ಸದಸ್ಯ:Shashank457/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರ್. ಅಶೋಕ್


ಆರ್. ಅಶೋಕ್

[[ಚಿತ್|thumb|ಭಾರತೀಯ ಜನತಾ ಪಕ್ಷ]] ಸನ್ಮಾನ್ಯ ಶ್ರೀ ಆರ್. ಅಶೋಕ್(ಜನನ:[೦೧-೦೭-೧೯೫೭]) ಅವರ ತಂದೆ ದಿ।। ರಾಮಯ್ಯ, ಇವರ ತಾಯಿ ಆಂಜನಮ್ಮ, ಇವರು ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಕಾರ್ಯಕರ್ತರು.ಇವರು ಪ್ರೌಢಶಾಲೆ ಶಿಕ್ಷಣವನ್ನು ಹೆಚ್.ಎಮ್.ಟಿ ಹೈಸ್ಕೂಲಿನಲ್ಲಿ ಮುಗಿಸಿದರು.ಪಿ.ಯು.ಸಿಯನ್ನು ವಿ.ವಿ.ಪುರಂ ಕಾಲೇಜಿನಲ್ಲಿ ಮುಗಿಸಿದರು. ಇವರು ಬಿಎಸ್ಸಿ ಪದವೀಧರರಾಗಿದ್ದು, ಬೆಂಗಳೂರು ನಗರದ ವಿಶ್ವೇಶ್ವರಪುರ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಕಾಲೇಜು ವಿದ್ಯಾರ್ಜನೆಯ ಸಂಧರ್ಭದಲ್ಲಿ ಇವರು ಕಬಡ್ಡಿ ಕ್ರೀಡಾಪಟು. ಇವರು ವಿದ್ಯಾರ್ಥಿನಾಯಕರಾಗಿ ಹಂತ ಹಂತವಾಗಿ ಬೆಳೆಯುತ್ತಾ ಬಂದವರು. ವಿದ್ಯಾಭ್ಯಾಸ ಮುಗಿದೊಡನೆ ಭಾರತೀಯ ಜನತಾ ಪಕ್ಷವನ್ನು ಆಯ್ಕೆ ಮಾಡಿಕೊಂಡು ಸಕ್ರಿಯ ರಾಜಕಾರಣದಲ್ಲಿ ತೊಡಗಿದರು. ಹಿಂದೆ ನಮ್ಮ ದೇಶದ ತುರ್ತುಪರಸ್ಥಿತಿ ಕಾಲದಲ್ಲಿ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ಸನ್ಮಾನ್ಯ ಶ್ರೀ ಲಾಲಕೃಷ್ಣ ಅಡ್ವಾಣಿ[೧]ಯವರ ಜೊತೆ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಇದ್ದರು. ಹಾಗೆಯೇ ಬೆಂಗಳೂರು ನಗರ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ಎರಡು ಭಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಆನಂತರ 1997ರ ಮಧ್ಯಂತರ ಚುನಾವಣೆಯಲ್ಲಿ ಭಾರತದ ಅತ್ಯಂತ ದೊಡ್ಡ ವಿಧಾನ ಸಭಾ ಕ್ಷೇತ್ರವಾದ ಸುಮಾರು 16 ಲಕ್ಷ ಮತದಾರರಿರುವ ಉತ್ತರಹಳ್ಳಿ[೨] ವಿಧಾನ ಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಪ್ರಥಮ ಭಾರಿಗೆ ಜಯಗಳಿಸಿದರು. ಹಾಗೆಯೇ ಮೂರು ಭಾರಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಕರ್ನಾಟಕ ರಾಜ್ಯದಲ್ಲಿನ 224 ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಈ ಹಿಂದಿನ ಸರ್ಕಾರವಾದ ಬಿ.ಜೆ.ಪಿ ಹಾಗೂ ಜೆ.ಡಿ.(ಎಸ್) ಸಮ್ಮಿಶ್ರ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ  ಹಿಂದೆಗಿಂತಲೂ ಅತಿ ಉತ್ತಮವಾದ ವೈದ್ಯಕೀಯ ಸೌಲಭ್ಯಗಳು ದೊರೆಯುವಂತೆ ಮಾಡಿದರು.

