ಸದಸ್ಯ:Rajat Bammigatti/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಜು ಬಾಲಕೃಷ್ಣನ್[ಬದಲಾಯಿಸಿ]

ಏರ್ ಮಾರ್ಷಲ್ ಸಾಜು ಬಾಲಕೃಷ್ಣನ್ ಅವರು ಭಾರತೀಯ ವಾಯುಪಡೆಯ ಅಧಿಕಾರಿಯಾಗಿದ್ದಾರೆ. ಅತಿ ವಿಶಿಷ್ಟ ಸೇವಾ ಮೆಡಲ(AVSM) ಹಾಗೂ ವಾಯು ಸೇನಾ ಮೆಡಲ್(VM) ಪ್ರಶಸ್ತಿಗೆ ಭಾಜನರಾಗಿರುವ ಅವರು ಪ್ರಸ್ತುತ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡಿನ(CINCAN) 17ನೇ ಕಮಾಂಡರ್-ಇನ್-ಚೀಫ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು 1 ಮೇ 2023ರಂದು ಲೆಫ್ಟಿನೆಂಟ್ ಜನರಲ್ ಅಜಯ್ ಸಿಂಗ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.[೧]


ಶಿಕ್ಷಣ[ಬದಲಾಯಿಸಿ]

ಸಾಜು ಬಾಲಕೃಷ್ಣನ್ ಅವರು ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದು, ಅವರು ಯುನೈಟೆಡ್ ಕಿಂಗ್ಡಂನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸನಲ್ಲಿ ಸ್ಟಾಫ ಕೋರ್ಸನ್ನೂ ಸಹ ಮಾಡಿದ್ದಾರೆ.[೨]

ವೃತ್ತಿ ಜೀವನ[ಬದಲಾಯಿಸಿ]

ವೃತ್ತಿ ಜೀವನದ ಆರಂಭದಲ್ಲಿ ಸಾಜು ಬಾಲಕೃಷ್ಣನ್ ಅವರನ್ನು ಭಾರತೀಯ ವಾಯುಪಡೆಯ ಫೈಟರ್ ಪೈಲಟ್ ಆಗಿ ನೇಮಿಸಲಾಗಿತ್ತು. ತಮ್ಮ ೩೭ ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಅವರು ಸುಮಾರು ೩೨೦೦ ಗಂಟೆಗಳ ಕಾಲ ವಿವಿಧ ಬಗೆಯ MiG-21 ಮತ್ತು ಕಿರಣ ಯುದ್ದವಿಮಾನಗಳ ಹಾರಾಟದ ಅನುಭವವನ್ನು ಹೊಂದಿದ್ದಾರೆ.[೩]

ಅವರನ್ನು ಓರ್ವ ನಿಪುಣ ಫೈಟರ್ ಯುದ್ಧನಾಯಕ ಮತ್ತು ಪ್ರಾಯೋಗಿಕ ಪರೀಕ್ಷಾ ಟೆಸ್ಟ್ ಪೈಲಟ್ ಆಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರು MiG-21 ಬೈಸನನ್ನು ಒಳಗೊಂಡ ನಂ.32 ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫಿಸರ್ ಆಗಿ ಸೇವೆ ಸಲ್ಲಿಸಿದರು ಹಾಗೂ AWACS ವಿಮಾನವನ್ನು ಒಳಗೊಂಡಿರುವ ನಂ.50 ಸ್ಕ್ವಾಡ್ರನ್‌ನ ಮೊದಲ ಕಮಾಂಡಿಂಗ್ ಆಫಿಸರ್ ಆಗಿದ್ದರು.[೪][೫]

ಅವರು ಏರ್ ಕಮೋಡೋರ್ ಆಗಿ , ಸೌತ್ ವೆಸ್ಟರ್ನ್ ಏರ್ ಕಮಾಂಡನಲ್ಲಿ ಜೋಧ್‌ಪುರ ಸೆಕ್ಟರಿನಲ್ಲಿ ೩೨ನೇ ವಿಂಗ್‌ನ ಏರ್ ಆಫೀಸರ್ ಕಮಾಂಡಿಂಗ್ ಆಗಿ ಸೇವೆ ಸಲ್ಲಿಸಿದರು . ನಂತರ, ಯುನೈಟೆಡ್ ಕಿಂಗ್‌ಡಂನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸನಲ್ಲಿ ಸ್ಟಾಫ ಕೋರ್ಸನ್ನೂ ಸಹ ಮಾಡಿದ್ದಾರೆ.[೬][೭][೮]

