ಸದಸ್ಯ:Shellu joseph/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶೌರ್ಯ ಚಕ್ರ ರಿಬ್ಬನ್
ಶೌರ್ಯ ಚಕ್ರ

ಶೌರ್ಯ್ ಚಕ್ರ[ಬದಲಾಯಿಸಿ]

ಪ್ರಾಮುಖ್ಯತೆಯನ್ನು[ಬದಲಾಯಿಸಿ]

          "ಧೈರ್ಯ ಂ ಸಾರ್ವತ್ರ ಸಾಧನಂ" ಯಾವುದೇ ಒಬ್ಬ ವ್ಯಕ್ತಿ ಯಾವುದಾದರೂ ಒಂದು ಆಪತ್ತಿಗೆ ಸಿಲುಕಿಕೋಂಡಾಗ ಧೃತಿಗೆಟ್ಟು ತನ್ನಿಂದಾಗದು  ಎಂದು ಕೈಚೆಲ್ಲಿ ಕುಳಿತರೆ ಬಂದಿರುವ ಆಪತ್ತು ಆತ ನನ್ನು ನಾಶಮಾಡುವುದಲ್ಲದೇ ಆತನ ಸುತ್ತಲಿನವರೂ ತೊಂದರೆಯನ್ನು ಅನುಭವಿಸುವಂತಾಗುತ್ತದೆ. ಆದ್ದರಿಂದ ಆ ಸಮಯದಲ್ಲಿ ಆತ ಧೃತಿಗೆಡದೆ ಧೈರ್ಯದಿಂದ ಮುನ್ನುಗ್ಗ ಬೇಕು. ಆದ್ದರಿಂದಲೇ ಹಿರಿಯರು "ಹೇಡಿಯಾಗಿ ನೂರು ದಿನ ಬದುಕುವುದಕ್ಕಿಂತ ಶೂರನಾಗಿ ಮೂರು ದಿನ ಬದುಕು" ಎಂದು ಹೇಳಿದ್ದಾರೆ. ಹಿರಿಯರು ಇಂತಹ ಮಾತುಗಳೇ ಮನುಷ್ಯನ ಜೀವನಕ್ಕೆ ಮಾರ್ಗದರ್ಶಿ ಯಾಗುತ್ತದೆ. ಮುನ್ನುಗುವಫಲ ಮೂಡುತ್ತದೆ. ಈ ಫಲವೇ ಆತನಿಗೆ ಜಯವನ್ನು ಒದಗಿಸಿಕೊಡುತ್ತದೆ.
             
           ತನ್ನ ಪ್ರಾಣದ ಹಂಗನ್ನು ತೊರೆದೆ ಆಪತ್ತನ್ನು ಎದುರಿಸುವುದು ಎಂದರೆ ಬೆಂಕಿಯ ಜೊತೆ ಸರಸವಾಡಿದಂತೆ. ಈ ರೀತಿ ಬೆಂಕಿಯ ಜೊತೆ ಸರಸವಾಡುವುದೆಂದರೆ ತನ್ನ ಸಾವನ್ನು ತಾನೇ ಆಹ್ವಾನಿಸಿಕೊಂಡಂತೆ. ಈ ರೀತಿ ಮುನ್ನುಗ್ಗುವ ವ್ಯಕ್ತಿ ನೋವಿಗೆ ಸ್ಪಂದಿಸುವ ಹೃದಯವಂತನಾಗಿರುತ್ತಾನೆ. ತನ್ನ ನಾಡು, ತನ್ನ ದೇಶವೆನ್ನುವ ಅನಂತ ಅಭಿಮಾನ ಹೊಂದಿರುವವನಾಗಿರುತ್ತಾನೆ. ಅದಕ್ಕಾಗಿಯೇ ದೇವರು ಅಂತಹವರ ಜೊತೆಯಲ್ಲಿರುತ್ತಾನೆ ಎಂದು ಹೇಳುವುದು. ಈ ರೀತಿಯ ಪ್ರಾಣದ ಹಂಗನ್ನು ತೊರೆದು ಹೋರಾಡುವ ಎಂಟೆದೆ ಬಂಟನಿಗಾಗಿಯೆ ಭಾರತ ಸರ್ಕಾರ ಹಲವು ಪ್ರಶಸ್ತಿಗಳನ್ನು ನೇಡಿ ಗೌರವ ಸೂಚಿ. ಅದು ಕೆಲವೊಮ್ಮೆ ಮರಣೋತ್ತರ ಪ್ರಶಸ್ತಿಯೂ ಆಗುತ್ತದೆ. ಇಂತಹ ಗೌರವ ಸೂಚಕ ಪ್ರಶಸ್ತಿಗಳಲ್ಲಿ ಶೌರ್ಯ ಚಕ್ರ ಪ್ರಶಸ್ತಿಯೂ ಒಂದಾಗಿದೆ.
           ಈ ಪ್ರಶಸ್ತಿ ಯುದ್ದಭೂಮಿಯಲ್ಲಿ ಮಡಿದ ಹುತಾತ್ಮನಿಗಿಂತಲೂ ಯುದ್ದಭೂಮಿಯ ಹೊರಗಡೆ ತೋರಿದ ಶೌರ್ಯ ಬಲಿದಾನಗಳಿಗೆ ಕೊಡುವ ಪ್ರಶಸ್ತಿಯಾಗಿದೆ. ಉದಾಹರಣೆಗೆ ಲೆಫ್ಟೆನೆಂಟ್ ಕರ್ನಲ್ ನಿರಂಜನ್ ಕುಮಾರ್ಗೆ ಅವರು ಪಂಜಾಬನ ಪಠಾಣಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯಲ್ಲಿ ಹುತಾತ್ಮರಾದವರು. ರಾಷ್ಟ್ರೀಯ ಕಮಾಂಡೋ ಪಡೆಯ ಬಾಂಬ್ ನಿಷ್ಕ್ರಿಯ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಪಠಾಣ್ ಕೋಟ್ ವಾಯುನೆರೆಯಲ್ಲಿ ಉಗ್ರರು ಅಡಗಿನಿಟ್ಟಿದ್ದ ಗ್ರೆನೇಡ್ ಸ್ಪೋಟಗೋಂಡು ತೀವ್ರವಾಗಿ ಗಾಯಗೊಂಡರು. ಅನಂತರ ಚಿಕಿತ್ರೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರ ಈ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಕೆಲವೊಮ್ಮೆ ಯಾರನ್ನೋ ರಕ್ಶಿಸಲು ಹೋಗಿ ತಮ್ಮ ಪ್ರಾಣವನು ತೆತ್ತಂತಹ ಅಥವಾ ಪ್ರಾಣರಕ್ಶಣೆ ಮಾಡಿದಂತಹ ನಾಗರಿಕರಿಗೂ ಶೊರ್ಯ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
           