ಮೇ 2008 ರ ಚುನಾವಣೆಯಲ್ಲಿ ಬೆಂಗಳೂರು ನಗರದ ಪದ್ಮನಾಭನಗರ ಮತಕ್ಷೇತ್ರದಿಂದ ಸ್ಪರ್ಧಿಸಿ ಬೆಂಗಳೂರು ಜಿಲ್ಲೆಯ ಮತಕ್ಷೇತ್ರಗಳ ಪೈಕಿ ಅತಿ ಹೆಚ್ಚಿನ ಮತಗಳ ಅಂತರದಿಂದ ಜಯಶೀಲರಾಗಿ ಬಿ.ಜೆ.ಪಿ ಸರ್ಕಾರದಲ್ಲಿ ಗೃಹ ಮತ್ತು ಸಾರಿಗೆ ಸಚಿವರಾಗಿ ಹಾಗೂ ಬೆಂಗಳೂರು ಮತ್ತು ಮಂಡ್ಯ ಕ್ಷೇತ್ರದ ಉಸ್ತುವಾರಿ ಸಚಿವರಾಗಿ ಯಶಸ್ಸು ಪಡೆದು ಜನಪ್ರಿಯ ಮಂತ್ರಿಯೆನಿಸಿದರು ಹಾಗೂ  ಶ್ರೀ ಜಗದೀಶ್ ಶೆಟ್ಟರ್ ರವರ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಗಳಾಗಿ ದಿನಾಂಕ [೧೨-೦೭-೨೦೧೨] ರಂದು ಪ್ರಮಾಣವಚನ ಸ್ವೀಕರಿಸಿ ಉತ್ತಮ ಆಡಳಿತ ನೀಡಿದ್ದರು.


ಪದ್ಮನಾಭನಗರ

ಮೊದಲು ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಪದ್ಮನಾಭನಗರ, ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಯಲ್ಲಿ ‘ವಿಧಾನಸಭಾ ಕ್ಷೇತ್ರ’ ವಾಗಿ ರೂಪುಗೊಂಡ ವಿಧಾನಸಭಾ ಕ್ಷೇತ್ರ. ಇದರಲ್ಲಿ ಬನಶಂಕರಿ ಮತ್ತು ಪದ್ಮನಾಭನಗರ ಎಂಬ ಎರಡು ಉಪವಿಭಾಗಗಳು. ಮತ್ತು ಈ ಉಪ ವಿಭಾಗಗಳಲ್ಲಿ ತಲಾ ನಾಲ್ಕು ವಾರ್ಡ್‌ಗಳಂತೆ ಒಟ್ಟು 8ವಾರ್ಡ್‌ಗಳನ್ನು ಒಳಗೊಂಡ ಪದ್ಮನಾಭನಗರ ಕ್ಷೇತ್ರ ಇಂದು ರಾಜ್ಯದಲ್ಲಿ ಅತ್ಯುತ್ತಮ ಮಾದರಿ ವಿಧಾನಸಭಾ ಕ್ಷೇತ್ರ ಎಂಬ ಹೆಸರು ಪಡೆಯಲು ಇಲ್ಲಿನ ಜನರ ಅದಮ್ಯ ಜೀವನೋತ್ಸಾಹ ಮತ್ತು ಅವರ ತಿಳುವಳಿಕೆಯೇ ಕಾರಣವಾಗಿದೆ.

ಹಿಡಿದ ಕೆಲಸವನ್ನು ಪಟ್ಟು ಬಿಡದೆ ಸಾಧಿಸುವ ಛಲ. ಜನಹಿತಕ್ಕಾಗಿ ಯಾವ ಶಕ್ತಿಯೊಂದಿಗೂ ರಾಜಿ ಮಾಡಿಕೊಳ್ಳದ ದೃಢಚಿತ್ತ. ಸಾರ್ವಜನಿಕರಿಗಾಗಿ ಸದಾ ತೆರೆದಿರುವ ಅವರ ಮನೆಯ ಬಾಗಿಲು, ಎಂತಹ ಸಂದರ್ಭದಲ್ಲಿಯೂ ಸಹಾಯ ಯಾಚಿಸಿ ಬಂದವರಿಗೆ ಮುಚ್ಚಿಕೊಂಡಿಲ್ಲ.

