ಸ್ವತಂತ್ರ ತಂತ್ರಾಂಶ ಚಳುವಳಿ ಕರ್ನಾಟಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ಸ್ವತಂತ್ರ ತಂತ್ರಾಂಶ ಆಂದೋಲನ
ಸ್ವತಂತ್ರ ತಂತ್ರಾಂಶವೇ ಭವಿಷ್ಯ,ಭವಿಷ್ಯವು ನಮ್ಮದು
ಸಂಕ್ಷಿಪ್ತ ಹೆಸರುFSMK
ಸ್ಥಾಪನೆಮಾರ್ಚ್ 21, 2009 (5469 ದಿನ ಗಳ ಹಿಂದೆ) (2009-೦೩-21)
ಶೈಲಿNot for Profit registered organization
Purposeಸ್ವತಂತ್ರ ತಂತ್ರಾಂಶ ಮತ್ತು ಅದರ ತತ್ವ, ಸಿದ್ಧಾಂತವನ್ನು ಎಲ್ಲಾ ಗಣಕಯಂತ್ರದ ಬಳಕೆದಾರರಿಗೆ ಮತ್ತು ಸಮಾಜದ ಪ್ರತಿ ವರ್ಗಕ್ಕು ಕೊಂಡೊಯ್ಯುವುದು
ಪ್ರಧಾನ ಕಚೇರಿವಿಲ್ಸನ್ ಗಾರ್ಡನ್, ಬೆಂಗಳೂರು
ಸ್ಥಳ
  • ಬೆಂಗಳೂರು
ಪ್ರದೇಶ served
ಕರ್ನಾಟಕ ರಾಜ್ಯ
ಅಧ್ಯಕ್ಷರು
ಪ್ರೋ.ಕೆ.ಗೋಪಿನಾತ್ (IISc, ಬೆಂಗಳೂರು)
ಪ್ರಧಾನ ಕಾರ್ಯದರ್ಶಿ
ವಿಕ್ರಮ ವಿನ್ಸೆಂಟ್
ಮುಖ್ಯ ಭಾಗ
General Council
ಅಂಗಸಂಸ್ಥೆಗಳುಕರ್ನಾಟಕ ಸ್ವತಂತ್ರ ತಂತ್ರಾಂಶ ಆಂದೋಲನ
ಅಧಿಕೃತ ಜಾಲತಾಣwww.fsmk.org

ಕರ್ನಾಟಕ ಸ್ವತಂತ್ರ ತಂತ್ರಾಂಶ ಆಂದೋಲನ[ಬದಲಾಯಿಸಿ]

ಒಂದು ಲಾಭದ ಉದ್ದೇಶವಿಲ್ಲದ, ಸ್ವತಂತ್ರ ತಂತ್ರಾಂಶ ಹಾಗೂ ಅದರ ಮಹತ್ವವನ್ನು ಸಾರುವ ಸಲುವಾಗಿ ಪರಿಶ್ರಮಿಸುತ್ತಿರುವ ಸಂಘಟನೆ. ಫ್ರೀ /ಸ್ವತಂತ್ರ ತಂತ್ರಾಂಶ ಬಳಕೆದಾರರಿಗೆ ಎಲ್ಲಾ ರೀತಿಯ ಸ್ವತಂತ್ರ್ಯ ಮತ್ತು ಸೌಲಭ್ಯ ನೀಡುತ್ತದೆ.

ಇಲ್ಲಿ ಬಳಕೆದಾರರಿಗೆ ನಾಲ್ಕು ರೀತಿಯ ಸ್ವತಂತ್ರ / ಸೌಲಭ್ಯ ಇರುತ್ತದೆ[ಬದಲಾಯಿಸಿ]

  1. ತಂತ್ರಾಂಶವನ್ನು ತನಗೆ ಬೇಕಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು.
  2. ತಂತ್ರಾಂಶವನ್ನು ತನಗೆ ಬೇಕಾದ ರೀತಿಯಲ್ಲಿ ಮಾರ್ಪಡಿಸಿಕೊಳ್ಳುವುದು.
  3. ತಂತ್ರಾಂಶವನ್ನು ತನಗೆ ಬೇಕಾದವರಿಗೆ ವರ್ಗಾವಣೆ /ಹಂಚುವುದು ಮಾಡಬಹುದು .
  4. ಬದಲಾವಣೆ ಮಾಡಿದ ತಂತ್ರಾಂಶದ ಕೋಡ್ ಗಳನ್ನು ಸಹ ಹಂಚಬಹುದು .

