ಸದಸ್ಯ:Ruben joushuva/ನನ್ನ ಪ್ರಯೋಗಪುಟ
https://commons.wikimedia.org/wiki/
ಜಬಾಂಗ್
ಇತಿಹಾಸ[ಬದಲಾಯಿಸಿ]
ಈ ಜಬಾಂಗ್ ಎಂಬ ಅಂತಜಾಲ ವೆಬ್ ಸೈಟ್ ನ್ನು ಸ್ಥಾಪನೆ ಮಾಡಿದವರು ಅರುಣ್ ಚಂದ್ರಮೋಹನ್, ಪ್ರವೀಣ್ ಸಿನ್ಹ ಮತ್ತು ಲಕ್ಷ್ಮಿ ಪೋಟ್ಲೋರಿ. ಮಾಚ್ ೨೦೧೩ ರಲ್ಲಿ ಜಬಾಂಗ್ ೬,೦೦೦ ಇಂದ ೭,೦೦೦ ಗಳಷ್ಟು ವಸ್ತುಗಳನ್ನು ಒಂದು ದಿನಕ್ಕೆ ವಹಿವಾಟು ಮಾಡುತ್ತಿತ್ತು. ೨೦೧೨ ರಲ್ಲಿ ಒಬ್ಬ ಅಥಶಾಸ್ತ್ರಜ್ಞರ ಪ್ರಕಾರ ಈ ವೆಬ್ ಸೈಟ್ ಜಾಲ ಅಮೇರಿಕಾದ ಡಾಲರ್ ಪ್ರಕಾರ $೧೦೦ ರಿಂದ $೧೫೦ ಮಿಲಿಯನ್ ನಷ್ಟು ವಸ್ತುಗಳನ್ನು ಮಾರಾಟ ಮಾಡಿದೆ. ಜಬಾಂಗ್ ವೆಬ್ ಸೈಟ್ " ಗ್ರೇಟ್ ಆನ್ ಲೈನ್ ಶಾಪಿಂಗ್ ಫೆಸ್ಟಿವಲ್ ೨೦೧೩" ರಲ್ಲಿ ಈ ವಾಣಿಜ್ಯವು ಬಹಳ ಪ್ರಾಮುಖ್ಯತೆಯನ್ನು ಪಡೆದಿತ್ತು.
ರೇಖಾ ಕೃತಿ[ಬದಲಾಯಿಸಿ]
ಜಬಾಂಗ್ ವೆಬ್ ಸೈಟ್, ಶ್ಯೂಸ್, ಉಡುಪುಗಳು, ಎಲ್ಲಾ ತರಹದ ಉಪಕರಣಗಳು, ಮನೆಯ ಅಲಂಕಾರಿಕ ವಸ್ತುಗಳು ಹಾಗೂ ಪೀಠೋಪಕರಣಗಳನ್ನು ಈ ವೆಬ್ ಸೈಟ್ ನಲ್ಲಿ ಮಾರಾಟ ಮಾಡಲಾಗುತ್ತದೆ. ಈ ಅಂಗಡಿ ಪ್ರಸ್ತುತವಾಗಿ ವ್ಯಾಪಾರದ ಗುರುತು ಹೊಂದಿರುವ ಸಾವಿರ ವಸ್ತುಗಳನ್ನು ಹಾಗೂ ತೊಂಬತ್ತು ಸಾವಿರ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದ. ಉದಾ: ವೀರೇಂದ್ರ ಸೆಹ್ವಾಗ್ ರವರ (VS319) ಗುರುತಿನ ಕ್ರಿಕೇಟ್ ಬ್ಯಾಟ್ ವಿಶೇಷವಾಗಿ ಈ ವೆಬ್ ಸೈಟ್ ಮುಖಾಂತರ ಮಾರಾಟವಾದವು.
ಅಂತರಾಷ್ಟೀಯ ಮಟ್ಟದ ಬ್ರಾಂಡ್ ಗಳಾದ ಡೊರೊಥಿ ಪೆಕಿನ್, ಮಿಸ್ ಸೆಲ್ಪ್ ಫ್ರಿಡ್ಜ್ ಹಾಗೂ ರಿವರ್ ಐಲೆಂಡ್ ಜೊತೆಗೆ ದಿ ಸ್ಪ್ಯಾನಿಶ್ ಬ್ರಾಂಡ್ ಮ್ಯಾಂಗೊ ಎಂಬ ಮುಂತಾದ ವಸ್ತುಗಳನ್ನು ಮಾರಾಟ ಮಾಡಲಾಯಿತು. ಈ ವೆಬ್ ಸೈಟ್ ಜಾಕ್ ಮತ್ತು ಜೋನ್ಸ್ ಎಂಬ ಬ್ರಾಂಡ್ ಜೊತೆಗೆ ಪಾಲುಗಾರರಾದರು. ಮೇ ೨೦೧೪ ರಲ್ಲಿ ಜಬಾಂಗ್ ಎನ್.ಬಿ.ಎ ಜೊತೆ ಸೇರಿ ಅಧಿಕೃತ ಎನ್.ಬಿ.ಎ ಆನ್ ಲೈನ್ ಸ್ಟೋರ್ ಗಳನ್ನು ಸ್ಥಾಪಿಸಿದರು.
