ಸೋಮನಳ್ಳಮ್ಮ

ವಿಕಿಪೀಡಿಯ ಇಂದ
(ಸೊಮನಳ್ಳಮ್ಮ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸೋಮನಳ್ಳಮ್ಮನ ದೇವಾಲಯ

ಸೋಮನಳ್ಳಮ್ಮನ ದೇವಾಲಯವು ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಸೋಮನಹಳ್ಳಿ ಕ್ಷೇತ್ರ ದಲ್ಲಿದೆ. ನಾಗಮಂಗಲದಿಂದ ದಕ್ಷಿಣಕ್ಕೆ ಸುಮಾರು ೧೫ ಕಿ.ಮಿ.ದೂರದಲ್ಲಿದೆ. ಸೋಮನಳ್ಳಮ್ಮ ಸೋಮನಾಯಕನ ಮಗಳು. ಈಕೆಯನ್ನು ನಾಗಮಂಗಲದ ಪಾಳೆಯಗಾರನ ಮಗನಿಗೆ ಮದುವೆ ಮಾಡಲಾಗಿತ್ತು. ಮನಾಯಕನ ದಳಪತಿಯ ಮಗನಾದ ಹಿಮ್ಮದಿ ದಾಸನು ಈಕೆಯನ್ನು ಅಪಹರಿಸುತ್ತಾನೆ. ಈಕೆ ನಿರ್ದೊಶಿ. ಇದನ್ನು ತಿಳಿಯದ ಈಕೆಯ ತಂದೆ ಇಬ್ಬರನ್ನೂ ಬೆಂಕಿಗೆ ಹಾಕಿಸುತ್ತಾನೆ.. ಸೋಮನಾಯಕಿ (ಸೋಮನಳಮ್ಮ) `ನನ್ನಂತಹ ರೂಪವತಿ ಜನ್ಮತಾಳದಿರಲಿ` ಎಂದು ಶಪಿಸಿ ಅಗ್ನಿಗೆ ಆಹುತಿಯಾಗುತ್ತಾಳೆ. ಅದೇ ಜಾಗದಲ್ಲಿ ದೇವಾಲಯವಿದೆ. ಅದೇ ಸೋಮನಳ್ಳಮ್ಮನ ದೇವಾಲಯ.