ಸ್ಯಾಂಡ್ ಹರ್ಸ್ಟ್ ರೋಡ್ ರೈಲ್ವೆ ಸ್ಟೇಷನ್, ಮುಂಬೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'Sandhurst Road Railway Station'

'ಸ್ಯಾಂಡ್ ಹರ್ಸ್ಟ್ ರೋಡ್ ರೈಲ್ವೆ ಸ್ಟೇಷನ್', 'ಮಧ್ಯರೈಲ್ವೆ', ಮತ್ತು 'ಹಾರ್ಬರ್ ಲೈನ್,'ದಾರಿಯಲ್ಲಿದೆ. ಮುಂಬಯಿ ಸಬರ್ಬನ್ ರೈಲ್ವೆ ಯಲ್ಲಿ ಛತ್ರಪತಿ ಶಿವಾಜಿ ಟರ್ಮಿನಸ್ ನಿಂದ, ಮೂರನೆ ಸ್ಟಾಪ್ ನಲ್ಲಿದೆ. ಈ ರೈಲ್ವೆ ಸ್ಟೇಷನ್ ಗೆ 'Lord Sandhurst,' ನ ಹೆಸರನ್ನು ಇಟ್ಟಿದ್ದಾರೆ. (Lord Sandhurst, ೧೮೯೫ - ೧೯೦೦ ರಲ್ಲಿ ಬೊಂಬಾಯಿನ ಗವರ್ನರ್ ಆಗಿದ್ದರು). ೧೯೧೦ ರಲ್ಲಿ ಸ್ಟೇಷನ್ ನಿರ್ಮಾಣವಾಯಿತು. 'ಬಾಂಬೆ ಸಿಟಿ ಇಂಪ್ರೂವ್ ಮೆಂಟ್ ಟ್ರಸ್ಟ್', ಫಂಡ್ ನಿಂದ ಸ್ವಲ್ಪ ಎತ್ತರದಲ್ಲಿ ಕಟ್ಟಿರುವ ಹಾರ್ಬರ್ ಲೈನ್, ಸ್ಟೇಷನ್ ನನ್ನು ೧೯೨೧ ರಲ್ಲಿ ನಿರ್ಮಿಸಿದರು. ಇದಕ್ಕೆ, ಉಪಯೋಗಿಸಿರುವ ಕಬ್ಬಿಣದ ಗರ್ಡರ್ಗಳ ಮೇಲೆ, " (GIPR 1921 Lutha Iron Works, Glasgow. The fabricated metal was imported from the United Kingdom))' ಎಂದು ನಮೂದಿಸಲಾಗಿದೆ. ಅವೆಲ್ಲಾ ಆಗಿನಕಾಲದಲ್ಲಿ, ' ಲಂಡನ್,' ನಿಂದ ಆಮದುಮಾಡಿಕೊಂಡು ಇಲ್ಲಿನ ಭವನಗಳನ್ನು ನಿರ್ಮಿಸುತ್ತಿದ್ದರು. ಭಾರತದಲ್ಲಿ, ಟಾಟಾ ಸಂಸ್ಥೆ, ಆ ಕಾಲದಲ್ಲೇ ಉಕ್ಕನ್ನು ತಯಾರಿಸುತ್ತಿತ್ತು. ಆದರೆ, ಭಾರತದಲ್ಲಿ ಆಗ,ಇಂತಹ ಕಬ್ಬಿಣದ ಗರ್ಡರ್ ಗಳನ್ನು ತಯಾರಿಸುವ ವ್ಯವಸ್ಥೆ ಇರಲಿಲ್ಲ.