ಸದಸ್ಯ:Rakshith Gowda 7/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Richard Feynman
Richard Feynman ID badge
ಜನನರಿಚರ್ಡ್ ಫಿಲಿಪ್ಸ್ ಫೇನ್ಮನ್
(೧೯೧೮-೦೫-೧೧)೧೧ ಮೇ ೧೯೧೮
ಕ್ವೀನ್ಸ್, ನ್ಯೂಯೋರ್ಕ್, ಅಮೇರಿಕ
ಮರಣFebruary 15, 1988(1988-02-15) (aged 69)
ಲೋಸ್ ಏಂಜೆಲಸ್, ಕ್ಯಾಲಿಫೋರ್ನಿಯ, ಅಮೇರಿಕ
ಮಹಾಪ್ರಬಂಧದ ಪ್ರಿನ್ಸಿಪಲ್ ಆಫ್ ಲೀಸ್ಟ್ ಆಕ್ಶನ್ ಇನ್ ಕ್ವಾಂಟಮ್ ಮೆಕಾನಿಕ್ಸ್ (1942)
ಡಾಕ್ಟರೇಟ್ ಸಲಹೆಗಾರರುಜಾನ್ ಅರ್ಚಿಬಾಲ್ಡ್ ವೀಲರ್
ಡಾಕ್ಟರೇಟ್ ವಿದ್ಯಾರ್ಥಿಗಳು
ಹಸ್ತಾಕ್ಷರ



ರಿಚರ್ಡ್ ಫೇನ್ಮನ್[ಬದಲಾಯಿಸಿ]

ರಿಚರ್ಡ್ ಫಿಲಿಪ್ಸ್ ಫೇನ್ಮನ್ (ಮೇ ೧೧, ೧೯೧೮-ಫೆಬ್ರುವರಿ ೧೫, ೧೯೮೮) ಒಬ್ಬ ಅಮೇರಿಕದ ಸೈದ್ಧಾಂತಿಕ ಭೌತಶಾಸ್ತ್ರಜ್ಞ.ಫೇನ್ಮನ್ ಅಣು ಸಿದ್ಧಾಂತದ ಮಾರ್ಗ ಅವಿಭಾಜ್ಯ ಸೂತ್ರೀಕರಣ ಕಂಡುಹಿಡಿದರು.ಅಣು ವಿದ್ಯುತ್ ಸಕ್ರಿಯಾತ್ಮಕ ಸಿದ್ಧಾಂತ,ಅತಿ ಶೀತಲ ಹೀಲಿಯಂನ ವಿಶಿಷ್ಟವಾದ ಅಸ್ಥಿರತೆ ಹಾಗು ಅಣು ಭೌತಶಾಸ್ತ್ರ ಕ್ಷೇತ್ರದಲ್ಲೂ ಅಲವು ಸಾಧನೆ ಮಡಿರುವ ಫೇನ್ಮನ್ ಪಾರ್ಟನ್ ಮಾದರಿ ಯನ್ನು ಪ್ರಸ್ತಾಪಿಸಿದ್ದಾರೆ. ಭೌತಶಾಸ್ತ್ರದ ಅವರ ಅಪಾರ ಕೊಡುಗೆಯನ್ನು ಪರಿಗಣಿಸಿ ೧೯೬೫ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಫೇನ್ಮನ್ ಉಪ ಅಣುಗಳ ನಡವಳಿಕೆಯನ್ನು ನಿಯಂತ್ರಿಸುವ ಗಣಿತದ ಸೂತ್ರಗಳಿಗಾಗಿ ವ್ಯಾಪಕವಾಗಿ ಬಳಸಿದ ಚಿತ್ರಾತ್ಮಕ ನಿರೂಪಣ ಮಾದರಿಯನ್ನು ಅಭಿವೃದ್ಧಿಪಡಿಸಿದರು, ಮುಂದೆ ಇದನ್ನು ಫೇನ್ಮನ್ ರೇಖಾಚಿತ್ರಗಳು ಎಂದು ಕರೆಯಲಾಯಿತು. ಅವರು ಎರಡನೇ ವಿಶ್ವ ಸಮರದ ಸಮಯದಲ್ಲಿ ಪರಮಾಣು ಮದ್ದಿನ ಅಭಿವೃದ್ಧಿಯಲ್ಲಿ ನೆರವಾದರು. ೧೯೮೦ರ ದಶಕದಲ್ಲಿ ಚಾಲೆಂಜರ್ ಬಾಹ್ಯಾಕಾಶ ನೌಕೆಯ ದುರಂತದ ತನಿಖೆ ನಡೆಸಿದ ರೋಜರ್ಸ್ ಆಯೋಗದ ಸದಸ್ಯರಾಗಿ ಸಾರ್ವಜನಿಕರಿಗೆ ಹೆಸರುವಾಸಿಯಾದರು. ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ನ್ಯಾನೊತಂತ್ರಜ್ಞಾನಗಳ ಪರಿಕಲ್ಪನೆಯನ್ನು ಪರಿಚಯಿಸಿದ ಕೀರ್ತಿ ಫೇನ್ಮನ್ ಗೆ ಸಲ್ಲುತ್ತದೆ. ಅವರು ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿದ್ದರು.