ಇದು ಪೂರ್ಣವಾಗಿ ಸ್ವತಂತ್ರ ಮತ್ತು ಉಚಿತವಾಗಿರುತ್ತವೆ ಹಾಗು ಇದಕ್ಕೆ ಯವುದೇ ರೀತಿಯ ಶುಲ್ಕ ಇರುವುದಿಲ್ಲ. ಮೇಲಿರುವ ನಾಲ್ಕು ಬಳಕೆಗಳು ಸಾರ್ವಜನಿಕವಾಗಿ ಎಲ್ಲ ರೀತಿಯಲ್ಲಿ ಉಪಯೋಗಕರವಾಗಿರುತ್ತದೆ ಮತ್ತು ಮುಕ್ತವಾಗಿರುತ್ತದೆ . ಈ ಸ್ವತಂತ್ರ ತಂತ್ರಾಂಶ ಚಳುವಳಿಯು 1983 ರಲ್ಲಿ ಪ್ರಾರಂಭವಾಯಿತು . ಮಾಲೀಕತ್ವ ಹೊಂದಿರುವ ಬಳಕೆಗಳನ್ನು ತಡೆಯಲು ಗ್ನೂ (GNU OS) 1984ರಲಿ ಪ್ರಾರಂಭವಾಯಿತು.

1980 ರಲ್ಲಿ GNU GPL(General Public license) ಆವಿಷ್ಕಾರವಾವಾಯಯಿತು. ಇದನ್ನು ಮೇಲಿರುವ ನಾಲ್ಕು ಬಳಕೆಗಳು ಸಾರ್ವಜನಿಕವಾಗಿ ಉಪಯೋಗವಾಗುವಂತೆ ಮಾಡಲು ಮತ್ತು ಬಳಕೆದಾರರಿಗೆ ಸ್ವತಂತ್ರ ನೀಡಲು ಪ್ರಾರಂಭಿಸಲಾಯಿತು.

ಆದರೆ ಎಲ್ಲಾ ಸ್ವತಂತ್ರ ತಂತ್ರಾಂಶ ಬಳಕೆದಾರರು ಹಾಗು ತಯಾರಕರು ಸ್ವತಂತ್ರ ತಂತ್ರಾಂಶದ ನೀತಿ, ನಿಯಮ ಮತ್ತು ಗುರಿಗಳನ್ನು ಒಪ್ಪಲಿಲ್ಲ. ಆದ ಕಾರಣ 1980 ರಲ್ಲಿ ಕೆಲವು ಪಂಗಡದವರು ಸ್ವತಂತ್ರ ತಂತ್ರಾಂಶವನ್ನು ಓಪನ್ ಸೊರ್ಸ್ (open source) ಎಂದು ಕರೆದು ಪ್ರಚಾರ ಮಾಡಲಾರಂಭಿಸಿದರು.

ಸ್ವತಂತ್ರ ತಂತ್ರಾಂಶ ಮತ್ತು ಓಪನ್ ಸೊರ್ಸ್ ತಂತ್ರಾಂಶ, ಎರಡೂ ಪದಗಳು ಬಹುತೇಕ ಒಂದೇ ಅರ್ಥ ಕೊಡುತ್ತವೆ ಆದರೆ ಇವುಗಳ ಮೌಲ್ಯಗಳು ಬೇರೆ ರೀತಿಯಾಗಿರುತ್ತದೆ. ಸ್ವತಂತ್ರ ತಂತ್ರಾಂಶ ಅಂದರೆ ಸಾಮಾಜಿಕವಾಗಿ ಜನರೊಂದಿಗೆ ಬೆರೆತು ಸಾಮಾಜಿಕವಾಗಿ ಜಾಗೃತಿಗೊಳಿಸುವುದು. ಓಪನ್ ಸೊರ್ಸ್ ಅಂದರೆ ಕೆಲವು ನಿಯಮಗಳಿಗೆ ಅನುಸಾರವಾಗಿ ಪ್ರಚಾರಮಾಡುವುದು .