           ಕಳೆದ ಜನವರಿ ೧ ರಂದು ಪಂಜಾಬನ ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರ ದಾಳಿಯಲ್ಲಿ ಹುತಾತ್ಮರಾಗಿದ್ದ ಕನ್ನಡಿಗ ಯೋಧ ಲೆಪ್ಪಿನೆಂಟ ಕರ್ನಲ ನಿರಂಜನ್ ಕುಮಾರ್ ಅವರಿಗೆ ಕೇಂದ್ರ ಸರ್ಕಾರ ಶೌರ್ಯ್ ಚಕ್ರ ಪುರಸ್ಕಾರ ನೀಡಿದೆ. 'ಶೌರ್ಯ ಚಕ್ರ' ಪ್ರಶಸ್ತಿ ಭಾರತೀಯ ಸೇನೆ ಅವರಿಗೆ ಕೊಡುವ ಇತರ ಪುರಸ್ಕಾರಗಳಾದ ಅಶೋಕ ಚಕ್ರ ಮತ್ತು ಕೀರ್ತ ಚಕ್ರ ವಿಸ್ತರಿತ ಪ್ರಶಸ್ತಿಯಾಗಿದೆ. ೧೯೬೩೦ರ ಮುಂಚೆ ಶೌರ್ಯ ಪ್ರಶಸ್ತಿಯನ್ನು ಅಶೋಕ ಚಕ್ರ-ಕ್ಲಾಸ್ ೩ ಎಂದು ಗುರುತಿಸಲಾಗುತ್ತಿತ್ತು.
         ಶೌರ್ಯ ಚಕ್ರ ಪ್ರಶಸ್ತಿ ಯೋಧರ ಶೌರ್ಯತೆಗೆ ನೀಡಿದರೆ ಶೌರ್ಯ ಪ್ರಶಸ್ತಿ ನಾಗರಿಕರಿಗೆ ನೀಡುವ ಪ್ರಶಸ್ತಿಯಾಗಿದೆ. ಇದರಲ್ಲಿ ಮಕ್ಕಳೂ ಸಹ ಹೊರತಾಗಿಲ್ಲ. ಸಮಯ ಪ್ರಜ್ಜೆ ಮತ್ತು ಸಾಹಸವನ್ನು ಮೆರೆದೆ ನಾಗರಿಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ರಾಷ್ಟ್ರೇಯ ಶೌರ್ಯ ಪ್ರಶಸ್ತಿ ನಾಗರಿಕರಿಗೆ ನೀಡುವ ಪರಮೋತ್ದ ಪ್ರಶಸ್ತಿಯಾಗಿದೆ.

<ref>http://chimesofhonour.org/Shaurya-Chakra.php<ref>

<ref>https://en.wikipedia.org/wiki/Shaurya_Chakra<ref>