ಕೊಳವೆ ಬಾವಿ ಕೊರೆಯುವ ಕೆಲಸವಾಗಲಿ, ರಸ್ತೆಗೆ ಡಾಂಬರು ಮಾಡಿಸುವುದರಿಂದ ಮೊದಲ್ಗೊಂಡು ರಸ್ತೆ ದುರಸ್ತಿಯ ಇನ್ನಾವುದೇ ಕೆಲಸವಾಗಲೀ, ಬೀದಿ ದೀಪದ ಅಳವಡಿಕೆಯಾಗಲೀ, ರಂಗಮಂದಿರ ನಿರ್ಮಾಣವಾಗಲೀ, ಶಾಲಾ ಮಕ್ಕಳಿಗೆ ಸೌಲಭ್ಯ ಕಲ್ಪಿಸುವ ವಿಚಾರವಾಗಲೀ, ಅಲ್ಲಿ ಅಶೋಕ ಅವರ ಉಪಸ್ತಿತಿ ಖಂಡಿತ. ಜನರ ನಾಡಿ ಬಡಿತಕ್ಕೆ ಸರಿಯಾಗಿ ಸ್ಪಂದಿಸುವ, ಅವರ ಅಹವಾಲುಗಳನ್ನು ಕಿಂಚಿತ್ತು ಬೇಸರವಿಲ್ಲದೆ ಆಲಿಸುವ ‘ಅಶೋಕ’ ರ ನಡವಳಿಕೆ ಜನಸಾಮಾನ್ಯರಿಗೆ ಅಚ್ಚುಮೆಚ್ಚು. ಅಶೋಕ ರವರಿದ್ದಾರೆ, ನಮ್ಮ ಸಮಸ್ಯೆ ಬಗೆಹರಿಯುತ್ತದೆಎನ್ನುವ ಭಾವನೆ ಜನಮನದಲ್ಲಿ ಮೂಡಿದ್ದರೆ, ಅದಕ್ಕೆ ಕಾರಣ ಅಶೋಕ ರವರ ಆಸ್ಥೆ ಮತ್ತು ಶ್ರದ್ಧೆ. ಜನಸಮುದಾಯಕ್ಕೆ ಸ್ಪಂದಿಸುವ ಅವರ ಮನಸು ಮತ್ತು ಒಳಿತನ್ನು ಸಾಧಿಸಲೇಬೇಕು ಎನ್ನುವ ಅವರ ದೃಢ ನಿರ್ಧಾರ.

ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ದರ್ಜೆಯ ಬಸ್‌ನಿಲ್ದಾಣಗಳು, ಇರುವ ಎಲ್ಲ ಉದ್ಯಾನವನಗಳಿಗೆ ಕಾಯಕಲ್ಪ, ಆಟದ ಮೈದಾನಗಳ ನಿರ್ಮಾಣ, ಹಳೆಯ ಮಾರ್ಕೆಟ್‌ಗಳ ದುರಸ್ತಿ, ಪುನಶ್ಚೇತನ, ರಂಗಮಂದಿರಗಳ ನಿರ್ಮಾಣ, ರಸ್ತೆ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆಗೆ ನೀಡಿದ ಆದ್ಯತೆ, ಯುವಕರಿಗೆ ಸ್ವ-ಉದ್ಯೋಗ ಅವಲಂಬಿಸಲು ನೆರವು, ಪಡಿತರ ಚೀಟಿ ವಿತರಣೆ, ಹಕ್ಕುಪತ್ರ ವಿತರಣೆ ಹೀಗೆ ಅಶೋಕರಿಂದ ಸಾಧಿತವಾದ ಪ್ರಗತಿ ಕಾರ್ಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಸ್ವಾವಲಂಬನೆ:

ತಮ್ಮ ಕ್ಷೇತ್ರದ ಯವಕರು ಸ್ವಾವಲಂಬಿಗಳಾಗಬೇಕು, ಅವರದೇ ಬದುಕು ಕಟ್ಟಿಕೊಳ್ಳಬೇಕು, ಒಳ್ಳೆಯ ಆರೋಗ್ಯವಂತರಾಗಬೇಕು, ವಿಕಸಿತರಾಗಬೇಕು,ಅನ್ನುವ ಅಶೋಕ್ ರವರ ಇಂದಿನವರೆಗಿನ ಪ್ರಗತಿ ಸಾಕ್ಷಿಗಳೊದಗಿಸುತ್ತಿವೆ. ಸಾಮೂಹಿಕ ವಿವಾಹ, ಮಕ್ಕಳು, ಯುವಜನತೆಗೆ ಆರೋಗ್ಯ ತಪಾಸಣೆ, ಚಿಕ್ಕ ಮಕ್ಕಳಿಗೆ ಆಟದ ಸೌಲಭ್ಯಗಳು, ಯುವ ಜನತೆಗೆ ಸ್ವಾವಲಂಬನೆಯ ದೀಕ್ಷೆ ಇವು ನನಸಾದ ಕನಸುಗಳಾಗಿವೆ.