ಬಾಲ್ಯ ಮತ್ತು ಜೀವನ[ಬದಲಾಯಿಸಿ]

ರಿಚರ್ಡ್ ಫಿಲಿಪ್ಸ್ ಫೇನ್ಮನ್ ಮೇ ೧೧ ೧೯೧೮ ರಲ್ಲಿ ನ್ಯೂಯೋರ್ಕ್ಕ್ವೀನ್ಸ್ನಲ್ಲಿ ಜನಿಸಿದರು.ಅವರ ತಂದೆ ಆರ್ತರ್ ಫೇನ್ಮನ್ ಒಬ್ಬ ಮಾರಾಟ ನಿರ್ವಾಹಕರಾಗಿದ್ದರು ಮತ್ತು ತಾಯಿ ಲೂಸಿಲ್ ನೀ ಫಿಲಿಪ್ಸ್. ಫೇನ್ಮನ್ ಒಬ್ಬ ನಾಸ್ತಿಕರಾಗಿದ್ದರು. ಜನಾಂಗೀಯತೆಯ ವಿರೋಧಿಸುತ್ತಿದ್ದರು.ಫೇನ್ಮನ್ ಸಾಂಬಾ ಸಂಗೀತದಿಂದ ಬಹಳ ಪ್ರಭಾವಿತನಾಗಿದ್ದರು.ತಮ್ಮ ಬಿಡುವಿನ ಸಮಯದಲ್ಲಿ ಸಾಂಬಾ ನುಡಿಸುತ್ತಿದ್ದರು. ಮತ್ತು ಫ್ರಿಗಿಡಿರಾ ಲೋಹದ ತಾಳವಾದ್ಯ ಉಪಕರಣವನ್ನು ನುಡಿಸಲು ಕಲಿತಿದ್ದರು.

ಶಿಕ್ಷಣ ಮತ್ತು ವೃತ್ತಿ[ಬದಲಾಯಿಸಿ]

