ಸದಸ್ಯ:Soumyakushala/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ|| ಭಾಟಿಯಾ ೧೯೬೨ರಲ್ಲಿ ಭಾರತದಲ್ಲಿ ಹುಟ್ಟಿದರೂ ಅವರ ಕುಟುಂಬ ಕರಾಚಿಯಿಂದ ಬಂದದ್ದು. ಶ್ರೀಮಂತ ಮನೆತನಕ್ಕೆ ಸೇರಿದ ತಂದೆ-ತಾಯಿ ಪಾಕಿಸ್ತಾನದಲ್ಲಿದ್ದವರು. ತಾಯಿ ಅಪ್ಪಟ ಅನಕ್ಷರಸ್ಥೆ. ತಂದೆ ಅಲ್ಪಸ್ವಲ್ಪ ಓದಿಕೊಂಡವರು. ದೇಶ ಇಬ್ಬಾಗವಾದ ಸಮಯ, ಓರ್ವ ಮುಸ್ಲಿಂ ಕುಟುಂಬ, ಇವರ ತಂದೆ ತಾಯಿ ಮತ್ತು ಆರು ಮಕ್ಕಳನ್ನು ಅಡಗಿಸಿಕೊಂಡಿತ್ತು. ಆದರೆ ಪರಿಸ್ಥಿತಿ ಕೈಮೀರಿತು. ತಂದೆ-ತಾಯಿ ಮಕ್ಕಳೊಂದಿಗೆ ಓಡಬೇಕಾಯಿತು. ಇಬ್ಬರು ಮಕ್ಕಳು ಕೊಲೆಯಾದರು. ಉಳಿದ ಮಕ್ಕಳನ್ನು ಎತ್ತಿಕೊಂಡು ಆ ತಾಯಿ, ತಂದೆಗಿಂತ ಮುಂದೆ ಓಡಿದ್ದಳು! ಕೊನೆಯ ರೈಲು, ಸರ್ವಸ್ವವನ್ನು ಹಿಂದೆ ಬಿಟ್ಟು ಬರಿಗೈಯಲ್ಲಿ ಭಾರತಲ್ಲಿ ಇಳಿದಿದ್ದರು.

ಮುಂಬಯಿಯ ಬಡತನದ ಚಾಲ್ವೊಂದರಲ್ಲಿ ಭಾಟಿಯಾರ ಬಾಲ್ಯ ಕಳೆಯಿತು. ತಂದೆ ಮನೆ ಮನೆಗೆ ಹೋಗಿ ಬಟ್ಟೆ ಮಾರುತ್ತಿದ್ದರು. ಭಾರತಕ್ಕೆ ಬಂದ ಮೇಲೆ ಮತ್ತೆರಡು ಮಕ್ಕಕಳು ಹುಟ್ಟಿದರು. ಭಾಟಿಯ ಕೊನೆಯ ಮಗು. ಅಣ್ಣಂದಿರರು, ಅಕ್ಕಂದಿರರು ಯಾರು ಓದಿರಲಿಲ್ಲ. ತಾಯಿಗೆ ಈ ಮಗನ ಮೇಲೆ ಅಗಾಧ ಭರವಸೆ, ಅಖಂಡ ಆಸೆ.

ಚಾಲ್ ದ ಪುಂಡ ಪೋಕರಿ ಹುಡುಗರನ್ನು ತೋರಿಸಿ, ' ನೋಡು ನಿನ್ನೆದುರು ಆಯ್ಕೆ ಇದೆ. ಅವರಂತೆ ಬೀಡಿ ಸೇದಿಕೊಂಡು, ಹೆಂಡ ಕುಡಿದುಕೊಂಡು ಹಾಳಾಗಬಹುದು. ಇಲ್ಲ ಓದಿ ದೊಡ್ಡ ಮನುಷ್ಯನಾಗಬಹುದು'. ಆ ತಾಯಿ ಮಗನನ್ನು ಓದಿಸಲು ಸರ್ವಪ್ರಯತ್ನ ಮಾಡಿದಳು. ಶ್ರೀಮಂತ ಬದುಕಿನಿಂದ ದಟ್ಟ ದಾರಿದ್ರ್ಯಕ್ಕೆ ಎಸೆಯಲ್ಪಟ್ಟರೂ ಬದುಕಿನ ಅನುಭವಗಳು ಆಕೆಯನ್ನು ಕಹಿಯಾಗಿಸಲಿಲ್ಲ. ಬದಲಿಗೆ ಗಟ್ಟಿಯಾಗಿಸಿದವು. 'ಎಂತಹ ನೋವೂ ಸಮಯದೊಡನಡ ಮಾಯುತ್ತದೆ' ಎಂದು ನಂಬಿದವಳು. ಇತಿಹಾಸದ ಕ್ರೌರ್ಯವನ್ನು ಎದೆಯಲ್ಲಿ ಹೊತ್ತು ಕುಸಿಯದೆ, ಮಗನಲ್ಲಿ ಕನಸುಗಳನ್ನು ತುಂಬಿದಳು. ಓದುವ ಕನಸದು.

ಶಲೆ ಸೇರುವುದು, ಫೀಸು ಕಟ್ಟುವುದು ಸುಲಭವಿರಲಿಲ್ಲ. 'ಹೋಲಿ ಫ್ಯಾಮಿಲಿ ಪ್ರೌಡಶಾಲೆ'ಯ ಫಾದರ್ ಎಡ್ಗರ್ ಅವರಲ್ಲಿ ತಾಯಿ ಬೇಡಿದಳು. ಶಾಲೆಯಲ್ಲಿ ಕಸಗುಡಿಸಿ ಮಗನನ್ನು ಆ ಲೆಯಲ್ಲಿ ಓದುವಂತೆ ಮಾಡಿದಳು. ಫಾದರ್ ಎಡ್ಗರ್ ಭಾಡಿಯಾ ಅವರಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಲ್ಲದೆ, ಬೆನ್ನಿಗೆ ನಿಂತರು.

ನೇಮಿಚಂದ್ರ

ಪ್ರವಾಸ ಕಥನ[ಬದಲಾಯಿಸಿ]

  • ಒಂದು ಕನಸಿನ ಪಯಣ
  • ಪೆರುವಿನ ಪವಿತ್ರ ಕಣಿವೆಯಲ್ಲಿ[೧]

ಇತರೆ[ಬದಲಾಯಿಸಿ]

  1. ಸಾಹಿತ್ಯ ಮತ್ತು ವಿಜ್ಞಾನ
  2. ಬದುಕು ಬದಲಿಸಬಹುದು (ಅಂಕಣ ಸಂಗ್ರಹ -1)
  3. ಸಾವೇ, ಬರುವುದಿದ್ದರೆ ನಾಳೆ ಬಾ (ಅಂಕಣ ಸಂಗ್ರಹ - ೨)
  4. ಸೋಲೆಂಬುದು ಅಲ್ಪ ವಿರಾಮ್ (ಅಂಕಣ ಸಂಗ್ರಹ - ೩)
  5. ಸಂತಸ, ನನ್ನೆದೆಯ ಹಾ‍ಡು ಹಕ್ಕಿ (ಅಂಕಣ ಸಂಗ್ರಹ - ೪)
  6. ದುಡಿವ ಹಾದಿಯಲಿ ಜೊತೆಯಾಗಿ (ದುಡಿವ ದಂಪತಿಗಳಿಗಾಗಿ)
  7. ಮಹಿಳಾ ಅಧ್ಯಯನ
  8. ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ಸ್
  9. ನಿಮ್ಮ ಮನೆಗೊಂದು ಕಂಪ್ಯೂಟರ್
  10. ಮಹಿಳಾ ಲೋಕ (ಸಂಪಾದಿತ)
  11. ನ್ಯಾಯಕ್ಕಾಗಿ ಕಾದ ಭಾಂವ್ರಿ ದೇವಿ (ಹೇಮಲತಾ ಮಹಿಷಿ ಅವರೊಡನೆ)

ಪ್ರಶಸ್ತಿ ಗೌರವಗಳು[ಬದಲಾಯಿಸಿ]

  • 'ಬೆಳಕಿನೊಂದು ಕಿರಣ ಮೇರಿ ಕ್ಯೂರಿ', 'ಪೆರುವಿನ ಪವಿತ್ರ ಕಣಿವೆಯಲ್ಲಿ' ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ.
  • ‘ಯಾದ್ ವಶೇಮ್’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ 2007ರ ಗೌರವ ಪ್ರಶಸ್ತಿ ಮತ್ತು ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನದ 2009 *‘ಅಕ್ಕ’ ಪ್ರಶಸ್ತಿ.
  • 'ಮತ್ತೆ ಬರೆದ ಕಥೆಗಳು' ಕಥಾಸಂಕಲನಕ್ಕೆ ಆರ್ಯಭಟ ಪ್ರಶಸ್ತಿ, ವಿಜ್ಞಾನ ಸಾಹಿತ್ಯ, ಮಹಿಳಾ ಅಧ್ಯಯನಕ್ಕಾಗಿ 'ಸಂದೇಶ ಪ್ರಶಸ್ತಿ' ದೊರೆತಿದೆ.
  • 'ಸೊಸೈಟಿ ಆಫ್ ಇಂಡಿಯನ್ ಏರೋಸ್ಪೇಸ್ ಟೆಕ್ನಾಲಜೀಸ್ ಅಂಡ್ ಇಂಡಸ್ಟ್ರೀಸ್' ನೀಡುವ 'ವಿಮೆನ್ ಅಚೀವರ್ ಇನ್ ಏರೋಸ್ಪೇಸ್' ಪ್ರಶಸ್ತಿ
  • 'ಏರೋ ಇಂಡಿಯಾ ೨೦೧೯'ರಲ್ಲಿ ಏರೋಸ್ಪೇಸ್ ರಂಗಕ್ಕೆ ನೀಡಿರುವ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಗೌರವಿಸಲಾಯಿತು.
  • ಇಂಡಿಯನ್ ಎಕ್ಸ್ ಪ್ರೆಸ್ ನ 'ದೇವಿ' ಪುರಸ್ಕಾರ
  • 'ಒಂದು ಕನಸಿನ ಪಯಣ' ಕೃತಿಗೆ 'ಮಾತೋಶ್ರೀ ರತ್ನಮ್ಮ ಹೆಗ್ಗಡೆ' ಪ್ರಶಸ್ತಿ.
  • ಕನ್ನಡ ಸಾಹಿತ್ಯ ಅಕಾಡೆಮಿ ಜೀವಮಾನದ ಪ್ರಶಸ್ತಿ
  • ಅತ್ತಿಮಬ್ಬೆ ಪ್ರಶಸ್ತಿ, ೨೦೧೫[೨]

ಉಲ್ಲೇಖಗಳ[ಬದಲಾಯಿಸಿ]

  1. https://www.amazon.in/PeruVina-PaVitra-Kaniveyalli-Nemichandra/dp/8173026343
  2. https://www.sallapa.com/2013/08/blog-post_2367.html