ಆಟದ ಮೈದಾನಗಳು:

ಆಟದ ಮೈದಾನಗಳು ಸಂಪೂರ್ಣ ದೈಹಿಕ ಬೆಳವಣಿಗೆಯ ಕೇಂದ್ರವಾಗಬೇಕು ಎನ್ನುವ ಶ್ರೀ ಅಶೋಕ್ ರವರ ಆಶಯ ಫಲ ನೀಡಿದೆ ಪದ್ಮನಾಭನಗರ ಕ್ಷೇತ್ರದ ಆಟದ ಮೈದಾನಗಳು ಈಗ ಎಲ್ಲರ ಅಚ್ಚು ಮೆಚ್ಚಿನ ತಾಣ.

ಕದಿರೇನಹಳ್ಳಿ ಅಂಡರ್ ಪಾಸ್:

ಕದಿರೇನಹಳ್ಳಿ ಜಂಕ್ಷನ್‌ನ ಮೂಲಕ ಹಾದು ಹೋಗುವ ರಿಂಗ್ ರಸ್ತೆಯಲ್ಲಿ ಸದಾ ವಾಹನ ದಟ್ಟಣೆ. ಈ ವಾಹನದಟ್ಟಣೆಯನ್ನು ನಿವಾರಿಸುವ ಸಲುವಾಗಿ ಅಂಡರ್ ಪಾಸ್ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತಾದರೂ ಅದು ನಿಧಾನಗತಿಯಲ್ಲಿ ಕಾರ್ಯರೂಪಕ್ಕೆ ಬರುತ್ತಿದ್ದುದು ಜನರಿಗೆ ಒಂದು ತಲೆನೋವಾಗಿತ್ತು, ಶ್ರೀ ಅಶೋಕ ರವರು ಕೈಗೊಂಡ ಕ್ರಮಗಳು ಮತ್ತು ನಿರ್ಧಾರದಿಂದಾಗಿ ಈ ಅಚಿಡರ್‌ಪಾಸ್ ನಿರ್ಮಾಣ ಅಂತಿಮ ಹಂತ ತಲುಪಿತು. ಈಗ ಇದು ವರ್ತುಲ ರಸ್ತೆಯಲ್ಲಿನ ವಾಹನ ದಟ್ಟಣೆಯನ್ನು ಸರಳಗೊಳಿಸಿರುವುಸಲ್ಲದೆ ನಾಗರಿಕರಿಗೆ ಅತ್ಯುಪಯುಕ್ತ ರಸ್ತೆಯಾಗಿ ಪರಿಣಮಿಸಿದೆ.

ಬನಶಂಕರಿ ದೇವಸ್ಥಾನ:

ಬೆಂಗಳೂರಿನ ಪುರಾತನ ದೇವಾಲಯಗಳಲ್ಲಿ ಒಂದಾದ ಬನಶಂಕರಿ ದೇವಸ್ಥಾನ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರನ್ನು ಸೆಳೆವ ತಾಣ. ಈ ಪುರಾತನ ದೇಗುಲಕ್ಕೆ ಆಧುನಿಕ ಸ್ಪರ್ಶ ಸಾಂಪ್ರದಾಯಕತೆಗೆ ಕಿಂಚಿತ್ತೂ ಧಕ್ಕೆ ಬರದಂತೆ ದೇವಾಲಯವನ್ನು ಸುಸ್ಥಿರಗೊಳಿಸಿರುವುದು ಅಶೋಕ ರವರ ಮುಂದಾಳತ್ವದಲ್ಲಿ ನಡೆದ ಮಹತ್ವ ಪೂರ್ಣಕೆಲಸಗಳಲ್ಲೊಂದು.

ಅಂಬರ ಚುಂಬನ:

ಕ್ಲಾಕ್ ಟವರ್‌

ಕ್ಲಾಕ್ ಟವರ್‌ಗಳ ನಿರ್ಮಾಣ ನಮಗೆ ಹೊಸದಲ್ಲ. ಆದರೆ ಎಲ್ಲ ಆಧುನಿಕ ಸಂಶೋಧನೆ, ಜ್ಞಾನದ ವೈವಿದ್ಯ ವನ್ನು ಒಂದೆಡೆ ಸೇರಿಸುವುದು ನಮ್ಮ ವೈಶಿಷ್ಟ್ಯ. ಬೆಂಗಳೂರಿನ ಹೊಸ ಲ್ಯಾಂಡ್ ಮಾರ್ಕ್ ‘ಅಂಬರ ಚುಂಬನ’ 3 ಮುಖಗಳುಳ್ಳ, ಪ್ರತಿದಿನ ಬೇರೆ ಬಣ್ಣ ಪಡೆದುಕೊಳ್ಳುವ ಪ್ರತಿ ಅರ್ದ ಘಂಟೆಗೊಮ್ಮೆ ಮಧುರ ನಿನಾದದೊಂದಿಗೆ ಗಂಟೆ ಬಾರಿಸುತ್ತ ನಾಗರಿಕರಿಗೆ ಸಮಯ ತಿಳಿಸುವ ಈ ಗಡಿಯಾರ ಇಂದು ಬೆಂಗಳೂರಿನ ಹೆಮ್ಮೆ. ಸುತ್ತಲ 3 ಕಿ ಮೀ ವರೆಗೆ ಕೇಳಿಸುವ ಈ ಗಡಿಯಾರದ ಘಂಟಾ ನಿನಾದ ಕಿವಿಗಿಂಪು. ಗಡಿಯಾರದ ನೋಟ ಕಣ್ಣಿಗೆ ತಂಪು.

ಬನಶಂಕರಿ ಸಾರಿಗೆ ಸಂಕೀರ್ಣ:

ಒಂದು ಕಾಲದಲ್ಲಿ ಕಸ ಸುರಿಯುವ ಗುಂಡಿಯಾಗಿದ್ದ, ಕೊಳೆ, ತ್ಯಾಜ್ಯಗಳು, ನಿಂತ ನೀರು, ಗುಂಯ್ ಗುಡುವ ಸೊಳ್ಳೆಗಳ ಆಗರವಾಗಿದ್ದ ತಾಣ ಈಗ ಅತ್ಯಾಧುನಿಕ ಬಸ್ ಟರ್ಮಿನಸ್. ಬನಶಂಕರಿ TTMC ಎಂದೇ ಖ್ಯಾತವಾದ ಈ ಬಸ್ ನಿಲ್ದಾಣ ೩೨.೨೫ ಕೋಟಿ ರೂ ಗಳ ವೆಚ್ಚದಲ್ಲಿ ತಲೆಯೆತ್ತಿ ನಿಂತಿದೆ. ನಮ್ಮ ಇಂಜನೀರಿಂಗ್ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. 18.781 ಚ ಮೀ ವ್ಯಾಪ್ತಿಯ ಈ ಬಸ್ ನಿಲ್ದಾಣ, ಬೆಂಗಳೂರಿನಲ್ಲಿಯೇ ಅತಿ ದೊಡ್ಡ ಬಡಾವಣೆಯನ್ನು, ಇತರ ಭಾಗಗಳೊಂದಿಗೆ ಬೆಸೆವ ಸದಾ ಚಟುವಟಿಕೆಯಿಂದ ಕೂಡಿದ ಸಾರಿಗೆ ಕೇಂದ್ರ.

ಇಸ್ರೋ ಲೇಔಟ್ ಬಸ್ ನಿಲ್ದಾಣ:

ಈ ನಿಲ್ದಾಣ ನಾಡಿನ ಗಗನ ವಿಜ್ಞಾನಿ ಸಮುದಾಯಕ್ಕೆ ಪದ್ಮನಾಭನಗರ ವಿಧಾನಸಭಾಕ್ಷೇತ್ರ ಸಲ್ಲಿಸಿದ ಗೌರವದ ಪ್ರತೀಕ. ನಮ್ಮ ದೇಶದ ಉಪಗ್ರಹ ವಾಹನಗಳ ಪ್ರತಿರೂಪವನ್ನು ಪಡೆದಿರುವ ಈ ಬಸ್ ನಿಲ್ದಾಣ, ತನ್ನ ಸೌಂದರ್ಯಪ್ರಜ್ಞೆ ಮತ್ತು ಆಧುನಿಕ ಸೌಲಭ್ಯಗಳ ಫಲವಾಗಿ ಇಂದು ಬೆಂಗಳೂರಿನ ಪ್ರತಿಷ್ಠಿತ ಬಸ್ ನಿಲ್ದಾಣಗಳಲ್ಲಿ ಒಂದು, ಇಲ್ಲಿ ಬರುವ ಪ್ರಯಾಣಿಕರಿಗೆ ಅತ್ಯುತ್ತಮ ಅನುಭವ ನೀಡುವ ಈ ಬಸ್ ನಿಲ್ದಾಣ ತನ್ನ ಸಮರ್ಥ ಸೇವೆಗಾಗಿ ಖ್ಯಾತ.

