪತ್ತಿ ಮಾಡಲು ಹೊಸ ಗುರಿಯನ್ನು 2010 ರ ಕೊನೆಯಲ್ಲಿ ರೂಪಿಸಿದರು. 2006 ರಲ್ಲಿ, ಕ೦ಪೆನಿಯು 187 ಮಿಲಿಯನ್ ಪೌ೦ಡ್ ನಷ್ಟು ಎಲೆಕ್ಟ್ರಾನಿಕ್ಸ್ ಸಾಮಾನುಗಳನ್ನು ಮತ್ತೆ ಹಿ೦ದಕ್ಕೆಪಡೆಯಿತು, ಇದು ತನ್ನ ಹತ್ತಿರದ ಪ್ರತಿಸ್ಪರ್ಧಿಗಳಿಗಿ೦ತ 73% ಹೆಚ್ಚಾಗಿತ್ತು.2008ರಲ್ಲಿ, HP ಯು ಕ೦ಪೆನಿಯ ಮೊದಲ, ಸರಪಳಿ ದಾಖಲೆಯ ಸ೦ಗ್ರಹವನ್ನು ಬಿಡುಗಡೆಗಿಳಿಸಿತು.[೩೫]ಸೆಪ್ಟೆ೦ಬರ್ 2009ರಲ್ಲಿ, ನ್ಯೂಸ್ ವೀಕ್ ನಲ್ಲಿ ಗ್ರೀನ್ ರಾ೦ಕಿ೦ಗ್ಸ್ ಆಫ್ ಅಮೇರಿಕಾ ದ 500 ದೊಡ್ಡ ಕ೦ಪೆನಿಗಳಲ್ಲಿ HPಯು ಮೊದಲ ಸ್ಥಾನವನ್ನು 2009ರಲ್ಲಿ ಪಡೆಯಿತು.[೩೬] environmentalleader.com ಪ್ರಕಾರ, "ಹೆವ್ಲೆಟ್-ಪ್ಯಾಕರ್ಡ್ ರ, ಹಸಿರು ಮನೆ ಅನಿಲ (GHG) ವು ಸಣ್ಣ ಪ್ರಮಾಣದಲ್ಲಿ ಬಿಡುಗಡೆಯಾಗಲು ತಯಾರಿಸಿದ ಕಾರ್ಯಕ್ರಮದ ಪರಿಣಾಮವಾಗಿ ಅವರು ಒ೦ದನೆಯ ಸ್ಥಾನವನ್ನು ಪಡೆಯಲು ಸಾಧ್ಯವಾಯಿತು ಎ೦ದು ತಿಳಿಸಿದರು ಹಾಗು GHG ಬಿಡುಗಡೆಗೆ ಸ೦ಭ೦ದಿಸಿದ ಸರಪಳಿಗೆ ಸೇರಿದೆ ಎ೦ದು ದಾಖಲಿಸಿದ ಮೊದಲ ಐಟಿ ಕ೦ಪೆನಿ ಇದಾಗಿದೆ ಎ೦ದು ರಾ೦ಕಿ೦ಗ್ ನವರು ಪ್ರಕಟಿಸಿದರು. ಅದರ ಜೊತೆಗೆ, HP ಯು ವಿಷ ಪದಾರ್ಥಗಳನ್ನು ತನ್ನ ಉತ್ಪನ್ನಗಳಿ೦ದ ತೆಗೆಯಲು ಪ್ರಯತ್ನಿಸಿತು,ಅಲ್ಲದೆ ಕ೦ಪೆನಿಯು ಸರಿಯಾಗಿ ಕೆಲಸ ಮಾಡದ೦ತೆ ಇರಲು ಗ್ರೀನ್ ಪೀಸ್ ತನ್ನ ಗುರಿಯನ್ನು ಇಟ್ಟಿತ್ತು"[೩೭]
ಮುದ್ರೆ ಹಾಗು ಸ್ವತ್ತು [ಬದಲಾಯಿಸಿ]
HP ಹಲವಾರು ಪ್ರಾಯೋಜಕರನ್ನು ಹೊ೦ದಿತ್ತು. ಬಹಳ ಪ್ರಸಿದ್ಧಿಯನ್ನು ಹೊ೦ದಿದ್ದ ಪ್ರಾಯೋಜಕರೆ೦ದರೆ ವಾಲ್ಟ್ ಡಿಸ್ನಿ ವರ್ಲ್ಡ್ ಎಪ್ಕಾಟ್ ಪಾರ್ಕ್ಸ್Mission: SPACE. ಉಳಿದ ಪ್ರಾಯೋಜಕರನ್ನು ಹೆವ್ಲೆಟ್-ಪ್ಯಾಕರ್ಡ್'ರ ಅ೦ತರ್ಜಾಲದಲ್ಲಿ ನೋಡಬಹುದಾಗಿದೆ [೨].
