ಸದಸ್ಯ:Varsha.hegde

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹುಟ್ಟು


ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ನಾನು ವರ್ಷ, ಅಪ್ಪ ಪ್ರಕಾಶ ಹೆಗಡೆ , ಅಮ್ಮ ವೀಣಾ ಹೆಗಡೆ. ನಮ್ಮದು ಒಂದು ವಿದ್ಯಾವಂತ ಕೂಡು ಕುಟುಂಬ. ಅಜ್ಜ ಕೃಷಿಕರು , ಅಪ್ಪ ಚಾರ್ಟರ್ಡ್ ಅಕೌಂಟೆಂಟ್ , ಅಮ್ಮ ಬಿ.ಕಾಂ ಪದವೀಧರೆ , ದೊಡ್ಡಪ್ಪ , ದೊಡ್ಡಮ್ಮ ಸಾಫ್ಟ್ವೇರ್ ಕಂಪನಿಯಲ್ಲಿ ದೂರದ ಅಮೇರಿಕಾದಲ್ಲಿ ಕೆಲಸ ಮಾಡುತ್ತಾರೆ. ನಾನು ಹುಟ್ಟಿದ್ದು ೨೦೦೧ ನೇ ಮಾರ್ಚ್ ೩ರಂದು, ಶರಿಸಿಯಲ್ಲಿ. ಅಪ್ಪ ಆಗ ಒಂದು ಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡುತಿದ್ದರು. ನಾನು ೪ನೇ ವರ್ಷದಲ್ಲಿದ್ದಾಗ ಬೇರೆಯ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದರಿಂದ ನಮ್ಮ ಕುಟುಂಬ ಬೆಂಗಳೂರಿಗೆ ಬಂತು. ಅಜ್ಜ, ಅಜ್ಜಿ, ಊರಿನಲ್ಲಿ ಜಮೀನು ನೋಡಿಕೊಂಡು ಇದ್ದರು .

ಶಿಕ್ಷಣ

 ನನ್ನ ವಿದ್ಯಾಭ್ಯಾಸ ಜಯನಗರದ ಚೇತನ ಕಿಂಡರ್ ಗಾರ್ಡನ್  ನಲ್ಲಿ  ಪ್ರಾರಂಭವಾಯಿತು. ನಂತರ ಬಾಲವಾಡಿ ( ಎಲ್ . ಕೆ. ಜಿ ) ಗೆ ಕಾರ್ಮೆಲ್ ಕಾನ್ವೆಂಟ್ ಶಾಲೆಗೆ ಸೇರಿದೆ . ಹತ್ತನೇ ತರಗತಿ ಮುಗಿಯುವವರೆಗೂ ಅದೇ ಶಾಲೆಯಲ್ಲಿ ಓದಿದೆ.ಕಾರ್ಮೆಲ್ ಕಾನ್ವೆಂಟ್ ಜಯನಗರ ಶಾಲೆ ಬರಿ ಹೆಣ್ಣು ಮಕ್ಕಳ ಶಾಲೆ . ತುಂಬಾ ಒಳ್ಳೆಯ ಶಿಕ್ಷಕರು ಅಲ್ಲಿ ಇದ್ದಾರೆ . ಓದುವುದರ ಜೊತೆಗೆ ಅಲ್ಲಿ ಕ್ರೀಡೆ, ಹಾಡು, ನೃತ್ಯ , ಕ್ರಾಫ್ಟ್ , ಮುಂತಾದ ವಿದ್ಯೆಗಳನ್ನು ಕಳಿಸುತ್ತಾರೆ. 

ಕಾರ್ಮೆಲ್ ಕಾನ್ವೆಂಟ್ ಜಯನಗರ ಶಾಲೆ ಬರಿ ಹೆಣ್ಣು ಮಕ್ಕಳ ಶಾಲೆ . ತುಂಬಾ ಒಳ್ಳೆಯ ಶಿಕ್ಷಕರು ಅಲ್ಲಿ ಇದ್ದಾರೆ . ಓದುವುದರ ಜೊತೆಗೆ ಅಲ್ಲಿ ಕ್ರೀಡೆ , ಹಾಡು, ನೃತ್ಯ , ಕ್ರಾಫ್ಟ್ , ಮುಂತಾದ ವಿದ್ಯೆಗಳನ್ನು ಕಳಿಸುತ್ತಾರೆ. ನಾನು ೫ದನೆ ತರಗತಿಯಲ್ಲಿ ಇದ್ದಾಗ ಶಾಲೆಯ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿ ತರಬೇತಿಯನ್ನು ಪಡೆದು , ಈಗ ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಯಾಗಿದ್ದೇನೆ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಎನಿಸುತ್ತದೆ. ಈ ಅವಕಾಶ ಒದಗಿಸಿಕೊಟ್ಟ ಕಾರ್ಮೆಲ್ ಕಾನ್ವೆಂಟಿಗೆ ನಾನು ಎಷ್ಟು ಧನ್ಯವಾದ ಹೇಳಿದರೂ ಸಾಲದು.. ನನ್ನ ವಾಲಿಬಾಲ್ ಕೋಚ್ ಆದ ಅಸ್ಲಾಂ ಸರ್ ಗೆ ತುಂಬಾ ತುಂಬಾ ಧನ್ಯವಾದ ಹೇಳುತ್ತೇನೆ. ನಾನು ವಾಲಿಬಾಲ್ ಆಡಲು ತೆಲಂಗಾಣ , ಶಿವಮೊಗ್ಗ , ಬಾದಾಮಿ, ತುಮಕೂರು ಮುಂತಾದ ಜಾಗಗಳಿಗೆ ಹೋಗಿದ್ದೇನೆ. ಎರಡು ತಿಂಗಳ ಹಿಂದೆ ಕ್ರೈಸ್ಟ್ ನಲ್ಲೆ ನಡೆದಿರುವ ಪೆಡಗೋಗಿಕ್ ಲೀಗ್ ನಲ್ಲಿ ನಮ್ಮ ತಂಡಕ್ಕೆ ಮೊದಲ ಪ್ರಶಸ್ತಿ ಬಂದಿದೆ. ೩ದಿನಗಳ ಹಿಂದೆ ನಡೆದಿರುವ ಕ್ರಿಸ್-ಪೋ ಟೂರ್ನಮೆಂಟಲ್ಲಿ ನಮ್ಮ ಕ್ರೈಸ್ಟ್ ತಂಡ ಮೊದಲ ಪ್ರಶಸ್ತಿಯನ್ನು ಹೊಂದಿದೆ.

ಹವ್ಯಾಸ

ನನಗೆ ಗಣಿತ ವಿಷಯ ಎಂದರೆ ತುಂಬಾ ಇಷ್ಟ. ನಾನು ಅಬಾಕಸ್ ಮತ್ತು ಕರಾಟೆಯನ್ನು ಕಲಿತ್ತಿದ್ದೇನೆ. ಸಂಗೀತವನ್ನು ಸ್ವಲ್ಪದಿನ ಕಲಿತ್ತಿದ್ದೇನೆ. ಹತ್ತನೇಯ ತರಗತಿಯನ್ನು ಪಾಸು ಮಾಡಿದ ನಾನು, ವಿ.ವಿ.ಪುರಂ ಜೈನ ಕಾಲೇಜಿನಲ್ಲಿ ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಪಿ.ಉ.ಸಿ. ಮುಗಿಸಿದೆ. ಪಿಯುಸಿಯಲ್ಲಿ ೯೬ ಪ್ರತಿಶತ ಅಂಕವನ್ನು ಪಡೆದು ಮುಂದೆ ಸಿ.ಎ ಮತ್ತು ಸಿ.ಎಸ್ ಮಾಡುವ ಗುರಿಯನ್ನು  ಹೊಂದಿದ್ದೇನೆ.ದೇಶದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಕ್ರೈಸ್ಟ್ ಕಾಲೇಜಿನಲ್ಲಿ ಬಿ.ಕಂ ಮಾಡುತಿದ್ದ ನಾನು ವಾಲಿಬಾಲ್ ಪ್ರಾಕ್ಟಿಸನ್ನು ಮುಂದು ವರಿಸಿದ್ದೇನೆ   ಮತ್ತು ಕಾಲೇಜಿನೆ ಟೀಮ್ ನಲ್ಲಿ ಆಡುತಿದ್ದೇನೆ.