ವ್ಯಾಪಾರ ಮಾದರಿಗಳು[ಬದಲಾಯಿಸಿ]
ಈ ವೆಬ್ ಸೈಟ್ ಎರೆಡು ರೀತಿಯ ಮಾದರಿಗಳನ್ನು ವ್ಯಾಪಾರ ಮಾಡುತ್ತದೆ. ಅವುಗಳೆಂದರೆ ದಾಸ್ತಾನು ಮಾದರಿ ಹಾಗೂ ನಿವಹಣ ಮಾದರಿ. ಈ ವೆಬ್ ಸೈಟ್ ಅನೇಕ ವಸ್ತುಗಳನ್ನು ಮೊದಲು ತಮ್ಮ ಮಳಿಗೆಯಲ್ಲಿ ದಾಸ್ತಾನು ಮಾಡಿಕೊಂಡು ನಂತರ ಅದನ್ನು ಮಾರುಕಟ್ಟೆಯಲ್ಲಿ ಸರಿಯಾದ ಸಮಯಕ್ಕೆ ಮಾರಾಟ ಮಾಡಲಾಗುತ್ತದೆ.
ಮಾರುಕಟ್ಟೆಯ ಕಾಯಾಚರಣೆ[ಬದಲಾಯಿಸಿ]
೧) ಸ್ಪಧಾ೯ತ್ಮಕವಾಗಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಾರಾಟದ ಉದ್ದೇಶದಿಂದ ಯಾವಾಗಲು ಡಿಜಿಟಲ್ ಮಾಧ್ಯಮದಲ್ಲಿ ಕಾಯ೯ನಿರತವಾಗಿರುತ್ತದೆ. ೨) ೨೦೧೪ ರಲ್ಲಿ " ದ ಜ್ಯೂಸ್ " ಎಂಬ ಮಾಸಿಕ ಪತ್ರಿಕೆಯನ್ನು ಬಿಡುಗಡೆ ಮಾಡಿತು ಅದರಲ್ಲಿ ಫ್ಯಾಷನ್, ಸೌಂದಯ೯, ಜನತೆಯ ಪ್ರವೃತ್ತಿಗಳನ್ನು, ಪ್ರಯಾಣ ಹಾಗೂ, ಪಾಪ್ ಸಂಸ್ಕೃತಿಯ ಬಗೆಗೆ ವಿವರಣೆ ದೊರೆಯುತ್ತದೆ.
ಪಾಲುದಾರರು[ಬದಲಾಯಿಸಿ]
೧) ೨೦೧೪ ರಲ್ಲಿ ಹಂಪಿ ಶಮಾ೯ ಕಿ ದುಲ್ಹಾನಿಯವರೊಂದಿಗೆ ಪಾಲುದಾರರಾದರು ೨) ೨೦೧೬ ರಲ್ಲಿ ಮಿಂತ್ರರಾರವರ ಜಬಾಂಗ್ ಅನ್ನು ತಮ್ಮ ಸ್ವಾಧೀನಪಡಿಸಿಕೊಂಡರು.
ಅಂತರರಾಷ್ಟೀಯ ಮಳಿಗೆಗಳು[ಬದಲಾಯಿಸಿ]
ಈ ಜಬಾಂಗ್ ಅಂತರಾಷ್ಟೀಯ ಮಟ್ಟದಲ್ಲಿ ಒಂದು ವೆಬ್ ಸೈಟ್ ಉಂಟುಮಾಡಿದೆ. (ಜಬಾಂಗ್ ವಲ್ಡ್.ಕಾಮ್) ಆ ವೆಬ್ ಸೈಟ್ ಮುಖಾಂತರ ಈ ದೇಶಗಳು ಅಂದರೆ ಯು,ಎಸ್,ಎ. ಮಲೇಷಿಯಾ ಮುಂತಾದ ದೇಶಗಳು ವ್ಯಾಪಾರ ನಡೆಸುತ್ತಿದೆ.
ಪ್ರಶಸ್ತಿ ಹಾಗೂ ಸನ್ಮಾನಗಳು[ಬದಲಾಯಿಸಿ]
ಭಾರತೀಯ ಅಧ್ಯಯನ ದಿ ಬ್ರಾಂಡ್ ಟ್ರಸ್ಟ್ ರಿಪೋಟ್೯ ೨೦೧೩ ಈ ಟ್ರಸ್ಟ್ ರಿಸಚ್೯ ಅಡ್ವೈಸರ್ ರವರ ಪ್ರಕಾರ ಈ ಜಬಾಂಗ್ ವೆಬ್ ಸೈಟ್ ಭಾರತದ ಉನ್ನತ ೨೫ ಆನ್ ಲೈನ್ ಬ್ರಾಂಡ್ ಗಳಲ್ಲಿ ಇದು ಒಂದು ಎಂದು ಮಹತ್ವ ಪಡೆದುಕೊಂಡಿದೆ.
ಉಲ್ಲೇಖಗಳು[ಬದಲಾಯಿಸಿ]
http://blogs.wsj.com/moneybeat/2013/07/10/indian-online-retailer-flipkart-raises-200-million/ https://commons.wikimedia.org/wiki/Category:Shopping_malls_in_Slovakia http://articles.timesofindia.indiatimes.com/2011-11-15/services-apps/30400898_1_indian-e-commerce-market-groupon-internet-sales/