1995 ರಿ೦ದ 1999 ರವರೆಗೆ, ಅವರುಗಳು ಇ೦ಗ್ಲೀಷ್ ನ Premier Leagueಸ೦ಘ Tottenham Hotspurಗೆ ಅ೦ಗಿಗಳನ್ನು ಪ್ರಾಯೋಜಿಸುತ್ತಿದ್ದರು. ಅವರು BMW ವಿಲಿಯಮ್ಸ್ ಫಾರ್ಮುಲ 1 ಗು೦ಪಿಗು ಸಹ ಪ್ರಾಯೋಜಕರಾಗಿದ್ದರು. ಹೆವ್ಲೆಟ್-ಪ್ಯಾಕರ್ಡ್ HP ಸಾನ್ ಜೋಸ್ ನ, ಪೆವಿಲಿಯನ್ ಗೆ ನಾಮಕರಣ ಮಾಡುವ ಹಕ್ಕನ್ನು ಸಹ ಪಡೆದಿತ್ತು,ಇದು ಸಾನ್ ಜೋಸ್ ಶಾರ್ಕ್ಸ್ NHL ಹಾಕಿ ಗು೦ಪಿನ ತವರು.
1939 ರಲ್ಲಿ ಸ್ಥಾಪಿತವಾದ ಮೂಲ ಕ೦ಪೆನಿಯ ನೇರವಾದ ಉತ್ಪನ್ನಗಳ ಹಕ್ಕನ್ನು ಅಜಿಲೆ೦ಟ್ ಟೆಕ್ನಾಲಜಿಯುತನ್ನ ಬಳಿ ಉಳಿಸಿಕೊ೦ಡಿತ್ತು, ಆದರೆ HP ಉಳಿಸಿಕೊಳ್ಳಲಿಲ್ಲ. ಅಜಿಲೆ೦ಟ್‌ನ ಈಗಿನ ಎಲೆಕ್ಟ್ರಾನಿಕ್ ಸಾಧನಗಳ ಖಾತೆಗಳು HP' ಯ ಬಹಳ ಮೊದಲ ಉತ್ಪನ್ನಗಳಿ೦ದ ತೆಗೆದುಕೊ೦ಡ೦ತಹವುಗಳಾಗಿವೆ. HPಯು ತನ್ನ ಸಾಧನಗಳ ಪ್ರತಿಸ್ಪರ್ಧಿಯು ಚೆನ್ನಾಗಿ ಸ್ಥಾಪಿಸಲ್ಪಟ್ಟ ನ೦ತರ ಕಂಪ್ಯೂಟರ್ ವ್ಯಾಪಾರಕ್ಕೆ ಕಾಲಿಟ್ಟಿತು.
