ಸದಸ್ಯ:Sunitham.s

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  "ಆತ್ಮಲಿಂಗೇಶ್ವರ ನಿಸರ್ಗಧಾಮದ ಸುತ್ತ
                       ಒಂದು ಪಕ್ಷಿನೋಟ"
              
    ಎತ್ತ-ನೋಡಿದರತ್ತ ಹಸಿರುಟ್ಟ ಗಿಡ, ಬಳ್ಳಿಗಳು, ಮೈಮನ ಪುಳಕಗೊಳಿಸುವ ನೀರ ಬುಗ್ಗೆಗಳು, ಸ್ವಚ್ಛವಾದ ಪರಿಸರ, ಸ್ವಚ್ಚವಾದ ನೀರಿನ ಕೊಳ ಆ ಕೊಳದ ಮಧ್ಯೆ ಇರುವ ಸಂಜೀವಿನಿ ಬೆಟ್ಟಹೊತ್ತ ಹನುಮಂತನ                ಮೂರ್ತಿಇವೆಲ್ಲದರ ನಡುವೆ ಶ್ರೀ ಆತ್ಮಲಿಂಗೇಶ್ವರ ಸ್ವಾಮಿ ಸನ್ನಿದಿ
        ಇದು ಸಕ್ಕರೆನಾಡು ಮಂಡ್ಯದ ಮದ್ದೂರಿನ ಕಾಳಮುದ್ದನದೊಡ್ಡಿ(ಕೆ.ಎಂ ದೊಡ್ಡಿ)ಯ ಹನಿಮಂತನಗರದ ಒಂದು ವಿಹಂಗಮ ನೋಟ
    ಅತ್ಯಂತ ಪ್ರಸಾಂತ ಮತ್ತು ಸುಂದರ ತಾಣವಾದ ಇಲ್ಲಿಗೆ ಬಂದೊಡನೆ ನೀರಿನ ನಿನಾದ ಕಿವಿಗೆ ಇಂಪು ನೀಡುವ ಮೂಲಕ ಬಂದವರನ್ನು ಪುಳಕಿತಗೊಳಿಸುತ್ತದೆ.ನೀರಿನ ಕಾರಂಜಿಯ ಮೂಲಕ ಪ್ರವಾಸಿಗರನ್ನು ಸ್ವಾಗತ ಮಾಡುವ    ತಾಣವೇ ಆತ್ಮಲಿಂಗೇಶ್ವರ ನಿಸರ್ಗಧಾಮ. ಇದನ್ನು ಪ್ರವೇಸುತ್ತಿದ್ದಂತೆಯೇ ಮೊಸಳೆ, ಆಮೆ, ಮೀನಿನ ಕಲಾಕೃತಿಗಳು ಕಣ್ಣಿಗೆ ಬೀಳುತ್ತದೆ. ಹೀಗೆ ಸಾಗಿದಂತೆ ಶ್ವೇತಮಂಟಪ ಕಾಣ ಸಿಗುತ್ತದೆ. ಇದರ ಸುತ್ತ ಸಂಗೀತಲಯಕ್ಕೆ ತಕ್ಕಂತೆ ಕಾರಂಜಿಯ ನೃತ್ಯ ನೋಡುಗರನ್ನು ಬೇರೆಯೇ ಲೊಕಕ್ಕೆ ಕೊಂಡೊಯುತ್ತದೆ.
    ಇಷ್ಟೆಲ್ಲದೇ ಪರಿಸರ ಪ್ರಿಯರಿಗೆ ಒಂದು ಉತ್ತಮ ಆರಾಧನಾ ತಾಣವೆಂದರೆ ಉತ್ಪ್ರೇಕ್ಷೇಯಲ್ಲ. ಹೀಗೆ ಸಾಗಿದಂತೆ ವಿವಿಧ ಬಗೆಯ ಪುಪ್ಪಗಳು ನೋಡುಗರ ಮನವನ್ನು ತಣಿಸುತ್ತದೆ. ಮಕ್ಕಳಿಗೆಂದೇ ನಿರ್ಮಿಸಲಾದ'ಪ್ಲೆ ಪಾರ್ಕ್' ಮೀನಿನಕೊಳ ಮಕ್ಕಳ ಕನಸಿಗೆ ರೆಕ್ಕೆ-ಪುಕ್ಕ ನೀಡಿ ಮುದ ನೀಡುತ್ತದೆ ಇದರ ಮಧ್ಯೆ ಹೊಟ್ಟೆ ಚುರುಗುಟ್ಟಿದ್ದರೆ ತಿಂಡಿ ನಿನ್ನಲು ಪುಡ್ಕೋರ್ಟ್ ಇದೆ.
   ಈ ನಿಸರ್ಗಧಾಮವು ಮಾಜಿ ಸಂಸದ ಡಾ//ಜಿ.ಮಾದೇಗೌಡರ ಕನಸಿನ ಕೂಸು ನಯನ ಮನೋಹರ ತಾಣವಾದ ಇದನ್ನು ನೋಡಿ ಕಣ್ಮನ ತುಂಬಿಕೊಳ್ಳಲು ದಿನಕ್ಕೆ ಸಾವಿರಾರು ಮಂದಿ ಬೇಟಿನೀಡುತ್ತಾರೆ. ಈ ನಿಸರ್ಗಧಾಮವು  ಬೆಂಗಳೂರಿನಿಂದ ೯೫ ಕಿ.ಮಿ ಇದ್ದು, ಮದ್ದೂರಿನಿಂದ ಎಡಕ್ಕೆ ತಿರುಗಬೇಕು ಜಿಲ್ಲಾಕೇಂದ್ರ ಮಂಡ್ಯದಿಂದ ೨೦ಕಿ.ಮಿ, ತಾಲ್ಲೂಕು ಕೇಂದ್ರ ಮದ್ದೂರು, ಮಳವಳ್ಳಿಯಿಂದ ೧೫ಕಿ.ಮಿ ಇದ್ದು ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ....