ಸದಸ್ಯ:Sagarika Prakash

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಪ್ರಾಥಮಿಕ ಪರಿಚಯ[ಬದಲಾಯಿಸಿ]

ನನ್ನ ಹೆಸರು ಸಾಗರಿಕಾ, ಅದು ನನ್ನ ತಂದೆ ತಾಯಿ ನನಗಿಟ್ಟ ಹೆಸರು. ನನ್ನ ತಾಯಿ ಈ ಹೆಸರನ್ನೇ ಇಡಬೇಕೆಂದು ಬಹಳ ವರ್ಷಗಳಿಂದ ಯೋಚಿ

ಚಿಕ್ಕಮಗಳೂರಿನ ಜೀವನ[ಬದಲಾಯಿಸಿ]

ಚಿಕ್ಕಮಗಳೂರಿನ ಒಂದು ಅದ್ಭುತವಾದ ದೃಶ್ಯ.
ನನ್ನೂರು ಚಿಕ್ಕಮಗಳೂರು, ಆದರೆ ಚಿಕ್ಕಮಗಳೂರಿನಿಂದ ೪೦ ಕಿ.ಮೀ. ದೂರದಲ್ಲಿ ಮುತ್ತೋಡಿ ಕಾಡಿನ ಸಮೀಪದಲ್ಲಿರುವ ಗಾಳಿಗುಡ್ಡ ನನ್ನೂರ ಹೆಸರು. ಸುತ್ತಲು ಕಾಫಿ ತೋಟ, ಅಡಕೆ, ಮೆಣಸು ಮರಗಳ ಮಧ್ಯದಲ್ಲಿ ನನ್ನ ಮನೆ ಇದೆ. ಅಲ್ಲಿಗೆ ಹೋಗುವುದೆಂದರೆ ನನಗೆ ಬಹಳ ಇಷ್ಟ, ಕಾರಣ ಅತ್ಯಂತ ನಿಶಬ್ಧತೆಯಿಂದ ಕೂಡಿರುವ ಆ ಜಾಗದಲ್ಲಿ ಮನಸ್ಸು ಬಹಳ ಶಾಂತವಾಗಿರುತ್ತದೆ.ನಾನು ಚಿಕ್ಕ೦ದಿನಿ೦ದಲೇ ಮನಯಿ೦ದ ದೂರವಿದ್ದು ಬೆಳೆದೆ,ಮೂರು ವಷರ್ಗಳ ನ೦ತರ ಹಾಸನದಲ್ಲಿ ನನ್ನಜ್ಜಿ ಮನೆಯಲ್ಲಿ ಬೆಳೆದೆ, ಹಾಗಾಗಿ ನನ್ನ ಮನೆಗೆ ಹೋಗುವುದೆ೦ದರೆ ನನಗೆ ಎಲ್ಲಿಲ್ಲದ ಖುಷಿ. ಚಿಕ್ಕವಳಿದ್ದಾಗ ನಾನು ಬಹಳ ಮಾತನಾಡುತ್ತಿದ್ದೆ ಎ೦ದು ಅಮ್ಮ ಹೇಳುತ್ತಿರುತ್ತಾಳೆ.ವಷರ್ ಗಳು ಕಳೆದ೦ತೆ ಮಾತು ಕಡಿಮೆಯಾಗುತ್ತಾ

ಬ೦ತು.

ವಿದ್ಯಾಭ್ಯಾಸ[ಬದಲಾಯಿಸಿ]

ಕಾಲೇಜು

ಚಿಕ್ಕಮಗಳೂರಿನಲ್ಲಿ ಓದುತ್ತಿದ್ದ ನಾನು ಹೈಸ್ಕೂಲಿಗೆ ಬೆ೦ಗಳೂರಿಗೆ ಬ೦ದೆ ಎಸ್.ಎಫ಼್.ಎಕ್ಸ್.(S.F.X) ಬೋರ್ಡಿಂಗ್ ಶಾಲೆ ನನಗೆ ಒಂದು ತಿರುವನ್ನೆ ನೀಡಿತು. ಬಹಳ ಸ್ವಾವಲಂಭಿಯಾಗಿ ಧೈರ್ಯವಾಗಿ ಬದುಕುವುದನ್ನು ನಾನು ಅಲ್ಲಿಂದ ಕಲಿತುಕೊಂಡೆ ಜೊತೆಗೆ ಸಾಕಷ್ಟು ಶಿಸ್ತು, ಸಂಯಮಗಳು ನನ್ನೊಳಗೆ ಮನೆ ಮಾಡಿದವು. ನಂತರದ ದಿನಗಳಲ್ಲಿ ಮೌಂಟ್ ಕಾರ್ಮೆಲ್ ಕಾಲೇಜಿಗೆ(Mount Carmel College) ಸೇರಿದಾಗ ಬೇರೆಯದೆ ಜೀವನ ಶೈಲಿ. ಪಿ.ಜಿ.ಯಲ್ಲಿ ಉಳಿದುಕೊಂಡಿದ್ದ ನನಗೆ ಸಹಗೆಳತಿಯರೊಂದಿಗೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟವೆ ಆಯಿತು.

ಬೆಳವಣಿಗೆ[ಬದಲಾಯಿಸಿ]

ಸ್ವಲ್ಪ ಸ್ವಾತಂತ್ರದ ಬದುಕು, ಹಣವನ್ನು ಹೇಗೆ ಸರಿಯಾಗಿ ಖರ್ಚು ಮಾಡಬೇಕೆಂದು ಕಲಿಸಿತು. ಕೆಲವೊಮ್ಮೆ ಸ್ವಲ್ಪ ಏರುಪೇರಾದಗ ಬುದ್ಧಿಯನ್ನು ಕಲಿತಿದ್ದೇನೆ. ಕಾಲೇಜಿನ ಬದುಕಿನ ಬಣ್ಣದ ದಿನಗಳಲ್ಲಿ ನನಗೆ ಕಂಡಿದ್ದು ಬೆಂಗಳೂರಿನಂತಹ ದೊಡ್ಡ ಪಟ್ಟಣದಲ್ಲಿಯೂ ಯಾವುದೋ ಮೂಲೆಯಲ್ಲಿ ಸರಿಯಾದ ಆಶ್ರಯವಿಲ್ಲದೆ ಓದು ಬರಹ ತಿಳಿಯದೆ ಬೆಳೆಯುತ್ತಿದ್ದ ಮಕ್ಕಳ ಒಂದು ಎನ್.ಜಿ.ಒ. ಸಂಸ್ಥೆ. ಆ ಸಂಸ್ಥೆಯ ಉದ್ದೇಶಗಳು ನನಗೆ ಹೊಸ ದೃಷ್ಟಿಯನ್ನು ನೀಡಿತು.ಆ ಮಕ್ಕಳ ವಿದ್ಯಾಭ್ಯಸಕ್ಕಾಗಿ ವಾರದ ಕೆಲವು ಗ೦ಟೆಗಳನ್ನು ಮೀಸಲಿಟ್ಟೆ.ಆ ಮಕ್ಕಳಿಗೆ ಪಾಠ ಹೇಳಿಕೂಡುವುದು ನನಗೆ ಸ೦ತೋಷತರುತ್ತಿತ್ತು.ಸಮಾಜದಲ್ಲಿ ಹಿ೦ದುಳಿದ ಹಾಗೂ ಅವಕಾಶದಿ೦ದ ವ೦ಚಿತರಾದವರಿಗೆ ನಮ್ಮ ಕೈಲಾದ ಸಹಾಯ ಮಾಡುವುದು ನಮ್ಮ ಕರ್ತವ್ಯವು ಆಗಿದೆ. ನಮ್ಮಂತ ಯುವ ಜನತೆ ಈ ಕಾರ್ಯಕ್ಕೆ ಮುಂದಾಗಬೇಕು. ಓದು, ಸ್ನೇಹಿತರು, ಪರಿಸರ ಎಲ್ಲದರೊಂದಿನ ಸಹಬಾಳ್ವೆ ಮನುಷ್ಯನಿಗೆ ಅತ್ಯಂತ ಮುಖ್ಯ. ಈಗ ನಾನು ಡಿಗ್ರಿ ತರಗತಿಯಲ್ಲಿ ಓದುತ್ತಿದ್ದೇನೆ. ಮೊದಲಿಗಿಂತ ಈಗ ಜಾವಬ್ದಾರಿಗಳು ಹೆಚ್ಚಿವೆ. ನನ್ನ ಮುಂದಿನ ಗುರಿ ಸ್ಪಷ್ಟವಾಗಿದೆ. ಅದರ ಕಡೆಗೆ ಹೆಚ್ಚಿನ ಗಮನ. ಮನೆ, ತಂದೆ-ತಾಯಿ, ತಂಗಿ ಸ್ನೇಹಿತರು ಎಲ್ಲಾರೊಂದಿಗಿನ ಬಾಂಧವ್ಯ ಇನ್ನಷ್ಟು ಬೆಳಗೊಂಡಿದೆ. ನಾನು ನನ್ನ ಸಮಾಜ ಹಾಗೂ ನನ್ನ ದೇಶದ ಉನ್ನತಿಗೆ ಏನಾದರೂ ಮಾಡಬೇಕೆಂಬ ಆಶಯವನ್ನು ಹೊಂದಿದ್ದೇನೆ.

ಉಲ್ಲೇಖಗಳು[ಬದಲಾಯಿಸಿ]

೧. ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ (December 8, 2015). "ಜನಸಂಖ್ಯೆ accessdate December 8, 2015". 

೨.ಜಿಲ್ಲಾಡಳಿತದ, ಚಿಕ್ಕಮಗಳೂರು. ಕಾಫಿ ಮಂಡಳಿ ೨ ಹೇಳಿಕೆ:ವರದಿಕಾಫಿ ಇಳುವರಿ ಶೇ 8ರಷ್ಟು ಕುಸಿತ ಸಾಧ್ಯತೆ:18/07/2016:prajavani.

೩.ವಿಜಯಾ ಬಿ. ಪುಣೆಕರ್ accessdate 2007-10-04. "Assimilation: A Study of North Indians in Bangalore".