ಸದಸ್ಯ:Sunitha pathi/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಗ್ನಿ ವಿಮೆ
ಸ್ಥಾಪನೆ1666
ಸಂಸ್ಥಾಪಕ(ರು)ಬೆಂಜಮಿನ್ ಫ಼್ರಾಂಕ್ಲಿನ್
ಮುಖ್ಯ ಕಾರ್ಯಾಲಯಇಂಗ್ಲೆಂಡ್
ವ್ಯಾಪ್ತಿ ಪ್ರದೇಶವಿಶ್ವದಾದ್ಯಂತ
ಉದ್ಯಮಸಹಭಾಗಿ ಸಂಸ್ಥೆ(ಪಾರ್ಟ್ನರ್ಷಿಪ್ ಫರ್ಮ್)

ಮೊದಲಿಗೆ ವಿಮೆ ಎಂದರೆ ಯಾವುದೇ ನಿರ್ದಿಷ್ಟ ನಷ್ಟ, ಅನಾರೋಗ್ಯ, ಮರಣ ಇವೆಲ್ಲಕ್ಕೂ ಕಂಪನಿಯ ಮೂಲಕ ಒಂದು ವ್ಯವಸ್ಥೆ ಅಥವಾ ಹೇಳಿಕೆಯ ಮೂಲಕ ಆ ನಷ್ಟಕ್ಕೆ ಪ್ರತಿಯಾಗಿ ಪರಿಹಾರವನ್ನು ನೀಡುತ್ತಾರೆಂದು ಖಾತರಿ ಪಡಿಸುವುದನ್ನೇ ವಿಮೆ ಎಂದು ಕರೆಯುತ್ತಾರೆ. ಆ ನಿರ್ದಿಷ್ಟ ಅಪಾಯ ಅಥವಾ ನಷ್ಟ ವಸ್ತುವಿಗಾಗಿರಬಹುದು ಅಥವಾ ಮಾನವನಿಗಾಗಿರಬಹುದು. ಈ ನಷ್ಟವನ್ನು ಪರಿಹರಿಸಲು ವಿಮೆಗಾರರು ಅಥವಾ ವಿಮೆ ಕಂಪನಿಯೂ ಪ್ರೀಮಿಯಮ್ ಮತ್ತು ಬಿಡ್ಡಿಯನ್ನು ಹಾಕುತ್ತಾರೆ ಮತ್ತು ಈ ವ್ಯವಸ್ಥೆಯು ವಿಮೆಯ ವಿಧಗಳ ಮೇಲೆ ಅವಲಂಬಿಸಿರುತ್ತದೆ. ವಿಮೆಯಲ್ಲಿ ಹಲವಾರು ವಿಧಗಳಿವೆ. ಅಪಾಯದ ಆಧಾರದ ಮೇಲೆ ಅದು ಯಾವ ವಿಧದ ವಿಮೆ ಎಂದು ಪರಿಗಣಿಸಲಾಗುತ್ತದೆ, ಹೀಗೆ ನಮ್ಮ ಭಾರತ ಮತ್ತು ಬೇರೆ ದೇಶಗಳಲ್ಲಿ ಬೆಂಕಿ ಅಥವಾ ಅಗ್ನಿ ವಿಮೆ, ಸಮುದ್ರ ವಿಮೆ, ಜೀವನ ವಿಮೆ, ಜಾನುವಾರು ವಿಮೆ, ಸಸ್ಯ ವಿಮೆ, ವಾಹನ ವಿಮೆ, ಅಡಮಾನ ವಿಮೆ, ವೈಯಕ್ತಿಕ ಹೊಣೆಗಾರಿಕೆಯ ವಿಮೆ ಇತ್ಯಾದಿ. ಅಗ್ನಿ ಅಥವಾ ಬೆಂಕಿ ವಿಮೆ[೧] ಎಂದರೆ ಅಗ್ನಿಯಿಂದ ವಸ್ತುಗಳಿಗೆ ಅಥವಾ ಆಸ್ತಿಗಳಿಗೆ ಆಗುವ ನಷ್ಟವನ್ನು, ಹಾನಿಯನ್ನು ವಿಮೆಯ ಮೂಲಕ ಬಗೆಹರಿಸುವುದನ್ನು ಅಗ್ನಿ ವಿಮಾ ಎಂದು ಕರೆಯುತ್ತಾರೆ. ಅಗ್ನಿ ವಿಮಾ ನೀತಿಯು ಆಸ್ತಿಯ ನಷ್ಟ ಮತ್ತು ಅವುಗಳ ವೆಚ್ಚವನ್ನು ಪೂರೈಸುತ್ತದೆ. ೧೬೬೬ ರಲ್ಲಿ "ದಿ ಗ್ರೇಟ್ ಫಯರ್ ಆಫ್ ಲಂಡನ್" ಬಲವಂತವಾಗಿ ಅಗ್ನಿ ವಿಮಾ ನೀತಿಯನ್ನು ಪ್ರಾರಂಭಿಸಿತು. "ದಿ ಗ್ರೇಟ್ ಫಯರ್ ಆಫ್ ಲಂಡನ್" ೩-೪ ದಿನಗಳ ಪ್ರತಿ ಹಗಲು ಮತ್ತು ರಾತ್ರಿ ಸದಾ ಹತ್ತಿ ಉರಿಯುತಿತ್ತು. ಇದರ ಪರಿಣಾಮದಿಂದ ೪೩೬ ಎಕರೆ ಭೂಮಿಯನ್ನು ಕೆಡವಿತು, ೧೩೨೦೦ ಮನೆಗಳನ್ನು ಕಬಳಿಸಿತು ಮತ್ತು ೮೯ ಚರ್ಚ್ ಗಳು ಹತ್ತಿ ಉರಿದವು. ಈ ಬೆಂಕಿಯ ಜ್ವಾಲೆಯಿಂದ ಪ್ರಾಣ ಬಿಟ್ಟವರು ಕೇವಲ ೬ ಜನರು ಆದರೆ ನೂರಾರು ಜನ ಅದರ ಆಘಾತದಂದಲೇ ಪ್ರಾಣವನ್ನು ಬಿಟ್ಟರು ನಂತರ ಈ ಪರಿಣಾಮದಿಂದ ನಿಖೋಲಸ್ ಬಾರ್ಬನ್ ಎಂಬ ಮನುಷ್ಯ ಕೂಡಲೆ ಕಟ್ಟಡಗಳಿಗೆ ವಿಮೆ ನೀಡಲು ೧೬೮೦ ರಲ್ಲಿ ಸಹಭಾಗಿ ಸಂಸ್ಥೆ(ಪಾರ್ಟ್ನರ್ಶಿಪ್ ಫರ್ಮ್) ಅನ್ನು ಪ್ರಾರಂಭಿಸಿದರು. ಇದು ಇಂಗ್ಲೆಂಡ್ ನ ಮೊದಲ ಅಗ್ನಿ ವಿಮೆ ಕಂಪನಿಯಾಗಿತ್ತು, ಇಂಗ್ಲೆಂಡಿನ ವಸಾಹತು ಅಭಿವೃದ್ಧಿಯಿಂದ ಅಗ್ನಿ ವಿಮೆಯು ಪ್ರಪಂಚದ ಎಲ್ಲೆಡೆಯೂ ಹರಡ ತೊಡಗಿತು. ಅಗ್ನಿ ವಿಮೆ ಎಂದರೆ ಬೆಂಕಿಯಿಂದ ಒಳಗೊಂಡಿರುವ ಅಪಾಯವನ್ನು ಹಾಗೂ ನಷ್ಟವನ್ನು ಬಗೆಹರಿಸುವುದೇ ಅಗ್ನಿ ವಿಮೆ. ಈ ಅಪಾಯ ಹಾಗು ನಷ್ಟ ಬೆಂಕಿಯಿಂದಲೇ ಅಥವಾ ಹತ್ತಿರದ ಕಾರಣ ಬೆಂಕಿಯೇ ಆಗಿರಬೇಕು, ಯಾವುದೇ ವಸ್ತು ಮಿತಿಮೀರಿದ ದಹನದಿಂದ ಹಾಳಾಗದಿದ್ದರೆ ಅದನ್ನು ಅಗ್ನಿ ವಿಮೆ ಎಂದು ಪರಿಗಣಿಸಲಾಗುವುದಿಲ್ಲ ಹಾಗೂ ಅದರ ನಷ್ಟವನ್ನು ವಿಮೆಗಾರರು ಪೂರೈಸುವುದಿಲ್ಲ. ಅಪಘಾತ ಅಥವಾ ಬೆಂಕಿಯ ಪ್ರಮುಖ ಕಾರಣ ಬೆಂಕಿಯೇ ಆಗಿರಬೇಕು, ಹಾಗು ಇದು ಉದ್ದೇಶಪೂರ್ವಕವಾಗಿರಬಾರದು.

ಅಗ್ನಿ ವಿಮೆಯ ಗುಣಲಕ್ಷಣಗಳು.[ಬದಲಾಯಿಸಿ]

೧. ಇದು ನಷ್ಟ ಪರಿಹಾರದ ಒಪ್ಪಂದ. ನಷ್ಟ ಸಂಭವಿಸಿದಾಗ ಆ ನಷ್ಟಕ್ಕೆ ಪರಿಹಾರವನ್ನು ವಿಮೆಗಾರರು ಪರಿಹರಿಸುತ್ತಾರೆ. ೨. ಇದು 'ಉಬೆರ್ರೀಮೆ ಫೀಡಿ"ಯ ಒಪ್ಪಂದ. ವಿಮೆಗಾರರು ಮತ್ತು ಅಶ್ಯೂರ್ಡ್(ಪಡೆದುಕೊಳ್ಳುವವ) ಅವರ ಅಗ್ನಿ ವಿಮೆ ಒಪ್ಪಂದದ ಬಗ್ಗೆ ತಿಳಿದ ಪ್ರತಿಯೊಂದು ವಿಷಯವನ್ನು ಮತ್ತು ವಿಮೆ ಒಪ್ಪಂದದ ಎಲ್ಲಾ ಪರಿಣಾಮವನ್ನು ಬಹಿರಂಗವಾಗಿ ತಿಳಿಸಬೇಕು. ೩. ಅಶ್ಯೂರ್ಡ್ 'ವಿಮಾ ಆಸಕ್ತಿ' ಯನ್ನು ಹೊಂದಿರಬೇಕು. ೪. ಅಗ್ನಿ ವಿಮೆಯಲ್ಲಿ 'ಪ್ರಿನ್ಚಿಪಲ್ ಆಫ್ ಸಬ್ರೊಗೇಷನ್ ಮತ್ತು ಪ್ರಿನ್ಚಿಪಲ್ ಆಫ್ ಕಾಂಟ್ರಿಬ್ಯೂಷನ್' ಒಳಗೊಂಡಿದೆ. ೫. ಅಗ್ನಿ ವಿಮೆಯು ವರ್ಷದಿಂದ ವರ್ಷಕ್ಕೆ ಮಾಡಿಸುವ ಒಪ್ಪಂದ. ಪ್ರತಿ ವರ್ಷಕ್ಕೂ ಈ ವಿಮೆಯನ್ನು ನವೀಕರಿಸಲಾಗುತ್ತದೆ. ಕಟ್ಟಡಗಳನ್ನು ಹೊರತುಪಡಿಸಿದರೆ ದೀರ್ಘಕಾಲದ ನೀತಿಗಳು ಅಗ್ನಿ ವಿಮೆಯಲ್ಲಿ ಅಪರೂಪ. ನೀತಿಯಲ್ಲಿ ಯಾವುದೇ ಬದಲಾವಣೆಗಳಿದ್ದಲ್ಲಿ ಅದು ಕಟ್ಟಡಗಳ ಬದಲಾವಣೆಯ ಪ್ರಕಾರದ ಆಧಾರದ ಮೇಲೆ ನಡೆಯುತ್ತದೆ. ೬. ಶುಲ್ಕವು ಪ್ರಕೃತಿ, ಸ್ಥಳ, ಆಸ್ತಿಗಳ ನಿರ್ಮಾಣ ಮತ್ತು ವಿಮೆಯ ಅವಧಿಯ ಪ್ರಕಾರ ನಿರ್ಧರಿಸಲ್ಪಡುತ್ತದೆ.

