ಹಠ ರತ್ನಾವಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಠ ರತ್ನಾವಳಿಯು ಶ್ರೀನಿವಾಸರಿಂದ ೧೭ ನೇ ಶತಮಾನದಲ್ಲಿ ಬರೆದ ಹಠ ಯೋಗ ಪಠ್ಯವಾಗಿದೆ. ೮೪ ಆಸನಗಳನ್ನು ಹೆಸರಿಸಿದ ಮೊದಲ ಪಠ್ಯಗಳಲ್ಲಿ ಇದು ಒಂದಾಗಿದೆ, ಹಿಂದಿನ ಪಠ್ಯಗಳಲ್ಲಿ ಆಸನಗಳ ಹೆಸರಿಲ್ಲ. ಹಠ ರತ್ನಾವಳಿ ೩೬ ಆಸನಗಳನ್ನು ವಿವರಿಸುತ್ತದೆ.

ಪಠ್ಯ[ಬದಲಾಯಿಸಿ]

ಆಸನಗಳು, ಉಸಿರಾಟದ ಧಾರಣ, ಮತ್ತು ಮುದ್ರೆಗಳು ಹಠ ಯೋಗದಲ್ಲಿ ಸಹಾಯ ಮಾಡುತ್ತವೆ ಎಂಬ ವಿಷಯಗಳು ಈ ಪುಸ್ತಕದಲ್ಲಿದೆ. [೧] ಇದು ೮ ಶುದ್ಧೀಕರಣಗಳನ್ನು ( ಷಟ್ಕರ್ಮಗಳು ) ಉಲ್ಲೇಖಿಸುತ್ತದೆ. ಇವುಗಳಲ್ಲಿ ೬ ಅನ್ನು ಮಾತ್ರ ವಿವರಿಸುವುದಕ್ಕಾಗಿ ಹಠಯೋಗ ಪ್ರದೀಪಿಕಾವನ್ನು ಟೀಕಿಸುತ್ತದೆ. [೨]

ವಾಸ್ತವವಾಗಿ ೮೪ ಆಸನಗಳನ್ನು ಹೆಸರಿಸಲು ಇದು ಆರಂಭಿಕ ಪಠ್ಯಗಳಲ್ಲಿ ಒಂದಾಗಿದೆ. [೩] ಹಿಂದಿನ ಹಸ್ತಪ್ರತಿಗಳು ೮೪ ಅಥವಾ ೮,೪೦,೦೦೦ಆಸನಗಳು ಅಸ್ತಿತ್ವದಲ್ಲಿವೆ ಎಂದು ಸರಳವಾಗಿ ಹೇಳಿವೆ. [೪] ಪಟ್ಟಿ ಮಾಡಲಾದ ೮೪ ಆಸನಗಳು (ಹೆಚ್ ಆರ್ ೩.೭-೨೦ [೫] ) ಪದ್ಮಾಸನ ಮತ್ತು ಮಯೂರಾಸನ, ಗೋಮುಖಾಸನ, ಭೈರವಾಸನ, ಮತ್ಸ್ಯೇಂದ್ರಾಸನ, ಕೂರ್ಮಾಸನ, ಕ್ರೌಂಚಾಸನ, ಮಂಡೂಕಾಸನ, ಯೋಗನಿದ್ರಾಸನ, ಮತ್ತು ಈಗ ಬಳಕೆಯಲ್ಲಿಲ್ಲದ ಹಲವಾರು ಹೆಸರುಗಳನ್ನು ಒಳಗೊಂಡಿದೆ; ಇದು ೩೬ ಆಸನಗಳ ವಿವರಣೆಯನ್ನು ಒದಗಿಸುತ್ತದೆ. [೬]

ಉಲ್ಲೇಖಗಳು[ಬದಲಾಯಿಸಿ]

  1. Mallinson & Singleton 2017, p. 29.
  2. Mallinson & Singleton 2017, pp. 77–79.
  3. Mallinson & Singleton 2017, p. 91.
  4. Yoga Institute (Santacruz East Bombay India) (1988). Cyclopaedia Yoga. Yoga Institute. p. 32.
  5. Mallinson & Singleton 2017, pp. 116–119.
  6. Mallinson & Singleton 2017, pp. 91, 116–119.