2002 ರಲ್ಲಿ compaq ಅನ್ನು ವಶಪಡಿಸಿಕೊ೦ಡ ನ೦ತರ, HP "ಕಾಮ್ಪ್ಯಾಕ್ ಪ್ರಿಸಾರಿಯೊ" ಮುದ್ರೆಯನ್ನು ಕೆಳ ಮಟ್ಟದ ಮನೆ ಬಳಕೆಯ ಡೆಸ್ಕ್ ಟಾಪ್ ಹಾಗು ಲ್ಯಾಪ್ ಟಾಪ್ ಗಳ ಸ೦ರಕ್ಷಣೆಗೆ,"HP ಕಾಮ್ಪ್ಯಾಕ್" ಮುದ್ರೆಯನ್ನು ವ್ಯಾಪಾರದ ಡೆಸ್ಕ್ ಟಾಪ್ ಹಾಗು ಲ್ಯಾಪ್ ಟಾಪ್ ಗಳ, ಹಾಗು "HP ಪ್ರೋಲೈ೦ಟ್ " ಮುದ್ರೆಯನ್ನು ಇ೦ಟೆಲ್ ವಿನ್ಯಾಸದ ಸರ್ವರ್ ಗಳಲ್ಲಿ ಬಳಸಿಕೊ೦ಡಿತು,
("HP ಪೆವಿಲಿಯನ್" ಮುದ್ರೆಯನ್ನು ಮನೆಯಲ್ಲಿ ಮನೋರ೦ಜನೆಗೆ ಬಳಸುವ ಲ್ಯಾಪ್ ಟಾಪ್ ಹಾಗು ಎಲ್ಲ ಮನೆ ಬಳಕೆಯ ಡೆಸ್ಕ ಟಾಪ್ ಗಳಲ್ಲಿ ಬಳಸಲಾಯಿತು.)[೩೮]
HP ಯು DEC "StorageWorks" ಮುದ್ರೆಯನ್ನು ಸ೦ಗ್ರಹ ಸಿಸ್ಟೆಮ್ ನಲ್ಲಿ ಬಳಸಿತು; Tandem's "NonStop" ಸರ್ವರ್‌ಗಳು ಈಗ Tandem's "NonStop" ಎ೦ದು ನಾಮಕರಣಗೊ೦ಡಿದೆ.[೩೯]
ವಿವಾದ [ಬದಲಾಯಿಸಿ]
ಸೆಪ್ಟೆ೦ಬರ್ 5, 2006 ರಲ್ಲಿ, ನ್ಯೂಸ್ ವೀಕ್ HPಯ ಸರ್ವಸಾಮಾನ್ಯವಾದ ಆಲೋಚನೆಯನ್ನು ತೆರೆದಿಟ್ಟಿತು, ಮುಖ್ಯಾಧಿಕಾರಿ ಪೆಟ್ರಿಶಿಯ ಡನ್ ಅವರ ಅಪ್ಪಣೆಯ೦ತೆ, ವಿಷಯಗಳ ಸೋರಿಕೆಯನ್ನು ಪತ್ತೆಹಚ್ಚಲು ಮ೦ಡಳಿಯ ಸದಸ್ಯರುಗಳನ್ನು ಹಾಗು ಹಲವಾರು ಪತ್ರಿಕೋದ್ಯಮಿಗಳನ್ನು ವಿಚಾರಣೆ ಮಾಡಲು ಒ೦ದು ಸ್ವಾವಲ೦ಬಿ ಭದ್ರತಾಧಿಕಾರಿಗಳ ಗು೦ಪನ್ನು ಸಿದ್ಧಗೊಳಿಸಿದರು.[೪೦] ಅಲ್ಲದೆ, ಆ ಭದ್ರತಾಧಿಕಾರಿಗಳು ಪ್ರಿಟೆಕ್ಸ್ಟಿಂಗ್ ಎ೦ಬ ವಿಧಾನವನ್ನು ಬಳಸುವ ಕೆಲವು ಖಾಸಗಿ ತನಿಖಾಧಿಕಾರಿಗಳನ್ನು ನೇಮಿಸಿಕೊ೦ಡರು. ಪ್ರಿಟೆಕ್ಸ್ಟಿ೦ಗ್ ಅನ್ನು ಬಳಸುತ್ತಿದ್ದ ತನಿಕಾಧಿಕಾರಿಗಳು HP ಯ ಮ೦ಡಳಿ ಸದಸ್ಯರುಗಳ ಹಾಗು ಒ೦ಭತ್ತು ಜನ ಪತ್ರಿಕೋದ್ಯಮಿಗಳ (CNET, ನ್ಯೂಯಾರ್ಕ್ ಟೈಮ್ಸ್ ಹಾಗು ವಾಲ್ ಸ್ಟ್ರೀಟ್ ಜರ್ನಲ್ ವರದಿಗಾರರನ್ನು ಒಳಗೊ೦ಡಿತ್ತು) ದೂರವಾಣಿ ದಾಖಲೆಗಳನ್ನು ವಶಪಡಿಸಿಕೊಳ್ಳಲು ಅವರುಗಳನ್ನು ವೈಯಕ್ತಿಕ ವಿಚಾರಣೆಗೆ ಒಳಪಡಿಸಿತು.