ಅಗ್ನಿ ವಿಮೆಯ ಸರಾಸರಿ ಷರತ್ತುಗಳು[ಬದಲಾಯಿಸಿ]

ಅಗ್ನಿ ವಿಮೆಯಲ್ಲಿ ಆಸ್ತಿ ಅಥವಾ ಸರಕುಗಳು 'ಓವರ್ ಇನ್ಶ್ಯುರೆನ್ಸ್' ಅಥವಾ 'ಅಂಡರ್ ಇನ್ಶ್ಯುರೆನ್ಸ್'[೨] ಆಗಬಹುದು. ಓವರ್ ಇನ್ಶ್ಯುರೆನ್ಸ್ ಎಂದರೆ ನಷ್ಟಕ್ಕೆ ಸಮವಾಗಿ ಪರಿಹರಿಸುವುದು. ಅಂಡರ್ ಇನ್ಶ್ಯುರೆನ್ಸ್ ಎಂದರೆ ನಷ್ಟದ ನಿಜವಾದ ಪ್ರಮಾಣಕ್ಕಿಂತ ಕಡಿಮೆ.

ಅಗ್ನಿ ವಿಮೆ ನೀತಿಯ ವಿಧಗಳು[ಬದಲಾಯಿಸಿ]

೧. ಸ್ಪೆಸಿಫಿಕ್ ಪಾಲಿಸಿ(ನಿರ್ಧಿಷ್ಟ ನೀತಿ): ನಿರ್ಧಿಷ್ಟ ನೀತಿಯಲ್ಲಿ ವಿಮೆಗಾರರು ನಿರ್ಧಿಷ್ಟ ಪ್ರಮಾಣದವರೆಗೆ ಮಾತ್ರ ನಷ್ಟ ಪರಿಹಾರ ಮಾಡುತ್ತಾರೆ ಅಂದರೆ ಆ ನಷ್ಟ ಪರಿಹಾರವು ಆಸ್ತಿಯ ನಿಜವಾದ ಮೌಲ್ಯ ಅಥವಾ ಬೆಲೆಗಿಂತ ಕಡಿಮೆಯಿರುತ್ತದೆ. ಈ ನಿರ್ಧಿಷ್ಟ ನೀತಿಯು ಅಂಡರ್ ಇನ್ಶ್ಯುರೆನ್ಸ್ ಸಂದರ್ಭದಲ್ಲಿ ಅಳವಡಿಸಲಾಗುತ್ತದೆ. ಅಂಡರ್ ಇನ್ಶ್ಯುರೆನ್ಸ್ ಅನ್ನು ಕಂಡುಹಿಡಿಯಲು ವಿಮೆಗಾರರು ಸರಾಸರಿ ಷರತ್ತುಗಳನ್ನು ನೀತಿಯಲ್ಲಿ ಅಳವಡಿಸುತ್ತಾರೆ. ಆ ನೀತಿಯನ್ನು ಸರಾಸರಿ ನೀತಿ ಎಂದು ಕರೆಯುತ್ತಾರೆ. ೨. ಕಾಂಪ್ರಿಹೆನ್ಸಿವ್ ಪಾಲಿಸಿ(ಸಮಗ್ರ ನೀತಿ): ಈ ನೀತಿಯಲ್ಲಿ ವಿಮೆಗಾರರು ಅಪಾಯಗಳ ವಿರುದ್ಧ ಆದ ನಷ್ಟಗಳಿಗೆ ಪರಿಹಾರವನ್ನು ನೀಡುತ್ತಾರೆ. ಉದಾಹರಣೆಗೆ ಬೆಂಕಿ ಅಪಘಾತ, ಕಳ್ಳತನ, ಮೂರನೇ ಪಕ್ಷದ ಅಪಾಯ ಇತ್ಯಾದಿ ಇವುಗಳನ್ನು 'ಆಲ್-ಇನ್-ಒನ್ ಪಾಲಿಸಿ' ಎಂದು ಕರೆಯುತ್ತಾರೆ. ಸಮಗ್ರ ನೀತಿಯು ವ್ಯಾಪಾರ ನಿಂತು ಹೋದಲ್ಲಿ ಹಾಗು ಲಾಭವು ನಷ್ಟವಾದಲ್ಲಿ ಈ ನೀತಿಯು ನಷ್ಟ ಪರಿಹಾರಮಾಡಲು ಸಹಾಯಮಾಡುತ್ತದೆ. ೩.ವ್ಯಾಲ್ಯೂಡ್ ಪಾಲಿಸಿ(ಮೌಲ್ಯದ ನೀತಿ): ಈ ನೀತಿಯಲ್ಲಿ ನಷ್ಟ ನೀತಿಯನ್ನು ಪಡೆದುಕೊಳ್ಳುವ ಮುನ್ನವೇ ಅಥವಾ ಪಡೆದುಕೊಳ್ಳುವ ಸಂದರ್ಭದಲ್ಲಿ ನಿಜವಾದ ಪ್ರಮಾಣವನ್ನು ಸ್ಥಿರಪಡಿಸಲಾಗಿರುತ್ತದೆ. ನಷ್ಟ ಸಂಭವಿಸಿದಾಗ ವಿಮೆಗಾರರು ನಿಜವಾದ ಪ್ರಮಾಣವನ್ನು ಲೆಕ್ಕಿಸದೆ ಸ್ಥಿರ ಪ್ರಮಾಣವನ್ನು ಕೊಡಬೇಕಾಗುತ್ತದೆ. ಈ ನೀತಿಯನ್ನು ಚಿತ್ರಗಳ, ಶಿಲ್ಪಗಳ, ಕಲಾಕೃತಿಗಳ ವಿಮೆಗಳಿಗೆ ಬಳಸಲಾಗುತ್ತದೆ. ಇಲ್ಲಿ ಮಾರುಕಟ್ಟೆ ಮೌಲ್ಯವನ್ನು ನಿರ್ಣಯಿಸಲು ಬಹಳ ಕಷ್ಟವಾಗುತ್ತದೆ. ೪. ಫ್ಲೋಟಿಂಗ್ ಪಾಲಿಸಿ(ತೇಲುವ ನೀತಿ): ಈ ನೀತಿಯು ವಿವಿಧ ಸ್ಥಳಗಳಲ್ಲಿರುವ ಆಸ್ಥಿಗಳನ್ನು ಆವರಿಸುತ್ತದೆ. ಉದಾಹರಣೆಗೆ ರಕ್ಷಿಸಲ್ಪಡಲಾದ ಸರಕುಗಳನ್ನು ಎರಡು ಗೋದಾಮಿನ ಎರಡು ವಿವಿಧ ಸ್ಥಳಗಳಲ್ಲಿ ಇಟ್ಟಿರುತ್ತಾರೆ. ೫. ರೀಪ್ಲೇಸ್ಮೆಂಟ್ ಪಾಲಿಸಿ(ಬದಲಿ ನೀತಿ): ಈ ನೀತಿಯಲ್ಲಿ ವಿಮೆಗಾರರು ಆದ ನಷ್ಟಕ್ಕೆ ಹಣದ ಮೂಲಕ ನಷ್ಟ ಪರಿಹರಿಸುವ ಬದಲು ಆಸ್ತಿ ಅಥವಾ ಸರಕುಗಳನ್ನು ಬದಲಿಸಿಕೊಡಬಹುದು. ಈ ನೀತಿಯನ್ನು 'ಬದಲಿ ನೀತಿ' ಎಂದು ಕರೆಯುತ್ತಾರೆ.