ಏರ್ ವೈಸ್ ಮಾರ್ಷಲ್ ಹುದ್ದೆಯನ್ನು ಅಲಂಕರಿಸಿದ ಅವರು ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್, ACIDS(ಪರ್ಸ್ ಪ್ಲಾನ್ಸ್ ಮತ್ತು ಫೋರ್ಸ್)ನ ಸಹಾಯಕ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಹಾಗೂ ನಂತರದಲ್ಲಿ, ನವದೆಹಲಿಯಲ್ಲಿರುವ ವಾಯುರಕ್ಷಣಾ ಪಡೆಯ ಸಹಾಯಕ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದರು.[೯]


ಮಾರ್ಚ್ ೮, ೨೦೨೨ರಂದು ಏರ್ ಮಾರ್ಷಲ್ ಆಗಿ ಬಡ್ತಿ ಪಡೆದ ಅವರು, ಟ್ರೇನಿಂಗ ಕಮಾಂಡಿನ ಹಿರಿಯ ಏರ್ ಸ್ಟಾಫ್ ಅಧಿಕಾರಿ ಆಗಿ ಏಪ್ರಿಲ್ ೩೦, ೨೦೨೩ ರವರೆಗೆ ಸೇವೆ ಸಲ್ಲಿಸಿದರು.[೧೦][೧೧]

ಸಾಜು ಬಾಲಕೃಷ್ಣನ್ ಅವರು ಮೇ ೧, ೨೦೨೩ರಂದು ಲೆಫ್ಟಿನೆಂಟ್ ಜನರಲ್ ಅಜಯ್ ಸಿಂಗ್ ಅವರ ಉತ್ತರಾಧಿಕಾರಿಯಾಗಿ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡಿನ(CINCAN) 17ನೇ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡರು.ಅವರು ಕಳೆದ ಒಂದು ದಶಕದಲ್ಲಿ CINACನ ಮುಖ್ಯಸ್ಥರಾದ ಮೊದಲ ಭಾರತೀಯ ವಾಯುಪಡೆಯ ಏರ್ ಮಾರ್ಷಲ್ ಆಗಿದ್ದಾರೆ.[೧೨][೧೩]

ಗೌರವಗಳು ಮತ್ತು ಪ್ರಶಸ್ತಿಗಳು[ಬದಲಾಯಿಸಿ]

ದೇಶಕ್ಕೆ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ, ೨೦೨೧ ರಲ್ಲಿ ಅತಿ ವಿಶಿಷ್ಟ ಸೇವಾ ಮೆಡಲ್ ಹಾಗೂ ೨೦೧೨ ರಲ್ಲಿ ವಾಯು ಸೇನಾ ಮೆಡಲ್ ನೀಡಿ ಗೌರವಿಸಲಾಗಿದೆ.[೧೪][೧೫]


ಉಲ್ಲೇಖಗಳು[ಬದಲಾಯಿಸಿ]

  1. https://pib.gov.in/PressReleasePage.aspx?PRID=1921250
  2. https://pib.gov.in/PressReleasePage.aspx?PRID=1921250
  3. https://thedailyguardian.com/air-marshal-saju-balakrishnan-takes-charge-as-chief-of-andaman-air-command/
  4. https://www.bharat-rakshak.com/IAF/Database/18300
  5. https://pib.gov.in/PressReleasePage.aspx?PRID=1921250
  6. https://www.bharat-rakshak.com/IAF/Database/18300
  7. https://pib.gov.in/PressReleasePage.aspx?PRID=1921250
  8. https://www.rediff.com/news/interview/air-marshal-saju-balakrishnan-we-have-to-be-prepared-for-the-invisible-enemy/20230510.htm
  9. https://www.hindustantimes.com/india-news/air-marshal-saju-balakrishnan-takes-over-as-17th-cincan-of-india-s-first-tri-service-command-the-andaman-and-nicobar-command-101682966648243.html
  10. https://twitter.com/Prodef_blr/status/1501944769253371911
  11. https://www.thehindu.com/news/national/karnataka/air-marshal-saju-balakrishnanvisits-bidar-air-force-station/article65750168.ece
  12. https://www.rediff.com/news/interview/air-marshal-saju-balakrishnan-we-have-to-be-prepared-for-the-invisible-enemy/20230510.htm
  13. https://pib.gov.in/PressReleasePage.aspx?PRID=1921250
  14. https://pib.gov.in/PressReleasePage.aspx?PRID=1692363
  15. https://archive.pib.gov.in/newsite/PrintRelease.aspx?relid=79889