ಸಿ. ಮುನಿಯಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Muniyappa-235.jpg
'ಸಿ. ಮುನಿಯಪ್ಪ'

ವರ್ಷ, ೨೦೦೯ ರ ಪ್ರತಿಷ್ಠಿತ, ’ಓಪನ್ ಗಾಲ್ಫ್ ಚಾಂಪಿಯನ್,’ ಆಗಿರುವ ಸಿ. ಮುನಿಯಪ್ಪನವರು, ಕರ್ನಾಟಕ ರಾಜ್ಯದ ’ಬೆಂಗಳೂರಿನ ಗಾಲ್ಹ್ ಆಟಗಾರರು’. ಉತ್ತರ ಭಾರತದ 'ಗುರ್ ಗಾಂವ್' ನಲ್ಲಿ ಏರ್ಪಡಿಸಿದ್ದ ’ಓಪನ್ ಗಾಲ್ಫ್ ಛಾಂಪಿಯನ್ ಶಿಪ್ ಪ್ರತಿಯೋಗಿತೆ’ಯಲ್ಲಿ, ಜಯವನ್ನು ಸಾಧಿಸಿ, ವಿಶ್ವದ ಗಮನವನ್ನು ಸೆಳೆದಿದ್ದಾರೆ. ’ಗಾಲ್ಫ್ ಆಟ’ದಲ್ಲಿ ಅಂತಿಮ ಸುತ್ತಿನವರೆಗೂ ತೀವ್ರ ಪೈಪೋಟಿಯನ್ನು ನಡೆಸಿ, ತಮ್ಮ ಕಠಿಣ ಪರಿಶ್ರಮ ಹಾಗೂ ತಮ್ಮ ಆಟದ ಮುನ್ನಡೆ ಕಾಯ್ದುಕೊಳ್ಳುವ ಮೂಲಕ, ಯಶಸ್ವಿಯಾಗಿ ಪ್ರಶಸ್ತಿಯನ್ನು ತಮ್ಮ ಜೋಳಿಗೆಗೆ ಹಾಕಿಕೊಂಡರು. ಪ್ರಶಸ್ತಿಯ ಜೊತೆಗೆ, ೧.೨೫ ದಶ-ಲಕ್ಷ ಡಾಲರ್ ಮೊತ್ತದ ಹಣದ ಪಾರಿತೋಷಕ ಅವರನ್ನು ಅರಸಿಬಂತು. ’ಏಷ್ಯನ್ ಟೂರ್ನಮೆಂಟ್’ ಗೆಲ್ಲುವ ಸಾಮರ್ಥ್ಯದ ಮತ್ತೊಬ್ಬ ಯುವ ಆಟಗಾರನನ್ನು ಭಾರತ ಗುರುತಿಸಿದಂತಾಗಿದೆ. ’ಟೂರ್ನಿ’ಯ ೨ ನೆಯ ಸುತ್ತಿನಲ್ಲಿ ಅಗ್ರಸ್ಥಾನಕ್ಕೇರಿದ ಮುನಿಯಪ್ಪನವರು, ತಮ್ಮ ಪ್ರತಿಭೆ ಮತ್ತು ಸಾಧ್ಯತೆಗಳನ್ನು ಅರಿತಿದ್ದು, ಮ್ಯಾಚ್ ನ ಅಂತ್ಯದ ವರೆಗೂ ಪ್ರಬಲವಾಗಿ ಸೆಣೆಸಿದಬಗೆಯೇ ಅವರ ಗೆಲುವಿಗೆ ಕಾರಣವಾಯಿತು.

ಪ್ರತಿಸ್ಪರ್ಧಿ,’ಲೇ ಸಂಗ್’[ಬದಲಾಯಿಸಿ]

ಕೊರಿಯಾದ ’ಲೇ ಸಂಗ್’ ಜೊತೆ, ಸೆಣಸುತ್ತಿರುವಾಗ, ಒಂದು ಹಂತದಲ್ಲಿ ಮುನಿಯಪ್ಪನವರಿಗೆ ೨೭೬ ಅಂಕಗಳಿಸಿ ಸಮಬಲವನ್ನು ದಾಖಲಿಸಿದ್ದರು. ಹಾಗೆಯೇ ಆಟ ಮುಂದುವರೆದು, ಸೆಣೆಸಾಟ ತೀವ್ರವಾಗಿ, ತಮ್ಮ ಬಲವನ್ನು ವೈಯಕ್ತಿಕವಾಗಿ ೭೦ ಅಂಕ ಹೆಚ್ಚುವರಿಮಾಡುವ ಮೂಲಕ, ಪ್ರಶಸ್ತಿಯನ್ನು ತಮ್ಮಕಡೆ ಸೆಳೆದುಕೊಳ್ಳಲು ಸಹಕಾರಿಯಾಯಿತು.

'ಗಾಲ್ಫ್ ಆಟದ ಕನಸು,' ನನಸಾಗಲು ತೀವ್ರ-ಪರಿಶ್ರಮ ನೆರವಾಯಿತು[ಬದಲಾಯಿಸಿ]

ಎಲ್ಲಾ ಆಟಗಾರರಂತೆ ಒಂದು ದಿನ ಟೂರ್ನಮೆಂಟ್ ನಲ್ಲಿ ಜಯಭೇರಿ ಹೊಡೆಯುವ ಕನಸು ಮೊದಲಿನಿಂದಲೂ ಇದ್ದೇ ಇತ್ತು. ಅದಕ್ಕೆ ನೆರವಾದದ್ದು ಅವರ ಆತ್ಮ ವಿಶ್ವಾಸ, ಅಚಲ ಶ್ರದ್ಧೆ ಮತ್ತು ಪರಿಶ್ರಮ. ಹಾಗಾಗಿ ಆಟದ ಸಮಯದಲ್ಲಿ ಅವರ ಧ್ಯೇಯ ಮಾತ್ರ ಅತ್ಯುತ್ತಮ ಪ್ರದರ್ಶನ ನೀಡುವ ಏಕಮಾತ್ರ ಗುರಿಯನ್ನು ಹೊಂದಿತ್ತು. ಆದರೆ, ಪ್ರಶಸ್ತಿ ಗೆಲ್ಲುವ ಸಾಧ್ಯತೆ ಅದಕ್ಕೆ ಬೇಕಾದ ಸಿದ್ಧತೆ, ಹಾಗೂ ಅಂಕಿ-ಅಂಶಗಳ ಆದ್ಯತೆಗಳಬಗ್ಗೆ ಮಾಹಿತಿಗಳಬಗ್ಗೆ ಅವರು ಹೆಚ್ಚಿಗೆ ತಲೆಕೆಡಿಸಿಕೊಂಡಿರಲಿಲ್ಲ. ಒಮ್ಮಿಂದೊಮ್ಮೆ ತಮ್ಮ ಆಟದಲ್ಲಿ ಸಿಕ್ಕ ಯಶಸ್ಸಿನ ಹಲವು ಹಂತಗಳು ಅವರನ್ನು ಮತ್ತೂ ಮುಂದುವರೆಯಲು ಪ್ರೇರೇಪಿಸಿದವು. ಆಗ ಮುನಿಯಪ್ಪನವರು, ತಮ್ಮ ೧೦೦ ಪ್ರತಿಶತ್ ಶ್ರಮವನ್ನು ಆಟದಲ್ಲಿ ಅಳವಡಿಸಿಕೊಂಡು, ತಮ್ಮ ಪ್ರತಿಧ್ವಂಧಿಗಳ ಆಟವನ್ನು ಗಮನಿಸುತ್ತಾ, ತಾವೂ ಮಿಂಚಿನವೇಗದಲ್ಲಿ ಮುಂದುವರೆದರು. ಯಾವುದೇ ’ಕೋಚ್’ ಸಹಾಯವಿಲ್ಲದೆ ಮುನಿಯಪ್ಪನವರು, ತಮ್ಮ ಆತ್ಮ ವಿಶ್ವಾಸ ಹಾಗೂ ಆಟದ ಬಲದಿಂದಲೇ ಮುಂದೆಬಂದರು.

’ಹೀರೋ ಹೋಂಡಾ ಇಂಡಿಯನ್ ಓಪನ್' ನಲ್ಲಿ ಸೆಣಸಿ ಜಯಶಾಲಿಯಾದ, ಮುನಿಯಪ್ಪನವರ, ಸ್ವಂತಮನೆಯ ಕನಸು ನನಸಾಗಿದೆ[ಬದಲಾಯಿಸಿ]

ಇಷ್ಟು ಹೆಚ್ಚಿನ ಮೊತ್ತದ ಪಾರಿತೋಷಕದ ಹಣವನ್ನು ತಮ್ಮ ನಿವಾಸಸ್ಥಾನದ ಬಗ್ಗೆ ಖರ್ಚುಮಾಡುವ ಆಲೋಚನೆಯನ್ನು ಇಟ್ಟುಕೊಂಡಿರುವುದಾಗಿ ಅವರು ಪತ್ರಿಕಾಕರ್ತರಿಗೆ ತಿಳಿಸಿದರು.

ಮುನಿಯಪ್ಪನವರು ನಡೆದು ಬಂದ ದಾರಿ[ಬದಲಾಯಿಸಿ]

ಮುನಿಯಪ್ಪ ಮೊದಲು 'ಕ್ಯಾಡಿ' ಯಾಗಿ ಕೆಲಸಕ್ಕೆ ಸೇರಿದಾಗ, ಒಂದು ಗಂಟೆಗೆ ಒಂದು ರೂಪಾಯಿ ಕೂಲಿ ದೊರೆಯುತ್ತಿತ್ತು. ಅಂತಹ ಸ್ಥಾನದಿಂದ ನಿಧಾನವಾಗಿ ಆಟವನ್ನು ಕಲಿತು, ಮೇಲೇರಿದ ’ಬೆಂಗಳೂರಿನ ಚಿನ್ನಸ್ವಾಮಿ ಮುನಿಯಪ್ಪ,’ ’ಏಷ್ಯನ್ ವೃತ್ತಿಪರ ಗಾಲ್ಫ್ ಟೂರ್ನಿ’ಯಲ್ಲಿ ಛಾಂಪಿಯನ್ ಆಗಿದ್ದಾರೆ. ಏಷ್ಯನ್ ವೃತ್ತಿಪರ ಗಾಲ್ಫ್ ಟೂರ್ನಿಯಲ್ಲಿ ಅವರು ಜಯಿಸಿದ ಮೊದಲ ಪ್ರಶಸ್ತಿ ಇದು. ಇದರಿಂದ ಅವರಿಗೆ ೯೨ ಲಕ್ಷ ರೂಪಾಯಿ ಬಹುಮಾನ ಲಭಿಸಿದೆ.

ಮುನಿಯಪ್ಪನವರ ಪರಿವಾರ[ಬದಲಾಯಿಸಿ]

ತಂದೆ, ’ಚಿನ್ನಸ್ವಾಮಿ’, ತಾಯಿ ’ಚಿನ್ನಮ್ಮ’, ಮತ್ತು ಪತ್ನಿ, ’ಮುನಿಯಮ್ಮ’. ಅಪ್ಪ ಅಮ್ಮ ಕೂಲಿಕೆಲಸಗಾರರು. ’ಗಾಲ್ಪ್ ಚೆಂಡು’ ಹೆಕ್ಕಿ ಕೊಡುತ್ತಾ ಆಟವನ್ನು ಕಲಿತ ಮುನಿಯಪ್ಪ ಇಂದು ಗಾಲ್ಫ್ ಲೋಕದ ಬಹುದೊಡ್ಡ ಛಾಂಪಿಯನ್ ಆಗಿ ಹೆಸರುಮಾಡಿದ್ದಾರೆ. ಮನೆ ಬೆಂಗಳೂರಿನ ಹಳೆ ವಿಮಾನನಿಲ್ದಾಣದ ರಸ್ತೆಯಲ್ಲಿ ’ಕೋಡಿಹಳ್ಳಿ’ಯ ಗಲ್ಲಿಯೊಂದರಲ್ಲಿ. ಈ ಚಿಕ್ಕ ಮನೆಗೆ ಬರುವ ಮೊದಲು ಒಂದು ಟೆಂಟ್ ನಲ್ಲಿ ವಾಸ್ತವ್ಯ. ಅಷ್ಟೊಂದು ಬಡತನ ಅವರದು. ತಮಿಳುನಾಡಿನ ’ಧರ್ಮಪುರಿ ಜಿಲ್ಲೆ’ಯ ’ಪೊಲಂಬೆಟ್ಟ,’ ಎಂಬ ಊರಿನ, ಮುನಿಯಪ್ಪನವರ ಪೋಷಕರು, ಕೆಲಸಕ್ಕಾಗಿ ಅರಸುತ್ತಾ, ’ಸಿಲಿಕಾನ್ ನಗರ ಬೆಂಗಳೂರಿ’ಗೆ ಬಂದದ್ದು ಬರಿಕೈಯಲ್ಲಿ. ಸ್ಲಮ್ ಏರಿಯದಲ್ಲಿ ಟೆಂಟ್ ವೊಂದರಲ್ಲಿ ವಾಸ. ಇದು ಅವರ ಹಿಂದಿನ ಚರಿತ್ರೆ. ೨೦೦೩ ರಲ್ಲಿ ’ಚೆನ್ನೈ’ ನಲ್ಲಿ ನಡೆದ ’ಇಂಡೋ ಓಪನ್ ಗಾಲ್ಫ್ ಟೂರ್ನ್ಮೆಂಟ್’ನಲ್ಲಿ ಎರಡನೆಯ ಸ್ಥಾನ ಪಡೆದರು.ಅದರಲ್ಲಿ ೭೫ ಸಾವಿರ ಹಣ ಸಿಕ್ಕಿತು.ಹಾಗೆಯೇ ಕೆಲವು ಟೂರ್ನಿಗಳಲ್ಲಿ ಆಗಾಗಿ ಪಾಲ್ಗೊಳ್ಳುತ್ತಿದ್ದರು. ಅದರಲ್ಲಿ ಬಂದ ಹಣದಿಂದ ಒಂದು ಮನೆಯನ್ನು ಲೀಸ್ ತೆಗೆದುಕೊಂಡರು. ’ಸಿಂಗಪುರ್ ಓಪನ್’ ಮತ್ತು ’ಹಾಂಕಾಂಗ್ ಓಪನ್’ ನಲ್ಲಿ ಆಡಲು ಈಗ ಆಹ್ವಾನ ಸಿಕ್ಕಿದೆ. ಜೊತೆಗೆ ೨ ವರ್ಷ ಏಷ್ಯನ್ ಟೂರ್ನಲ್ಲಿ ಆಡಬಹುದಾದ ಸೌಲತ್ತಿದೆ.

ಮುನಿಯಪ್ಪನವರ ಪ್ರತಿಭೆಗೆ ನೀರೆರೆದ ಮಹನೀಯರು[ಬದಲಾಯಿಸಿ]

ಮುನಿಯಪ್ಪನವರ ತಂದೆ ಉದ್ಯಾನನಗರಿಗೆ ಮೊದಲು ಬಂದಾಗ, ’ಕರ್ನಾಟಕ ಗಾಲ್ಪ್ ಅಸೋಸಿಯೇಷನ್’ ನಲ್ಲಿ ಹಸಿರುಹುಲ್ಲು ಕತ್ತರಿಸಿ ಒಪ್ಪಮಾಡುವ ಕೆಲಸಕ್ಕೆ ಸೇರಿಕೊಂಡರು. ಹಣಸಾಕಾಗದೆ, ತಮ್ಮ ಮಗನನ್ನೂ ತಮ್ಮ ಜೊತೆಗೆ ಸೇರಿಸಿಕೊಂಡರು. ಗಾಲ್ಫರ್ ಗಳಿಗೆ ಅವರು ’ಕ್ಯಾಡಿ’ ಸಹಾಯಕರಾಗಿ ಕೆಲಸಮಾಡುತ್ತಿದ್ದರು. ಮತ್ತೆ ಕ್ಯಾಡಿ ಕೆಲಸ ತಪ್ಪಿಸಿ, ಹುಲ್ಲುಕತ್ತರಿಸುವ ಕೆಲಸಕ್ಕೆ ಸೇರಿಸಿದರು.ದಿನಕ್ಕೆ ದಿನಕ್ಕೆ ೬೫ ರೂಪಾಯಿ ಸಿಗುತ್ತಿತ್ತು. ಗಾಲ್ಫ್ ಕೋರ್ಸ್ ನ ’ಕಿಲ್ಪಾಡಿ’ ಎನ್ನುವವರು, ಮುನಿಯಪ್ಪನವರ ಪ್ರತಿಭೆಯನ್ನು ಗುರುತಿಸಿ, ಪುನಃ 'ಕ್ಯಾಡಿ' ಕೆಲಸಕ್ಕೆ ಸೇರಿಸಿದರು. ಆಗ ಮುನಿಯಪ್ಪನವರು, ಮರದ ಕೊಂಬೆಗೆ ಮೊಳೆಹೊಡೆದು, ಗಾಲ್ಫ್ ಕ್ಲಬ್ ಮಾಡಿಕೊಂಡು ಅಭ್ಯಾಸಮಾಡುತ್ತಿದ್ದರು. ಹಾಗೆಯೇ ಚಿಕ್ಕ-ಪುಟ್ಟ ಟೂರ್ನಿಗಳನ್ನು ಆಡುತ್ತಾ ಗಾಲ್ಫಿನ ನಾಡಿ-ಮಿಡಿತ ಅರಿತರು. ’ಗಾಲ್ಫ್ ಕ್ಲಬ್ ನ ಸದಸ್ಯರ’ ಹಣದ ಪ್ರೋತ್ಸಾಹ,ಮತ್ತು ಸಹಾಯದಿಂದ ಅವರು ಮುಂದುವರೆಯಲು ಸಹಾಯವಾಯಿತು.೩೨ ವರ್ಷದ ಮುನಿಯಪ್ಪನವರಿಗೆ ಒಂದು ಗಂಡುಮಗು, ಮತ್ತು ಒಂದು ಹೆಣ್ಣುಮಗುವಿದೆ. ’ಟೈಗರ್ ವುಡ್ಸ್’ ಆಡುವ ಎಲ್ಲಾ ಟೂರ್ನಿಗಳನ್ನು ಮುನಿಯಪ್ಪ, ಟಿವಿಯಲ್ಲಿ ತಪ್ಪದೆ ವೀಕ್ಷಿಸುತ್ತಾರೆ. ಶ್ರೀಮಂತರಿಗೆ ಮಾತ್ರ ಮೀಸಲಾದ ಈ ಕ್ರೀಡೆ ದೇವರದಯದಿಂದ ಮುನಿಯಪ್ಪನವರ ಕೈಗೆಟುಕಿದೆ.ಅವರ ಸಾಧನೆ ಯುವಜನರಿಗೆ ಮಾದರಿಯಾಗಿದೆ.

'ಟೈಗರ್ ವುಡ್ಸ್', ಕ್ರೀಡಾಜಗತ್ತಿನ ಬಹುದೊಡ್ಡಹೆಸರು- ಮುನಿಯಪ್ಪನವರ ಆದರ್ಶವಾಯಿತು[ಬದಲಾಯಿಸಿ]

'ಟೈಗರ್ ವುಡ್ಸ್', ಕ್ರೀಡಾ ಜಗತ್ತಿನಲ್ಲಿ ಶ್ರೀಮಂತ ಆಟಗಾರ. ಅವರ ಒಟ್ಟಾರೆ ಆದಾಯ, ೧೦೦ ಕೋಟಿಡಾಲರ್. [೪,೪೬೦ ಕೋಟಿ ರೂಪಾಯಿ ದಾಟಿದೆ] ಕಳೆದ ಒಂದೇ ವರ್ಷ ಅವರು ೪೪೬ ಕೋಟಿರೂಪಾಯಿ ಸಂಪಾದಿಸಿದರು. ’ನೈಕ್, ’ಗ್ಯಾಟೊರೇಡ್, ’ಜಿಲೆಟ್ ನಂತಹ ಕಂಪನೆಗಳ ರಾಯಭಾರಿಯಾಗಿದ್ದಾರೆ. ’ಆಕ್ಸೆಂಚರ್’ ಕಂಪೆನಿ ಪ್ರಾಯೋಜಕತ್ವ ವಹಿಸಿಕೊಂಡಿದೆ. ಒಂದು ಗಾಲ್ಫ್ ಕೋರ್ಸ್ ಡಿಸೈನ್ ಮಾಡಿಕೊಟ್ಟರೆ, ೪೬ ಕೋಟಿ ರೂಪಾಯಿ ರೂಪಾಯಿ ಪಡೆಯುತ್ತಾರೆ. ’ಎಟಿ ಅಂಡ್ ಟಿ ಕಂ’ 'ವುಡ್ಸ್ ಬ್ಯಾಗ್' ಮೇಲೆ ತನ್ನ ಲಾಂಛನ [ಲೋಗೋ] ಹಾಕಿಕೊಳ್ಳಲು, ಒಂದು ವರ್ಷದ ಅವಧಿಗೆ, ೩೨ ಕೋ ರೂಪಾಯಿ ನೀಡಿತ್ತು.

ಭಾರತದ ವಿಖ್ಯಾತ ಗಾಲ್ಫ್ ಆಟಗಾರರು[ಬದಲಾಯಿಸಿ]

ಭಾರತದ ಇತರ ಪ್ರಸಿದ್ಧ ಗಾಲ್ಫ್ ಆಟಗಾರರಾದ, ’ಅರ್ಜುನ್ ಅತ್ವಾಲ್’, ’ಜ್ಯೋತಿ’, ’ರಾಂಧವ’ ಹಾಗೂ ’ಮಿಲ್ಖಾ ಸಿಂಗ್’ ಸಂಪಾದನೆ ಮತ್ತು ಜನಪ್ರಿಯತೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.