ವಿಮೆಗಾರನ ಹಕ್ಕುಗಳು[ಬದಲಾಯಿಸಿ]

೧. ರೈಟ್ ಆಫ್ ಸ್ಯಾಲ್ವೇಜ್(ರಕ್ಷಣೆ ಬಲ): ಯಾವುದಾದರು ಆಸ್ತಿ ಅಥವಾ ವಸ್ತು ಬೆಂಕಿಯಿಂದ ಹಾಳಾದಲ್ಲಿ ವಿಮೆಗಾರನು ಅಪಘಾತದ ನಂತರ ಉಳಿದಿರುವ ವಸ್ತುಗಳನ್ನು ತೆಗೆದುಕೊಳ್ಳುವ ಹಕ್ಕಿದೆ. ಈ ಹಕ್ಕನ್ನು ರಕ್ಷಣೆಯ ಬಲ ಎಂದು ಕರೆಯುತ್ತಾರೆ. ೨.ರೈಟ್ ಆಫ್ ರೀಇನ್ಸ್ಟೇಟ್ಮೆಂಟ್(ಮರುಪ್ರವೇಶ ಬಲ): ವಿಮೆಗಾರನು ಹಾಅಳಾದ ವಸ್ತುವಿಗೆ ಅಥವಾ ನಷ್ಟಕ್ಕೆ ಹಣದ ರೂಪದಲ್ಲಿ ಪರಿಹರಿಸುವಬದಲು ಹಾಳಾದ ವಸ್ತುವನ್ನು ಬದಲಿಸಿ ಕೊಡುವ ಹಕ್ಕಿದೆ. ಈ ಹಕ್ಕಿಗೆ ಮರುಪ್ರವೇಶ ಬಲ ಎಂದು ಕರೆಯುತ್ತಾರೆ. ೩.ರೈಟ್ ಆಫ್ ಕಾಂಟ್ರಿಬ್ಯೂಶನ್(ಕೊಡುಗೆ ಬಲ): ಒಂದೇ ವಿಷಯ ಅಥವಾ ಸಮಸ್ಯೆಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ವಿಮೆಗಾರನ ಬಳಿ ವಿಮೆಯಾಚಿಸಬಹುದು ಆದರೆ ನಿಜವಾದ ಪ್ರಮಾಣಕ್ಕಿಂತ ಅಧಿಕವಾಗಿ ಪಡೆಯುವಂತಿಲ್ಲ. ೪. ರೈಟ್ ಆಫ್ ಸಬ್ರೊಗೇಷನ್: ಸಬ್ರೊಗೇಷನ್ ಬಲದಲ್ಲಿ ವಿಮೆಗಾರನು ವಿಮೆಯನ್ನು ನೀಡಿದ ಕ್ಷಣದಿಂದ ಆ ಅಸ್ತಿಯು ಅಥವಾ ವಸ್ತುವು ವಿಮೆಗಾರನ ನೇತೃತ್ವದಲ್ಲಿರುತ್ತದೆ. ವಿಮೆಯನ್ನು ಪಡೆದುಕೊಳ್ಳುವವರು ವಿಮೆಗಾರನಿಗೆ ವಸ್ತು ಅಥವಾ ಆಸ್ತಿ ಸ್ಥಿತಿಯ ವಾಸ್ತವವನ್ನು