ಫೇನ್ಮನ್ ಹದಿನೈದನೇ ವಯಸ್ಸಿಗೆ ತ್ರಿಕೋನಮಿತಿ,ಅನಂತ ಶ್ರೇಣಿ,ಬೀಜಗಣಿತ,ಡಿಫೆರೆನ್ಸಿಯಲ್ ಕ್ಯಾಲ್ಕುಲಸ್ ಮತ್ತು ಇನ್ಟೆಗ್ರಲ್ ಕ್ಯಾಲ್ಕುಲಸ್ ಸ್ವತಃ ಕಲಿತಿದ್ದರು.ಅವರು ೧೯೩೯ರಲ್ಲಿ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿ.ಎಸ್.ಸಿ ಅಧ್ಯಯನ ಮಾಡಿದರು ಮತ್ತು ೧೯೪೨ರಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಅವರು ತಮ್ಮ ಪಿಎಚ್ಡಿ ಪಡೆದರು. ಪ್ರೊಫೆಸರ್ ಫೆನ್ಮನ್ ಅಮೇರಿಕನ್ ಫಿಸಿಕಲ್ ಸೊಸೈಟಿಯ ಸದಸ್ಯರಾಗಿದ್ದರು, ಅಮೇರಿಕನ್ ಅಸೋಸಿಯೇಶನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್; ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಮತ್ತು ೧೯೬೫ ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿಯ ವಿದೇಶಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಮೊದಲು ಸಾಪೇಕ್ಷತಾ ಕ್ವಾಂಟಮ್ ಮೆಕಾನಿಕ್ಸ್ನ ಗಣಿತದ ಲೆಕ್ಕಗಳ ಉತ್ತರ ಕಂಡುಹಿಡಿಯುವುದು ವಿಜ್ನಾನಿಗಳಿಗೆ ಬಹಳ ಕಷ್ಟವಾಗಿ ಕಂಡುಬರುತ್ತಿತ್ತು.ಫೇನ್ಮನ್ ಅವರು ಫೇನ್ಮನ್ ರೇಖಾಚಿತ್ರ ಎಂಬ ತತ್ವವನ್ನು ರೂಪಿಸಿದ್ದರು.ಇದರಿಂದ ಸಾಮಾನ್ಯ ವಿಜ್ನಾನಿಗಳೂ ಕ್ವಾಂಟಮ್ ಮೆಕಾನಿಕ್ಸ್ ನ ಕಷ್ಟಕರ ಲೆಕ್ಕಗಳನ್ನೂ ಬಿಡಿಸಲು ಸಾಧ್ಯವಾಯಿತು. ಕ್ವಾಂಟಮ್ ಎಲೆಕ್ಟ್ರೋಡೈನಾಮಿಕ್ಸ್ ವಿದ್ಯುತ್ಕಾಂತೀಯ ಪರಸ್ಪರ ಕ್ರಿಯೆಗಳ ಸ್ಥಿರ ಸಾಪೇಕ್ಷತಾ ಸಿದ್ಧಾಂತವನ್ನು ಪಾಲಿಸುತ್ತವೆಂದು ತೋರಿಸಿಕೊಟ್ಟರು.ಅವರ ಈ ಸಾಧನೆಗೆ ೧೯೬೫ ರಲ್ಲಿ ಶ್ವಿಂಗೆರ್ ಮತ್ತು ಟೊಮಾಂಗ ಎಂಬ ಸಹ ವಿಜ್ನಾನಿಗೊಳೊಂದಿಗೆ ನೊಬೆಲ್ ಪ್ರಶಸ್ತಿ ಲಭಿಸಿತ್ತು. ಅಮೇರಿಕದ ಅಣುಬಾಂಬ್ ಯೋಜನೆ ಮ್ಯಾನ್ಹ್ಯಾಟನ್ ಪ್ರೋಜೆಕ್ಟ್ನಲ್ಲಿ ಪಾಲ್ಗೊಂಡಿದ್ದ ಫೇನ್ಮನ್ ಹಿರೋಶಿಮ ಮತ್ತು ನಾಗಸಾಕಿ ದುರಂತದ ನಂತರ ಅಣುಶಕ್ತಿಯ ಉಪಯೋಗದ ಬಗೆಗಿನ ತಮ್ಮ ಅಭಿಪ್ರಾಯ ಬದಲಿಸಿದ್ದರು. ಪರಮಾಣು ಶಕ್ತಿಯ ಶಾಂತಿಯುತ ಬಳಕೆಯನ್ನು ಪ್ರಚೋದಿಸಿದರು.

ನ್ಯಾನೋ ತಂತ್ರಜ್ಞಾನ[ಬದಲಾಯಿಸಿ]