ಸ್ವತಂತ್ರ ತಂತ್ರಾಂಶ ಮತ್ತು ಓಪನ್ ಸೊರ್ಸ್ ತಂತ್ರಾಂಶದ ವ್ಯತ್ಯಾಸಗಳು[ಬದಲಾಯಿಸಿ]

ಎಲ್ಲಾ ಸ್ವತಂತ್ರ ತಂತ್ರಾಂಶಗಳು ಓಪನ್ ಸೊರ್ಸ್ ಆಗಬಹುದು ಆದರೆ ಎಲ್ಲಾ ಓಪನ್ ಸೊರ್ಸ್ ತಂತ್ರಾಂಶಗಳು ಸ್ವತಂತ್ರ ತಂತ್ರಾಂಶ ಆಗುವುದಕ್ಕೆ ಸಾ‌‌ಧ್ಯವಿಲ್ಲ. ಕೆಲವು ಓಪನ್ ಸೊರ್ಸ್ ನಿಯಮಗಳು ನಿರ್ಭಂದಿತವಾಗಿರುತ್ತವೆ ಅದನ್ನು ಮುಕ್ತವಾಗಿ ಬಳಕೆ ಮಾಡಲು ಸಾ‌‌ಧ್ಯವಿಲ್ಲ. ಹಾಗು ಬದಲಾವಣೆ ಮಾಡಿರುವಂತಹ ಸೊರ್ಸ್ ಕೋಡ್ಗಳ ತಂತ್ರಾಂಶಗಳನ್ನು ಕಂಪ್ಯೂಟರ್ನಲ್ಲಿ ಸ್ವೀಕಾರ ಮಾಡುವುದಿಲ್ಲ.

ಈ ಚಳುವಳಿಯು ರಿಚರ್ಡ್ ಸ್ಟಾಲ್ಮನ್ ರವರ ಸ್ವತಂತ್ರ ತಂತ್ರಾಂಶದ ಆಲೋಚನೆಯಿಂದ ಪ್ರೇರೆಪಿತವಾಗಿದೆ. ಕರ್ನಾಟಕ ಸ್ವತಂತ್ರ ತಂತ್ರಾಂಶ ಆಂದೋಲನವು ಬೆಂಗಳೂರು ಮತ್ತು ದಕ್ಷಿಣ ಕೆನರದಲ್ಲಿ ಹೆಚ್ಚಿನ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದೆ. ಕರ್ನಾಟಕದ ಐದು ಜಿಲ್ಲೆಗಳಲ್ಲಿ ಅಂದರೆ, ಬೆಂಗಳೂರು, ಮಂಡ್ಯ, ಹಾಸನ, ಮಂಗಳೂರು ಮತ್ತು ತುಮಕೂರಿನಲ್ಲಿ ಇದರ ಇರುವಿಕೆಯನ್ನು ಕಾಣಬಹುದು.

ಈ ಸಂಘಟನೆಯು ಅಕ್ಟೋಬರ್ ೬, ೨೦೧೩ರಂದು ಅರ್ಧವಾರ್ಷಿಕ ಸರ್ವ ಸದಸ್ಯರ ಸಭೆ ನಡೆಸಿ ಪ್ರೋ. ಗೋಪಿನಾಥ್ ರವರನ್ನು ಅಧ್ಯಕ್ಷರನ್ನಾಗಿ ಹಾಗು ಜಯ್ ಕುಮಾರ್ ರವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಮರುಆಯ್ಕೆ ಮಾಡಿದರು. ಕರ್ನಾಟಕ ಸ್ವತಂತ್ರ ತಂತ್ರಾಂಶ ಆಂದೋಲನವು ಸ್ವತಂತ್ರ ತಂತ್ರಾಂಶ ಆಂದೋಲನ ಭಾರತದ ಒಂದು ಅಂಗ ಸಂಸ್ಥೆ.