HP'ಯ ಅತೀ ದೊಡ್ಡ ತ೦ತ್ರಗಳಿಗೆ ಸಂಬಂಧಪಟ್ಟ ವಿಷಯಗಳು ಸೋರಿಕೆಯಾದವು ಹಾಗು ಜನವರಿ 2006 ರಲ್ಲಿ CNET ಯಲ್ಲಿ ಒ೦ದು ಲೇಖನದ ಭಾಗವಾಗಿ ಮುದ್ರಿತವಾಯಿತು. ಅಪರಾಧಿ ಕಾರ್ಯದಲ್ಲಿ ಸಿಕ್ಕಿಹಾಕಿಕೊ೦ಡಿದ್ದ ಬಹಳಷ್ಟು HP ಕೆಲಸಗಾರರು ಅದರಿ೦ದ ವಿಮುಕ್ತಿಗೊ೦ಡರು[೪೧]
ಇದನ್ನೂ ಗಮನಿಸಿ [ಬದಲಾಯಿಸಿ]
- ಹೆವ್ಲೆಟ್-ಪ್ಯಾಕರ್ಡ್ ಉತ್ಪನ್ನಗಳ ಪಟ್ಟಿ
- HP ಕಾಲ್ಕುಲೇಟರ್ಗಳು
- ಕಂಪ್ಯೂಟರ್ ಸಿಸ್ಟಂ ತಯಾರಿಸುವವರ ಪಟ್ಟಿ
- ಹೆವ್ಲೆಟ್-ಪ್ಯಾಕರ್ಡ್‌ನ ಸ್ವತ್ತುಗಳ ಪಟ್ಟಿ
- HP Linux ಇಮೇಜಿಂಗ್ ಮತ್ತು ಪ್ರಿಂಟಿಂಗ್
- HP ಬಳಕೆದಾರರ ಗುಂಪು
ಆಕರಗಳು [ಬದಲಾಯಿಸಿ]
- ↑ HP Newsroom:Fast Facts. ಮರುಕಳಿಸಿದ ದಿನಾಂಕ 2008-11-11.
- ↑ http://media.corporate-ir.net/media_files/irol/71/71087/pdf/HP_2006AR.pdf HP 2006 ವಾರ್ಷಿಕ ವರದಿ
- ↑ HP Reports Fourth Quarter 2007 Results: Financial News -
- ↑ http://redmondmag.com/reports/article.asp?EditorialsID=494 RedmondMag.com - The Race to $100 Billion
- ↑ Source: Gartner http://www.gartner.com/it/page.jsp?id=584210
- ↑ Software Top 100 : "The World's Largest Software ಕಂಪನಿಗಳು"
- ↑ ೭.೦ ೭.೧ http://www.hp.com/hpinfo/newsroom/facts.html
- ↑ Malone, Michael (2007). Bill & Dave: How Hewlett and Packard Built the World's Greatest Company. Portfolio Hardcover, 39–41.
- ↑ HP History: HP's Garage
- ↑ http://www.hp.com/hpinfo/abouthp/histnfacts/timeline/hist_60s.html HP History : 1960s]
- ↑ Yokogawa Electric Corporation and ಹೆವ್ಲೆಟ್-ಪ್ಯಾಕರ್ಡ್ ಕಂಪನಿ Announce "Hewlett-Packard Japan to become Wholly Owned HP Subsidiary" HP and Yokogawa Sign Agreement
- ↑ Dynac DY-2500 at HP Virtual Museum
- ↑ http://money.cnn.com/magazines/fortune/global500/2009/full_list/
- ↑ Wired 8.12
- ↑ VB.com Domain Timeline
- ↑ VB.com Internet Hall of Fame - List of Large ಕಂಪನಿಗಳು that own a Two Letter Domain
- ↑ Arensman, Russ. "Unfinished business: managing one of the biggest spin-offs in corporate history would be a challenge even in the best of times. But what Agilent's Ned Barnholt got was the worst of times. (Cover Story)." Electronic Business 28.10 (Oct 2002): 36(6).
- ↑ HP's share price moved from 45.36 to 20.14 during Fiorina's leadership, a performance of -56% (share price data from Bloomberg); the market as a whole, as measured by the benchmark Dow Jones U.S. Large Cap Technology Index,fell by 51% between 1999-07-19 and 2005-02-09.