ತಿಳಿಸಬೇಕು, ಯಾವುದೇ ಕಾರಣಕ್ಕೂ ಮುಚ್ಚಿಡಬಾರದು. ಇದನ್ನು ಪಾಲಿಸದೇ ಇದ್ದಲ್ಲಿ ವಿಮೆಗಾರರಿಗೆ ಆ ನಿರ್ಧಿಷ್ಟ ವಿಮೆಯನ್ನು ರದ್ದುಮಾಡುವ ಹಕ್ಕಿದೆ. ಅಗ್ನಿ ವಿಮೆ ನೀತಿಯಲ್ಲಿ ಅಥವಾ ಪಾಲಿಸಿಯಲ್ಲಿ ಅನುಮತಿಯಿಲ್ಲದೆ ಈ ನೀತಿಯನ್ನು ನಿಗದಿಪಡಿಸಲಾಗುವುದಿಲ್ಲ ಏಕೆಂದರೆ ಒಪ್ಪಂದದ ವೇಳೆಯಲ್ಲಿ ವಿಮೆಯನ್ನು ಪಡೆದುಕೊಳ್ಳುವವನು ತನ್ನ ಆಸ್ತಿಯಲ್ಲಿ ವಿಮಾ ಆಸಕ್ತಿಯನ್ನು ಹೊಂದಿರಬೇಕು. ೫. ವಿಮೆ ಪಡೆದುಕೊಳ್ಳುವವನು ವಿಮೆಗಾರನ ಹೇಳಿಕಯನ್ನು ಯಾವುದೇ ರೀತಿಯಲ್ಲಿ ಕಾರಣವಿಲ್ಲದೆ ಉಲ್ಲಂಘಿಸಿದಲ್ಲಿ ಆತನ ನೀತಿಯನ್ನು ತೆಗೆದು ಹಾಕುವ ಎಲ್ಲಾ ಹಕ್ಕು ವಿಮೆಗಾರನಲ್ಲಿದೆ. ಅಪಘಾತ ಸಂಭವಿಸಿದ ಸ್ಥಳಕ್ಕೆ ವಿಮೆಗಾರರು ಬಂದು ನೋಡಿ ಪರಿಶೀಲಿಸುತ್ತಾರೆ ಅದರ ನಂತರವೇ ಆ ನಿರ್ದಿಷ್ಟ ವ್ಯಕ್ತಿಗೆ ವಿಮೆಯನ್ನು ನೀಡಬೇಕೋ ಬೇಡವೋ ಎಂದು ಪರಿಗಣಿಸಲಾಗುತ್ತದೆ, ವಿಮೆಗಾರನಿಗೆ ಯವುದೇ ಸಂದೇಹವಿದ್ದಲ್ಲಿ ಅಥವಾ ಅಸಮಧಾನ ಇದ್ದಲ್ಲಿ ಆತನು ವಿಮೆ ನೀಡುವ ನಿರ್ಧಾರವನ್ನು ತ್ಯಜಿಸಬಹುದು. ಈ ಹಕ್ಕುಗಳು ಸಾಮಾನ್ಯವಾಗಿ ಎಲ್ಲಾ ವಿಧದ ವಿಮೆಯಲ್ಲೂ ಅಳವಡಿಸಲಾಗುತ್ತದೆ ಆದರೆ ಪ್ರತಿಯೊಂದು ವಿಮೆಯಲ್ಲೂ ಅದರದೇ ಆದ ವೈಶಿಷ್ಟ್ಯತೆ ಇರುತ್ತದೆ.

ಉಲ್ಲೇಖಗಳು[ಬದಲಾಯಿಸಿ]