ಅಂತರರಾಷ್ಟ್ರೀಯ ಮಟ್ಟದ ಈಜುಕೊಳ:

ಗಣೇಶ ಮಂದಿರ ವಾರ್ಡ್‌ನಲ್ಲಿ ನಿರ್ಮಿಸಲಾಗಿರುವ ಈಜುಕೊಳ, ಬೆಂಗಳೂರಿನಲ್ಲೆ ಏಕೆ ಇಡೀ ದೇಶದಲ್ಲಿಯೇ ಅತ್ಯುತ್ತಮವಾದದ್ದು. 10 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ‘ಸರ್ವಋತು’ ಈಜುಕೊಳ, ಹವ್ಯಾಸಿಗಳಿಗೆ ವೃತ್ತಿಪರ ಈಜುಗಾರರಿಗೆ ಒದಗಿಸುವ ಸೌಲಭ್ಯ ಅತ್ಯಂತ ಉನ್ನತ ಗುಣಮಟ್ಟದ್ದು, ಅಂತರರಾಷ್ಟ್ರೀಯ ಮಟ್ಟದ ಈಜುಕೊಳ ಹೊಂದಿದ ಹೆಮ್ಮೆ ಈಗ ಪದ್ಮನಾಭನಗರ ವಿಧಾನಸಭಾಕ್ಷೇತ್ರದ್ದು.

ಪಾರ್ಕ್/ ಆಟದ ಮೈದಾನ:

ಪ್ರತಿ ಉದ್ಯಾನವನವೂ ಬಹೂಪಯೋಗಿ ಆಗಬೇಕು ವಿಶೇಷವಾಗಿ ಮಕ್ಕಳ ಆಟಪಾಟಗಳಿಗೆ ಪ್ರಶಸ್ತವಾಗಿರಬೇಕು ಎನ್ನುವ ಶ್ರೀ ಅಶೋಕ ರವರ ದೃಷ್ಟಿಕೋನ ಈಗ ಫಲ ನೀಡಿದೆ. ಇಲ್ಲಿನ ಉದ್ಯಾನವನಗಳು ಮಕ್ಕಳಿಗೆ, ವೃದ್ದರಿಗೆ, ವ್ಯಾಯಮ ನಿರತರಿಗೆ, ಕ್ರೀಡಾಸಕ್ತರಿಗೆ, ಎಲ್ಲರಿಗೂ ಅಚ್ಚುಮೆಚ್ಚು.

ರಸ್ತೆ ನಿರ್ಮಾಣ:

ರಸ್ತೆಗಳು ಸಮಾಜದ ಸ್ಥಿತಿಯನ್ನು ಬಿಂಬಿಸುತ್ತದೆ ಎನ್ನುವುದೊಂದು ಮಾತು. ಪದ್ಮನಾಭನಗರ ಕ್ಷೇತ್ರದಲ್ಲಿ ಸಜ್ಜುಗೊಂಡ ರಸ್ತೆಗಳು. ಒಳಚರಂಡಿ ವ್ಯವಸ್ತೆ. ನಮ್ಮ ಕ್ಷೇತ್ರ ಕಂಡಿರುವ ಅದ್ಭುತ ಪ್ರಗತಿಯನ್ನು ಸಾರಿ ಹೇಳುತ್ತಿವೆ.

