ಸುಯೆಜ್ ಕಾಲುವೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸುಯೆಜ್ ಕಾಲುವೆಯ ಎಲ್ ಬಾಲಾ ದಲ್ಲಿ ನಿಂತಿರುವ ಹಡಗುಗಳು

ಸುಯೆಜ್ ಕಾಲುವೆ, ಕೆಂಪು ಸಮುದ್ರದ ಸುಯೆಜ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಯೀದ್ ಬಂದರಿನ ನಡುವೆ ಸಂಪರ್ಕ ಕಲ್ಪಿಸುವ ಒಂದು ಮಹಾಕಾಲುವೆ. ಇದು ಈಜಿಪ್ಟ್ ದೇಶದಲ್ಲಿದೆ - ಸೈನಾಯಿ ಜಂಬೂದ್ವೀಪದ ಪಶ್ಚಿಮಕ್ಕಿದ್ದು ೧೬೩ ಕಿಮೀ ಉದ್ದವಿದೆ. ಇದರ ಅಗಲ ಅತ್ಯಂತ ಕಡಿಮೆ ಇರುವ ಸ್ಥಳದಲ್ಲಿ ೩೦೦ ಮೀ ಅಗಲವಿದೆ.

ಈ ಕಾಲುವೆಯಿಂದ ಏಷ್ಯಾ ಮತ್ತು ಯೂರೋಪ್ ಖಂಡಗಳ ನಡುವೆ ಪಯಣಿಸುವ ಹಡಗುಗಳು ಆಫ್ರಿಕಾ ಖಂಡದ ಸುತ್ತ ಹೋಗಬೇಕಾಗದೆ ನೇರವಾಗಿ ಹೋಗುವ ಅವಕಾಶವನ್ನು ಪಡೆದಿವೆ. ೧೮೬೯ ರಲ್ಲಿ ಈ ಕಾಲುವೆಯನ್ನು ತೆರವು ಮಾಡಲಾಯಿತು. ಇದಕ್ಕೆ ಮೊದಲು ಹಡಗುಗಳು ಸುಯೆಜ್ ವರೆಗೂ ಸಾಮಾನುಗಳನ್ನು ತೆಗೆದುಕೊಂಡು ಹೋಗಿ ಅಲ್ಲಿಂದ ಸಾಮಾನುಗಳನ್ನು ಸಯೀದ್ ಬಂದರಿನ ವರೆಗೆ ಭೂಮಾರ್ಗದಲ್ಲಿ ತೆಗೆದುಕೊಂಡು ಹೋಗಿ ಬೇರೊಂದು ಹಡಗಿನಲ್ಲಿ ಯೂರೋಪಿಗೆ ಒಯ್ಯಲಾಗುತ್ತಿತ್ತು.


ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು