ಸದಸ್ಯ:Vinodbk1710160

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಲ್ಯ[ಬದಲಾಯಿಸಿ]

ನನ್ನ ಹೆಸರು ವಿನೋದ್ ಬಿ.ಕೆ,ನಾನು ೦೮-೦೮-೧೯೯೯ರಂದು ಬೆಂಗಳೂರುನಲ್ಲಿ ಜನಿಸಿದ್ದು,ನನ್ನ ತಂದೆ ಕೆ.ವೆಂಕಟೇಶ್ ಹಾಗೂ ತಾಯಿ ಓಮಲಮ್ಮ.ನಾನು ಚಿಕ್ಕಂದಿನಿಂದಲೂ ಬಹಳ ತುಂಟ,ನನಗೆ ಕ್ರಿಕೆಟ್ ಆಟದ ಮೇಲೆ ಬಹಳ ಹುಚ್ಚಿತ್ತು,ನನಗೂ ಕೂಡ ಕ್ರಿಕೆಟಿಗನಾಗುವ ಹಂಬಲ ಆದರೆ ಅದು ನನ್ನ ಪಾಲಿಗೆ ಇರಲಿಲ್ಲ,ನಂತರ ನಾನು ಓದಿನ ಕಡೆ ಗಮನ ಹೆಚ್ಚಿಸಿಕೊಂಡು ಸದಾಕಾಲ ಕ್ರಿಯಶೀಲನಾಗಿ ಇರುತ್ತಿದ್ದೆ.ನನಗೆ ಚಿಕ್ಕಂದಿನಿಂದಲು ಜೀವನದಲ್ಲಿ ಏನಾದರು ಸಾಧಿಸಬೇಕೆಂಬ ಆಸೆಯಿತ್ತು.

ಹವ್ಯಾಸಗಳು[ಬದಲಾಯಿಸಿ]

ನನಗೆ ಇರುವ ಹವ್ಯಾಸವೆಂದರೆ ಬೈಕ್ ರೈಡ್ ಮಾಡುವುದು,ರಜಾ ದಿನಗಳಲ್ಲಿ ಎಲ್ಲಾದರು ಹೊಸ ಜಾಗಗಳಿಗೆ ಹೋಗಿ ಅಲ್ಲಿನ ವೈವಿಧ್ಯತೆಯನ್ನು ಅರಿಯುವುದು.ನಾನು ಸಾಮಾನ್ಯವಾಗಿ ಹಾಡುಗಳನ್ನು ಕೇಳುತ್ತೇನೆ ಅದು ನನ್ನ ಒತ್ತಡವನ್ನು ಕಡಿಮೆಗೊಳಿಸುತ್ತದೆ.ನಾನಗೆ ಛಾಯಗ್ರಹಣದಲ್ಲಿ ಆಸಕ್ತಿ ಇದ್ದು ಸಮಯ ಸಿಕ್ಕಾಗ ಓಳ್ಳೆಯ ಫೋಟೋಗಳನ್ನು ತೆಗೆಯುವ ಮೂಲಕ ಮುಂದೆ ವನ್ಯಜೀವಿ ಛಾಯಗ್ರಹಣದ ಕ್ಷೇತ್ರದಲ್ಲಿ ಹೆಸರುಗಳಿಸಲು ಇಚ್ಚಿಸುತ್ತೇನೆ.

ಶಿಕ್ಷಣ[ಬದಲಾಯಿಸಿ]

thumb ನಾನು ನನ್ನ ಹತ್ತನೆಯ ತರಗತಿಯನ್ನು ಇನ್ಪೆಂಟ್ಸ್ ಇಂಡಿಯನ್ ಸ್ಕೂಲಿನಲ್ಲಿ ಮುಗಿಸಿದೆ,ನಂತರ ನಾನು ನನ್ನ ಪಿ.ಯು ಶಿಕ್ಷಣವನ್ನು ಕೃಪಾನಿಧಿ ಕಾಲೇಜಿನಲ್ಲಿ ಮುಗಿಸಿದ್ದೇನೆ,ನನ್ನ ಪಿ.ಯು ಮುಗಿದನಂತರ ಈಗ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನನ್ನ ಬಿ.ಕಾಂ ಪದವಿಯನ್ನು ಮುಂದುವರಿಸುತ್ತಿದ್ದೇನೆ,ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮುಂದೆ ಅವರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ,ಅದು ವಾನಿಜ್ಯ,ಮಾರುಕಟ್ಟೆ,ಹಣಕಾಸು ಮತ್ತು ಇತರೆ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂಶೋಧನೆ ಮಾಡಿ ತಮ್ಮ ವೃತ್ತಿಪರ ಜೀವನವನ್ನು ರೂಪಿಸಿಕೊಳ್ಳಲು ದಾರಿಮಾಡಿಕೊಟ್ಟಿದೆ.

ಜೀವನ[ಬದಲಾಯಿಸಿ]

ನಾನು ಕೂಡ ಈಗ ಓಂದು ಸಣ್ಣ ವಾಣಿಜ್ಯೋದ್ಯಮಿಯಾಗಿ ಕೆಲಸ ಪ್ರಾರಂಭಿಸಿದ್ದು ಮುಂದೆ ನನ್ನ ಎಲ್ಲ ಕನಸುಗಳನ್ನು ಅದರ ಮೂಲಕ ಪೂರ್ತಿಗೊಳಿಸಳು ಬಹಳ ತವಕದಿಂದ ಮತ್ತು ಶ್ರದ್ಧೆಯಿಂದ ಕೆಲಸ ಮಾಡುತಿದ್ದೇನೆ. ನನ್ನ ಜೀವನದಲ್ಲಿ ನನ್ನ ಸ್ಫೂರ್ತಿ ನನ್ನ ತಂದೆಯವರು,ನಾನು ಕೊಡ ಅವರಂತೆ ಎಲ್ಲರಿಗು ಓಳ್ಳೆಯದನ್ನು ಬಯಸಿ ಅವರಂತೆ ಓಂದು ದಕ್ಷ ವ್ಯಕ್ತಿಯಾಗಲು ಬಯಸುತ್ತೇನೆ.