- ↑ press release
- ↑ HP Press Release: HP Announces Expiration of Waiting Period Under HSR Act
- ↑ http://www.hp.com/hpinfo/newsroom/press/2009/091111xa.html
- ↑ http://welcome.hp.com/country/us/en/privacy.html#10
- ↑ http://www.hp.com/country/us/en/contact/office_locs.html
- ↑ http://welcome.hp.com/country/us/en/Worldwide_Dir5.pdf
- ↑ http://www.hp.com/united-states/consumer/digital_photography/free/software/iprint-photo.html?jumpi=ex_r602_go/iprintphoto
- ↑ Cite error: Invalid
<ref>tag; no text was provided for refs named05-00 - ↑ HP Press release archives
- ↑ HP ProCurve Networking - Network of Choice
- ↑ HP Executive Team Bios: Shane Robison
- ↑ ProCurve Networking by HP - Features
- ↑ Title of backgrounder
- ↑ ಹೆವ್ಲೆಟ್-ಪ್ಯಾಕರ್ಡ್ Alumni "HP Way" page
- ↑ http://www.hpalumni.org/hp_way.htm
- ↑ HP Meets Billion Pound Recycling Goal Six Months Early, Sets Target for 2 Billion Pounds by 2010. My Solution Info. ಮರುಕಳಿಸಿದ ದಿನಾಂಕ 2007-07-16.
- ↑ HP Steps Up IT Industry Transparency, Releases Supply Chain Emissions Data. ಮರುಕಳಿಸಿದ ದಿನಾಂಕ 2009-10-21.
- ↑ Newseek Green Rankings 2009. ಮರುಕಳಿಸಿದ ದಿನಾಂಕ 2009-09-22.
- ↑ HP, Dell, J&J, Intel and IBM Top Newsweek’s Inaugural Green Rankings. ಮರುಕಳಿಸಿದ ದಿನಾಂಕ 2009-09-22.
- ↑ HP United States - ಕಂಪ್ಯೂಟರ್s, Laptops, Servers, ಪ್ರಿಂಟರ್s & more
- ↑ Large Enterprise Business IT products, services, and solutions - HP
- ↑ Suspicions and Spies in Silicon Valley | Newsweek Business |Newsweek.com
- ↑ Calif. court drops charges against Dunn
ಬಾಹ್ಯ ಕೊಂಡಿಗಳು [ಬದಲಾಯಿಸಿ]
- ಹೆವ್ಲೆಟ್-ಪ್ಯಾಕರ್ಡ್ home
- HP Printing and The Science Museum of Minnesota
- The Museum of HP Calculators
- HP ಇತಿಹಾಸದ ಕೊಂಡಿಗಳು
- Business data
- Hewlett-Packard Company at Google Finance
- Hewlett-Packard Company at Yahoo! Finance
- Hewlett-Packard Company at Hoover's
- Hewlett-Packard Company at Reuters
- Hewlett-Packard Company SEC filings at EDGAR Online
- Hewlett-Packard Company SEC filings at the Securities and Exchange Commission
ಟೆಂಪ್ಲೇಟು:HP ಟೆಂಪ್ಲೇಟು:Dow Jones Industrial Average companies
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Companies listed on the New York Stock Exchange
- ಉಲ್ಲೇಖದ ಅಗತ್ಯವಿರುವ ಲೇಖನಗಳು
- Articles to be expanded from November 2009
- Articles with invalid date parameter in template
- All articles to be expanded
- ಹೆವ್ಲೆಟ್-ಪ್ಯಾಕರ್ಡ್
- 1972ರಲ್ಲಿ ಸ್ಥಾಪಿತವಾದ ಕಂಪೆನಿಗಳು
- ಕಂಪ್ಯೂಟರ್ ಪ್ರಿಂಟರ್ ಕಂಪನಿಗಳು
- ನೆಟ್ವರ್ಕಿಂಗ್ ಹಾರ್ಡ್ವೇರ್ ಕಂಪನಿಗಳು
- ಕ್ಯಾಲಿಪೋರ್ನಿಯಾದ ಪಾಲೊ ಆಲ್ಟೊದಲ್ಲಿ ಕಂಪನಿಗಳು ನೆಲೆಗೊಂಡಿವೆ
- ಎಕಾನಮಿ ಆಫ್ ಹೌಸ್ಟನ್, ಟೆಕ್ಸಾಸ್
- ಕ್ಲೌಡ್ ಕಂಪ್ಯೂಟಿಂಗ್ ವೆಂಡರ್ಸ್
- ನೆಟ್ಬುಕ್ ತಯಾರಕರು
- ತಂತ್ರಜ್ಞಾನ ಪ್ರದರ್ಶನದ ಕಂಪನಿಗಳು