ನೀರು ಸರಬರಾಜು ಯೋಜನೆ:

ಪದ್ಮನಾಭನಗರ ವಿಧಾನ ಸಭಾಕ್ಷೇತ್ರದ ಜನರೆಂದೂ ಕುಡಿಯುವ ನೀರಿನ ಸಮಸೈಯಿಂದ ಬಳಲಿಲ್ಲ. ಇದಕ್ಕೆ ಕಾರಣ ಮುಂದಾಲೋಚನೆ ವಹಿಸಿ ಕೈಗೊಂಡ ಕುಡಿಯುವ ನೀರಿನ ಯೋಜನೆಗಳು. ಹಳೆಯ ಮತ್ತು ಚಿಕ್ಕ ವ್ಯಾಸದ ಕೊಳವೆಗಳನ್ನು ಬದಲಾಯಿಸಿ ಹೆಚ್ಚಿನ ವ್ಯಾಸದ ಕೊಳವೆಗಳ ಅಳವಡಿಕೆ, ನೀರಿನ ಟ್ಯಾಂಕಗಳ ನಿರ್ಮಾಣ, ಟ್ಯಾಂಕರುಗಳ ನೀರು ಪೂರೈಕೆ, ಹಾಗೂ ಇತರ ದೂರದೃಷ್ಟಿಯ ಯೋಜನೆಗಳನ್ನು ಈ ಮೂಲಕ ಕ್ಷೇತ್ರದಲ್ಲಿ ಕೈಗೊಳ್ಳಲಾಗಿದೆ.

ರೇಷನ್ ಕಾರ್ಡ್ ವಿತರಣೆ:

ಮಾನವೀಯ ಅನುಕಂಪ ಮತ್ತು ಅವಕಾಶ ವಂಚಿತರಿಗೆ ಸದಾವಕಾಶಗಳನ್ನು ಒದಗಿಸುವುದು ಯಾವುದೇ ಆಡಳಿತಗಾರನ ಹೋಣೆಯಾಗಬೇಕು ಎನ್ನುವುದು ಶ್ರೀ ಆಶೋಕ ರವರ ಅಭಿಪ್ರಾಯ, ಹಾಗಾಗಿಯೇ ಪದ್ಮನಾಭನಗರ ಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಕಾರ್ಯ ಗಳಿಗೆ ಪ್ರಥಮಾದ್ಯತೆ.


ಪ್ರಶಳುಸ್ತಿ/ಪುರಸ್ಕಾರಗ

ವಿದುನ್ಮಾನ ಟಿಕೇಟ್ ಯಂತ್ರಗಳನ್ನು ಶೇಕಡ 100 ರಷ್ಟು ಬಳಕೆ ಮಾಡಿ ಆದಾಯ ಸೋರಿಕೆಯಲ್ಲಿ ಕಡಿತ ಹಾಗೂ ಟಿಕೇಟ್ ವ್ಯವಸ್ಥೆಯಲ್ಲಿ ಸಂಪೂರ್ಣ ಭದ್ರತೆ ಹಾಗೂ ನಿರ್ವಹಣೆಗಾಗಿ ‘ಶ್ರೇಷ್ಠತೆಯ ಪ್ರಶಸ್ತಿ-2008’.

ವಿದ್ಯುನ್ಮಾನ ಚಾಲಕ ಪರೀಕ್ಷಾ ವ್ಯವಸ್ಥೆಯ ಪದ್ಧತಿಯ ಮೂಲಕ ಪ್ರತಿಶತಃ ಪಾರದರ್ಶಕತೆಯಿಂದ ಚಾಲಕರ ನೇಮಕಾತಿಗಾಗಿ ‘ಶ್ರೇಷ್ಠತೆಯ ಪ್ರಶಸ್ತಿ-2009’,

ಸಾರ್ವಜನಿಕ ರಂಗದಲ್ಲಿ ಅತ್ಯುತ್ತಮ ಮಾಹಿತಿ ತಂತ್ರಜ್ಞಾನ ಅನುಷ್ಠಾನಕ್ಕಾಗಿ ಭಾರತ ಸರ್ಕಾರದ ‘ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ’-2009,

ಸಾರ್ವಜನಿಕ ಉದ್ದಿಮೆ ವಲಯದಲ್ಲಿ ಅತ್ಯುತ್ತಮ ಸಾಧನೆಗಾಗಿ ಕರ್ನಾಟಕ ಸರ್ಕಾರದ ‘ಮುಖ್ಯಮಂತ್ರಿಗಳ ರತ್ನ ಪ್ರಶಸ್ತಿ’,ಹಾಗು ಮುಂತಾದ ಪ್ರಶಸ್ತಿ ದೊರಕಿವೆ.

  1. [೧]
  2. [೨]