ಡಿಸೆಂಬರ್ ೨೯, ೧೯೫೯ ರಂದು ಕ್ಯಾಲ್ಟೆಕ್ನಲ್ಲಿ ನಡೆದ ಅಮೇರಿಕನ್ ಫಿಸಿಕಲ್ ಸೊಸೈಟಿ ಸಭೆಯಲ್ಲಿ ಫೇನ್ಮನ್ "ದೇರ್ ಈಸ್ ಪ್ಲೆಂಟಿ ಆಫ್ ರೂಮ್ ಅಟ್ ದಿ ಬಾಟಮ್" ಎಂಬ ಉಪನ್ಯಾಸ ನೀಡಿದರು. ನ್ಯಾನೊ ತಂತ್ರಜ್ನಾನದ ಪರಿಕಲ್ಪನೆಹಯನ್ನು ಜಗತ್ತಿಗಿ ತೋರಿಸಿಕೊಟ್ಟ ಕೀರ್ತಿ ಫೇನ್ಮನ್ರಿಗೆ ಸಲ್ಲುತ್ತದೆ. ದೇಹವು ರೋಗದಿಂದ ಬಳಲಿದಾಗ ಕಣ್ನಿಗೆ ಕಾಣದಷ್ಟು ಚಿಕ್ಕ ರೋಬೊಗಳನು ಬಳಸಿ ರೋಗಕಾರಕ ಸೂಕ್ಷ್ಮಜೀವಿಗಳನ್ನು ಕೊಲ್ಲುವ ಹೊಸ ಕಲ್ಪನೆಯನ್ನು ನೀಡಿದರು.ಅಂದಿನ ಕಾಲದಲ್ಲಿ ಕಂಪ್ಯೂಟರ್ ಮಾಹಿತಿ ಸಂಗ್ರಹಿಸುವುದು ಕಷ್ಟಕರವಾಗಿತ್ತು.ಫೇನ್ಮನ್ ನ್ಯಾನೊ ತಂತ್ರಜ್ನಾನದ ಸಹಾಯದಿಂದ ಚಿಕ್ಕ ಎಲೆಕ್ಟ್ರಾನಿಕ್ ಸಾಧನವೊಂದರಲ್ಲಿ ಎಚ್ಚು ಮಾಹಿತಿ ಸಂಗ್ರಹಿಸಬಹುದಾದ ಸಾಧ್ಯತೆಯನ್ನು ವಿವರಿಸಿದರು.

ಪ್ರಶಸ್ತಿಗಳು[ಬದಲಾಯಿಸಿ]

ಫೇನ್ಮನ್ ತಮ್ಮ ಜೀವಿತಾವಧಿಯಲ್ಲಿ ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದರು. ಬ್ರಿಟಿಷ್ ಪತ್ರಿಕೆ ಫಿಸಿಕ್ಸ್ ವರ್ಲ್ಡ್ನ ಸಮೀಕ್ಷೆಯು ವಿಶ್ವದ ಹತ್ತು ಪ್ರಮುಕ ವಿಜ್ಞಾನಿಗಳ ಸಾಲಿನಲ್ಲಿ ಫೇನ್ಮನ್ ಹೆಸರನ್ನು ಪ್ರಕಟಿಸಿತ್ತು. ಅವರಿಗೆ ಹಲವಾರು ಪ್ರಶಸ್ತಿಗಳು ಸಂಧಿವೆ. ಆಲ್ಬರ್ಟ್ ಐನ್ಸ್ಟೀನ್ ಪ್ರಶಸ್ತಿ (1954, ಪ್ರಿನ್ಸ್ಟನ್); ಐನ್ಸ್ಟೈನ್ ಪ್ರಶಸ್ತಿ (ಆಲ್ಬರ್ಟ್ ಐನ್ಸ್ಟೀನ್ ಪ್ರಶಸ್ತಿ ಕಾಲೇಜ್ ಆಫ್ ಮೆಡಿಸಿನ್); ಲಾರೆನ್ಸ್ ಪ್ರಶಸ್ತಿ (1962) ಮತ್ತು ಮುಂತಾದವು.

ಮರಣ[ಬದಲಾಯಿಸಿ]

೧೯೭೮ರಲ್ಲಿ ಕಿಬ್ಬೊಟ್ಟೆಯ ನೋವಿನಿಂದ ಬಳಲುತ್ತಿದ್ದ ಫೇನ್ಮನ್ ವೈದ್ಯಕೀಯ ಚಿಕಿಸ್ತೆಗೊಳಗಾದರು. ಲಿಪೊಸಾರ್ಕೊಮಾ ಎಂಬ ಅಪರೂಪದ ಕ್ಯಾನ್ಸರ್ ನಿಂದ ಬಳಲುತ್ತಿರುವುದು ತಿಳಿದುಬಂತು. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು ಡಯಾಲಿಸಿಸ್ ನಿರಾಕರಿಸಿದರು.ಯಾವ ಚಿಕಿಸ್ತೆಯು ಪಲಿಸದೆ ಫೆಬ್ರುವರಿ ೧೫ ೧೯೮೮ರಂದು ಫೇನ್ಮನ್ ನಿಧನರಾದರು.

https://en.wikipedia.org/wiki/Richard_Feynman

https://www.britannica.com/biography/Richard-Feynman

http://www-history.mcs.st-and.ac.uk/Biographies/Feynman.html