ಕನ್ನಡ ನನ್ನ ಮಾತೃ ಬಾಷೆ. ನಾವು ಮನೆಯಲ್ಲಿ ಕನ್ನಡ ಮಾತನಾಡುತ್ತೇವೆ. ಕನ್ನಡದ ಜೊತೆಗೆ ಇಂಗ್ಲಿಷ್, ಹಿಂದಿ ಮಾತನಾಡುತ್ತೇನೆ . ಕೋರಿಯನ್ ಬಾಷೆಯನ್ನು ಓದಲು, ಬರೆಯಲು ಕಲಿತ್ತಿದ್ದೇನೆ. ಸ್ಪ್ಯಾನಿಷ್ ಭಾಷೆಯನ್ನು ಕಲಿಯುತ್ತಿದ್ದೇನೆ . ದೇಶದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಕ್ರೈಸ್ಟ್ ಕಾಲೇಜಿನಲ್ಲಿ ಬಿ.ಕಂ ಮಾಡುತಿದ್ದ ನಾನು ವಾಲಿಬಾಲ್ ಪ್ರಾಕ್ಟಿಸನ್ನು ಮುಂದು ವರಿಸಿದ್ದೇನೆ ಮತ್ತು ಕಾಲೇಜಿನೆ ಟೀಮ್ ನಲ್ಲಿ ಆಡುತಿದ್ದೇನೆ. ಕನ್ನಡ ನನ್ನ ಮಾತೃ ಬಾಷೆ. ನಾವು ಮನೆಯಲ್ಲಿ ಕನ್ನಡ ಮಾತನಾಡುತ್ತೇವೆ. ಕನ್ನಡದ ಜೊತೆಗೆ ಇಂಗ್ಲಿಷ್, ಹಿಂದಿ ಮಾತನಾಡುತ್ತೇನೆ . ಕೋರಿಯನ್ ಬಾಷೆಯನ್ನು ಓದಲು, ಬರೆಯಲು ಕಲಿತ್ತಿದ್ದೇನೆ. ಸ್ಪ್ಯಾನಿಷ್ ಭಾಷೆಯನ್ನು ಕಲಿಯುತ್ತಿದ್ದೇನೆ . ನನಗೆ ಎಂಟು ವರ್ಷವಾದಾಗ ನಮ್ಮ ಮನಗೆ ಒಬ್ಬ ಪುಟ್ಟ ತಮ್ಮನ ಆಗಮನವಾಯಿತು . ಅವನೇ ಪ್ರಾಣವ ಹೆಗಡೆ. ಅಪ್ಪ, ಅಮ್ಮ , ನಾನು , ಮುರು ಜನರ ಹೆಸರಿನ ಒಂದೊಂದು ಅಕ್ಷರದಿಂದ ಅವನಿಗೆ ಪ್ರಾಣವ ಎಂದು ಹೆಸರಿಟ್ಟಿದ್ದೇವೆ. ಅವನಿಗೀಗ ೯ ವರ್ಷ . ಬೆಂಗಳೂರಿನ ಶ್ರೀ ಕುಮಾರನ್ಸ್ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದಾನೆ. ನನಗೆ ಬೇರೆ ಬೇರೆ ಊರುಗಳಿಗೆ ಹೋಗುವುದೆಂದರೆ ತುಂಬಾ ಇಷ್ಟ. ಅಪ್ಪ, ಅಮ್ಮ ತಮ್ಮನ ಜೊತೆಗೆ ರಜದಲ್ಲಿ ಎಲ್ಲಾದರೂ ಹೋಗುತ್ತಿರುತ್ತೇನೆ. ಸಿಂಗಾಪುರ , ಮಲೇಶಿಯಾ , ಶ್ರೀಲಂಕಾ , ಹೊಂಗ್ ಕೊಂಗ್ ಗಳನೂ ಹೋಗಿ ನೋಡಿ ಬಂದಿದ್ದೇವೆ. ನನ್ನ ಊರಾದ ಶಿರಿಸಿಗೆ ಹೋಗುವುದೆಂದರೆ ನನಗೆ ತುಂಬಾ ಇಷ್ಟ . ಅಲ್ಲಿನ ಗಿಡ, ಮರ, ಕಾಡು , ಹೊಳೆಗಳನೆಲ್ಲ ಸುತ್ತಾಡುತ್ತಿರುತ್ತೇನೆ. ಶಿರಸಿಯಲ್ಲಿ ತುಂಬಾ ನೋಡುವಂತಹ ಸ್ಥಳಗಳಿವೆ. ಶಿರಸಿಯಲ್ಲಿ ನಮ್ಮದು ಅಡಿಕೆ, ತೆಂಗು, ಬಾಳೆ ತೋಟಗಳಿವೆ. ಸುಂದರವಾದ ಪ್ರಾಕೃತಿಕ ಸೊಬಗನ್ನು ನೋಡಬೇಕೆಂದರೆ ಶಿರಸಿಗೆ ಹೋಗಬೇಕೆನ್ನವುದು ನನ್ನ ಅಭಿಪ್ರಾಯ. ಶಿರಸಿಯ ನನ್ನ ಮನೆಯಲ್ಲಿ ದನಕರುಗಳಿವೆ, ನಾಯಿಗಳಿವೆ. ಅವುಗಳನ್ನು ಕಂಡರೆ ನನಗೆ ತುಂಬಾ ಇಷ್ಟ. ಪ್ರಾಣಿಗಳನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ನನ್ನ ಮನೆ, ತಂದೆ, ತಾಯಿ, ತಮ್ಮ, ನನ್ನ ಊರು, ನನ್ನ ಭಾಷೆ, ನನಗೆ ಇಷ್ಟು ದಿನ ವಿದ್ಯೆ ಕಲಿಸಿದ ಗುರುಗಳು, ಎಲ್ಲರಿಗೂ ತುಂಬಾ ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಒಳ್ಳೆಯ ವಿದ್ಯಾವಂತೆಯಾಗಿ ಈ ಸಮಾಜಕ್ಕೆ ಏನಾದರು ಒಳ್ಳೆಯದನ್ನು ಮಾಡಬೇಕೆಂಬ ಆಸೆ ತುಂಬಾ ಇದೆ.

ಚಿತ್ರ:IMG-20190913-WA0127.jpg
chri-spo winners 2019